ಕಲಕೇರಿ: ಸಮಿಪದ ತಿಳಗೂಳ ಗ್ರಾಮದ ಶ್ರೀ ಸದ್ಗರು ಖಾದಿ ಮತ್ತು ಗ್ರಾಮೀಣ ಔಧ್ಯೋಗಿಕ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ತಿಳಗೂಳ ಪೌಡಶಾಲೆಯ ವಿಧ್ಯಾರ್ಥಿಗಳು ೨೦೨೩-೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಶಾಲೆಯ ಒಟ್ಟು ಪಲಿತಾಂಶ ಶೇ.೧೦೦ ರಷ್ಟಾಗಿದೆ.
ವರ್ಷಾ ಯಡ್ರಾಮಿ ೫೭೧ ಅಂಕ (೯೧.೩೬%) ಪಡೆದು ಪ್ರಥಮ ಸ್ಥಾನ, ಸುಮಿತ್ರಾ ಹಿರೇಮಠ ೫೫೫ ಅಂಕ (೮೮.೮೦%) ಪಡೆದು ದ್ವಿತೀಯ ಸ್ಥಾನ, ಚೈತ್ರಾ ಬೀರಗೊಂಡ ೫೪೧ ಅಂಕ (೮೬.೫೬%) ಪಡೆದು ತೃತೀಯ ಸ್ಥಾನ, ಹಾಗೂ ಅಕ್ಷತಾ ಚವ್ಹಾಣ ೫೨೮ ಅಂಕ (೮೪.೪೮%) ಪಡೆದು ನಾಲ್ಕನೇಯ ಸ್ಥಾನ, ರಕ್ಷೀತಾ ಸಾತಿಹಾಳ ೫೨೩ ಅಂಕ (೮೩.೬೮%) ಐದನೇಯ ಸ್ಥಾನ, ಆದಿತ್ಯಾ ನಾಯ್ಕೋಡಿ ೫೨೧ ಅಂಕ (೮೩.೩೬%) ಪಡೆದು ಆರನೇಯ ಸ್ಥಾನ ಪಡೆದುಕೊಂಡಿದ್ದಾರೆ, ಪರೀಕ್ಷೆಗೆ ೮೩ ವಿಧ್ಯಾರ್ಥಿಗಳು ಹಾಜರಾಗಿದ್ದು ೩ ವಿಧ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ೪೪ ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ೨೪ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ,೧೨ ವಿಧ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದು ಶಾಲೆಯ ಓಟ್ಟು ಫಲಿತಾಂಶ ಶೇ ೧೦೦ ರಷ್ಟಾಗಿದ್ದು, ವಿಧ್ಯಾರ್ಥಿಗಳ ಸಾಧನೆಗೆ ಮುಖ್ಯಗುರುಗಳು ಹಾಗೂ ಶಿಕ್ಷಕ ಸಿಬ್ಬಂದ್ದಿ ಅಭಿನಂದನೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

