ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಶಾಲಾ-ಕಾಲೇಜುಗಳ ಆವರಣದಲ್ಲಿ ಜುಲೈ 28ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ ಎಂದು ಸಂಸ್ಥೆಯ ನಿರ್ದೇಶಕ ಟಿ.ಟಿ. ಹಗೇದಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪದವಿ ಪೂರ್ವ ವಿಜ್ಞಾನ ವಿಭಾಗದ ಪ್ರಾರಂಭೋತ್ಸವ, ಎಲ್ಲಾ ವಿಭಾಗಗಳ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿ ಉದ್ಘಾಟನೆ, ಹಿರಿಯ ಪ್ರಾಥಮಿಕ ಶಾಲೆಯ ಭೋಜನ ಆಸನಗಳ ಉದ್ಘಾಟನೆ, ಜೊತೆಗೆ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀಶೈಲ ಬಿ. ಪತಂಗಿಯವರ ಜನ್ಮದಿನದ ವಜ್ರ ಮಹೋತ್ಸವ ಹಾಗೂ ಪಟ್ಟಣದ ಯುವ ಸಾಹಿತಿ ಮಲ್ಲು ಗಿಡ್ಡಪ್ಪಗೋಳ ಸಂಪಾದಿತ “ವಿದ್ಯಾಸಂಗಮ ಸ್ಮರಣ ಸಂಚಿಕೆ” ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಸಪ್ಪ ಉ. ಗಿಡ್ಡಪ್ಪಗೋಳ ವಹಿಸುವರು. ಉದ್ಘಾಟನೆಯನ್ನು ಬೆಳಗಾವಿಯ ವಿಶ್ರಾಂತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ನೆರವೇರಿಸುವರು. ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯನ್ನು ಬೆಳಗಾವಿ ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ಪ್ರಸನ್ನ ಬಿ. ದೇಸಾಯಿ ಉದ್ಘಾಟಿಸುವರು.
ಸ್ಮರಣ ಸಂಚಿಕೆಯನ್ನು ಸಚಿವ ಡಾ. ಎಂ.ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಬಿಡುಗಡೆ ಮಾಡುವರು. ಪದವಿ ಪೂರ್ವ ವಿಜ್ಞಾನ ವಿಭಾಗದ ಉದ್ಘಾಟನೆಯನ್ನು ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎ. ಉಪ್ಪಾರ ನೆರವೇರಿಸುವರು. ವಿಜ್ಞಾನ ಪ್ರಯೋಗಾಲಯವನ್ನು ಪುಣೆಯ ಬ್ಲೂರಿಗರ್ ರಿಟೇಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಮಹಾಂತೇಶ ಗಾಜಿ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಸಂಸ್ಥೆಯ ನಿರ್ದೇಶಕ ಚನಮಲ್ಲಪ್ಪ ಗಿಡ್ಡಪ್ಪಗೋಳ, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಭಾಗವಹಿಸುವರು. ಅತಿಥಿಗಳಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಉಸ್ಮಾನ ಪಟೇಲ್ ಖಾನ್ನವರ, ಸಾಹಿತಿ ಅಶೋಕ ಹಂಚಲಿ, ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಹಂಗರಗಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ನಾಗಪ್ಪ ಮೇಲಗಿರಿ, ವಿನೀತಕುಮಾರ ದೇಸಾಯಿ, ಸುನಂದಬಾಯಿ ಗಿಡ್ಡಪ್ಪಗೋಳ, ಶಂಕ್ರಪ್ಪ ಕುಂಬಾರ, ಶಿವಾನಂದ ಶೀಲವಂತ ಸೇರಿದಂತೆ ಅನೇಕರು ಗೌರವ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
