ವಿಜಯಪುರ: ಪ್ರಧಾನಿ ಮೋದಿ ಮತ್ತು ಸಂಸದ ಜಿಗಜಿಣಗಿ ಅವರಿಗೆ ಮತ ಕೇಳಲು ಮುಖ ಉಳಿಸಿಕೊಂಡಿಲ್ಲ. ಅವರಿಗೆ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ತಿಕೋಟಾ ತಾಲೂಕಿನ ಧನರ್ಗಿ ಮತ್ತು ಘೋಣಸಗಿ ಹಾಗೂ ವಿಜಯಪುರ ನಗರದ ಭೂತನಾಳ ತಾಂಡಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಮತ್ತು ಸಂಸದ ರಮೇಶ ಜಿಗಜಿಣಗಿ ಮತ ಕೇಳಲು ಯಾವುದೇ ಮುಖ ಉಳಿಸಿಕೊಂಡಿಲ್ಲ. ಚಿತ್ತೂ ಇಲ್ಲ, ಪಟ್ಟೂ ಇಲ್ಲ. ಎಲ್ಲ ಕಡೆ ಮೋದಿ ಮತ್ತು ಸಂಸದರ ವಿರೋಧಿ ಗಾಳಿ ಬೀಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈಗ ಎಲೆಕ್ಟ್ರಾಲ್ ಬಾಂಡ್ ಹಗರಣದ ಚರ್ಚೆ ವ್ಯಾಪಕವಾಗಿದ್ದು, ಜನಜಾಗೃತರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರದಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಈಗ ಜನಮನಗೆದ್ದಿವೆ. ಹೀಗಾಗಿ ಮತದಾರರು ಕಾಂಗ್ರೆಸ್ ನಾಯಕರ ಮುಖ ನೋಡಿ ಮತ ಹಾಕಲಿದ್ದಾರೆ. ಈ ಮೂಲಕ ಪ್ರೊ. ರಾಜು ಆಲಗೂರ ಅವರಿಗೆ ಮತಹಾಕುವ ಮೂಲಕ ನಮ್ಮ ಕೈ ಹಿಡಿಯಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ರೈತರು, ಬಡವರು, ಜನಸಾಮಾನ್ಯರ ಪಕ್ಷ. ಬಿಜೆಪಿ ಶ್ರೀಮಂತರ ಪಕ್ಷ. ನಾವು ಜನಸಾಮಾನ್ಯರು, ರೈತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತೇವೆ. ಅವರು ಶ್ರೀಮಂತರ ಹಿತ ಕಾಪಾಡಲು ಅಧಿಕಾರ ನಡೆಸುತ್ತಾರೆ. ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳು ದೇಶದ ಅಭಿಚೃದ್ಧಿಗೆ ಭದ್ರ ಬುನಾದಿ ಹಾಕಿದೆ. ಅಹಿಂದ ವರ್ಗಕ್ಕೆ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದೆ. ಹೀಗಾಗಿ ಶೂನ್ಯ ಕೆಲಸ ಮಾಡಿರುವ ಸಂಸದರ ಬದಲು ವಿದ್ಯಾವಂತ, ಕ್ರಿಯಾಶೀಲ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಾನಪ್ಪ ಚೌಧರಿ, ಆನಂದ ಗೊಳಸಂಗಿ, ಸೋಮನಾಥ ಬಾಗಲಕೋಟ, ಯಾಕೂಬ್ ಜತ್ತಿ, ಕೆ. ಆರ್. ಮೇಡೆಗಾರ, ಮಹಾನಗರ ಪಾಲಿಕೆ ಸದಸ್ಯ ರಾಜು ಅಣದು ಚವ್ಹಾಣ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಅಭಿವೃದ್ಧಿ ಕಾರ್ಯಗಳ ಮೂಲಕ ನಮ್ಮ ಭಾಗದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿದ್ದಾರೆ. ಹೀಗಾಗಿ ನಮ್ಮೆಲ್ಲರ ಹಿತ ಬಯಸುವ ಎಂ. ಬಿ. ಪಾಟೀಲ ಅವರ ಕೈ ಬಲಪಡಿಸಲು ನಾವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಹಾಕಿ ಗೆಲ್ಲಿಸೋಣ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಮಾದರಿ ಕಾರ್ಡುಗಳನ್ನು ಸಚಿವರು ಸಾಂಕೇತಿಕವಾಗಿ ಮಹಿಳೆಯರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಸುಭಾಸ ಖೋತ, ಚನ್ನಪ್ಪ ದೈಗೊಂಡ, ದುಂಡಪ್ಪ ವಠಾರ, ಮಾಳಪ್ಪ ಪೂಜಾರಿ, ನಾಗಪ್ಪ ಜೋರಾಪುರ, ಬಸವರಾಜ ತೇಲಿ, ರಾಜು ಜೋರಾಪುರ, ಅಮಗೊಂಡ ಪೂಜಾರಿ, ಬಂದೇನವಾಜ ಮುಲ್ಲಾ, ಅಪ್ಪಾಸಾಹೇಬ ನಾಯಕ, ಅಂಬರೀಷ ಪಾಟೀಲ, ಗುರಲಿಂಗ ಮಾಳಿ, ಬಸಲಿಂಗ ನಿಡೋಣಿ, ಶ್ರೀಮಂತ ಬಂಡಗಾರ, ಭಾವಸಾಬ ಮಾನವರ, ಶ್ರೀಕಾಂತ ರಾಠೋಡ, ಕಿಸನ ಮಹಾರಾಜ, ಪ್ರಕಾಶ ಮಹಾರಾಜ, ಮೆಘು ಮಹಾರಾಜ, ರಾಜು ಜಾಧವ, ಕಾಸು ನಾಯಕ, ಹುನ್ನು ಶಂಕರ ನಾಯಕ, ಸುರೇಶ ಬಿಜಾಪುರ, ಭೂತನಾಳ ತಾಂಡಾದ ನಾಯಕ, ಕಾರಬಾರಿ, ಢಾವ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಮೋದಿ & ಜಿಗಜಿಣಗಿಗೆ ಮತ ಕೇಳುವ ನೈತಿಕತೆ ಇಲ್ಲ :ಎಂ.ಬಿ.ಪಾಟೀಲ
Related Posts
Add A Comment

