ಆಲಮಟ್ಟಿ: ಇಲ್ಲಿಯ ಕೃಷ್ಣಾ ನದಿಯ ಹಳೆ ಚಿಮ್ಮಲಗಿ ಬಳಿಯ ಬಾವಾಸಾಬ್ ಗುಡ್ಡದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರಿಗೆ 38 ಕೆಜಿ ತೂಕದ ದೊಡ್ಡ ಮೀನು ಬಲೆಗೆ ಬಿದ್ದಿದೆ.
ಚಿಮ್ಮಲಗಿ ಭಾಗ 1 ಎ ಯ ಗ್ರಾಮದ ಮೀನುಗಾರ ಭರತ ಯಮನೂರಿ ಸಾಳೆ ಅವರ ಬಲೆಗೆ ಗುರುವಾರ ಈ ಬೃಹತ್ ಗಾತ್ರದ ಮೀನು ಬಿದ್ದಿದೆ.
ಕಳೆದ ಕೆಲ ದಿನಗಳಿಂದ ದೊಡ್ಡ ಗಾತ್ರದ ಮೀನು ಬೀಳುವ 20 ಬಟ್ಟ ಅಗಲದ ಬಲೆಯನ್ನು ಹಾಕುತ್ತಿದ್ದಾರೆ. ದೊಡ್ಡ ಗಾತ್ರದ ಮೀನು ಮಾತ್ರ ಬಲೆಗೆ ಬೀಳುತ್ತವೆ.
ಬೃಹತ್ ಗಾತ್ರದ ಮೀನು ನೋಡಲು
ಜನ ತಂಡೋಪತಂಡವಾಗಿ ಆಗಮಿಸಿದರು.
ಇದು ಕಟ್ಲಾ ಜಾತಿಗೆ ಸೇರಿದ ಮೀನಾಗಿದ್ದು, 38 ಕೆಜಿ ತೂಕ ಹೊಂದಿದೆ. ಕಳೆದ ವಾರ 35 ಕೆಜಿ ಮೀನು ಇದೇ ಸ್ಥಳದಲ್ಲಿ ಬಲೆ ಹಾಕಿದ್ದ ಮತ್ತೊಬ್ಬ ಮೀನುಗಾರನಿಗೆ ಸಿಕ್ಕಿತ್ತು. ಈಗ ಮತ್ತೇ ಬೃಹತ್ ಗಾತ್ರದ ಮೀನು ಸಿಕ್ಕಿದ್ದು ಖುಷಿಯಾಗಿದೆ ಎಂದು ಮೀನುಗಾರ ಭರತ ಯಮನೂರಿ ಸಾಳೆ ಹೇಳಿದರು.
5700 ಕ್ಕೆ ಮಾರಾಟ;
ಈ ದೊಡ್ಡ ಮೀನನ್ನು ಕೂಡಾ 150 ರೂ ಗೆ ಕೆಜಿಯಂತೆ 5700 ರೂ ಗೆ ಮೀನು ವ್ಯಾಪಾರಿ ಮಹಾಂತೇಶ ಧನವೆ ಖರೀದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

