ಇಂಡಿ: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಜನರನ್ನು ಸಂಕಷ್ಟಗಳಿಂದ ಪಾರು ಮಾಡಿ ನೆಮ್ಮದಿಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿವೆ. ಇದೇ ರೀತಿಯಲ್ಲಿ ಕಾಂಗ್ರೆಸ್ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ದೇಶದ ಜನರ ಅರ್ಥಿಕತೆಯನ್ನು ಸುಧಾರಿಸಲಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ತಾಲೂಕಿನ ನಾದ ಕೆಡಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿ ರಾಜು ಅಲಗೂರರವರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಿ ಯುವಕರಿಗೆ ನೌಕರಿ ಕೊಡುವದಾಗಿ ಹೇಳಿದರು. ಇಂದು ದೇಶದಲ್ಲಿ ೪೦ ಲಕ್ಷ ಸರಕಾರಿ ನೌಕರರ ಹುದ್ದೆ ಖಾಲಿ ಇವೆ ಎಂದರು.
ಕಾಂಗ್ರೆಸ್ ಸರಕಾರ ಬಡವರ ಸರಕಾರ,ಹಾಗಾಗಿ ಜನರಿಗಾಗಿ ಪಂಚ ಗ್ಯಾರಂಟಿ ೮ ತಿಂಗಳಲ್ಲಿ ಜಾರಿ ಮಾಡಿ ಎಲ್ಲರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಸಿದ್ದರಾಯ ಐರೋಡಗಿ ಮಾತನಾಡಿ ದೇಶದ ಯಾವುದೇ ರಾಜ್ಯದಲ್ಲಿ ಕೊಡಲಾರದಷ್ಟು ಸೌಲಭ್ಯಗಳನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ನೀಡಿದೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದರು.
ರುದ್ರಗೌಡ ಅಲಗೊಂಡ, ಸೋಮಶೇಖರ ಮ್ಯಾಕೇರಿ, ಬಸವರಾಜ ಅವುಜಿ, ದೀಲಿಪ ಪತ್ತಾರ, ಶರಣು ತಾವರಖೇಡ, ಪೈಗಂಬರ ದೇಸಾಯಿ, ವಿ.ಕೆ ಅಂಬಾರಿ, ಚಂದು ಸಾಹುಕಾರ ಸೊನ್ನ, ಮಂಜು ಶಹಾಬಾದಿ, ಪ್ರಶಾಂತ ಆಲಗೊಂಡ, ಗೌಡಪ್ಪಗೌಡ ಪಾಟೀಲ, ಮಂಜುನಾಥ ಕಾಮಗೊಂಡ, ಶೆಟ್ಟೆಪ್ಪ ಗುಡಿಮನಿ, ಶಂಗು ದಂಡಾವತೆ, ದೀಲಿಪ ಸೋರೆಗಾಂವ , ಸಂಗಣ್ಣಾ ಈರಾಬಟ್ಟಿ , ಪ್ರಶಾಂತ ಕಾಳೆ, ಜಾವೀದ ಮೋಮಿನ, ಭೀಮಣ್ಣಾ ಕೌಲಗಿ ,ಇಲಿಯಾಸ ಬೋರಾಮಣಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

