ಸಿಂದಗಿಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕು ಪತ್ರಕರ್ತರಿಗೆ ಬಹುಕಾಲದ ಬೇಡಿಕೆಯಾಗಿರುವ ಪತ್ರಕರ್ತರ ಭವನವನ್ನು ಅತೀ ಶೀಘ್ರದಲ್ಲಿಯೇ ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ನಗರದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ), ಸಿಂದಗಿ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಸ್ವಾತಂತ್ರ‍್ಯ ಹಾಗೂ ಜವಾಬ್ದಾರಿಯನ್ನು ಸ್ಮರಿಸುವ ದಿನವೇ ಪತ್ರಿಕಾ ದಿನಾಚರಣೆ. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಪತ್ರಕರ್ತರು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದು, ಪತ್ರಿಕೋದ್ಯಮದ ಮೌಲ್ಯಗಳು, ನೈತಿಕತೆ ಹಾಗೂ ಇಂದಿನ ಸವಾಲುಗಳ ಕುರಿತು ಚರ್ಚೆ ನಡೆಸುವುದು ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕನ್ನು ಎತ್ತಿಹಿಡಿಯುವುದು ಪತ್ರಿಕಾ ದಿನಾಚರಣೆಯ ಉದ್ದೇಶವಾಗಿದೆ. ಅನ್ಯಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ವೇಳೆ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಮಾತನಾಡಿ, ಪತ್ರಕರ್ತರು ಸಮಾಜಮುಖಿ ಕಾರ್ಯಗಳ ಮೂಲಕ ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ವಿವಿಧ ಇಲಾಖೆಗಳ ಕಳಪೆ ಕಾಮಗಾರಿಗಳು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಸುದ್ದಿಗಳ ಮೂಲಕ ಬೆಳಕಿಗೆ ತಂದು ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಾನಿಪ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ಪತ್ರಕರ್ತರು ಸಾಕಷ್ಟು ಸೌಲಭ್ಯಗಳ ಕೊರತೆಯ ನಡುವೆಯೂ ಸಮಾಜದ ಪರವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆದ್ದರಿಂದ ಸಿಂದಗಿಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಶಾಸಕ ಅಶೋಕ ಮನಗೂಳಿ ಅವರು ವಿಶೇಷ ಆದ್ಯತೆ ನೀಡಿ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಿಂದಗಿ ತಾಲೂಕು ಘಟಕದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಜಿಲ್ಲಾ ಪ್ರಧಾನ ಕಾಯದರ್ಶಿ ಇಂದುಶೇಖರ್ ಮಣೂರ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಪತ್ರಕರ್ತರನ್ನು ಹಾಗೂ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ರಾಂಪೂರ ಆರೂಢ ಮಠದ ನಿತ್ಯಾನಂದ ಮಹಾರಾಜರು ಸಮ್ಮುಖ ವಹಿಸಿದ್ದರು. ವೇದಿಕೆಯ ಮೇಲೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ್ ಬೆಣ್ಣೂರ, ಪ್ರಾಚಾರ್ಯೆ ಡಾ.ಜೆ.ಸಿ.ನಂದಿಕೊಲ, ಬಿಇಒ ಟಿ.ಎಸ್.ಆಲಗೂರ, ಸಿಪಿಐ ಸುನೀಲ ಮೂಲಿಮನಿ ಇದ್ದರು.
ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿನಿ ಚಾಂದನಿ ಮುಲ್ಲಾ ನಿರೂಪಿಸಿದರು. ಪತ್ರಕರ್ತರಾದ ಗುರುರಾಜ ಮಠ ಸ್ವಾಗತಿಸಿದರು. ಶಿವಾನಂದ ಆಲಮೇಲ ಪ್ರಾಸ್ತಾವಿಕ ಮಾತನಾಡಿದರು. ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಶೇಖ ವಂದಿಸಿದರು. ಸಮಾರಂಭದಲ್ಲಿ ಎಂ.ಎಂ.ಹಂಗರಗಿ, ವಿ.ಬಿ.ಕುರಡಿ, ರಾಜಶೇಖರ ಕೂಚಬಾಳ, ಕಸಾಪ ತಾಲೂಕಾಧ್ಯಕ್ಷ ವಾಯ್.ಸಿ.ಮಯೂರ, ಎಇಇ ತಾರಾನಾಥ ರಾಠೋಡ, ಶಿವಕುಮಾರ ಸಬರದ, ಬಸವರಾಜ ರಂಜುಣಗಿ, ಏಕನಾಥ ದ್ವಾಶ್ಯಾಳ, ಸಂಗನಗೌಡ ಪಾಟೀಲ ಅಗಸಬಾಳ, ರಜತ್ ತಾಂಬೆ, ರಾಮು ಮೋರಟಗಿ, ಪ್ರಶಾಂತ ಕದ್ದರಕಿ, ಶಂಕರಗೌಡ ಬಿರಾದಾರ, ರವಿ ನಾಗಠಾಣ, ಶಾಂತು ರಾಣಾಗೋಳ, ಅನುಸುಬಾಯಿ ಪಾರಗೊಂಡ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಸೈನಾಬಿ ಮಸಳಿ, ಎಂ.ಎ.ಖತೀಬ, ಸಿದ್ದಲಿಂಗ ಕಿಣಗಿ, ನಿಂಗರಾಜ ಅತನೂರ, ರಜತ್ ತಾಂಬೆ, ರಾಮು ಮೋರಟಗಿ, ಪ್ರಶಾಂತ ಕದ್ದರಕಿ, ಶಂಕರಗೌಡ ಬಿರಾದಾರ, ರವಿ ನಾಗಠಾಣ, ಶಾಂತು ರಾಣಾಗೋಳ, ಅನುಸುಬಾಯಿ ಪಾರಗೊಂಡ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ರಶ್ಮೀ ನೂಲಾನವರ, ಸೈನಾಬಿ ಮಸಳಿ, ಅಂಬರೀಷ ಸುಣಗಾರ, ಸುದರ್ಶನ ಜಂಗಣ್ಣಿ, ಪುಟ್ಟು ದೇಸಾಯಿ, ಸಿದ್ದು ಕಡಗಂಜಿ, ನವೀನ ಶೆಳ್ಳಗಿ, ವಿಜಯಕುಮಾರ ಪತ್ತಾರ, ರಣಜಿತಸಿಂಗ್ ರಜಪೂತ, ಯಲ್ಲಾಲಿಂಗ ಮಳ್ಳಿ, ಭೀಮರಾಯ ಕೆಂಭಾವಿ, ವಿನಯಕುಮಾರ ಅಗಸರ, ಈರಣ್ಣ ವಿಶ್ವಕರ್ಮ, ಪಂಡಿತ ಯಂಪುರೆ, ಖಾಜಾಅಮೀನ ಮಕಾಂದಾರ, ವಸಿಂ ಗೋಗಿ, ಶಾಂತು ಹಿರೇಮಠ, ಚಂದ್ರಕಾಂತ ಮುಚ್ಚಂಡಿ, ನಿಂಗಣ್ಣ ಯಾಳಗಿ, ಆರೀಫ್ ಅಂತರಗಂಗಿ, ಜಾಹಿರ್‌ಅಬ್ಬಾಸ್ ಮುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪತ್ರಕರ್ತರು, ಸಾರ್ವಜನಿಕರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

“ಪದಾಧಿಕಾರಿಗಳು ಹಾಗೂ ಸದಸ್ಯರು ಕ್ರಿಯಾಶೀಲರಾಗಿದ್ದರೆ ಮಾತ್ರ ಆ ಸಂಘವು ಬಲಿಷ್ಠವಾಗಲು ಸಾಧ್ಯ. ಕಾರಣ ಕಾನಿಪ ಸಂಘದ ನೂತನ ಪದಾಧಿಕಾರಿಗಳು ಸದಸ್ಯರಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಆರೋಜಿಸುವ ಮೂಲಕ ಸಿಂದಗಿ ಘಟಕವನ್ನು ಜಿಲ್ಲೆಯಲ್ಲಿಯೇ ಮಾದರಿ ಘಟಕವನ್ನಾಗಿ ರೂಪಿಸಬೇಕು.”
– ಇಂದುಶೇಖರ ಮಣೂರ
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ

