Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕೊಡಿಸುವ ಸಲುವಾಗಿ ಜಯಬಸವ ಮೃತ್ಯುಂಜ ಸ್ವಾಮೀಜಿ ಸತತವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅದಕ್ಕೇ ಕಾಂಗ್ರೆಸ್ ನಾಯಕರ ಕೊಡುಗೆ ಏನು ಎಂಬುದು ಸಮಾಜದ ಮುಖಂಡ, ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಪ್ರಶ್ನಿಸಿದರು.ಭಾನುವಾರದಂದು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡ, ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಪ್ರತಿಯೊಂದು ಪಕ್ಷದಲ್ಲಿ ಎಲ್ಲ ಸಮಾಜದ ನಾಯಕರಿರುವುದು ಸಹಜ. ಆದರೆ ಇಡೀ ಪಂಚಮಸಾಲಿ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದೆ ಎನ್ನುವುದು ಖಂಡನೀಯ. ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕೊಡಿಸುವ ಸಲುವಾಗಿ ಜಯ ಬಸವ ಮೃತ್ಯುಂಜ ಸ್ವಾಮೀಜಿ ಸತತವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅದಕ್ಕೇ ಕಾಂಗ್ರೆಸ್ ನಾಯಕರ ಕೊಡುಗೆ ಏನು ಎಂದು ಪ್ರಶ್ನಿಸಿದರು. ಬಸನಗೌಡ ಪಾಟೀಲ ಯತ್ನಾಳ ಅವರು ಸಮಾಜದ ಉದ್ದಾರಕ್ಕಾಗಿ ಸರಕಾರದ ಪ್ರತಿನಿಧಿಯಾಗಿದ್ದರೂ ಹೋರಾಡಿದ್ದಾರೆ.ಈ ವೇಳೆ ಅಶೋಕ ಅಲ್ಲಾಪೂರ, ಸಿದ್ದರಾಮ ಪಾಟೀಲ, ಜೆಡಿಎಸ್ ತಾಲೂಕಾಧ್ಯಕ್ಷ ಎಮ್.ಎನ್.ಪಾಟೀಲ ಮಾತನಾಡಿ,…
ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಸಮಗಾರ ಸಮಾಜವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜು ಆಲಗೂರ ರವರಿಗೆ ಮತ ಚಲಾಯಿಸಬೇಕೆಂದು ಜಿಲ್ಲೆಯ ಸಮಗಾರ ಸಮಾಜದ ಮುಖಂಡರು ಭಾನುವಾರ ಮನವಿ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷವು ದೀನ ದಲಿತರ ಹಾಗೂ ಬಡವರ ಪಕ್ಷವಾಗಿದ್ದು, ಈ ವರ್ಗಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಇದರ ಲಾಭವನ್ನು ಸಮಗಾರ ಸಮಾಜ ಕೂಡ ಪಡೆದುಕೊಂಡಿದೆ. ಸ್ವಾತಂತ್ರ್ಯ ದೊರೆತಾಗ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಸಮಾಜವು ಕಾಂಗ್ರೆಸ್ ಪಕ್ಷವು ಜಾರಿಗೆ ತಂದ ಭೂಸುಧಾರಣೆ ಕಾಯ್ದೆ, ಉಳುವವನೇ ಭೂ ಒಡೆಯ ಇಂಥ ಯೋಜನೆಗಳ ಲಾಭ ಪಡೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಆಡಳಿತದ ಸಮಯದಲ್ಲಿ ಶಿಕ್ಷಣವನ್ನು ಪಡೆದು ಸರಕಾರಿ ಉದ್ಯೋಗಿಗಳಾಗಿ ಆ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ಥಿತಿವಂತರಾಗಲು ಕಾರಣವಾಯಿತು. ಅನೇಕ ಯುವಕರು ಉನ್ನತ ಶಿಕ್ಷಣ ಪಡೆದು ದೊಡ್ಡ ದೊಡ್ಡ ಕಂಪನಿಗಳಲ್ಲೂ ಉದ್ಯೋಗಿಗಳಾಗಿ ಕೆಲವರು ವಿದೇಶಕ್ಕೂ ಕೂಡ ಹೋಗಿ ಉದ್ಯೋಗ ಮಾಡಲು ಕಾಂಗ್ರೆಸ್ ಪಕ್ಷವು ಕಾರಣವಾಗಿದೆ. ಇಷ್ಟೆಲ್ಲ ಪ್ರಯೋಜನಗಳನ್ನು ಪಡೆದ ಸಮಗಾರ ಸಮಾಜವು ಈಗ ಕಾಂಗ್ರೆಸ್ ಪಕ್ಷದ ಋಣ ತೀರಿಸುವ…
ವಿಜಯಪುರ: ಎಐಸಿಸಿ ಧುರೀಣ ರಾಹುಲ್ ಗಾಂಧಿ ವಿಜಯಪುರಕ್ಕೆ ಬಂದಾಗ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರೇ ಆ ಸಭೆಯಲ್ಲಿ ಇರಲಿಲ್ಲ, ಅವರ ಫೋಟೋ ಸಹ ಬ್ಯಾನರನಲ್ಲಿ ಅಲ್ಲಿರಲಿಲ್ಲ, ರಾಹುಲ್ ಗಾಂಧೀ ಆಲಗೂರ ಅವರ ಹೆಸರು ಸಹ ಉಲ್ಲೇಖಿಸಿ ಮತಯಾಚಿಸಲಿಲ್ಲ, ಪ್ರಚಾರ ಸಭೆಗೆ ಅಭ್ಯರ್ಥಿಯನ್ನೇ ಆಹ್ವಾನಿಸದೆ ಕಾಂಗ್ರೆಸ್ ಈಗಾಗಲೇ ಸೋಲು ಒಪ್ಪಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು.ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲಿ ಶಾಸಕರಾಗಿದ್ದ ಪ್ರೊ.ರಾಜು ಆಲಗೂರ ಅವರಿಗೆ ಕಾಂಗ್ರೆಸ್ ಪಕ್ಷ 2018 ರಲ್ಲಿ ಟಿಕೆಟ್ ಏಕೆ ನಿರಾಕರಣೆ ಮಾಡಿತು? 2024 ರ ಚುನಾವಣೆಯಲ್ಲಿಯೂ ಸಹ ಅವರಿಗೆ ಕಾಂಗ್ರೆಸ್ ಟಿಕೇಟ್ ನಿರಾಕರಣೆ ಮಾಡಿತ್ತು, ಈಗ ಲೋಕಸಭೆಗೆ ಯಾರೊಬ್ಬರು ಅಭ್ಯರ್ಥಿಯೇ ಕಾಂಗ್ರೆಸ್ ಬಳಿ ಇರದ್ದರಿಂದ ಅನಿವಾರ್ಯವಾಗಿ ಆಲಗೂರ ಅವರ ಕೊರಳಿಗೆ ಈ ಜವಾಬ್ದಾರಿ ವಹಿಸಿದೆ ಎಂದರು.ಈ ಹಿಂದೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ ಗುತ್ತಿಗೆದಾರರು ಸಹ ಈ ಸರ್ಕಾರದ ಮೇಲೆ ಅಸಮಾಧಾನಗೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ, ರಾಜ್ಯ ಕಾಂಗ್ರೆಸ್…
ವಿಜಯಪುರ: ಜಿಲ್ಲೆಯ ಯಾವುದೇ ಮತಗಟ್ಟೆಯಲ್ಲಿ ಕೂಡ ಪಿಆರ್‌ಒ ಹೊರತುಪಡಿಸಿ ಯಾವುದೇ ಅಧಿಕಾರಿಯಾಗಲಿ, ಸಿಬ್ಬಂದಿ ಮತ್ತು ಮತದಾರರಿಗೆ ಮೊಬೈಲ್ ತೆಗೆದುಕೊಂಡು ಒಯ್ಯಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರವಿವಾರ ಸಂಜೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳೊಂದಿಗೆ ಮತದಾನ ಸಿದ್ದತೆ ಕುರಿತು ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದ ಅವರು, ಮತಗಟ್ಟೆಯಲ್ಲಿ ಪಿಆರ್‌ಒ ಮಾತ್ರ ಮೊಬೈಲ್ ಒಯ್ಯತಕ್ಕದ್ದು ಮತ್ತು ಅದನ್ನು ಕೂಡಾ ಸೈಲೆಂಟ್ ಮೋಡನಲ್ಲಿ ಇರಿಸಬೇಕು ಎಂದರು.ಮೇ.7 ರಂದು ಮುಕ್ತ, ನಿಷ್ಪಕ್ಷಪಾತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಮತದಾನ ಜರುಗಿಸಲು, ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡಿರುವ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಆಯೋಗ ಸೂಚಿಸಿರುವ ನಿಮಯಗಳನ್ನು ಪಾಲಿಸಿ ಕರ್ತವ್ಯ ಪ್ರಜ್ಞೆ ಮೆರೆದು ಚುನಾವಣೆ ಪ್ರಕ್ರಿಯೆ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಇವಿಎಂ ಸಾಗಿಸುವ ವಾಹನಗಳಿಗೆ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದ್ದು, ವಾಹನಗಳು ನಿಗದಿತ ಹಾದಿಯಲ್ಲಿ ಸಂಚರಿಸಬೇಕು. ಹಾಗೂ ಯಾವುದೇ ಕಾರಣಕ್ಕೂ ಎಲ್ಲಿಯೂ ಮಾರ್ಗ ಮಧ್ಯದಲ್ಲಿ ನಿಲ್ಲಿಸಬಾರದು ಎಂದು ಸೂಚಿಸಿದರು.ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ…
ಗೆಲುವು ನನ್ನದೇ | ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ವಿಶ್ವಾಸ | ಡಿಎಸ್ಎಸ್ ಬಗ್ಗೆ ನನಗೆ ಗೌರವವಿದೆ ವಿಜಯಪುರ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ನಾನು ಗೆಲ್ಲುತ್ತೇನೆ ಎಂದು ಸಂಸದ ಹಾಗೂ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ರವಿವಾರ ಪತ್ರಿಕಾಗೋಷ್ಟಿ ನಡಸಿದ ಅವರು, ಕಳೆದ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ಒಂದು ಮತ ಹೆಚ್ಚಿಗೆ ಪಡೆಯುತ್ತೇನೆ. ಒಂದು ಮತದ ಅಂತರದಿಂದಾದರೂ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದರು.ನಾನು ಸಮಾಜದ ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ. ಜಿಲ್ಲೆಯಲ್ಲಿ ಎಲ್ಲಿಯೇ ಪ್ರಚಾರಕ್ಕೆ ಹೋದರೂ ಜನತೆ ನನಗೆ ಹೆಚ್ಚಿನ ಪ್ರ್ರೀತಿ, ಒಲವು ತೋರಿಸುತ್ತಿದ್ದಾರೆ. ನನ್ಮ ಬಗ್ಗೆ ಯಾರು ಏನೇ ಅಪಪ್ರಚಾರ ಮಾಡಿದರೂ ಜನರು ಅದಕ್ಕೆ ಕಿವಿಗೊಡುವುದಿಲ್ಲ.ಈ ಚುನಾವಣೆಯಲ್ಲೂ ನನ್ನ ಗೆಲುವು ನಿಶ್ಚಿತ ಎಂದರು.ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ನನ್ನ ಸಮುದಾಯದಿಂದಲೇ ನಾನು ಅಂತರ ಕಾಯ್ದುಕೊಂಡಿದ್ದೇನೆ. ಎಲ್ಲ ಸಮುದಾಯದವರನ್ನು ನನ್ನ ಜೊತೆಗೆ ತೆಗೆದುಕೊಂಡು ಬಂದಿದ್ದೇನೆ. ಅವರನ್ನು…
ಮೊದಲ ಪುಟ ವಿಜಯಪುರ: ಸುಳ್ಳು ಹೇಳುವ ಮೋದಿ ಮತ್ತು ಬಿಜೆಪಿಯನ್ನು ಮನೆಗೆ ಕಳುಹಿಸುವ ಸಮಯ ಬಂದಿದ್ದು, ಮಂಗಳವಾರ ಮತದಾರರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸಬೇಕು ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ರವಿವಾರ ತಿಕೋಟಾ ತಾಲೂಕಿನ ಹೊನವಾಡ, ಬಬಲೇಶ್ವರ ತಾಲೂಕಿನ ಅರ್ಜುಣಗಿ, ಕಾತ್ರಾಳ ಮತ್ತು ಹಲಗಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಮಾತನಾಡಿದ ಅವರು, ಜಿಲ್ಲೆ, ದೇಶದ ಭವಿಷ್ಯ ನಿರ್ಣಯಿಸುವ ಶುಭ ಘಳಿಗೆ ಈಗ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸೋಣ ಎಂದು ಅವರು ಹೇಳಿದರು.ನರೇಂದ್ರ ಮೋದಿ ಅವರಿಗೆ 10 ವರ್ಷ ಮೋದಿಗೆ ಅವಕಾಶ ನೀಡಿದ್ದು ಸಾಕು. ಜಿಗಜಿಣಗಿ ಅವರಿಗೆ ಆರು ಬಾರಿ ಅವಕಾಶ ನೀಡಿದ್ದೂ ಸಾಕು. ಮೋದಿ ಅವರು ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿವೆ. ಬೆಲೆ ಏರಿಕೆ, ನಿರುದ್ಯೋಗ, ಅಭಿವೃದ್ಧಿಯ ಕಡೆಗಣನೆಯಿಂದಾಗಿ ರೈತರು,…
ವಿಜಯಪುರ: ಲಿಂಗಾಯತ ಮುಖಂಡರಾದ ಎ.ಬಿ.ಪಾಟೀಲ, ಉಮೇಶ ಕತ್ತಿ, ಲಕ್ಷ್ಮಣ ಸವದಿ ಅವರು ತಮ್ಮ ಸ್ವ-ಸಾಮರ್ಥ್ಯದಿಂದ ಬೆಳೆದಿದ್ದಾರೆ ಹೊರತು, ಅವರಿಗೆ ರಾಜಕೀಯವಾಗಿ ರಮೇಶ ಜಿಗಜಿಣಗಿ ಅವರು ಬೆಳೆಸಿಲ್ಲ ಎಂದು ಕೆಪಿಸಿಸಿ ವಕ್ತಾರ ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ರಮೇಶ ಜಿಗಜಿಣಗಿ ಅವರಿಗೆ ಪತ್ರಿಕಾ ಹೇಳಿಕೆ ಮೂಲಕ ಉತ್ತರ ನೀಡಿದ ಅವರು, 1983 ರಿಂದ ಕಳೆದ 40 ವರ್ಷಗಳ ಅವಧಿಯಲ್ಲಿ ಜಿಗಜಿಣಗಿ ಅವರು ಶಾಸಕರು, ಸಚಿವರು, ಸಂಸದರು ಹಾಗೂ ಕೇಂದ್ರ ಮಂತ್ರಿಗಳಾಗಿ ಸತತ ಅಧಿಕಾರ ಅನುಭವಿಸುತ್ತಿದ್ದಾಗ ಒಬ್ಬನೇ ಒಬ್ಬ ಕಾರ್ಯಕರ್ತನನ್ನು, ಯಾವುದೇ ಸಮುದಾಯದವರನ್ನು ಬೆಳೆಸಿಲ್ಲ ಎಂದಿದ್ದಾರೆ.ಕಳೆದ 30 ವರ್ಷಗಳಿಂದ ಆರು ಬಾರಿ ಸಂಸದರಾಗಿರುವ ಇವರು ರಾಜಕೀಯವಾಗಿ ನಾಯಕರನ್ನು ಬೆಳೆಸುವುದು ಇರಲಿ, ಒಬ್ಬರಿಗಾದರೂ ದೆಹಲಿಗೆ ಕರೆದುಕೊಂಡು ಹೋಗಿ, ತಮ್ಮ ಬಂಗಲೆಯನ್ನು ತೋರಿಸಿದ್ದಾರೆಯೇ? ಎಂದು ಸಂಗಮೇಶ ಬಬಲೇಶ್ವರ ಪ್ರಶ್ನಿಸಿದ್ದಾರೆ.ದೆಹಲಿಯಂತೂ ದೂರದ ಮಾತು, ಭೂತನಾಳ ಕೆರೆ ಪಕ್ಕದಲ್ಲಿರುವ ಐಶಾರಾಮಿ ಬಂಗಲೆಗೆ ಜಿಲ್ಲೆಯಿಂದ ಹುಡುಕಿಕೊಂಡು ಬರುವ ಬಿಜೆಪಿ ಕಾರ್ಯಕರ್ತರನ್ನು ಒಳಗೆ ಬಿಟ್ಟುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿರುವ ಸಂಗಮೇಶ ಬಬಲೇಶ್ವರ, ಚುನಾವಣೆ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ವಿಶ್ವದ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ಇದೀಗ ಮತ್ತೊಂದು ಬಾರಿ ಚುನಾವಣೆ ಎಂಬ ಪ್ರಜಾಪ್ರಭುತ್ವದ ಮಹಾಯಜ್ಞ ಪ್ರಾರಂಭವಾಗಿದೆ.. ಭಾರತ ಒಂದು ಸಾಂವಿಧಾನಿಕ ರಾಷ್ಟ್ರವಾಗಿದ್ದು ಇಲ್ಲಿ ಗಣತಂತ್ರ ವ್ಯವಸ್ಥೆಯು ಜಾರಿಯಲ್ಲಿದೆ. 29 ರಾಜ್ಯಗಳ 550ಕ್ಕೂ ಹೆಚ್ಚು ಲೋಕಸಭಾ ಸೀಟುಗಳು ಮತ್ತು ನಮ್ಮ ಕರ್ನಾಟಕ ರಾಜ್ಯದಲ್ಲಿ 224 ವಿಧಾನಸಭಾ ಸೀಟುಗಳು ಮತ್ತು 28 ಲೋಕಸಭಾ ಸೀಟುಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಪ್ರಜಾಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ವಿವಿಧ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಪ್ರಣಾಳಿಕೆಗಳೊಂದಿಗೆ ಜನರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಪಣತೊಟ್ಟು ಚುನಾವಣೆಯ ಅಖಾಡಕ್ಕೆ ಇಳಿಯುತ್ತವೆ. ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ಪುರಸಭೆ, ನಗರ ಸಭೆ, ಮಹಾನಗರಪಾಲಿಕೆ ವಿಧಾನಸಭಾ ಸದಸ್ಯರು ಮೆಂಬರ್ ಆಫ್ ಲೆಜಿಸ್ಲೇಟಿವ್ ಅಸೆಂಬ್ಲಿ (ಮೇಲ್ಮನೆ ಮತ್ತು ಕೆಳಮನೆ ಸದಸ್ಯರು) ಮೆಂಬರ್ ಆಫ್ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರು ರಾಜ್ಯದಲ್ಲಿ ಆಡಳಿತದ ಭಾಗವಾಗಿ ಚುನಾಯಿಸಲ್ಪಟ್ಟರೆ ಲೋಕಸಭೆಯಲ್ಲಿ ಲೋಕಸಭಾ ಮತ್ತು…
“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್.ಕೆ. ಬೆಂಗಳೂರು ಬಹಳಷ್ಟು ಸರ್ಕಾರಿ ಅಧಿಕಾರಿಗಳ ಒಂದು ಸಾಮಾನ್ಯ ಗುಣ ಎಂದರೆ, ( ಕೇಂದ್ರ ಮತ್ತು ರಾಜ್ಯ ಸೇರಿ )ಐಎಎಸ್ ಅಧಿಕಾರಿಗಳಿಂದ ಡಾಕ್ಟರ್, ಇಂಜಿನಿಯರ್ ಸೇರಿದಂತೆ ಬಹುತೇಕ ಎಲ್ಲಾ ವಿಭಾಗದವರು ಕೆಲಸಕ್ಕೆ ಸೇರುವಾಗ ಅತ್ಯಂತ ಶ್ರದ್ಧೆಯಿಂದ ಮತ್ತು ಕಷ್ಟಪಟ್ಟು ಓದುತ್ತಾರೆ.ಕೆಲಸ ಸಿಕ್ಕ ನಂತರ ಅಲ್ಲಿಗೆ ಅವರ ಓದು ಪರಿಶ್ರಮ ಮತ್ತು ಬುದ್ದಿಯ ಬೆಳವಣಿಗೆ ಹೆಚ್ಚು ಕಡಿಮೆ ನಿಂತು ಹೋಗುತ್ತದೆ..ಕೆಲಸ ಸೇರಿದ ನಂತರ ಒಮ್ಮೆ ತಮ್ಮ ಆಫೀಸಿನ ಕೆಲಸ ಪ್ರಾರಂಭ ಮಾಡುವ ಅವರು ಖಚಿತ ಸಂಬಳದ ಭದ್ರತೆಯೊಂದಿಗೆ ಫೈಲುಗಳಲ್ಲಿ ಮುಳುಗಿ ಹೋಗುತ್ತಾರೆ. ಯಾವುದೇ ಹೊಸತನಕ್ಕೂ ತಮ್ಮನ್ನು ತೆರೆದು ಕೊಳ್ಳುವುದಿಲ್ಲ ಮತ್ತು ನಮ್ಮ ಸರ್ಕಾರಿ ವ್ಯವಸ್ಥೆ ಅದಕ್ಕೆ ಪ್ರೋತ್ಸಾಹವೂ ಕೊಡುವುದಿಲ್ಲ..ಸಾಕಷ್ಟು ಅಧಿಕಾರಿಗಳು ತಮ್ಮ ಯೌವನದ ದಿನಗಳಲ್ಲಿ ಸರ್ಕಾರಿ ಕೆಲಸ ಪ್ರಾರಂಭಿಸಿದರೆ ಮತ್ತೆ ಬದುಕಿನ ಬಗ್ಗೆ ಹಿಂತಿರುಗಿ ನೋಡುವುದು ನಿವೃತ್ತಿಯ ಸಮಯದಲ್ಲಿ..ಸಾಮಾನ್ಯವಾಗಿ ನಮ್ಮ ವ್ಯವಸ್ಥೆಯಲ್ಲಿ ಸರ್ಕಾರದ ಕೆಲಸ ಪಡೆಯುವುದೇ ಜೀವನದ ಸಾರ್ಥಕತೆ ಎಂದು ಭಾವಿಸಲಾಗುತ್ತದೆ. ಕೆಲಸ ದೊರೆತ ನಂತರ…
ಚಿಮ್ಮಡ: ಕ್ಷೇತ್ರದಾದ್ಯಂತ ಈ ಬಾರಿ ಗ್ರಾಮ, ಪಟ್ಟಣಗಳಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು ಸಹೋದರಿ ಸಂಯುಕ್ತಾ ಪಾಟೀಲ ಗೆಲುವು ನಿಶ್ಚಿತ ಎಂದು ಬಾಗಲಕೋಟ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಸಹೋದರಿ ಸಂಪ್ರದಾ ಪಾಟೀಲ ಹೇಳಿದರು.ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತ ಸಾರ್ವಜನಿರನ್ನುದೇಶಿಸಿ ಮಾತನಾಡಿದ ಅವರು ಹಿಂದಿನ ಸಂಸದರು ಚುನಾವಣೆ ಸಂಧರ್ಬಗಳಲ್ಲಿ ಮಾತ್ರ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಹಾಗೂ ಬಿಜೇಪಿಯ ಒಡೆದು ಆಳುವ ನೀತಿ ಇಲ್ಲಿನ ಮತದಾರರಲ್ಲಿ ಬೇಸರ ತರಿಸಿದೆ ಅಲ್ಲದೇ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳು ಸಾರ್ವಜನಿಕರಲ್ಲಿ ಕಾಂಗ್ರೆಸ್ ಕುರಿತ ಭರವಸೆ ಮೂಡಿಸಿದೆ, ಇದರಿಂದ ಎಲ್ಲ ವರ್ಗಗಳ ಮತದಾರರು ಕಾಂಗ್ರೆಸ್ ನತ್ತ ಒಲವು ತೋರುತಿದ್ದು ಇದು ಕಾಂಗ್ರೆಸ್ ಪಕ್ಷಕ್ಕೆ ಸುಲಭ ಜಯ ತಂದು ಕೊಡಲಿದೆ ಎಂದರು.ಶನಿವಾರ ರಾತ್ರಿ ಗ್ರಾಮದ ಪ್ರತೀ ವಾರ್ಡಗಳ ಮನೆ ಮನೆಗಳಿಗೆ ಭೇಟಿನೀಡಿ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಸಹೋದರಿ ಸಂಪ್ರದಾ ಪಾಟೀಲ ಮತಯಾಚನೆ ನಡೆಸಿದರು.ಗ್ರಾಮ ಘಟಕದ ಅಧ್ಯಕ್ಷ ಉಮೇಶ…
