ಸಿಂದಗಿ: ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕೊಡಿಸುವ ಸಲುವಾಗಿ ಜಯಬಸವ ಮೃತ್ಯುಂಜ ಸ್ವಾಮೀಜಿ ಸತತವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅದಕ್ಕೇ ಕಾಂಗ್ರೆಸ್ ನಾಯಕರ ಕೊಡುಗೆ ಏನು ಎಂಬುದು ಸಮಾಜದ ಮುಖಂಡ, ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಪ್ರಶ್ನಿಸಿದರು.
ಭಾನುವಾರದಂದು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡ, ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಪ್ರತಿಯೊಂದು ಪಕ್ಷದಲ್ಲಿ ಎಲ್ಲ ಸಮಾಜದ ನಾಯಕರಿರುವುದು ಸಹಜ. ಆದರೆ ಇಡೀ ಪಂಚಮಸಾಲಿ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದೆ ಎನ್ನುವುದು ಖಂಡನೀಯ. ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕೊಡಿಸುವ ಸಲುವಾಗಿ ಜಯ ಬಸವ ಮೃತ್ಯುಂಜ ಸ್ವಾಮೀಜಿ ಸತತವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅದಕ್ಕೇ ಕಾಂಗ್ರೆಸ್ ನಾಯಕರ ಕೊಡುಗೆ ಏನು ಎಂದು ಪ್ರಶ್ನಿಸಿದರು. ಬಸನಗೌಡ ಪಾಟೀಲ ಯತ್ನಾಳ ಅವರು ಸಮಾಜದ ಉದ್ದಾರಕ್ಕಾಗಿ ಸರಕಾರದ ಪ್ರತಿನಿಧಿಯಾಗಿದ್ದರೂ ಹೋರಾಡಿದ್ದಾರೆ.
ಈ ವೇಳೆ ಅಶೋಕ ಅಲ್ಲಾಪೂರ, ಸಿದ್ದರಾಮ ಪಾಟೀಲ, ಜೆಡಿಎಸ್ ತಾಲೂಕಾಧ್ಯಕ್ಷ ಎಮ್.ಎನ್.ಪಾಟೀಲ ಮಾತನಾಡಿ, ಇತ್ತಿಚಗೆ ಹಿಂಚಗೇರಿಯಲ್ಲಿ ನಡೆದ ಸಮಾಜದ ಸಮಾವೇಶದಲ್ಲಿ ಸಮಾಜ ಬಾಂಧವರ ಜನಸಂಖ್ಯೆ ಕಡಿಮೆ ಇತ್ತು. ಕಾಂಗ್ರೆಸ್ ಹೇಳಿಕೆಯಿಂದ ಸಮಾಜದ ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿಲ್ಲದೇ ಸ್ವಾರ್ಥಕ್ಕಾಗಿ ಸಮಾಜ ಬಳಕೆ ಸಲ್ಲದು. ಸಮಾಜದ ನಾಯಕರನ್ನು ಹಾಗೂ ಮತದಾರರನ್ನು ಗೊಂದಲಕ್ಕೀಡು ಮಾಡುವುದು ಸಲ್ಲದು. ಸಮಾಜವನ್ನು ವ್ಯಕ್ತಿಗಳನ್ನು ತುಳಿಯುವ ಕೆಲಸ ಜಿಗಜಿಣಗಿ ಮಾಡಿಲ್ಲ. ಹಾಗಾಗಿ ಮತದಾರರು ಈ ಬಾರಿ ಜಿಗಜಿಣಗಿ ಅವರನ್ನು ಗೆಲ್ಲಿಸಿ ಹಾಗೂ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಯಾಗಲಿ ಎಂದು ಮನವಿ ಮಾಡಿಕೊಂಡರು.
ಈ ವೇಳೆ ಜೆಡಿಎಸ್ ತಾಲೂಕಾಧ್ಯಕ್ಷ ಎಮ್.ಎನ್.ಪಾಟೀಲ ಮಾತನಾಡಿ, ಕಾಂಗ್ರೆಸ್‌ನಿಂದ ಒಬ್ಬರಾದರೂ ಸಮಾಜದ ವ್ಯಕ್ತಿ ಸಿಎಂ ಆಗಿದ್ದಾರೆಯೇ. ಕಾಂಗ್ರೆಸ್ ಯಾಕೆ ಮಾಡಲಿಲ್ಲ. ಸಮಾಜಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ. ಬಿಜೆಪಿ ಸಮಾಜವನ್ನು ಎತ್ತಿ ಹಿಡದಿದೆ ಎಂದರು.
ಶ್ರೀಶೈಲ ಚಳ್ಳಗಿ, ಮಹಾಂತಗೌಡ ಬಿರಾದಾರ, ಗುಂಡು ಕೆರೂಡಿ, ಮಲ್ಲು ಬಗಲಿ, ಶಿವರಾಜ ಕೆಂಗನಾಳ, ಸಂಗಮೇಶ ಮನ್ನೀಕೇರಿ, ಮಹೇಶ ಪಾಟೀಲ, ಮವೀನ ಪೀರಶೆಟ್ಟಿ, ಪ್ರಮೋದ ಬಾಗೇವಾಡ, ರಮೇಶ ಪೀರಶೇಟ್ಟಿ, ಗಂಗಾಧರ ಕಡಗಂಚಿ, ಗುರು ತಳವಾರ, ಎನ್.ಎಸ್.ಹಿರೇಮಠ, ಪೀರು ಕೆರೂರ ಸಾವಿತ್ರಿ ಹಿಕ್ಕಣಗುತ್ತಿ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

