ವಿಜಯಪುರ: ‘ನಗುʼ ಎಲ್ಲರ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿರಿಸುವ ಒಂದು ಅಸ್ತ್ರ. ವಿಶ್ವದಾದ್ಯಂತ ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗುವಿನ ದಿನವನ್ನು ಆಚರಿಸಲಾಗುತ್ತದೆ. ಎಲ್ಲ ಕಾಯಿಲೆಗಳನ್ನು ದೂರ ಮಾಡುವ ಶಕ್ತಿ ನಗುವಿಗಿದೆ. ನಗು ನಮ್ಮ ದೇಹಾರೋಗ್ಯವನ್ನು ಮಾತ್ರವಲ್ಲ ಮನಸ್ಸಿನ ಆರೋಗ್ಯವನ್ನು ಉತ್ತಮ ಗೊಳಿಸುತ್ತದೆ. ಮೇ 5ರಂದು ಈ ಬಾರಿ ವಿಶ್ವ ನಗುವಿನ ದಿನವನ್ನು ಆಚರಿಸಲಾಗುತ್ತಿದೆ.
ಜಾಗತಿಕ ಏಕತೆ ಮತ್ತು ಸ್ನೇಹದ ಭಾವವನ್ನು ಬೆಳೆಸುವದೇ ಈ ದಿನದ ಉದ್ದೇಶವಾಗಿದೆ. ನಗು ಎಲ್ಲರಿಗೂ ಆರೋಗ್ಯಕರ. ಇದು ವಿಶ್ವದ ಶ್ರೇಷ್ಠ ಔಷಧಿಗಳಲ್ಲಿ ಒಂದಾಗಿದೆ. ನಗು ಒಂದು ಕಲೆಯಾಗಿದೆ. ಜಗತ್ತನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡಲು ನಗು ಒಂದು ಸರಳ ಮಾರ್ಗವಾಗಿದೆ. ಈ ನಗು ಭಾಷೆ, ರಾಜ್ಯ, ದೇಶ, ಜಾತಿ, ಧರ್ಮಗಳನ್ನೆಲ್ಲವನ್ನೂ ಮೀರಿದ ಸಾರ್ವತ್ರಿಕ ಭಾಷೆಯಾಗಿದೆ. ನಿಜವಾದ ನಗು ನಮ್ಮ ಸ್ವಂತ ಚೈತನ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೇ, ನಮ್ಮ ಸುತ್ತಮುತ್ತಲಿನವರ ಮನಸ್ಸನ್ನು ಕೂಡ ಅರಳಿಸುತ್ತದೆ, ಸಂಬಂಧಗಳನ್ನು ಸರಿಪಡಿಸುತ್ತದೆ. ನಗು ಉದ್ವೇಗವನ್ನು ನಿವಾರಿಸಿ, ಅಪರಿಚಿತರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ, ಸಾಕ್ಷಿ-ಪವಿತ್ರಾ ಕತ್ನಳ್ಳಿ, ಸಾಕ್ಷಿ ಹಳ್ಳಿ ಅವರು ವಿಶ್ವ ನಗುವಿನ ದಿನವನ್ನು ಆಚರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

