ವಿಜಯಪುರ: ಕಳೆದ 25 ವರ್ಷಗಳಿಂದ ವಿಜಯಪುರ ಜಿಲ್ಲೆಯ ಪ್ರಬುದ್ಧ ಮತದಾರರು ಯಾವುದೇ ಜಾತಿ, ಮತ, ಪಂಥ ನೋಡದೇ ಜಾತಿಗಿಂತ ದೇಶದ ಹಿತವೇ ಮುಖ್ಯ ಎಂದು ಸತತವಾಗಿ ಬಿಜೆಪಿಗೆ ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿಯು ಮೇ.7 ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಮತದಾರರು ಬಿಜೆಪಿ ಅಭ್ಯರ್ಥಿಯಾಗಿರುವ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮತ ಹಾಕುವ ಮೂಲಕ ಜಾತಿಗಿಂತ ದೇಶದ ಹಿತವೇ ಮುಖ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿ ಮಾದರಿಯಾಗಬೇಕು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ್ ಜೋಶಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ಚದ ಬಿಜೆಪಿ ಸರ್ಕಾರದಲ್ಲಿ ಗೂಡ್ಸ್ ರೈಲಿನಂತೆ ನಿಧಾನಗತಿಯಲ್ಲಿದ್ದ ದೇಶದ ಆರ್ಥಿಕ ಬೆಳವಣಿಗೆ ವಂದೇ ಭಾರತ್ ರೈಲಿನಷ್ಟೇ ವೇಗ ಪಡೆದುಕೊಂಡಿದೆ. ಎಲ್ಲದಕ್ಕೂ ಮೇಡ್ ಇನ್ ಚೈನಾ ಎನ್ನುತ್ತಿದ್ದವರನ್ನು ಹೊಡೆದೋಡಿಸಿ ಮೇಕ್ ಇನ್ ಇಂಡಿಯಾ ಎನ್ನುವಂತೆ ಮಾಡಿದ್ದಾರೆ. ಪ್ರಭು ಶ್ರೀರಾಮನ ಅಸ್ತಿತ್ವ ಪ್ರಶ್ನಿಸುತ್ತಿದ್ದವರ ಬಾಯಲ್ಲೇ ಜೈ ಶ್ರೀರಾಮ ಎನ್ನುವಂತೆ ಮಾಡಿದ್ದಾರೆ. ದೇಶದಲ್ಲಿ ನುಸುಳಿ ರಾಜರೋಷವಾಗಿ ಭಯೋತ್ಪಾದಕ ಕೃತ್ಯ ನಡೆಸುತ್ತಿದ್ದವರ ಅಡುಗು ತಾಣಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಭಾರತವೆಂದರೆ ಭಯೋತ್ಪಾದಕರಲ್ಲೂ ಭಯ ನಡುಕ ಹುಟ್ಟಿಸಿದ್ದಾರೆ.
ದೇಶದ ಸುರಕ್ಷತೆ ಹಾಗೂ ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ ಉಳಿಸುವ ಆಶಯದಿಂದ ಜನ ಜಾತಿಯನ್ನು ನೋಡದೆ ದೇಶದ ಹಿತವನ್ನೇ ಬಯಸಿದ ಕಾರಣದಿಂದಾಗಿ ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸಶಕ್ತವಾಗಿ ನಿಂತಿದೆ. ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವ ವಿಶ್ವನಾಯಕ ನರೇಂದ್ರ ಮೋದಿಯವರ ಕೈ ಬಲಪಡಿಸಲು ಎಲ್ಲರೂ ಮತ್ತೊಮ್ಮೆ ಬಿಜೆಪಿಗೆ ಮತ ಹಾಕಿ ಬೆಂಬಲಿಸಬೇಕು ಎಂದು ವಿಜಯ್ ಜೋಶಿ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

