Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ತಾಲೂಕಿನ ಹೊರ ವಲಯದ ರಾಂಪೂರ ರಸ್ತೆ ಯಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನ ಗಣಿಹಾರ್ ಗ್ರಾಮದ ಸಲೀಮ್ ಬಳಗಾನೂರ ಇವರ ಪುತ್ರಿ ಆನಮ್ ಬಳಗಾನೂರ ೬೦೨ (ಶೇ.೯೬.೩೨) ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡು ಸಾಧನೆ ಮಾಡಿದ್ದಾಳೆ.
ಆಲಮಟ್ಟಿ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮಂಜಪ್ಪ ಹರ್ಡೇಕರ್ ಪ್ರೌಢ ಶಾಲೆ ಆಲಮಟ್ಟಿ ವಿದ್ಯಾರ್ಥಿಗಳು ಶೇ.೮೫% ಫಲಿತಾಂಶವನ್ನು ದಾಖಲಿಸಿದ್ದಾರೆ. ಶಬೀನಾ ಭಾಗವಾನ ೫೭೭ ೯೨.೩೨%, ಪ್ರಥಮ ಸ್ಥಾನ. ಸೌಜನ್ಯ ದಳವಾಯಿ. ೫೭೧, ೯೧.೩೬% ದ್ವಿತೀಯ ಸ್ಥಾನಚಂದ್ರಿಕಾ ಮಾನೆ. ೫೪೦ ೮೬.೪೦% ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಜಗದ್ಗುರು ಗದುಗಿನ ತೋಂಟದ ಡಾ,ಸಿದ್ದರಾಮ ಶ್ರೀಗಳು ಹಾಗೂ ಆಡಳಿತ ಮಂಡಳಿ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಆಯ್ ಗಿಡ್ಡಪ್ಪಗೋಳ. ಹಾಗೂ ಶಾಲೆಯ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಸಿಂದಗಿ: ತಾಲೂಕಿನ ಮಾಡಬಾಳ ಗ್ರಾಮದಲ್ಲಿ ಮಹಾಶಿವರಣೆ ಹೇಮರೆಡ್ಡಿ ಮಲ್ಲಮ್ಮಳ ೬೦೫ನೇ ಜಯಂತ್ಯೋತ್ಸವದ ನಿಮಿತ್ಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.ಮೆರವಣಿಗೆಯು ಮಲ್ಲಿಕಾರ್ಜುನ ಕಟ್ಟೆಯಿಂದ ಪ್ರಾರಂಭಗೊAಡು ಗಂಗಾಪೂಜೆ ಸಲ್ಲಿಸಿ ಗ್ರಾಮದ ವಿವಿಧ ರಸ್ತೆಗಳಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಮೆರವಣಿಗೆಯ ರಸ್ತೆಯುದ್ಧಕ್ಕೂ ಯುವಕರು ಪುಷ್ಪಾರ್ಚನೆ, ಮಹಿಳೆಯರು, ಮಕ್ಕಳಾಧಿಯಾಗಿ ಭಜನೆ ಮಾಡುವ ಮೂಲಕ ವಚನಗಳನ್ನು ಹೇಳುತ್ತಿರುವುದು ಜನಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜ ಬಾಂಧವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಬಳಿಕ ಮಹಾ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಯಿತು.
ಚಡಚಣ: ಸಮೀಪದ ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೮೪.೬೧ ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆ ಬರೆದ ೬೫ ವಿದ್ಯಾರ್ಥಿಗಳ ಪೈಕಿ ೫೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಆಕಾಶ ಬಗಲಿ (ಶೇ.೯೨.೯೬) ಪ್ರಥಮ, ಅಂಜಲಿ ದಾಭೆ (ಶೇ.೮೮.೬೪) ದ್ವಿತೀಯ, ಮೇಘಾ ಬಗಲಿ (ಶೇ.೮೭.೮೪) ತೃತೀಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ಶಿವಾನಿ ಕಾಂಬಳೆ (ಶೇ.೮೫.೯೨), ಸುಕದೇವ ಘಾಡಗೆ (ಶೇ.೮೫.೬೦), ದೀಪಾ ದಿಕ್ಷಾಂಗಿ (ಶೇ.೮೫.೯೨) ಅಂಕಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಆನಂದ ದೈವಾಡಿ ಸೇ.೮೪.೮೦%, ಸಂತೋಷ ಹಾವಿನಾಳ ಶೇ.೮೪.೩೨%, ಸ್ವಾತಿ ದಾಭೆ ಶೇ.೮೪.೩೨%, ಕಾವೇರಿ ಹತ್ತಳ್ಳಿ ಶೇ.೮೩.೬೮%, ಓಂಕಾರ ಕೋಳಿ ಶೇ.೮೩.೨೦%, ರಾಜೇಶ್ವರಿ ಸಾಲಮಳಗಿ ಶೇ.೮೧.೬೦% ಅಂಕಗಳನ್ನು ಪಡೆದು ಶಾಲೆಯ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಗುರು ಎಂ.ಎಸ್.ಪಾಟೀಲ ಹಾಗೂ ಸಹ ಶಿಕ್ಷಕ ವರ್ಗ ಮತ್ತು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಲಮೇಲ: ದೇಶದ ಅನೇಕ ಹಿಂದೂ ರಾಜ ಮಹಾರಾಜರು ದೇಶದ ಸಂಸ್ಕೃತಿ, ಸಂಪ್ರದಾಯ ಸಂಪತ್ತು ಉಳಿಸಲು ಹೋರಾಡಿದ ಫಲದಿಂದ ಇಂದು ನಾವೆಲ್ಲ ನೆಮ್ಮದಿಯಾಗಿದ್ದೇವೆ. ಮಹಾರಾಣ ಪ್ರತಾಪ್, ಛತ್ರಪತಿ ಶಿವಾಜಿ ಮಹಾರಾಜ ಆದರ್ಶಗಳು ಅನುಕರಿಸಬೇಕಾಗಿದೆ ಎಂದು ರಜಪುತ ಸಮಾಜದ ಯುವ ಮುಖಂಡ ಮದನ ರಜಪೂತ ಹೇಳಿದರು.ಗುರುವಾರ ಆಲಮೇಲ ಪಟ್ಟಣದ ರಜಪೂತ ಸಮಾಜದವರು ಮಹಾರಾಣಾ ಪ್ರತಾಪ್ ಅವರ ೪೮೪ನೇ ಜಯಂತಿ ಆಚರಿಸಿ ಮಾತನಾಡಿದರು.ದೇಶಕ್ಕಾಗಿ ಧರ್ಮ ರಕ್ಷಣೆಗಾಗಿ ಹೋರಾಡಿದ ರಾಜ ಮಹಾರಾಜರನ್ನು ನೆನೆಯಲೆಬೇಕು. ಅವರನ್ನು ಯಾವುದೆ ಜಾತಿಗೆ ಸೀಮಿತಗೊಳಿಸಬಾರದು. ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ ಮಹಾರಾಜ ಅವರ ಹೋರಾಟಿದಂದ ಇಂದು ಹಿಂದೂ ಧರ್ಮ ಉಳದಿದೆ ಅದನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.ದಶರಥಸಿಂಗ್ ರಜಪೂತ, ಮೋಹನಸಿಂಗ್ ರಜಪೂತ, ಹಣಮಂತ ರಜೊಪೂತ, ಶಿವು ರಜಪೂತ, ಪ್ರತಾಫಸಿಂಗ್ ರಜಪೂತ, ಕರಣಸಿಂಗ್ ರಜಪೂತ, ಮಾಣಿಕಸಿಂಗ್ ರಜಪೂತ, ಜಯಸಿಂಗ್ ರಜಪೂತ ಮುಂತಾದವರು ಇದ್ದರು.
ಆಲಮೇಲ: ಜಗತ್ತಿನಲ್ಲಿ ಮೊಟ್ಟ ಮೊದಲು ಸಂಸತ್ ರಚನೆ ಮಾಡಿ ಸಮಾನತೆ ಜಾರಿಗೆ ತಂದ ಕೀರ್ತಿ ಅಣ್ಣ ಬಸವಣ್ಣವರಿಗೆ ಸಲ್ಲುತ್ತದೆ ಎಂದು ಆಲಮೇಲದ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಜಿ ಹೇಳಿದರು.ಅವರು ಶುಕ್ರವಾರ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಬಸವಣ್ಣ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರುಸಮರ್ಥ ಪ್ರಜಾಪ್ರಭುತ್ವದ ಜತೆಗೆ ಪ್ರಜ್ಞಾ ಪ್ರಭುತ್ವದ ಅಗತ್ಯವನ್ನು ಅರಿತು ೧೨ನೇ ಶತಮಾನದಲ್ಲಿ ಹುಟ್ಟು ಹಾಕಿದ ಅನುಭವ ಮಂಟಪದ ಉದ್ದೇಶಗಳು ಇಂದಿಗೆ ಪ್ರಸ್ತುತವಾಗಿದೆ ಎಂದು ಹೇಳಿದರು.ಶ್ರೀಮಂತ ದುದ್ದಗಿ, ಸುನಿಲ ನಾರಾಯಣಕರ, ಮಲ್ಲಿಕಾರ್ಜುನ ಅಚಲೇರಿ, ದಯಾನಂದ ನಾರಾಯನಣಕರ, ಶಂಕರ ಹೇಳೆಮನಿ, ಬಾಬು ಸಾಸಬಾಳ, ಅಪ್ಪುಗೌಡ ಪಾಟೀಲ, ಅಂಬಣ್ಣ ಗುರಿಕಾರ, ಗುಂಡು ಮೇಲಿನಮನಿ, ಮಲ್ಲು ಲಾಳಸಂಗಿ ಮಲ್ಲಿಕಾರ್ಜುನ ರಾಂಪೂರಮಠ, ಶೈಲಾ ಹೋಸಮನಿ, ಶ್ರೀಕಾಂತ ಶ್ರೀಗಿರಿ ಮುಂತಾದವರು ಇದ್ದರು.
ಆಲಮೇಲ: ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಗ್ರಾಮಸ್ಥರು ಬಸವೇಶ್ವರ ಜಯಂತಿಯನ್ನು ವಿಜ್ರಂಬಣೆಯಿಂದ ಮಾಡಿದರು.ಶುಕ್ರವಾರ ಬಸವ ಜಯಂತಿ ನಿಮಿತ್ಯ ಬಳಗಾನೂರ ಗ್ರಾಮಸ್ಥರು ಬಸವೇಶ್ವರ ಭಾವಚಿತ್ರವನ್ನು ಎತ್ತಿನ ಬಂಡಿಯಲ್ಲಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮಾಡುವ ಮೂಲಕ ವಿಶೇಷವಾಗಿ ಬಸವೇಶ್ವರ ಜಯಂತಿ ಆಚರಿಸಿದರು.ಗ್ರಾಮದ ಪ್ರಮುಖರಾದ ಪರಮಾನಂದ ಕನ್ನೂರ, ಶಿವಪುತ್ರ ಹೂಗಾರ, ಶಿವಾನಂದ ಹೂಗಾರ, ಶಿವಲಿಂಗ ಡವಳಗಿ, ರಾಜು ಕನ್ನೂರ, ಗುರುಪಾದಯ್ಯ ಮಠಪತಿ ಮುಂತಾದವರು ಇದ್ದರು.
ಆಲಮೇಲ: ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ ೮೮ ರಷ್ಟು ಆಗಿದ್ದು ಒಟ್ಟು ೧೩೭ ವಿದ್ಯಾರ್ಥಿಗಳಲ್ಲಿ ೧೨೦ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.ಕುಮಾರಿ ಶಿಲ್ಪಾ ಗುರುಸಿದ್ದಪ್ಪ ಜಂಗಮಶೆಟ್ಟಿ ೬೦೧(೯೬.೧೬) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಹಾಗೂ ಸಿಂದಗಿ ತಾಲೂಕಿಗೆ ಸರಕಾರಿ ಕನ್ನಡ ಮಾದ್ಯಮದಲ್ಲಿ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾರೆ, ಕುಮಾರಿ ಭಾಗ್ಯಶ್ರೀ ಶರಣಬಸು ಪೂಜಾರಿ ೫೯೬(೯೫.೩೬)ಅಂಕಗಳು ಪಡೆದು ದ್ವಿತಿಯ ಸ್ಥಾನ, ಕುಮಾರಿ ಧಾನಮ್ಮ ರವಿ ಕತ್ರಾಬಾದಿ ೫೮೯(೯೪.೨೪) ಅಂಕಗಳನ್ನು ಪಡೆದು ತೃತಿಯ ಸ್ಥಾನ ಪಡೆದಿರುತ್ತಾರೆ. ಉತ್ತಮ ಸಾಧನೆ ಮಾಡಿರುವ ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿನಿಯರಿಗೆ ಶಾಲಾ ಸಿಬ್ಬಂದಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು ಹರ್ಷ ವೆಕ್ತಪಡಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ರವಿ ಹೊಸನಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಪಟ್ಟಣದ ಯಲ್ಲಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಮೇ. ೧೨ ರಂದು ಬೆಳಗ್ಗೆ ೧೦ ಗಂಟೆಗೆ ರಾಷ್ಟ್ರೀಯ ಗೋರ್ ಮಳಾವ ಅರಕೇರಿಯ ಎ.ಎಂ.ಆರ್.ಸಂಕಲ್ಪ ಸಂಜೀವಿನಿ ಸಂಸ್ಥೆ ಇವರ ಸಹಯೋಗದಲ್ಲಿ ಸೋನಾಬಾಯಿ ಪವಾರ ಅವರ ೧೦೧ ನೇ ಜನ್ಮ ದಿನಾಚರಣೆ ನಿಮಿತ್ಯ ತುಲಾಭಾರ ಹಾಗೂ ಕಲಾ ಮೇಳ, ರಾಜ್ಯಮಟ್ಟದ ಬಂಜಾರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.ಸಾನಿಧ್ಯವನ್ನು ಚಿತ್ರದುರ್ಗದ ಸರ್ದಾರ ಸೇವಾಲಾಲ ಸ್ವಾಮೀಜಿ, ಸೋಮದೇವರಹಟ್ಟಿಯ ಜಗನು ಮಹಾರಾಜ ವಹಿಸುವರು. ಕೇಸರಟ್ಟಿಯ ಸೋಮಲಿಂಗ ಮಹಾರಾಜರು ನೇತೃತ್ವ ವಹಿಸುವರು. ಅಧ್ಯಕ್ಷತೆಯನ್ನು ರಾಷ್ಟ್ರೀಯ ಗೋರ್ ಮಳಾವ ರಾಜ್ಯಾಧ್ಯಕ್ಷ ಡಾ.ಬಸವರಾಜ ಚವ್ಹಾಣ ವಹಿಸುವರು. ಹರಿಲಾಲ ಜಾಧವ ಉದ್ಘಾಟಿಸುವರು. ಬಸಣ್ಣ ದೇಸಾಯಿ ಅವರು ಸೇವಾಲಾಲ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಾಹಿತಿ ಇಂದುಮತಿ ಲಮಾಣಿ ಅವರು ಬಂಜಾರರು ನಡೆದುಬಂದಿ ಹಾದಿ, ನಿನ್ನೆ ಇಂದು ನಾಳೆ ಕುರಿತು ಉಪನ್ಯಾಸ ನೀಡುವರು. ಬಂಜಾರ ಕಲಾಮಳಕ್ಕೆ ಮಲ್ಲಿಕಾರ್ಜುನ ನಾಯಕ ನೀಲು ನಾಯಕ ಚಾಲನೆ ನೀಡುವರು. ಬಸವರಾಜ ಲಮಾಣಿ, ಬಾಬು ಚವ್ಹಾಣ, ಶಾಂತು ರಾಠೋಡ, ಬಾಳು ರಾಠೋಡ ಅವರು…
ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರ ಪಟ್ಟಾಧಿಕಾರದ ದಶಮಾನೋತ್ಸವದಂಗವಾಗಿ ಶನಿವಾರ ಸ್ಥಳೀಯ ಶರಣೆ ಮುಕ್ತಾಯಕ್ಕ ಗೆಳೆತಿಯರ ಬಳಗದಿಂದ ಶ್ರೀಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಲ್ಲದಿಂದ ತುಲಾಭಾರ ಮಾಡುವ ಮೂಲಕ ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮೂಲಕ ಬಸವನಾಡಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂತಹ ಶ್ರೀಗಳ ಪಟ್ಟಾಧಿಕಾರದ ದಶಮಾನೋತ್ಸವ ಸಂಭ್ರಮ ನಮಗೆ ಹರ್ಷ ತಂದಿದೆ. ಶ್ರೀಗಳ ಕೃಪಾಶೀರ್ವಾದ ಬಸವನಾಡಿಗೆ ಸದಾ ಇರಲೆಂದು ಎಲ್ಲರೂ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶೈಲಾ ತೇರದಾಳಮಠ, ಜಯಶ್ರೀ ತೆಗ್ಗಿನಮಠ, ಸ್ವರೂಪರಾಣಿ ರೆಡ್ಡಿ, ಕವಿತಾ ದುಂಬಾಳಿ, ಅಶ್ವಿನಿ ಚಿಕ್ಕೊಂಡ, ಜಯಶ್ರೀ ಪೂಜಾರಿ, ಸುನೀತಾ ಕೊಟ್ರಶೆಟ್ಟಿ, ಲಕ್ಷ್ಮೀ ಜಾಲಗೇರಿ, ತಾರಾ ಮಡಗೊಂಡ, ಸಂಗಮ್ಮ ಮದರಿ, ರೂಪಾ ತೆಗ್ಗಿನಮಠ ಇತರರು ಇದ್ದರು. ಪ್ರತಿಭಾ ರುದ್ರಗೌಡ ಪ್ರಾರ್ಥಿಸಿದರು.
