ಮೊದಲ ಪುಟ
ವಿಜಯಪುರ: ಸುಳ್ಳು ಹೇಳುವ ಮೋದಿ ಮತ್ತು ಬಿಜೆಪಿಯನ್ನು ಮನೆಗೆ ಕಳುಹಿಸುವ ಸಮಯ ಬಂದಿದ್ದು, ಮಂಗಳವಾರ ಮತದಾರರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸಬೇಕು ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ತಿಕೋಟಾ ತಾಲೂಕಿನ ಹೊನವಾಡ, ಬಬಲೇಶ್ವರ ತಾಲೂಕಿನ ಅರ್ಜುಣಗಿ, ಕಾತ್ರಾಳ ಮತ್ತು ಹಲಗಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಮಾತನಾಡಿದ ಅವರು, ಜಿಲ್ಲೆ, ದೇಶದ ಭವಿಷ್ಯ ನಿರ್ಣಯಿಸುವ ಶುಭ ಘಳಿಗೆ ಈಗ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸೋಣ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಅವರಿಗೆ 10 ವರ್ಷ ಮೋದಿಗೆ ಅವಕಾಶ ನೀಡಿದ್ದು ಸಾಕು. ಜಿಗಜಿಣಗಿ ಅವರಿಗೆ ಆರು ಬಾರಿ ಅವಕಾಶ ನೀಡಿದ್ದೂ ಸಾಕು. ಮೋದಿ ಅವರು ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿವೆ. ಬೆಲೆ ಏರಿಕೆ, ನಿರುದ್ಯೋಗ, ಅಭಿವೃದ್ಧಿಯ ಕಡೆಗಣನೆಯಿಂದಾಗಿ ರೈತರು, ಬಡವರು, ಜನಸಾಮಾನ್ಯರ ತತ್ತರಿಸಿದ್ದಾರೆ. ಗೊಬ್ಬರ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ದ್ರಾಕ್ಷಿ ಔಷಧಿ ದರ ಐದು ಪಟ್ಟು ತುಟ್ಟಿಯಾಗಿದೆ. ರೈತರ ಆದಾಯ ದ್ವಿಗುಣವಾಗುವ ಬದಲು ಕೃಷಿ, ತೋಟಗಾರಿಕೆ ನಿರ್ವಹಣೆ ವೆಚ್ಚ ದ್ವಿಗುಣವಾಗಿದೆ. ಮೋದಿ ಮಾತುಗಳು ಹೊಟ್ಟೆ ತುಂಬಿಸುವುದಿಲ್ಲ ಎಂಬುದು ಜನರಿಗೆ ಅರಿವಾಗಿದೆ. ಕಾಂಗ್ರೆಸ್ ಈ ಮುಂಚೆ ಜನರ ಬದುಕು ಕಟ್ಟಿಕೊಟ್ಟಿದೆ. ಈಗ ಪಂಚ ಗ್ಯಾರಂಟಿಗಳ ಮೂಲಕ ಸರ್ವ ಸಮುದಾಯಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಈ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ದೇಶದ ರೈತರು, ಮಹಿಳೆಯರು, ಯುವಕರು ಹಾಗೂ ಸರ್ವ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಮಾಡಲಿದೆ ಎಂದು ಅವರು ತಿಳಿಸಿದರು.
ಪ್ರಾಣಿ ಪಕ್ಷಿಗಳು ಕೂಡ ಉಪಕಾರ ಮಾಡಿದವರನ್ನು ನೆನೆಯುತ್ತವೆ. ಮನುಷ್ಯರಾದ ನಾವು ನಮಗೆ ನೆರವಾದರನ್ನು ಮರೆಯಬಾರದು. ವಿಜಯಪುರ ಜಿಲ್ಲೆಯನ್ನು ಬಾರಮತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕನಸನ್ನು ಹೊಂದಿದ್ದೇನೆ. ನಾವು ರೈತರ ಜನ. ನಮ್ಮದು ನೀರಿನ ಜಾತಿ. ನೀರು ಮತ್ತು ಅಭಿವೃದ್ಧಿ ನಮ್ಮ ಧರ್ಮ ಎಂದು ಅವರು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಅರವಿಂದ ಮಸಳಿ, ಜಕ್ಕಪ್ಪ ಯಡವೆ, ಚನ್ನಪ್ಪ ಕೊಪ್ಪದ, ಬಾಪುಗೌಡ ಪಾಟೀಲ ಶೇಗುಣಸಿ, ಡಾ. ಕೆ. ಎಚ್. ಮುಂಬಾರಡ್ಡಿ, ಬಸನಗೌಡ ಬ. ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ಹಿರೇಮಠ, ಸಾಬು ಖಂಡೆಕರ, ರಾಮಗೊಂಡ ಚಾವರ, ತುಕಾರಾಮ ದಡಕೆ, ಸುರೇಶಗೌಡ ಪಾಟೀಲ, ಸಿದ್ದಪ್ಪ ಬೆಳಗಾವಿ, ಶ್ಯಾಮು ಬಡಳ್ಳಿ, ರಫೀಕ್ ಮಕಾಂದಾರ, ರಮೇಶ ದೇಸಾಯಿ, ಸುಲ್ತಾನ ಹೊಕ್ಕುಂಡಿ, ರಫೀಕ್ ಸೋನಾರ, ಕಲ್ಲಪ್ಪಗೌಡ ನ್ಯಾಮಗೌಡ, ಎಂ. ಎನ್. ಅಂಗಡಿ, ಮುದಕಪ್ಪಗೌಡ ಪಾಟೀಲ, ಮಲ್ಲಪ್ಪ ಕೆಂಪವಾಡ, ಮುತ್ತಪ್ಪ ವಾಣಿ, ರಾಮನಿಂಗ ಕೊಕಟನೂರ, ಎಸ್. ಡಿ. ಗುಗ್ಗರಿ, ಬಾಳೇಶ ಪಡಸಲಗಿ, ರಂಗಪ್ಪ ಚಿಕ್ಕಲಕಿ, ಸಿದ್ಧರಾಯ ಬಿರಾದಾರ, ಸಂಗಪ್ಪ ಮನಗೂಳಿ, ಹನಮಂತಗೌಡ ಬಿರಾದಾರ, ಟಿ. ಎಸ್. ಕುಲಕರ್ಣಿ, ಬಸವರಾಜ ಬಡ್ರಿ, ಡಾ. ಕೆ. ಎಚ್. ಮುಂಬಾರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

