ವಿಜಯಪುರ: ನಾಗಠಾಣ ಮತಕ್ಷೇತ್ರದ ಕನ್ನೂರು ಗ್ರಾಮದಲ್ಲಿ ಭಾನುವಾರ ಜೆಡಿಎಸ್, ಬಿಜೆಪಿ, ಶಿವಸೇನಾ ಹಾಗೂ ಕೆಆರ್.ಎಸ್. ಪಕ್ಷಗಳ ಹಲವಾರು ಪ್ರಮುಖರು ಅಭ್ಯರ್ಥಿ ರಾಜು ಆಲಗೂರ್ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷ ಸೇರಿದರು.
ಗ್ರಾಮದ ಸಾಯಬಣ್ಣ ಅಡಹಳ್ಳಿ, ಸತೀಶ ಪಾಟೀಲ, ಈರಪ್ಪ ಅಡಹಳ್ಳಿ, ಆನಂದ ಬೆಳುಂಡಗಿ, ಮಲ್ಲಿಕಾರ್ಜುನ ಬೆಳುಂಡಗಿ, ಸಂಜಯ ಬೆಳುಂಡಗಿ, ಸದು ಬೆಳುಂಡಗಿ, ಪ್ರವೀಣ ಬೆಳುಂಡಗಿ, ಪ್ರಮೋದ ಬೆಳುಂಡಗಿ, ಪುಟ್ಟುಗೌಡ ಪಾಟೀಲ, ಈರಣ್ಣ ಅಡಹಳ್ಳಿ, ಸಿದ್ದರಾಮ ಅಡಹಳ್ಳಿ, ಅಮಸಿದ್ಧ ಅಡಹಳ್ಳಿ, ಅಪ್ಪಾಸಾಹೇಬ ಬೆಳುಂಡಗಿ, ಸೋಮು ಬೆಳುಂಡಗಿ, ವಿಜಯಕುಮಾರ ಅಡಹಳ್ಳಿ, ಆನಂದ ಅಡಹಳ್ಳಿ, ಕಾರ್ತಿಕ ಮಾಳಿ, ಸೋಮು ಮೇತ್ರಿ ಅನೇಕರು ಕಾಂಗ್ರೆಸ್ ಸೇರಿದರು.
ಸಭೆಯಲ್ಲಿ ಮಾತನಾಡಿದ ಪ್ರೊ.ರಾಜು ಆಲಗೂರರು, ಜೆಡಿಎಸ್ ಹಾಗೂ ಬಿಜೆಪಿ ಜನ ವಿರೋಧಿಯಾಗಿವೆ. ಅವುಗಳು ಜನರಿಂದ ದೂರವಾಗಿದ್ದಕ್ಕೆ ನೀವೆಲ್ಲ ಕಾಂಗ್ರೆಸ್ ಸೇರಿದ್ದೇ ಸಾಕ್ಷಿ. ನನ್ನ ಮೇಲೆ ನೀವು ವಿಶ್ವಾಸ ಇಟ್ಟಿದ್ದಕ್ಕೆ ಪ್ರತಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಮುಖಂಡರಾದ ಡಿ.ಎಲ್.ಚವ್ಹಾಣ, ಜಗದೀಶ ಪಾಟೀಲ, ಚಂದ್ರಾಮ ಬೆಳುಂಡಗಿ, ಕಾಳಪ್ಪ ಬೆಳುಂಡಗಿ, ಈರಪ್ಪ ಬೆಳುಂಡಗಿ, ಬಾಳು ಜೀರಗಿಹಾಳ, ಲಾಲಪ್ಪ ಮಾದಾರ, ಶಿವಾನಂದ ಡೊಳ್ಳಿ, ರಮೇಶ ಪಾಟೀಲ, ಅಣ್ಣಪ್ಪ ಅವರಸಂಗ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

