ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಸಮಗಾರ ಸಮಾಜವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜು ಆಲಗೂರ ರವರಿಗೆ ಮತ ಚಲಾಯಿಸಬೇಕೆಂದು ಜಿಲ್ಲೆಯ ಸಮಗಾರ ಸಮಾಜದ ಮುಖಂಡರು ಭಾನುವಾರ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ದೀನ ದಲಿತರ ಹಾಗೂ ಬಡವರ ಪಕ್ಷವಾಗಿದ್ದು, ಈ ವರ್ಗಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಇದರ ಲಾಭವನ್ನು ಸಮಗಾರ ಸಮಾಜ ಕೂಡ ಪಡೆದುಕೊಂಡಿದೆ. ಸ್ವಾತಂತ್ರ್ಯ ದೊರೆತಾಗ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಸಮಾಜವು ಕಾಂಗ್ರೆಸ್ ಪಕ್ಷವು ಜಾರಿಗೆ ತಂದ ಭೂಸುಧಾರಣೆ ಕಾಯ್ದೆ, ಉಳುವವನೇ ಭೂ ಒಡೆಯ ಇಂಥ ಯೋಜನೆಗಳ ಲಾಭ ಪಡೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಆಡಳಿತದ ಸಮಯದಲ್ಲಿ ಶಿಕ್ಷಣವನ್ನು ಪಡೆದು ಸರಕಾರಿ ಉದ್ಯೋಗಿಗಳಾಗಿ ಆ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ಥಿತಿವಂತರಾಗಲು ಕಾರಣವಾಯಿತು. ಅನೇಕ ಯುವಕರು ಉನ್ನತ ಶಿಕ್ಷಣ ಪಡೆದು ದೊಡ್ಡ ದೊಡ್ಡ ಕಂಪನಿಗಳಲ್ಲೂ ಉದ್ಯೋಗಿಗಳಾಗಿ ಕೆಲವರು ವಿದೇಶಕ್ಕೂ ಕೂಡ ಹೋಗಿ ಉದ್ಯೋಗ ಮಾಡಲು ಕಾಂಗ್ರೆಸ್ ಪಕ್ಷವು ಕಾರಣವಾಗಿದೆ. ಇಷ್ಟೆಲ್ಲ ಪ್ರಯೋಜನಗಳನ್ನು ಪಡೆದ ಸಮಗಾರ ಸಮಾಜವು ಈಗ ಕಾಂಗ್ರೆಸ್ ಪಕ್ಷದ ಋಣ ತೀರಿಸುವ ಸಮಯ ಬಂದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಬೇಕು. ಹಲವಾರು ವರ್ಷಗಳಿಂದ ನಮ್ಮ ಸಮಗಾರ ಸಮಾಜದ ಅಭಿವೃದ್ಧಿಯನ್ನು ಬಿಜೆಪಿ ಪಕ್ಷವು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅಲ್ಲದೆ ಯಾವುದೇ ಕ್ಷೇತ್ರದಲ್ಲಿ ನಮಗೆ ಸಿಗಬೇಕಾದ ಸಂವಿಧಾನಬದ್ಧ ಹಕ್ಕುಗಳನ್ನು ನೀಡದೆ ನಮಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ, ಯೋಜನೆಗಳು, ಸೌಲತ್ತುಗಳನ್ನು ಹಾಗೂ ಹಕ್ಕುಗಳನ್ನು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ನಮಗೆ ದೊರಕಿಸಿಕೊಟ್ಟು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸವಿದೆ. ಆದ್ದರಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಸುಸಂಸಕೃತ, ವಿದ್ಯಾವಂತ ಹಾಗೂ ಸಂಭಾವಿತ ಅಭ್ಯರ್ಥಿಯಾದ ಪ್ರೊ.ಎಚ್.ಆರ್. ಆಲಗೂರ ರವರನ್ನು ಸಂಪೂರ್ಣವಾಗಿ ಬೆಂಬಲಿಸಲು ಸಮಾಜದ ಮುಖಂಡರುಗಳಾದ ವಸಂತ ಹೊನಮೊಡೆ, ಮಾಜಿ ಜಿ.ಪಂ. ಸದಸ್ಯ ದಾನಪ್ಪ ಕಟ್ಟಿಮನಿ, ಪರಶುರಾಮ ಹೊಡಮನಿ, ಲಕ್ಷ್ಮಣ ಇಲಕಲ್, ಸಂತೋಷ ಬಾಲಗಾಂವಿ, ರಮೇಶ ಹೊನಮೊರೆ, ಸಂತೋಷ ಜೋಗಿ, ಸಂತೋಷ ಕಾಂಬಳೆ, ಜಗದೀಶ ಕಬಾಡೆ, ಸಂಜು ಕಾಂಬಳೆ ಮುಂತಾದವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

