Author: editor.udayarashmi@gmail.com

ವಿಜಯಪುರ: ವಿಜಯಪುರ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪಕೇಂದ್ರಕ್ಕೆ ಸಂಬಂಧಿಸಿದಂತೆ ಮೇ.೧೮ರಂದು ಮಧ್ಯಾಹ್ನ ೩ ಗಂಟೆಗೆ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪವಿಭಾಗದ ಕಚೇರಿಯಲ್ಲಿ ರೈತರು ಹಾಗೂ ಸಾರ್ವಜನಿಕರು ಸಮಸ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಆದ ಕಾರಣ ವಿಜಯಪುರ ಹೆಸ್ಕಾಂ ಗ್ರಾಮೀಣ ಉಪವೀಭಾಗದ ಕಚೇರಿಗೆ ಒಳಪಡುವ ಗ್ರಾಮಗಳ ಗ್ರಾಹಕರು ಹಾಗೂ ಸಾರ್ವಜನಿಕರು ಈ ಸಭೆಯಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಜಯಪುರ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಗೊಲಗುಂಬಜ್ ಆವರಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಮೇ.೧೮ರಂದು ಬೆಳಗ್ಗೆ ೧೦ ಗಂಟೆಗೆ ಅಂತರಾಷ್ಟಿçÃಯ ವಸ್ತು ಸಂಗ್ರಹಾಲಯದ ದಿನಾಚರಣೆ ನಡೆಯಲಿದೆ. ವಿಜಯಪುರದ ಸಿಕಾಬ್ ಎಅರ್‌ಎಸ್‌ಐ, ಇನಾಮ್ದಾರ್ ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಎಸ್. ಮೇತ್ರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿ.ಬಿ. ದರ್‌ಬಾರ್ ಪಿ.ಯು. ಕಾಲೇಜಿನ ಇತಿಹಾಸ ವಿಭಾಗದ ಅನಿಲ್‌ಕುಮಾರ್ ಜಿ. ತೊಬ್ಬಿ, ವಿಶೇಷ ಉಪನ್ಯಾಸ ನೀಡಲಿದ್ದಾರೆ. ಧಾರವಾಢ ವಲಯದ ಅಧೀಕ್ಷಕ ಪುರಾತತ್ವವಿದರಾದ ಡಾ. ರೇಷ್ಮ. ಅರ್. ಸಾವಂತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.ಜನಸಾಮಾನ್ಯರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ನಮ್ಮ ದೇಶದ ಚರಸಾಂಸ್ಕöÈತಿಕ ಸಂಪತ್ತಿನ ಬಗೆಗೆ ತಿಳಿವಳಿಕೆ ನೀಡಿ ಅಂತಹ ಸಂಪತ್ತನ್ನು ಸಂರಕ್ಷಿಸಲು ಪ್ರೇರೇಪಿಸುವುದು ಹಾಗೂ ಸಂಶೋಧನೆಯಲ್ಲಿ ಪ್ರಾಚ್ಯವಸ್ತುಗಳನ್ನು ಕುರಿತು ಮಾಹಿತಿಯನ್ನು ಬಳಸಿಕೂಳ್ಳುವಂತೆ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಲೇಖನ, ಚಿತ್ರಕಲೆ (ಡ್ರಾಯಿಂಗ್) ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು.ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಈ ಕಾರ್ಯಕ್ರಮವನ್ನು…

Read More

ವಿಜಯಪುರ: ಒಂದು ದೇಶದ ಅಭಿವೃದ್ಧಿ ಅಲ್ಲಿನ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ಸದೃಡ ದೇಶ ಕಟ್ಟುವಲ್ಲಿ ಕಾರ್ಮಿಕರು ಶ್ರಮ ಅಪಾರವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿಗಳಾದ ಸಂತೋಷ ಎಸ್. ಕುಂದರು ಹೇಳಿದರು.ಅವರು ಬುಧವಾರ ನಗರದ ಶಿವಗಿರಿ ರಸ್ತೆಗೆ ಇರುವ ಲೊಯೋಲ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಅನೌಪಚಾರಿಕ ಶಿಕ್ಷಣ ಸಂಸ್ಥೆ, ಲೊಯೋಲ ಕೈಗಾರಿಕಾ ತರಭೇತಿ ಸಂಸ್ಥೆ ಹಾಗೂ ಬಿಜಾಪುರ ನಗರ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಯೂನಿಯನ್(ರಿ), ವಿಜಯಪುರ ಇವರ ಆಶ್ರಯದಲ್ಲಿ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ-೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ದೇಶದ ಬೆಳವಣಿಗೆಗೆ ಕಾರ್ಮಿಕರ ಕೊಡುಗೆ ಅನನ್ಯವಾಗಿದೆ. ಕಾರ್ಮಿಕರಿಗೆ ಏನಾದರೂ ತೊಂದರೆ ಊಂಟಾದರೆ ಉಚಿತ ಕಾನೂನು ಸೇವಾ ಪ್ರಾಧಿಕಾರಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಫಾದರ್ ಟಿಯೋಲ್ ಮಚಾದೋ ಪ್ರಾಸ್ತಾವಿಕವಾಗಿ ಮಾತನಾಡಿ, ಹಲವಾರು ಯೋಜನೆಗಳು ಕಾರ್ಮಿಕರಿಗಿದ್ದು, ಅವುಗಳನ್ನು…

Read More

ಚಿಮ್ಮಡ: ಮೂರು ವರುಷಗಳಿಗೊಮ್ಮೆ ನಡೆಯುವ ಗ್ರಾಮದ ಆರಾದ್ಯ ದೇವತೆ ಶ್ರೀ ಮೂರು ಮೂಖದವ್ವದೇವಿ (ಲಕ್ಮಿ ದೇವಿ) ಜಾತ್ರಾ ಮಹೋತ್ಸವ ಸಂಭ್ರಮ ಸಡಗರದೊಂದಿಗೆ ವಿಜ್ರಂಬಣೆಯಿಂದ ಜರುಗಿತು.ಅಲಂಕ್ರತ ದೊಡ್ಡ ಪಾದ ಪದಕಗಳನ್ನು ಶ್ರೀ ಹನುಮಾನ ದೇವರಿಗೆ ಅರ್ಪಿಸುವ ಮೂಲಕ ಪ್ರಾರಂಭಗೊಂಡ ಈ ಜಾತ್ರಾ ಮಹೋತ್ಸವದಲ್ಲಿ ರಾತ್ರಿ ಡೊಳ್ಳು ಕುಣಿತ, ಬ್ಯಾಂಡಬಾಜಾ, ಹಲಿಗೇ ಮೇಳ ಹಾಗೂ ಬ್ಯಾಂಜೋ ತಂಡದೊಂದಿಗೆ ಕುದುರೆ ಸೋಗು, ಯಕ್ಷಗಾನ ಮಾದರಿ ಹಾಗೂ ವಿವಿಧ ವೇಷಧಾರಿಗಳಿಂದ ನೃತ್ಯ ಪ್ರದರ್ಶನ ವಿಶೇಷವಾಗಿತ್ತು.ರಾತ್ರಿ ಈ ಜಾತ್ರೆಯ ನಿಮಿತ್ಯ ಶ್ರೀನಿಧಿ ಸ್ಪೋರ್ಟ್ಸ ಕ್ಲಬ್‌ನಿಂದ ಹಮ್ಮಿಕೊಳ್ಳಲಾಗಿದ್ದ ೫೫ ಕೆ.ಜಿ. ಕಬ್ಬಡ್ಡಿ ಪಂದ್ಯಾವಳಿಗಳು ಎರಡು ದಿನಗಳ ಕಾಲ ನಡೆದವು.ಶ್ರೀ ದೇವಿಯ ಉಡಿ ತುಂಬುವ ಕಾರ್ಯಕ್ರಮ, ಮಹಾಪ್ರಸಾದ ವಿತರಣೆ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾತ್ತು ಅಲ್ಲದೇ ಮಹಾರಾಷ್ಟ್ರದ ಕೋಲ್ಹಾಪೂರ್‌ನ ಪ್ರಸಿದ್ದ ಸೂರಜಕುಮಾರ್ ಪ್ರೋಡಕ್ಷನ್‌ರವರ ‘ಸೈರಾಟ್ ರಸಮಂಜರಿ ಕಾರ್ಯಕ್ರಮ ನೆರೆದ ಸಾರ್ವಜನಿಕರನ್ನು ಮಂತ್ರಮುಗ್ದಗೊಳಿಸಿತು.ಅಕಾಲಿಕ ಮಳೆಯಿಂದ ಸ್ವಲ್ಪಮಟ್ಟಿಗೆ ತೊಂದರೆಯಾದರೂ ಜಾತ್ರೆಯ ಸಂಭ್ರಮಕ್ಕೆನು ಕೊರತೆಯಾಗಲಿಲ್ಲ. ಬನಹಟ್ಟಿ ಸಿಪಿಐ ಸಂಜೀವಕುಮಾರ ಬಳೆಗಾರ, ಪಿಎಸೈ…

Read More

ಕಲಕೇರಿ: ಸಮಿಪದ ತಿಳಗೂಳ ಗ್ರಾಮದ ಶ್ರೀ ಸದ್ಗರು ಖಾದಿ ಮತ್ತು ಗ್ರಾಮೀಣ ಔಧ್ಯೋಗಿಕ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ತಿಳಗೂಳ ಪೌಡಶಾಲೆಯ ವಿಧ್ಯಾರ್ಥಿಗಳು ೨೦೨೩-೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಶಾಲೆಯ ಒಟ್ಟು ಪಲಿತಾಂಶ ಶೇ.೧೦೦ ರಷ್ಟಾಗಿದೆ.ವರ್ಷಾ ಯಡ್ರಾಮಿ ೫೭೧ ಅಂಕ (೯೧.೩೬%) ಪಡೆದು ಪ್ರಥಮ ಸ್ಥಾನ, ಸುಮಿತ್ರಾ ಹಿರೇಮಠ ೫೫೫ ಅಂಕ (೮೮.೮೦%) ಪಡೆದು ದ್ವಿತೀಯ ಸ್ಥಾನ, ಚೈತ್ರಾ ಬೀರಗೊಂಡ ೫೪೧ ಅಂಕ (೮೬.೫೬%) ಪಡೆದು ತೃತೀಯ ಸ್ಥಾನ, ಹಾಗೂ ಅಕ್ಷತಾ ಚವ್ಹಾಣ ೫೨೮ ಅಂಕ (೮೪.೪೮%) ಪಡೆದು ನಾಲ್ಕನೇಯ ಸ್ಥಾನ, ರಕ್ಷೀತಾ ಸಾತಿಹಾಳ ೫೨೩ ಅಂಕ (೮೩.೬೮%) ಐದನೇಯ ಸ್ಥಾನ, ಆದಿತ್ಯಾ ನಾಯ್ಕೋಡಿ ೫೨೧ ಅಂಕ (೮೩.೩೬%) ಪಡೆದು ಆರನೇಯ ಸ್ಥಾನ ಪಡೆದುಕೊಂಡಿದ್ದಾರೆ, ಪರೀಕ್ಷೆಗೆ ೮೩ ವಿಧ್ಯಾರ್ಥಿಗಳು ಹಾಜರಾಗಿದ್ದು ೩ ವಿಧ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ೪೪ ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ೨೪ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ,೧೨ ವಿಧ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ…

Read More

ವಿಜಯಪುರ: ಇಂದು ಜಾನಪದ ಕಲಾವಿದರು ಕಷ್ಟದಲ್ಲಿದ್ದಾರೆ. ಕಲೆಯ ಬೆನ್ನುಹತ್ತಿ ಬಡತನದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಲೆಯ ಬಗ್ಗೆ ಅಭಿಮಾನ ಇದ್ದವರೆ ನಮಗೆ ಆಸ್ತಿ ಆಗಿದ್ದಾರೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ನೂತನ ಸದಸ್ಯೆ, ಪಾರಿಜಾತ ಕಲಾವಿದೆ ಅನಸುಬಾಯಿ ವಡ್ಡರ ಹೇಳಿದರು.ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ನಗರದ ಪರಿಷತ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಷ್ಟ ಕಲಾವಿದರ ಗೌರವ ಜನಪದ ಕಲಾವಿದರಿಗೆ ಇಲ್ಲ. ಜನಪದ ಕಲಾವಿದರನ್ನು ಅನಾದರದಿಂದ ನೋಡಲಾಗುತ್ತದೆ. ಜನಪದ ಕಲಾವಿದರು ಮೂಲ ಕಲಾವಿದರಾಗಿದ್ದಾರೆ. ಅವರನ್ನು ಉಳಿಸಿ ಬೆಳೆಸಲು ಜಿಲ್ಲೆಯಲ್ಲಿ ಬಾಳನಗೌಡ ಪಾಟೀಲರ ನೇತೃತ್ವದ ಕನ್ನಡ ಜಾನಪದ ಪರಿಷತ್ ಶ್ರಮಿಸುತ್ತಿರುವುದು ಸಂತೋಷ ತಂದಿದೆ ಎಂದರು.ಸನ್ಮಾನ ನೆರವೇರಿಸಿ ಮಾತನಾಡಿದ ಪ್ರವಚನಕಾರ ಬಾಬುರಾವ್ ಮಹಾರಾಜರು ಜಾನಪದ ಕಲೆ ಮತ್ತು ಕಲಾವಿದರು ನಮ್ಮ ದೇಶದ ಸನಾತನ ಸಂಸ್ಕೃತಿಯ ಕುರುಹು. ಕಲಾವಿದರು ಕಷ್ಟದಲ್ಲಿರಬಾರದು. ಕಲಾವಿದರನ್ನು ಗೌರವದಿಂದ ಕಾಣಬೇಕು ಅಂದಾಗ ಸಂಸ್ಕೃತಿ ಉಳಿಯುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಕನ್ನಡ…

Read More

“ವೀಣಾಂತರಂಗ”- ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ-ಗದಗ ಪ್ರವೀಣ್ ಮತ್ತು ಪ್ರಿಯಾ ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು. ಪರಸ್ಪರ ಸ್ನೇಹ ಪ್ರೇಮವಾಗಿ, ಪ್ರೇಮಕ್ಕೆ ಹಿರಿಯರ ಒಪ್ಪಿಗೆ ದೊರೆತು ಮದುವೆ ಎಂಬ ಮುದ್ರೆ ಬಿದ್ದು ಈಗಾಗಲೇ ಆರು ತಿಂಗಳಾಗಿತ್ತು. ಇಬ್ಬರೂ ಸಿಟಿ ಬಸ್ಸಿನಲ್ಲಿ ಒಟ್ಟಿಗೆ ಆಫೀಸಿಗೆ ಹೋಗಿ ಬರುತ್ತಿದ್ದರು.ಅದೊಂದು ದಿನ ದಂಪತಿಗಳಿಬ್ಬರೂ ಯಾವುದೋ ಕಾರಣಕ್ಕೆ ಜಗಳವಾಡಿ ಮುನಿಸಿಕೊಂಡಿದ್ದರು. ಇಬ್ಬರಲ್ಲಿ ಯಾರೊಬ್ಬರೂ ಸೋತು ಮಾತನಾಡಲಿಲ್ಲ. ಪ್ರಿಯಾ ತನ್ನ ಪಾಡಿಗೆ ತಾನು ಎದ್ದು ಮನೆ ಕೆಲಸ ಪೂರೈಸಿ ತಿಂಡಿ ಮಾಡಿದರೆ, ಪ್ರವೀಣ್ ನಿತ್ಯ ವಿಧಿಗಳನ್ನು ಪೂರೈಸಿ ತಿಂಡಿ ತಿಂದು ಮನೆಯ ಹೊರಗೆ ನಿಂತನು. ಈಗಾಗಲೇ ತಿಂಡಿ ತಿಂದು ರೆಡಿಯಾಗುತ್ತಿದ್ದ ಆಕೆ ಕೂಡ ತನ್ನ ಅಲಂಕಾರವನ್ನು ಪೂರೈಸಿ ಇಬ್ಬರಿಗೂ ಊಟದ ಡಬ್ಬಿ ಮತ್ತು ನೀರನ್ನು ತೆಗೆದುಕೊಂಡು ಮನೆಯ ಹೊರಬಂದು ನಿಲ್ಲಲು, ಆತ ಮನೆಯ ಬಾಗಿಲನ್ನು ಚಿಲಕ ಹಾಕಿ ಕೀಲಿ ಜಡಿದನು. ಪರಸ್ಪರ ಮಾತನಾಡದೆ ಇದ್ದರೂ ಜೊತೆಯಾಗಿಯೇ ಬಸ್ ಸ್ಟಾಪ್ ಗೆ ಬಂದು ನಿಂತ ಆ ದಂಪತಿಗಳಲ್ಲಿ ಪತ್ನಿ…

Read More

ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಜಗತ್ತಿನಲ್ಲಿ ಹಲವು ವಿಧದ, ಬಣ್ಣದ, ರೂಪದ, ಗಾತ್ರದ ಪಕ್ಷಿಗಳಿದ್ದು, ಅವೆಲ್ಲದರ ಪೈಕಿ ಅತ್ಯಂತ ಹೆಚ್ಚು ಅನಾದರಕ್ಕೆ ಒಳಗಾದ ಪಕ್ಷಿಯೆಂದರೆ ಕಾಗೆ. ಬಣ್ಣದಲ್ಲಿ ಕಪ್ಪು, ಕೂಗಿನಲ್ಲಿ ಕರ್ಕಶ ಇವೆಲ್ಲಾ ಕಾರಣಗಳಿಂದ ಮನುಷ್ಯನಿಗೆ ಕಾಗೆಗಳೆಂದರೆ ಅಷ್ಟಕ್ಕಷ್ಟೇ. ಜಗತ್ತಿನ ಜೀವವಿಜ್ಞಾನಿಗಳು ಮತ್ತು ಮಹಾನ್ ಆಡಳಿತಗಾರನಾದ ಚಾಣಕ್ಯ ಹೇಳುವಂತೆ ಮನುಷ್ಯನು ಕಾಗೆಯನ್ನು ನೋಡಿಕೊಂಡು ಅದರಿಂದ ಕಲಿಯಬೇಕಾಗಿರುವುದು ಬಹಳಷ್ಟು ವಿಚಾರಗಳಿವೆ. ಅದರಲ್ಲೂ ಮುಖ್ಯವಾಗಿ ಕಾಗೆಯಲ್ಲಿ ಇರುವ ಯಶಸ್ಸಿನ ಗುಣಗಳನ್ನು ಎಲ್ಲರೂ ಕಲಿಯಲೇಬೇಕು. ಕಾಗೆಯಿಂದ ಕಲಿಯಬೇಕಾದ ಮೊದಲನೆಯ ಗುಣವೆಂದರೆ ಎಲ್ಲೂ ಕಾಗೆಯು ಬಹಿರಂಗವಾಗಿ ಮಿಲನವನ್ನು ನಡೆಸುವುದಿಲ್ಲ ಮತ್ತು ಅದನ್ನು ತೀರಾ ಗುಪ್ತವಾಗಿರಿಸುತ್ತದೆ. ಮನುಷ್ಯ ಇದನ್ನು ಸರಿಯಾಗಿ ಅರಿತುಕೊಂಡರೆ ಮತ್ತು ಅದರ ಮೌಲ್ಯವನ್ನು ಅರಿತರೆ ಆತನಿಗೆ ಸಮಾಜದಲ್ಲಿ ಅಪಾರ ಗೌರವ ಪ್ರಾಪ್ತಿಯಾಗುತ್ತದೆ. ‘ಅನ್ನದ ಅಗುಳೊಂದ ಕಂಡರೆ ಕೂಗಿ ಕರೆಯದೇ ಕಾಗೆಯೊಂದು ತನ್ನ ಬಳಗವನ್ನು’ ಎಂಬ ಮಾತೇ ಇರುವಂತೆ ಕಾಗೆಯು ಒಂದು ತುತ್ತು ಆಹಾರ ಸಿಕ್ಕರೂ…

Read More

ಆಲಮಟ್ಟಿ: ಇಲ್ಲಿಯ ಕೃಷ್ಣಾ ನದಿಯ ಹಳೆ ಚಿಮ್ಮಲಗಿ ಬಳಿಯ ಬಾವಾಸಾಬ್ ಗುಡ್ಡದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರಿಗೆ 38 ಕೆಜಿ ತೂಕದ ದೊಡ್ಡ ಮೀನು ಬಲೆಗೆ ಬಿದ್ದಿದೆ‌.ಚಿಮ್ಮಲಗಿ ಭಾಗ 1 ಎ ಯ ಗ್ರಾಮದ ಮೀನುಗಾರ ಭರತ ಯಮನೂರಿ ಸಾಳೆ ಅವರ ಬಲೆಗೆ ಗುರುವಾರ ಈ ಬೃಹತ್ ಗಾತ್ರದ ಮೀನು ಬಿದ್ದಿದೆ.ಕಳೆದ ಕೆಲ ದಿನಗಳಿಂದ ದೊಡ್ಡ ಗಾತ್ರದ ಮೀನು ಬೀಳುವ 20 ಬಟ್ಟ ಅಗಲದ ಬಲೆಯನ್ನು ಹಾಕುತ್ತಿದ್ದಾರೆ. ದೊಡ್ಡ ಗಾತ್ರದ ಮೀನು ಮಾತ್ರ ಬಲೆಗೆ ಬೀಳುತ್ತವೆ.ಬೃಹತ್ ಗಾತ್ರದ ಮೀನು‌ ನೋಡಲುಜನ ತಂಡೋಪತಂಡವಾಗಿ ಆಗಮಿಸಿದರು.ಇದು ಕಟ್ಲಾ ಜಾತಿಗೆ ಸೇರಿದ ಮೀನಾಗಿದ್ದು, 38 ಕೆಜಿ ತೂಕ ಹೊಂದಿದೆ. ಕಳೆದ ವಾರ 35 ಕೆಜಿ ಮೀನು ಇದೇ ಸ್ಥಳದಲ್ಲಿ ಬಲೆ ಹಾಕಿದ್ದ ಮತ್ತೊಬ್ಬ ಮೀನುಗಾರನಿಗೆ ಸಿಕ್ಕಿತ್ತು. ಈಗ ಮತ್ತೇ ಬೃಹತ್ ಗಾತ್ರದ ಮೀನು ಸಿಕ್ಕಿದ್ದು ಖುಷಿಯಾಗಿದೆ ಎಂದು ಮೀನುಗಾರ ಭರತ ಯಮನೂರಿ ಸಾಳೆ ಹೇಳಿದರು.5700 ಕ್ಕೆ ಮಾರಾಟ;ಈ ದೊಡ್ಡ ಮೀನನ್ನು ಕೂಡಾ 150 ರೂ ಗೆ…

Read More