Author: editor.udayarashmi@gmail.com

ವಿಜಯಪುರ: ನಾಗಠಾಣ ಮತಕ್ಷೇತ್ರದ ಕನ್ನೂರು ಗ್ರಾಮದಲ್ಲಿ ಭಾನುವಾರ ಜೆಡಿಎಸ್, ಬಿಜೆಪಿ, ಶಿವಸೇನಾ ಹಾಗೂ ಕೆಆರ್.ಎಸ್. ಪಕ್ಷಗಳ ಹಲವಾರು ಪ್ರಮುಖರು ಅಭ್ಯರ್ಥಿ ರಾಜು ಆಲಗೂರ್ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷ ಸೇರಿದರು.ಗ್ರಾಮದ ಸಾಯಬಣ್ಣ ಅಡಹಳ್ಳಿ, ಸತೀಶ ಪಾಟೀಲ, ಈರಪ್ಪ ಅಡಹಳ್ಳಿ, ಆನಂದ ಬೆಳುಂಡಗಿ, ಮಲ್ಲಿಕಾರ್ಜುನ ಬೆಳುಂಡಗಿ, ಸಂಜಯ ಬೆಳುಂಡಗಿ, ಸದು ಬೆಳುಂಡಗಿ, ಪ್ರವೀಣ ಬೆಳುಂಡಗಿ, ಪ್ರಮೋದ ಬೆಳುಂಡಗಿ, ಪುಟ್ಟುಗೌಡ ಪಾಟೀಲ, ಈರಣ್ಣ ಅಡಹಳ್ಳಿ, ಸಿದ್ದರಾಮ ಅಡಹಳ್ಳಿ, ಅಮಸಿದ್ಧ ಅಡಹಳ್ಳಿ, ಅಪ್ಪಾಸಾಹೇಬ ಬೆಳುಂಡಗಿ, ಸೋಮು ಬೆಳುಂಡಗಿ, ವಿಜಯಕುಮಾರ ಅಡಹಳ್ಳಿ, ಆನಂದ ಅಡಹಳ್ಳಿ, ಕಾರ್ತಿಕ ಮಾಳಿ, ಸೋಮು ಮೇತ್ರಿ ಅನೇಕರು ಕಾಂಗ್ರೆಸ್ ಸೇರಿದರು.ಸಭೆಯಲ್ಲಿ ಮಾತನಾಡಿದ ಪ್ರೊ.ರಾಜು ಆಲಗೂರರು, ಜೆಡಿಎಸ್ ಹಾಗೂ ಬಿಜೆಪಿ ಜನ ವಿರೋಧಿಯಾಗಿವೆ. ಅವುಗಳು ಜನರಿಂದ ದೂರವಾಗಿದ್ದಕ್ಕೆ ನೀವೆಲ್ಲ ಕಾಂಗ್ರೆಸ್ ಸೇರಿದ್ದೇ ಸಾಕ್ಷಿ. ನನ್ನ ಮೇಲೆ ನೀವು ವಿಶ್ವಾಸ ಇಟ್ಟಿದ್ದಕ್ಕೆ ಪ್ರತಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.ಮುಖಂಡರಾದ ಡಿ.ಎಲ್.ಚವ್ಹಾಣ, ಜಗದೀಶ ಪಾಟೀಲ, ಚಂದ್ರಾಮ ಬೆಳುಂಡಗಿ, ಕಾಳಪ್ಪ ಬೆಳುಂಡಗಿ, ಈರಪ್ಪ ಬೆಳುಂಡಗಿ, ಬಾಳು ಜೀರಗಿಹಾಳ, ಲಾಲಪ್ಪ…

Read More

ವಿಜಯಪುರ: ‘ನಗುʼ ಎಲ್ಲರ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿರಿಸುವ ಒಂದು ಅಸ್ತ್ರ. ವಿಶ್ವದಾದ್ಯಂತ ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗುವಿನ ದಿನವನ್ನು ಆಚರಿಸಲಾಗುತ್ತದೆ. ಎಲ್ಲ ಕಾಯಿಲೆಗಳನ್ನು ದೂರ ಮಾಡುವ ಶಕ್ತಿ ನಗುವಿಗಿದೆ. ನಗು ನಮ್ಮ ದೇಹಾರೋಗ್ಯವನ್ನು ಮಾತ್ರವಲ್ಲ ಮನಸ್ಸಿನ ಆರೋಗ್ಯವನ್ನು ಉತ್ತಮ ಗೊಳಿಸುತ್ತದೆ. ಮೇ 5ರಂದು ಈ ಬಾರಿ ವಿಶ್ವ ನಗುವಿನ ದಿನವನ್ನು ಆಚರಿಸಲಾಗುತ್ತಿದೆ. ಜಾಗತಿಕ ಏಕತೆ ಮತ್ತು ಸ್ನೇಹದ ಭಾವವನ್ನು ಬೆಳೆಸುವದೇ ಈ ದಿನದ ಉದ್ದೇಶವಾಗಿದೆ. ನಗು ಎಲ್ಲರಿಗೂ ಆರೋಗ್ಯಕರ. ಇದು ವಿಶ್ವದ ಶ್ರೇಷ್ಠ ಔಷಧಿಗಳಲ್ಲಿ ಒಂದಾಗಿದೆ. ನಗು ಒಂದು ಕಲೆಯಾಗಿದೆ. ಜಗತ್ತನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡಲು ನಗು ಒಂದು ಸರಳ ಮಾರ್ಗವಾಗಿದೆ. ಈ ನಗು ಭಾಷೆ, ರಾಜ್ಯ, ದೇಶ, ಜಾತಿ, ಧರ್ಮಗಳನ್ನೆಲ್ಲವನ್ನೂ ಮೀರಿದ ಸಾರ್ವತ್ರಿಕ ಭಾಷೆಯಾಗಿದೆ. ನಿಜವಾದ ನಗು ನಮ್ಮ ಸ್ವಂತ ಚೈತನ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೇ, ನಮ್ಮ ಸುತ್ತಮುತ್ತಲಿನವರ ಮನಸ್ಸನ್ನು ಕೂಡ ಅರಳಿಸುತ್ತದೆ, ಸಂಬಂಧಗಳನ್ನು ಸರಿಪಡಿಸುತ್ತದೆ. ನಗು ಉದ್ವೇಗವನ್ನು ನಿವಾರಿಸಿ, ಅಪರಿಚಿತರ ನಡುವಿನ…

Read More

ಚಿಕ್ಕಗಲಗಲಿ & ಕಂಬಾಗಿ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಅಧಿಕಾರದಲ್ಲಿದ್ದಾಗ ನಾವು ಮಾಡುವ ಕೆಲಸಗಳನ್ನು ಜನ ಸ್ಮರಿಸುವಂತಿರಬೇಕು. ಆದರೆ, ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯ ಜನ ನೆನಪಿಡುವ ಯಾವ ಕೆಲಸಗಳನ್ನೂ ಮಾಡಿಲ್ಲ ಎಂದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಮತ್ತು ಕಂಬಾಗಿಯಲ್ಲಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರುಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಸಂಸದರಾಗಿ ಹೈದರಾಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸಿದರು. ಇಎಸ್ಐ ಆಸ್ಪತ್ರೆ ನಿರ್ಮಿಸಿದರು. ಪ್ರಕಾಶ ಹುಕ್ಕೇರಿ ಸಂಸದರಾಗಿ ಚಿಕ್ಕೋಡಿ ಮತಕ್ಷೇತ್ರದಲ್ಲಿ ಸವಳು- ಜವಳು ಬಗೆ ಹರಿಸುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಇದರಿಂದಾಗಿ ಜನ ಈಗಲೂ ಅವರನ್ನು ಸ್ಮರಿಸುತ್ತಾರೆ. ಇವರ ಅಭಿವೃದ್ಧಿ ಕಾರ್ಯಗಳನ್ನು ನೋಡಿಯಾದರೂ ಸಂಸದ ರಮೇಶ ಜಿಗಜಿಣಗಿ ವಿಜಯಪುರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಬೇಕಿತ್ತು. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸಂಸತ್ತಿಗೆ ಹೋಗಿ ಪ್ರಯೋಜನವಾದರೂ…

Read More

ವಿಜಯಪುರ: ಪ್ರಧಾನಿ ಮೋದಿ ಮತ್ತು ಸಂಸದ ಜಿಗಜಿಣಗಿ ಅವರಿಗೆ ಮತ ಕೇಳಲು ಮುಖ ಉಳಿಸಿಕೊಂಡಿಲ್ಲ. ಅವರಿಗೆ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ತಿಕೋಟಾ ತಾಲೂಕಿನ ಧನರ್ಗಿ ಮತ್ತು ಘೋಣಸಗಿ ಹಾಗೂ ವಿಜಯಪುರ ನಗರದ ಭೂತನಾಳ ತಾಂಡಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು.ಪ್ರಧಾನಿ ಮೋದಿ ಮತ್ತು ಸಂಸದ ರಮೇಶ ಜಿಗಜಿಣಗಿ ಮತ ಕೇಳಲು ಯಾವುದೇ ಮುಖ ಉಳಿಸಿಕೊಂಡಿಲ್ಲ. ಚಿತ್ತೂ ಇಲ್ಲ‌, ಪಟ್ಟೂ ಇಲ್ಲ. ಎಲ್ಲ ಕಡೆ ಮೋದಿ ಮತ್ತು ಸಂಸದರ ವಿರೋಧಿ ಗಾಳಿ ಬೀಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈಗ ಎಲೆಕ್ಟ್ರಾಲ್ ಬಾಂಡ್ ಹಗರಣದ ಚರ್ಚೆ ವ್ಯಾಪಕವಾಗಿದ್ದು, ಜನಜಾಗೃತರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರದಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಈಗ ಜನಮನಗೆದ್ದಿವೆ. ಹೀಗಾಗಿ ಮತದಾರರು…

Read More

ವಿಜಯಪುರ: ಪ್ರಧಾನಿ ಮೋದಿ ಮತ್ತು ಸಂಸದ ಜಿಗಜಿಣಗಿ ಅವರಿಗೆ ಮತ ಕೇಳಲು ಮುಖ ಉಳಿಸಿಕೊಂಡಿಲ್ಲ. ಅವರಿಗೆ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ತಿಕೋಟಾ ತಾಲೂಕಿನ ಧನರ್ಗಿ ಮತ್ತು ಘೋಣಸಗಿ ಹಾಗೂ ವಿಜಯಪುರ ನಗರದ ಭೂತನಾಳ ತಾಂಡಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು.ಪ್ರಧಾನಿ ಮೋದಿ ಮತ್ತು ಸಂಸದ ರಮೇಶ ಜಿಗಜಿಣಗಿ ಮತ ಕೇಳಲು ಯಾವುದೇ ಮುಖ ಉಳಿಸಿಕೊಂಡಿಲ್ಲ. ಚಿತ್ತೂ ಇಲ್ಲ‌, ಪಟ್ಟೂ ಇಲ್ಲ. ಎಲ್ಲ ಕಡೆ ಮೋದಿ ಮತ್ತು ಸಂಸದರ ವಿರೋಧಿ ಗಾಳಿ ಬೀಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈಗ ಎಲೆಕ್ಟ್ರಾಲ್ ಬಾಂಡ್ ಹಗರಣದ ಚರ್ಚೆ ವ್ಯಾಪಕವಾಗಿದ್ದು, ಜನಜಾಗೃತರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರದಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಈಗ ಜನಮನಗೆದ್ದಿವೆ. ಹೀಗಾಗಿ ಮತದಾರರು…

Read More

ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಪಂಚಮಸಾಲಿ ಸಮುದಾಯ | ಬೃಹತ್ ಚಿಂತನಾ ಸಮಾವೇಶ ಇಂಚಗೇರಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿದೂಗಿಸಲು ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದು ಅಗತ್ಯವಾಗಿದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.ಇಲ್ಲಿ ಶನಿವಾರ ರಾತ್ರಿ ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ನಮ್ಮ ಸಮಾಜ ತುಳಿತಕ್ಕೆ ಒಳಗಾಗಿದೆ. ನನಗೆ ಟಿಕೆಟ್ ನೀಡಿ ಶಾಸಕನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ಪಕ್ಷದವರು ಅಧಿಕಾರದಲ್ಲಿದ್ದಾಗ ಜಿಲ್ಲೆಗೆ ಮಂತ್ರಿ ಸ್ಥಾನ ನೀಡಲಿಲ್ಲ. ನಮ್ಮನ್ನು ಗೌರವಿಸಿದ್ದು, ಆತ್ಮಾಭಿಮಾನ ಹೆಚ್ಚಿಸಿದ್ದು ಕಾಂಗ್ರೆಸ್ ಪಕ್ಷ. ಹಾಗಾಗಿ ವಿದ್ಯಾವಂತ, ಸಜ್ಜನರಾಗಿರುವ ಅಭ್ಯರ್ಥಿ ಆಲಗೂರರಿಗೆ ಮತ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಅವರಿಂದ ಎಲ್ಲ ಸಮಾಜದ ಜನರಿಗೆ ಒಳಿತಾಗಲಿದೆ ಎಂದು ಹೇಳಿದರು.ಬಿಜೆಪಿಯವರಿಗೆ ಸುಳ್ಳೇ ಆಧಾರ. ಜಿಗಜಿಣಗಿಯವರು ಸುಳ್ಳು ಆಪಾದನೆ ಮಾಡುವುದರಲ್ಲಿ ನಿಸ್ಸೀಮರು. ಮಾಡಿರುವ ಕೆಲಸ ಹೇಳದೇ ವಾಮ ಮಾರ್ಗದಲ್ಲಿ ಚುನಾವಣೆ ಎದುರಿಸುತ್ತ ಬಂದಿದ್ದಾರೆ. ಹಾಗಾಗಿ ಸಮಾಜ ಒಟ್ಟಾಗಿ ಈ ಸಲ…

Read More

ವಿಜಯಪುರ: ಕಳೆದ 25 ವರ್ಷಗಳಿಂದ ವಿಜಯಪುರ ಜಿಲ್ಲೆಯ ಪ್ರಬುದ್ಧ ಮತದಾರರು ಯಾವುದೇ ಜಾತಿ, ಮತ, ಪಂಥ ನೋಡದೇ ಜಾತಿಗಿಂತ ದೇಶದ ಹಿತವೇ ಮುಖ್ಯ ಎಂದು ಸತತವಾಗಿ ಬಿಜೆಪಿಗೆ ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿಯು ಮೇ.7 ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಮತದಾರರು ಬಿಜೆಪಿ ಅಭ್ಯರ್ಥಿಯಾಗಿರುವ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮತ ಹಾಕುವ ಮೂಲಕ ಜಾತಿಗಿಂತ ದೇಶದ ಹಿತವೇ ಮುಖ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿ ಮಾದರಿಯಾಗಬೇಕು ಎಂದು ಬಿಜೆಪಿ ಜಿಲ್ಲಾ‌ ಮಾಧ್ಯಮ ಪ್ರಮುಖ ವಿಜಯ್ ಜೋಶಿ ಮನವಿ ಮಾಡಿಕೊಂಡಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ಚದ ಬಿಜೆಪಿ ಸರ್ಕಾರದಲ್ಲಿ ಗೂಡ್ಸ್ ರೈಲಿನಂತೆ ನಿಧಾನಗತಿಯಲ್ಲಿದ್ದ ದೇಶದ ಆರ್ಥಿಕ ಬೆಳವಣಿಗೆ ವಂದೇ ಭಾರತ್ ರೈಲಿನಷ್ಟೇ ವೇಗ ಪಡೆದುಕೊಂಡಿದೆ. ಎಲ್ಲದಕ್ಕೂ ಮೇಡ್ ಇನ್ ಚೈನಾ ಎನ್ನುತ್ತಿದ್ದವರನ್ನು ಹೊಡೆದೋಡಿಸಿ ಮೇಕ್ ಇನ್ ಇಂಡಿಯಾ ಎನ್ನುವಂತೆ ಮಾಡಿದ್ದಾರೆ.‌ ಪ್ರಭು ಶ್ರೀರಾಮನ ಅಸ್ತಿತ್ವ ಪ್ರಶ್ನಿಸುತ್ತಿದ್ದವರ ಬಾಯಲ್ಲೇ ಜೈ ಶ್ರೀರಾಮ ಎನ್ನುವಂತೆ…

Read More

ವಿಜಯಪುರ: ಎಸ್‌.ಎಂ.ವಿ.ಟಿ. ಬೆಂಗಳೂರು ಎಕ್ಸ್‌ ಪ್ರೆಸ್‌ ವಿಶೇಷ ರೈಲನ್ನು ಒಂದು ಟ್ರಿಪ್‌ ಓಡಿಸಲಿದೆ.ರೈಲು ಸಂಖ್ಯೆ 06231 ಎಸ್‌.ಎಂ.ವಿ.ಟಿ. ಬೆಂಗಳೂರು –ವಿಜಯಪುರ ಎಕ್ಸ್‌ ಪ್ರೆಸ್‌ ವಿಶೇಷ ರೈಲು ಎಸ್‌.ಎಂ.ವಿ.ಟಿ. ಬೆಂಗಳೂರಿನಿಂದ ದಿನಾಂಕ 06.05.2024ರಂದು 19:00 ಗಂಟೆಗೆ ಹೊರಡಲಿದ್ದು ವಿಜಯಪುರವನ್ನು ಮರುದಿನ ಬೆಳಿಗ್ಗೆ 10:30 ಗಂಟೆಗೆ ತಲುಪಲಿದೆ. ಮಾರ್ಗದಲ್ಲಿ ವಿವಿಧ ನಿಲ್ದಾಣಗಳಲ್ಲಿ ಈ ರೈಲಿನ ಆಗಮನ/ನಿರ್ಗಮನ ಸಮಯ ಈ ರೀತಿ ಇದೆ:ಚಿಕ್ಕ ಬಾಣಾವರ 19:40/19:42 ಗಂಟೆ; ತುಮಕೂರು -20:30/20:32 ಗಂಟೆ; ಅರಸೀಕೆರೆ- 22:05/22:10 ಗಂಟೆ; ಬೀರೂರು -22:50/22:52 ಗಂಟೆ; ಚಿಕ್ಕಜಾಜೂರು- 23:43/23:45 ಗಂಟೆ; ಚಿತ್ರದುರ್ಗ- 00:20/00:25 ಗಂಟೆ; ರಾಯದುರ್ಗ- 02:20/02:22 ಗಂಟೆ; ಬಳ್ಳಾರಿ ಕಂಟೋನ್ಮೆಂಟ್‌- 03:43/03:45 ಗಂಟೆ; ತೋರಣಗಲ್ಲು – 04:08/04:10 ಗಂಟೆ; ಹೊಸಪೇಟೆ- 04:45/04:50 ಗಂಟೆ; ಕೊಪ್ಪಳ- 05:18/05:20 ಗಂಟೆ; ಗದಗ- 06:08/06:10 ಗಂಟೆ; ಹೊಳೆಆಲೂರು- 06:53/06:55 ಗಂಟೆ; ಬಾದಾಮಿ- 07:18/07:20 ಗಂಟೆ; ಬಾಗಲಕೋಟೆ- 07:55/07:57 ಗಂಟೆ; ಆಲಮಟ್ಟಿ- 08:40/08:42 ಗಂಟೆ; ಬಸವನ ಬಾಗೇವಾಡಿ ರೋಡ್‌- 08:58/09:00 ಗಂಟೆ ಮತ್ತು ಇಬ್ರಾಹಿಂಪುರ- 09:28/09:30…

Read More

ಮರ್ಯಾದಾ ಹತ್ಯೆಯ ಈರ್ವರು ಆರೋಪಿಗಳಿಗೆ ಗಲ್ಲು! ವಿಜಯಪುರ: ಮರ್ಯಾದಾ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ಮತ್ತು ಉಳಿದ ಐದು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಜಯಪುರ ಸ್ಪೇಶಲ್ ಕೋರ್ಟ್ ಆದೇಶ ಹೊರಡಿಸಿದೆ.30.06.2017 ರಂದು ಒಂಬತ್ತು ತಿಂಗಳು ಗರ್ಭಿಣಿ ಯುವತಿಯನ್ನು ಅವಳ ಸಂಬಂಧಿಕರೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣದ ಮೊದಲ ಆರೋಪಿ ಇಬ್ರಾಹಿಂಸಾಬ ಮಹ್ಮದಸಾಬ ಅತ್ತಾರ ಮತ್ತು ಅಕ್ಬರ್ ಮಹ್ಮದಸಾಬ ಅತ್ತಾರ ಅವರಿಗೆ ಗಲ್ಲು ಶಿಕ್ಷೆ ಮತ್ತು ರೂ. ತಲಾ ರೂ. 49250 ದಂಡ ವಿಧಿಸಲಾಗಿದೆ. ಅಲ್ಲದೇ, ಈ ಪ್ರಕರಣದಲ್ಲಿ ಶಾಮೀಲಾಗಿರುವ ರಮಜಾನಬಿ ಮಹ್ಮದಸಾಬ ಅತ್ತಾರ, ದಾವಲಬಿ ಉರ್ಫ್ ಸಲ್ಮಾ ಬಂದೇನವಾಜ ಜಮಾದಾರ, ಅಜಮಾ ಜಿಲಾನಿ ದಖನಿ, ಜಿಲಾನಿ ಅಬ್ದುಲಖಾದರ ದಖನಿ ಮತ್ತು ದಾವಲಬಿ ಸುಭಾನ ದನ್ನೂರ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ರೂ. 15000 ದಂಡ ವಿಧಿಸಿದೆ ಎಂದು ಸರಕಾರಿ ಅಭಿಯೋಜಕ ಎಸ್. ಎಸ್. ಲೋಕೂರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಘಟನೆ ಹಿನ್ನೆಲೆ: ವಿಜಯಪುರ ಜಿಲ್ಲೆಯ…

Read More