ಆಲಮೇಲ: ದೇಶದ ಅನೇಕ ಹಿಂದೂ ರಾಜ ಮಹಾರಾಜರು ದೇಶದ ಸಂಸ್ಕೃತಿ, ಸಂಪ್ರದಾಯ ಸಂಪತ್ತು ಉಳಿಸಲು ಹೋರಾಡಿದ ಫಲದಿಂದ ಇಂದು ನಾವೆಲ್ಲ ನೆಮ್ಮದಿಯಾಗಿದ್ದೇವೆ. ಮಹಾರಾಣ ಪ್ರತಾಪ್, ಛತ್ರಪತಿ ಶಿವಾಜಿ ಮಹಾರಾಜ ಆದರ್ಶಗಳು ಅನುಕರಿಸಬೇಕಾಗಿದೆ ಎಂದು ರಜಪುತ ಸಮಾಜದ ಯುವ ಮುಖಂಡ ಮದನ ರಜಪೂತ ಹೇಳಿದರು.
ಗುರುವಾರ ಆಲಮೇಲ ಪಟ್ಟಣದ ರಜಪೂತ ಸಮಾಜದವರು ಮಹಾರಾಣಾ ಪ್ರತಾಪ್ ಅವರ ೪೮೪ನೇ ಜಯಂತಿ ಆಚರಿಸಿ ಮಾತನಾಡಿದರು.
ದೇಶಕ್ಕಾಗಿ ಧರ್ಮ ರಕ್ಷಣೆಗಾಗಿ ಹೋರಾಡಿದ ರಾಜ ಮಹಾರಾಜರನ್ನು ನೆನೆಯಲೆಬೇಕು. ಅವರನ್ನು ಯಾವುದೆ ಜಾತಿಗೆ ಸೀಮಿತಗೊಳಿಸಬಾರದು. ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ ಮಹಾರಾಜ ಅವರ ಹೋರಾಟಿದಂದ ಇಂದು ಹಿಂದೂ ಧರ್ಮ ಉಳದಿದೆ ಅದನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ದಶರಥಸಿಂಗ್ ರಜಪೂತ, ಮೋಹನಸಿಂಗ್ ರಜಪೂತ, ಹಣಮಂತ ರಜೊಪೂತ, ಶಿವು ರಜಪೂತ, ಪ್ರತಾಫಸಿಂಗ್ ರಜಪೂತ, ಕರಣಸಿಂಗ್ ರಜಪೂತ, ಮಾಣಿಕಸಿಂಗ್ ರಜಪೂತ, ಜಯಸಿಂಗ್ ರಜಪೂತ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

