ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರ ಪಟ್ಟಾಧಿಕಾರದ ದಶಮಾನೋತ್ಸವದಂಗವಾಗಿ ಶನಿವಾರ ಸ್ಥಳೀಯ ಶರಣೆ ಮುಕ್ತಾಯಕ್ಕ ಗೆಳೆತಿಯರ ಬಳಗದಿಂದ ಶ್ರೀಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಲ್ಲದಿಂದ ತುಲಾಭಾರ ಮಾಡುವ ಮೂಲಕ ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮೂಲಕ ಬಸವನಾಡಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂತಹ ಶ್ರೀಗಳ ಪಟ್ಟಾಧಿಕಾರದ ದಶಮಾನೋತ್ಸವ ಸಂಭ್ರಮ ನಮಗೆ ಹರ್ಷ ತಂದಿದೆ. ಶ್ರೀಗಳ ಕೃಪಾಶೀರ್ವಾದ ಬಸವನಾಡಿಗೆ ಸದಾ ಇರಲೆಂದು ಎಲ್ಲರೂ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶೈಲಾ ತೇರದಾಳಮಠ, ಜಯಶ್ರೀ ತೆಗ್ಗಿನಮಠ, ಸ್ವರೂಪರಾಣಿ ರೆಡ್ಡಿ, ಕವಿತಾ ದುಂಬಾಳಿ, ಅಶ್ವಿನಿ ಚಿಕ್ಕೊಂಡ, ಜಯಶ್ರೀ ಪೂಜಾರಿ, ಸುನೀತಾ ಕೊಟ್ರಶೆಟ್ಟಿ, ಲಕ್ಷ್ಮೀ ಜಾಲಗೇರಿ, ತಾರಾ ಮಡಗೊಂಡ, ಸಂಗಮ್ಮ ಮದರಿ, ರೂಪಾ ತೆಗ್ಗಿನಮಠ ಇತರರು ಇದ್ದರು. ಪ್ರತಿಭಾ ರುದ್ರಗೌಡ ಪ್ರಾರ್ಥಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

