ಚಿಮ್ಮಡ: ಮೂರು ವರುಷಗಳಿಗೊಮ್ಮೆ ನಡೆಯುವ ಗ್ರಾಮದ ಆರಾದ್ಯ ದೇವತೆ ಶ್ರೀ ಮೂರು ಮೂಖದವ್ವದೇವಿ (ಲಕ್ಮಿ ದೇವಿ) ಜಾತ್ರಾ ಮಹೋತ್ಸವ ಸಂಭ್ರಮ ಸಡಗರದೊಂದಿಗೆ ವಿಜ್ರಂಬಣೆಯಿಂದ ಜರುಗಿತು.
ಅಲಂಕ್ರತ ದೊಡ್ಡ ಪಾದ ಪದಕಗಳನ್ನು ಶ್ರೀ ಹನುಮಾನ ದೇವರಿಗೆ ಅರ್ಪಿಸುವ ಮೂಲಕ ಪ್ರಾರಂಭಗೊಂಡ ಈ ಜಾತ್ರಾ ಮಹೋತ್ಸವದಲ್ಲಿ ರಾತ್ರಿ ಡೊಳ್ಳು ಕುಣಿತ, ಬ್ಯಾಂಡಬಾಜಾ, ಹಲಿಗೇ ಮೇಳ ಹಾಗೂ ಬ್ಯಾಂಜೋ ತಂಡದೊಂದಿಗೆ ಕುದುರೆ ಸೋಗು, ಯಕ್ಷಗಾನ ಮಾದರಿ ಹಾಗೂ ವಿವಿಧ ವೇಷಧಾರಿಗಳಿಂದ ನೃತ್ಯ ಪ್ರದರ್ಶನ ವಿಶೇಷವಾಗಿತ್ತು.
ರಾತ್ರಿ ಈ ಜಾತ್ರೆಯ ನಿಮಿತ್ಯ ಶ್ರೀನಿಧಿ ಸ್ಪೋರ್ಟ್ಸ ಕ್ಲಬ್‌ನಿಂದ ಹಮ್ಮಿಕೊಳ್ಳಲಾಗಿದ್ದ ೫೫ ಕೆ.ಜಿ. ಕಬ್ಬಡ್ಡಿ ಪಂದ್ಯಾವಳಿಗಳು ಎರಡು ದಿನಗಳ ಕಾಲ ನಡೆದವು.
ಶ್ರೀ ದೇವಿಯ ಉಡಿ ತುಂಬುವ ಕಾರ್ಯಕ್ರಮ, ಮಹಾಪ್ರಸಾದ ವಿತರಣೆ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾತ್ತು ಅಲ್ಲದೇ ಮಹಾರಾಷ್ಟ್ರದ ಕೋಲ್ಹಾಪೂರ್‌ನ ಪ್ರಸಿದ್ದ ಸೂರಜಕುಮಾರ್ ಪ್ರೋಡಕ್ಷನ್‌ರವರ ‘ಸೈರಾಟ್ ರಸಮಂಜರಿ ಕಾರ್ಯಕ್ರಮ ನೆರೆದ ಸಾರ್ವಜನಿಕರನ್ನು ಮಂತ್ರಮುಗ್ದಗೊಳಿಸಿತು.
ಅಕಾಲಿಕ ಮಳೆಯಿಂದ ಸ್ವಲ್ಪಮಟ್ಟಿಗೆ ತೊಂದರೆಯಾದರೂ ಜಾತ್ರೆಯ ಸಂಭ್ರಮಕ್ಕೆನು ಕೊರತೆಯಾಗಲಿಲ್ಲ. ಬನಹಟ್ಟಿ ಸಿಪಿಐ ಸಂಜೀವಕುಮಾರ ಬಳೆಗಾರ, ಪಿಎಸೈ ಶಾಂತಾ ಹಳ್ಳಿ ತಮ್ಮ ಸಿಬ್ಬಂದಿಗಳೊಂದಿಗೆ ಸೂಕ್ತ ಬಂದೋಬಸ್ತ ಕಲ್ಪಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

