ಚಿಮ್ಮಡ: ಕ್ಷೇತ್ರದಾದ್ಯಂತ ಈ ಬಾರಿ ಗ್ರಾಮ, ಪಟ್ಟಣಗಳಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು ಸಹೋದರಿ ಸಂಯುಕ್ತಾ ಪಾಟೀಲ ಗೆಲುವು ನಿಶ್ಚಿತ ಎಂದು ಬಾಗಲಕೋಟ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಸಹೋದರಿ ಸಂಪ್ರದಾ ಪಾಟೀಲ ಹೇಳಿದರು.
ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತ ಸಾರ್ವಜನಿರನ್ನುದೇಶಿಸಿ ಮಾತನಾಡಿದ ಅವರು ಹಿಂದಿನ ಸಂಸದರು ಚುನಾವಣೆ ಸಂಧರ್ಬಗಳಲ್ಲಿ ಮಾತ್ರ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಹಾಗೂ ಬಿಜೇಪಿಯ ಒಡೆದು ಆಳುವ ನೀತಿ ಇಲ್ಲಿನ ಮತದಾರರಲ್ಲಿ ಬೇಸರ ತರಿಸಿದೆ ಅಲ್ಲದೇ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳು ಸಾರ್ವಜನಿಕರಲ್ಲಿ ಕಾಂಗ್ರೆಸ್ ಕುರಿತ ಭರವಸೆ ಮೂಡಿಸಿದೆ, ಇದರಿಂದ ಎಲ್ಲ ವರ್ಗಗಳ ಮತದಾರರು ಕಾಂಗ್ರೆಸ್ ನತ್ತ ಒಲವು ತೋರುತಿದ್ದು ಇದು ಕಾಂಗ್ರೆಸ್ ಪಕ್ಷಕ್ಕೆ ಸುಲಭ ಜಯ ತಂದು ಕೊಡಲಿದೆ ಎಂದರು.
ಶನಿವಾರ ರಾತ್ರಿ ಗ್ರಾಮದ ಪ್ರತೀ ವಾರ್ಡಗಳ ಮನೆ ಮನೆಗಳಿಗೆ ಭೇಟಿನೀಡಿ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಸಹೋದರಿ ಸಂಪ್ರದಾ ಪಾಟೀಲ ಮತಯಾಚನೆ ನಡೆಸಿದರು.
ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ, ಅಶೋಕ ಧಡೂತಿ, ಮಹಾಲಿಂಗ ಮಾಯಣ್ಣವರ, ಶಿವಪ್ಪಾ ನಾಗನೂರ, ಪ್ರವೀಣ ಪೂಜಾರಿ, ಅರೂಣ ಗಾಣಿಗೇರ, ಮಹಾಲಿಂಗ ಬಳಗಾರ, ಅಶೋಕ ನಾವಿ, ಪಿರಸಾಬ ನದಾಫ, ಗ್ರಾ.ಪಂ. ಸದಸ್ಯೆ ಶ್ರೀಮತಿ ಮೇಘಾ ಅರುಣ ಗಾಣಿಗೇರ, ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

