ಸಿಂದಗಿ: ತಾಲೂಕಿನ ಮಾಡಬಾಳ ಗ್ರಾಮದಲ್ಲಿ ಮಹಾಶಿವರಣೆ ಹೇಮರೆಡ್ಡಿ ಮಲ್ಲಮ್ಮಳ ೬೦೫ನೇ ಜಯಂತ್ಯೋತ್ಸವದ ನಿಮಿತ್ಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.
ಮೆರವಣಿಗೆಯು ಮಲ್ಲಿಕಾರ್ಜುನ ಕಟ್ಟೆಯಿಂದ ಪ್ರಾರಂಭಗೊAಡು ಗಂಗಾಪೂಜೆ ಸಲ್ಲಿಸಿ ಗ್ರಾಮದ ವಿವಿಧ ರಸ್ತೆಗಳಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಮೆರವಣಿಗೆಯ ರಸ್ತೆಯುದ್ಧಕ್ಕೂ ಯುವಕರು ಪುಷ್ಪಾರ್ಚನೆ, ಮಹಿಳೆಯರು, ಮಕ್ಕಳಾಧಿಯಾಗಿ ಭಜನೆ ಮಾಡುವ ಮೂಲಕ ವಚನಗಳನ್ನು ಹೇಳುತ್ತಿರುವುದು ಜನಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜ ಬಾಂಧವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಬಳಿಕ ಮಹಾ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

