ಬಸವನಬಾಗೇವಾಡಿ: ಪಟ್ಟಣದ ಯಲ್ಲಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಮೇ. ೧೨ ರಂದು ಬೆಳಗ್ಗೆ ೧೦ ಗಂಟೆಗೆ ರಾಷ್ಟ್ರೀಯ ಗೋರ್ ಮಳಾವ ಅರಕೇರಿಯ ಎ.ಎಂ.ಆರ್.ಸಂಕಲ್ಪ ಸಂಜೀವಿನಿ ಸಂಸ್ಥೆ ಇವರ ಸಹಯೋಗದಲ್ಲಿ ಸೋನಾಬಾಯಿ ಪವಾರ ಅವರ ೧೦೧ ನೇ ಜನ್ಮ ದಿನಾಚರಣೆ ನಿಮಿತ್ಯ ತುಲಾಭಾರ ಹಾಗೂ ಕಲಾ ಮೇಳ, ರಾಜ್ಯಮಟ್ಟದ ಬಂಜಾರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.
ಸಾನಿಧ್ಯವನ್ನು ಚಿತ್ರದುರ್ಗದ ಸರ್ದಾರ ಸೇವಾಲಾಲ ಸ್ವಾಮೀಜಿ, ಸೋಮದೇವರಹಟ್ಟಿಯ ಜಗನು ಮಹಾರಾಜ ವಹಿಸುವರು. ಕೇಸರಟ್ಟಿಯ ಸೋಮಲಿಂಗ ಮಹಾರಾಜರು ನೇತೃತ್ವ ವಹಿಸುವರು. ಅಧ್ಯಕ್ಷತೆಯನ್ನು ರಾಷ್ಟ್ರೀಯ ಗೋರ್ ಮಳಾವ ರಾಜ್ಯಾಧ್ಯಕ್ಷ ಡಾ.ಬಸವರಾಜ ಚವ್ಹಾಣ ವಹಿಸುವರು. ಹರಿಲಾಲ ಜಾಧವ ಉದ್ಘಾಟಿಸುವರು. ಬಸಣ್ಣ ದೇಸಾಯಿ ಅವರು ಸೇವಾಲಾಲ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಾಹಿತಿ ಇಂದುಮತಿ ಲಮಾಣಿ ಅವರು ಬಂಜಾರರು ನಡೆದುಬಂದಿ ಹಾದಿ, ನಿನ್ನೆ ಇಂದು ನಾಳೆ ಕುರಿತು ಉಪನ್ಯಾಸ ನೀಡುವರು. ಬಂಜಾರ ಕಲಾಮಳಕ್ಕೆ ಮಲ್ಲಿಕಾರ್ಜುನ ನಾಯಕ ನೀಲು ನಾಯಕ ಚಾಲನೆ ನೀಡುವರು. ಬಸವರಾಜ ಲಮಾಣಿ, ಬಾಬು ಚವ್ಹಾಣ, ಶಾಂತು ರಾಠೋಡ, ಬಾಳು ರಾಠೋಡ ಅವರು ಬಂಜಾರಾ ಭೂಷಣ ಪ್ರಶಸ್ತಿ ಪ್ರದಾನ ಮಾಡುವರು. ಕಾರ್ಯಕ್ರಮದಲ್ಲಿ ದೇವೇಂದ್ರ ರಾಠೋಡ, ರುಕ್ಮಿಣ ರಾಠೋಡ, ರವಿ ನಾಯಕ, ಶಿವಾಜಿ ರಾಠೋಡ, ರವಿ ರಾಠೋಡ, ರಾಮು ರಾಠೋಡ, ರಾಜು ರಾಠೋಡ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಜಿ ಟಿವಿ ಸರಿಗಮಪ ರನ್ನರ್ ಆಪ್ ರಮೇಶ ಲಮಾಣಿ ಸೇರಿದಂತೆ ಅನೇಕರಿಗೆ ಬಂಜಾರ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರಾ ಸಮಾಜ ಬಾಂಧವರು ಆಗಮಿಸಬೇಕೆಂದು ಡಾ.ಬಸವರಾಜ ಚವ್ಹಾಣ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
