ಚಡಚಣ: ಸಮೀಪದ ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೮೪.೬೧ ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆ ಬರೆದ ೬೫ ವಿದ್ಯಾರ್ಥಿಗಳ ಪೈಕಿ ೫೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಆಕಾಶ ಬಗಲಿ (ಶೇ.೯೨.೯೬) ಪ್ರಥಮ, ಅಂಜಲಿ ದಾಭೆ (ಶೇ.೮೮.೬೪) ದ್ವಿತೀಯ, ಮೇಘಾ ಬಗಲಿ (ಶೇ.೮೭.೮೪) ತೃತೀಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ಶಿವಾನಿ ಕಾಂಬಳೆ (ಶೇ.೮೫.೯೨), ಸುಕದೇವ ಘಾಡಗೆ (ಶೇ.೮೫.೬೦), ದೀಪಾ ದಿಕ್ಷಾಂಗಿ (ಶೇ.೮೫.೯೨) ಅಂಕಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಆನಂದ ದೈವಾಡಿ ಸೇ.೮೪.೮೦%, ಸಂತೋಷ ಹಾವಿನಾಳ ಶೇ.೮೪.೩೨%, ಸ್ವಾತಿ ದಾಭೆ ಶೇ.೮೪.೩೨%, ಕಾವೇರಿ ಹತ್ತಳ್ಳಿ ಶೇ.೮೩.೬೮%, ಓಂಕಾರ ಕೋಳಿ ಶೇ.೮೩.೨೦%, ರಾಜೇಶ್ವರಿ ಸಾಲಮಳಗಿ ಶೇ.೮೧.೬೦% ಅಂಕಗಳನ್ನು ಪಡೆದು ಶಾಲೆಯ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಗುರು ಎಂ.ಎಸ್.ಪಾಟೀಲ ಹಾಗೂ ಸಹ ಶಿಕ್ಷಕ ವರ್ಗ ಮತ್ತು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

