ವಿಜಯಪುರ: ಗೊಲಗುಂಬಜ್ ಆವರಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಮೇ.೧೮ರಂದು ಬೆಳಗ್ಗೆ ೧೦ ಗಂಟೆಗೆ ಅಂತರಾಷ್ಟಿçÃಯ ವಸ್ತು ಸಂಗ್ರಹಾಲಯದ ದಿನಾಚರಣೆ ನಡೆಯಲಿದೆ. ವಿಜಯಪುರದ ಸಿಕಾಬ್ ಎಅರ್‌ಎಸ್‌ಐ, ಇನಾಮ್ದಾರ್ ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಎಸ್. ಮೇತ್ರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿ.ಬಿ. ದರ್‌ಬಾರ್ ಪಿ.ಯು. ಕಾಲೇಜಿನ ಇತಿಹಾಸ ವಿಭಾಗದ ಅನಿಲ್‌ಕುಮಾರ್ ಜಿ. ತೊಬ್ಬಿ, ವಿಶೇಷ ಉಪನ್ಯಾಸ ನೀಡಲಿದ್ದಾರೆ. ಧಾರವಾಢ ವಲಯದ ಅಧೀಕ್ಷಕ ಪುರಾತತ್ವವಿದರಾದ ಡಾ. ರೇಷ್ಮ. ಅರ್. ಸಾವಂತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಜನಸಾಮಾನ್ಯರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ನಮ್ಮ ದೇಶದ ಚರಸಾಂಸ್ಕöÈತಿಕ ಸಂಪತ್ತಿನ ಬಗೆಗೆ ತಿಳಿವಳಿಕೆ ನೀಡಿ ಅಂತಹ ಸಂಪತ್ತನ್ನು ಸಂರಕ್ಷಿಸಲು ಪ್ರೇರೇಪಿಸುವುದು ಹಾಗೂ ಸಂಶೋಧನೆಯಲ್ಲಿ ಪ್ರಾಚ್ಯವಸ್ತುಗಳನ್ನು ಕುರಿತು ಮಾಹಿತಿಯನ್ನು ಬಳಸಿಕೂಳ್ಳುವಂತೆ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಲೇಖನ, ಚಿತ್ರಕಲೆ (ಡ್ರಾಯಿಂಗ್) ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿಜಯಪುರ ಭಾರತೀಯ ಪುರಾತತ್ವ ಸರ್ವೇಕ್ಷಣ, ಪುರಾತತ್ವ ಸಂಗ್ರಹಾಲಯದ ಸಹಾಯಕ ಪುರಾತತ್ವವಿದರಾದ ಎನ್. ಪ್ರಸನ್ನಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
