ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವಿದ್ಯಾರ್ಥಿಗಳು ಬುದ್ಧಿ, ಮನಸ್ಸು, ನಿಗ್ರಹಿಸಿಕೊಂಡು ಸುಸಂಸ್ಕೃತ ವ್ಯಕ್ತಿಯಾಗಿ ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಎಎಸ್ಐ ಮೌನೇಶ ಬಡಿಗೇರ ಹೇಳಿದರು.
ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲಿಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಯಾದಗಿರಿ ಜಿಲ್ಲಾ ಪೋಲಿಸ್ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪದವಿ ಪೂರ್ವ ಹಾಗೂ ಪದವಿ ಈ ಐದು ವರ್ಷಗಳ ವಿದ್ಯಾರ್ಥಿಗಳಿಗೆ ಪಂಚವಾರ್ಷಿಕ ಯೋಜನೆ ಇದ್ದಂತೆ ಎಂದವರು. ಸದೃಢ ಆರೋಗ್ಯಕ್ಕಾಗಿ ಯುವ ಜನತೆ ಗುಟ್ಕಾ, ಮಟ್ಕಾ, ಜೂಜಾಟ, ಆಲ್ಕೋಹಾಲ್, ಸಿಗರೇಟು, ಡ್ರಗ್ಸ್, ಗಾಂಜಾ, ವ್ಯಸನಿಗಳಾಗಬೇಡಿ ಎಂದು ಕರೆ ನೀಡಿದರು.
ಪೋಲಿಸ್ ಕಾನ್ಸ್ಟೇಬಲ್ ರೇಖಾ ಮಾತನಾಡಿ, ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು ಓದಿನ ಕಡೆ ಗಮನ ಹರಿಸಿ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆಯುವಂತೆ ಸಲಹೆ ನೀಡಿದ ಅವರು, ಯುವಕರು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದಾಗ ಸುಶಿಕ್ಷಿತ, ಸಶಕ್ತ, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಮರಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕಿಯರಾದ ಡಾ ಪೂಜಾ ಹೊನ್ನುಟಗಿ, ನಸ್ರೀನ್ ತಾಜ್, ಸುಮಾ, ಉಪನ್ಯಾಸಕ ಡಾ ಯಂಕನಗೌಡ ಪಾಟೀಲ್, ಶರಣಪ್ಪ ಸಾಹು, ಪೋಲಿಸ್ ಕಾನ್ಸ್ಟೇಬಲ್ ನಿಂಗನಗೌಡ, ಹೋಮ್ ಗಾರ್ಡ್ ಮುರ್ತುಜಾ ಚಿಗರಾಳ, ಬೋಧಕೇತರ ಸಿಬ್ಬಂದಿ ಸಂಗಮೇಶ ಪಟ್ಟಣಕರ್, ಮಾಸುಮ ಅಲಿ ನಾಶಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

