Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಕೊಲೆಯನ್ನು ಖಂಡಿಸಿ ಸಿಂದಗಿ ತಹಶಿಲ್ದಾರ ಕಚೇರಿಯ ಮುಂದೆ ವಿಜಯಪುರ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹೋರಾಟಗಾರ ಶಿವಾಜಿ ಮೆಟಗಾರ, ಅಂಜಲಿ ಅಂಬಿಗೇರ ಹತ್ಯೆ ಮಾಡಿದ ದುಷ್ಕರ್ಮಿಗೆ ಉಗ್ರವಾದ ಶಿಕ್ಷೆಯನ್ನು ವಿಧಿಸಿ ಇಂತಹ ಘಟನೆಗಳು ರಾಜ್ಯದಲ್ಲಿ ಮತ್ತೆ ಮರುಕಳಿಸುವಂತಾಗಬಾರದು ಎಂದು ಎಚ್ಚರಿಸಿದರು.ತಳವಾರ ಸಮಾಜದ ಮುಖಂಡ ಮಡಿವಾಳ ನಾಯ್ಕೋಡಿ ಮಾತನಾಡಿ, ಅಂಜಲಿ ಅಂಬಿಗೇರ ಕುಟುಂಬಕ್ಕೆ ಅವಳೇ ಆಸರೆಯಾಗಿದ್ದು, ತಂದೆ-ತಾಯಿ ಇಲ್ಲದೆ ಅಜ್ಜಿ ಮತ್ತು ಸಹೋದರಿಯೊಂದಿಗೆ ಜೀವನ ಸಾಗಿಸುತ್ತಿದ್ದಳು. ಮೃತ ಅಂಜಲಿಯ ಕುಟುಂಬಕ್ಕೆ ಸರ್ಕಾರವು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಿಂದಗಿ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಣಮಂತ ಸುಣಗಾರ, ಪುರಸಭೆಯ ಸದಸ್ಯರಾದ ಬಸವರಾಜ ಯರನಾಳ, ಗೋಲ್ಲಾಳ ಬಂಕಲಗಿ, ಅನೀಲ ಕಡಕೋಳ, ಸಂತೋಷ ಹರನಾಳ, ಮಲ್ಲು ಕುರಿ, ನಾಗು ತಳವಾರ, ಪರಶುರಾಮ ಕೋಟಾರಗಸ್ತಿ, ವಿಜಯಕುಮಾರ ಯಾಳವಾರ, ಈರಣ್ಣ ಕುರಿ, ರಾಜಕುಮಾರ ನಾಯ್ಕೋಡಿ, ಹಣಮಂತ ಹಿಪ್ಪರಗಿ, ಮಲ್ಲು ನಾಯ್ಕೋಡಿ, ಕುಮಾರ ನಾಯ್ಕೋಡಿ,…
ಇಂಡಿ: ಕೃಷ್ಣಾ ಮುಖ್ಯ ಕಾಲುವೆಯಿಂದ ಕಾಲುವೆಯ ಕೊನೆಯ ಭಾಗದ ವರೆಗೆ ನೀರು ಹರಿಸಲಾಗಿದೆ ಎಂದು ಕೃಷ್ಣಾ ಬಾಗ್ಯ ಜಲ ನಿಗಮದ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ತಿಳಿಸಿದ್ದಾರೆ.ಕಳೆದ ಬಾರಿ ಕೃಷ್ಣಾ ಮುಖ್ಯ ಕಾಲುವೆಯಿಂದ ೧೩೫ ಕಿ.ಮಿ ಮಾತ್ರ ನೀರು ಹರಿಯಬಿಡಲಾಗಿತ್ತು. ಇದರಿಂದ ಆ ಭಾಗದ ಜನರು ಸತ್ಯಾಗ್ರಹ ಮಾಡಿದ್ದರು ಎಂದರು.ಕೆಂಬಾವಿಯ ೦ ಕಿ.ಮಿಯಿಂದ ಸಿಂದಗಿ ತಾಲೂಕಿನ ಬಳಗಾನೂರ ಕೆರೆಯ ವರೆಗೆ ನಂತರ ಬಳಗಾನೂರ ಕೆರೆಯಿಂದ ಇಂಡಿ ತಾಲೂಕಿನಿಂದ ಚಡಚಣ ತಾಲೂಕಿನ ದಸೂರ ವರೆಗೆ ನೀರು ಹರಿಸಿದ್ದು ಆ ನೀರು ನಂತರ ಭೀಮಾ ನದಿ ಸೇರುತ್ತದೆ ಎಂದರು.ಇದರಿಂದ ಸಿಂದಗಿ,ಇಂಡಿ ಮತ್ತು ಚಡಚಣ ತಾಲೂಕಿನ ಎಲ್ಲ ಕೆರೆ ತುಂಬಿಸುವದರ ಜೊತೆಗೆ ಜನ ಜಾನುವಾರುಗಳಿಗೆ ಕುಡಿಯಲು ನೀರು ಅನುಕೂಲ ವಾಗುತ್ತದೆ ಎಂದರು.ಸಹಾಯಕ ಕಾರ್ಯ ಪಾಲಕ ಅಭಿಯಂತರ ಶ್ರೀಮಂತ ಅಂಗಡಿ, ಜಿ.ಪಂ ಗ್ರಾಮೀಣ ಕುಡಿಯುವ ನೀರು ಸರಬರಾಜು ಎಇಇ ಆರ್.ಎಸ್.ರುದ್ರವಾಡಿ,ಸಾಜಿದ ನಲವತ್ತವಾಡ, ಮಲ್ಲಿಕಾರ್ಜುನ ತೆಲಂಗಿ, ಸಾದಿಕ ಹೊನ್ನುಟಗಿ ಮತ್ತಿತರಿದ್ದರು.
ಇಂಡಿ: ತಾಲೂಕಿನಲ್ಲಿ ಒಟ್ಟು ೪೨೩೨೦ ಜನ ರೈತರಿಗೆ ೬೪ ಕೋಟಿ ೭೧ ಲಕ್ಷ ೯೬೭೯೫ ರೂ, ಗಳು ಮಂಜೂರಿಯಾಗಿದ್ದು, ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ತಹಸೀಲ್ದಾರ ಮಂಜುಳಾ ನಾಯಕ ತಿಳಿಸಿದ್ದಾರೆ.ಅವರು ಪಟ್ಟಣದ ತಹಸೀಲ್ದಾರ ಕಚೇರಿಯ ಸಬಾಭವನದಲ್ಲಿ ನಡೆದ ಬೆಳೆ ಪರಿಹಾರ ಕುರಿತು ಅಧಿಕಾರಿಗಳು ಮತ್ತು ತಾಲೂಕಿನ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು.ರೈತರಲ್ಲಿ ಕೆಲವು ರೈತರ ಖಾತೆಗಳು ಸ್ಥಗಿತಗೊಂಡಿವೆ, ಕೆಲವು ರೈತರ ಆಧಾರ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಇಲ್ಲದಿರುವದು, ಕೆಲವು ರೈತರ ಹೆಸರುಗಳು ಬ್ಯಾಂಕ್ ಖಾತೆಯಲ್ಲಿ ಮತ್ತು ಆಧಾರ ಕಾರ್ಡಗಳಲ್ಲಿ ಬೇರೆ ಬೇರೆಯಾಗಿರುವದು, ರೈತರು ಬೇರೆ ಕಡೆಗೆ ಹೋಗಿರುವದು, ತೀರಿ ಕೊಂಡಿರುವ ರೈತರ ಕುರಿತು ಬ್ಯಾಂಕಿನಲ್ಲಿ ಸಮಸ್ಯೆ ಇರಬಹುದು.ಎನ್ ಪಿ ಸಿ ಐ ಮಾಡಿಸದಿರುವದು, ಇಂತಹ ಸಮಸ್ಯಗಳಿಂದ ಒಟ್ಟು ತಾಲೂಕಿನಲ್ಲಿ ೩೨೬೬ ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗಿಲ್ಲ. ಈ ಬಗ್ಗೆ ರೈತರು ಭಯ ಪಡುವ ಅಗತ್ಯವಿಲ್ಲ. ಇಂತಹ ರೈತರು ಕೂಡಲೇ ತಮ್ಮ ತಮ್ಮ ಬ್ಯಾಂಕಗಳಿಗೆ ಭೇಟಿ ನೀಡಿ…
ಬಸವನಬಾಗೇವಾಡಿ: ಪ್ರಜ್ವಲ್ ಅವರನ್ನು ಬಂಧಿಸಬೇಕೆಂದು ನೈತಿಕತೆ ಇಲ್ಲದ ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಜೀವನದಲ್ಲಿ ಆದರ್ಶವಿಲ್ಲದ ಎಡಚರ ಸಾಹಿತಿಗಳು ಈ ವಿಷಯದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಿಜವಾಗಲೂ ಈ ಬುದ್ದಿ ಜೀವಿ ಸಾಹಿತಿಗಳಿಗೆ ಸಮಾಜದ ಬಗ್ಗೆ ಕಳಕಳಿ ಇದ್ದರೆ ನೇಹಾ ಅವರ ಹತ್ಯೆಯನ್ನು ಖಂಡಿಸಬೇಕಾಗಿತ್ತು. ತಮಗೆ ಬೇಕಾದ ಹಾಗೆ ವರ್ತಿಸುತ್ತಿರುವ ಸಾಹಿತಿಗಳ ವರ್ತನೆ ಖಂಡನೀಯವಾಗಿದೆ. ಪ್ರಶಸ್ತಿ ಆಸೆಗಾಗಿ ಸರಕಾರದ ಪರವಾಗಿ ಸದಾ ಕೆಲಸ ಮಾಡುತ್ತಿರುವ ಈ ಬುದ್ಧಿಜೀವಿಗಳ ಬಗ್ಗೆ ಸಮಾಜದಲ್ಲಿ ಗೌರವವಿಲ್ಲ.. ಅಪರಾಧ ಮಾಡಿದವರ ಕುರಿತು ಕಾನೂನು ಕ್ರಮ ಸರ್ಕಾರ ಕೈಗೊಳ್ಳುತ್ತದೆ ಎನ್ನುವ ಸಾಮಾನ್ಯ ಜ್ಞಾನ ಇವರಿಗೆ ಇದ್ದಂತೆ ಇಲ್ಲ. ಸರಕಾರದ ಮೇಲೆ ಇವರಿಗೆ ವಿಶ್ವಾಸವಿಲ್ಲ ಎಂದು ತೋರುತ್ತದೆ. ಇಂತಹ ಸಾಹಿತಿಗಳಿಂದ ನಾವು ಏನನ್ನು ನಿರೀಕ್ಷಿಸುವುದಿಲ್ಲ. ಈಗಾಗಲೇ ಮೂಲೆಗುಂಪಾಗಿದ್ದಾರೆ. ತಮ್ಮ ಇರುವಿಕೆಯನ್ನು ವ್ಯಕ್ತಪಡಿಸುವ ಕಾರಣಕ್ಕಾಗಿ ಬಹುಶಃ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರಬಹುದು ಎಂದು ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಪಟ್ಟಣದ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ಮುಖಂಡ ದಯಾನಂದ ಜಾಲಗೇರಿ ಅವರ ಮಗ ಶಿವಶಂಕರ್ ಜಾಲಗೇರಿ ಅವರು 10ನೇ ತರಗತಿಯ ಐಸಿಎಸ್ಇ ಸಿಲಬಸ್ ನಲ್ಲಿ ಶೇ.92 ರಷ್ಟು ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯಿಂದ ಶಂಕರಗೌಡ ಬಿರಾದಾರ ಸನ್ಮಾನಿಸಿದರು.ಶಿವಶಂಕರ ಜಾಲಗೇರಿ ಅವರು 10ನೇ ತರಗತಿಯ ಐಸಿಎಸ್ಇ ಸಿಲಬಸ್ ನಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯಿಂದ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸನ್ಮಾನಿಸಿದರು.ಶಂಕರಗೌಡ ಬಿರಾದಾರ ಮಾತನಾಡಿ, 10ನೇ ತರಗತಿಯ ಐಸಿಎಸ್ಇ ಸಿಲಬಸ್ ಪರೀಕ್ಷೆಯಲ್ಲಿ 600ಕ್ಕೆ 549 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದು ಶೇ. 92 ಉತ್ತೀರ್ಣನಾಗಿರುವುದು ಬಸವನಾಡಿಗೆ ಹೆಮ್ಮೆಯ ಸಂಗತಿಯಾಗಿದೆ. ಈತನು ಸಂಡೂರ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಮುಂಬರುವ ದಿನಗಳಲ್ಲಿ ಶಿವಶಂಕರನು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಸಾಗಿ ಬಸವ ನಾಡಿಗೆ ಒಳ್ಳೆಯ ಹೆಸರನ್ನು ತರುವ…
ಬಸವನಬಾಗೇವಾಡಿ: ತಾಲೂಕಿನ ವಡವಡಗಿ ಗ್ರಾಮದ ಪರಶುರಾಮ ದೊಡಮನಿ ತೋಟದ ಬಾವಿಯಲ್ಲಿ ಗುರುವಾರ ಆಕಸ್ಮಿಕವಾಗಿ ಶಿವಶಂಕ್ರೆಪ್ಪ ಅಂಬೇಕರ ಅವರ ಎತ್ತು ಬಿದ್ದ್ತಿತು. ಈ ಎತ್ತನ್ನು ಸ್ಥಳೀಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸಿ ಎತ್ತನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆ ತಂದರು. ಈ ಕಾರ್ಯಾಚರಣೆ ಸುಮಾರು ಮೂರು ಗಂಟೆ ಕಾಲ ನಡೆಯಿತು. ಬಾವಿಯಿಂದ ಸಿಬ್ಬಂದಿಗಳು ಸುರಕ್ಷಿತವಾಗಿ ಮೇಲಕ್ಕೆ ತಂದು ಎತ್ತಿನ ಮಾಲೀಕರಿಗೆ ಒಪ್ಪಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಬಸಪ್ಪ ಜಾಲಗೇರಿ, ನಾರಾಯಣ ರಾಠೋಡ, ಮಲ್ಲಿನಗೌಡ ಬಿರಾದಾರ, ಅಶೋಕ ನಾಯಕ, ಮುತ್ತಣ್ಣ ಲಮಾಣಿ, ನಾಗಪ್ಪ ಉಂಡಿ ಇದ್ದರು ಎಂದು ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜೆ ತಿಳಿಸಿದ್ದಾರೆ.
ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮಕ್ಕೆ ಉರ್ದು ಪದವಿ ಪೂರ್ವ ಕಾಲೇಜು ಮಂಜೂರ ಮಾಡುವ ಮೂಲಕ ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದಾರೆ.ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸರಕಾರಿ ಉರ್ದು ಪದವಿ ಪೂರ್ವ ಕಾಲೇಜು ಬಹುದಿನಗಳ ಬೇಡಿಕೆಯಾದ್ದು, ಈಗಾಗಲೇ ಗ್ರಾಮದಲ್ಲಿ ಸರಕಾರಿ ಉರ್ದು ಪ್ರೌಢಶಾಲೆಯಿದೆ. ಪ್ರೌಢಶಾಲೆಯ ವ್ಯಾಸಂಗದ ನಂತರ ಕಾಲೇಜು ಅಧ್ಯಯನ ಅಗತ್ಯವಾಗಿದೆ. ಹುಣಶ್ಯಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಹಳಷ್ಟು ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗಾಗಿ ಪದವಿಪೂರ್ವ ಕಾಲೇಜು ಅಗತ್ಯವಾಗಿದೆ.ಗ್ರಾಮದಲ್ಲಿ ಈಗ ಇರುವ ಪ್ರೌಡಶಾಲೆಯ ನಂತರ ಬಹಳಷ್ಟು ವಿದ್ಯಾರ್ಥಿಗಳು ಶಾಲೆ ಬಿಡುವಂತಾಗಿದ್ದು, ಅದರಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳು ಬಹುತೇಕ ಶಾಲೆ ತೊರೆಯುತ್ತಿದ್ದಾರೆ. ಈಗ ಕಾಲೇಜು ಶಿಕ್ಷಣ ಪಡೆಯಲು ಸಿಂದಗಿ, ವಿಜಯಪುರಕ್ಕೆ ತೆರಳುವ ಅನಿವಾರ್ಯತೆಯಿದೆ. ಈಗ ಹುಣಶ್ಯಾಳ ಗ್ರಾಮದಲ್ಲಿ ಕಾಲೇಜು ಆರಂಭಗೊಂಡಿದ್ದೇಯಾದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಯಲಗೋಡ, ಆಲಗೂರ, ಕೆರುಟಗಿ, ತುರಕನಗೇರಿ, ರಾಂಪೂರ, ಅಸಂತಾಪೂರ ಹೀಗೆ ಹಲವು ಗ್ರಾಮಗಳ ವಿದ್ಯಾರ್ಥಿನೀಯರಿಗೆ ಅನುಕೂಲವಾಲಿದೆ.ಹುಣಶ್ಯಾಳ ಗ್ರಾಮದಲ್ಲಿ ಸರಕಾರಿ ಪದವಿಪೂರ್ವ…
ವಿಜಯಪುರ: ಮುಂಜಾಗೃತ ಕ್ರಮವಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಡೆಂಗ್ಯೂ ರೋಗದ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯಾದ ಡಾ.ಕೆ.ಡಿ. ಗುಂಡಬಾವಡಿ ಹೇಳಿದರು.ಅವರು ಶುಕ್ರವಾರ ನಗರ ಸ್ಯಾಟಲೈಟ್ ಬಸ್‌ನಿಲ್ದಾಣದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ “ ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನು ನಿಯಂತ್ರಿಸೋಣ” ಎಂಬ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡುವುದರಿಂದ ರೋಗಗಳಿಂದ ದೂರ ಇರಬಹುದು. ವ್ಯಯಕ್ತಿಕ ಸ್ವಚ್ಚತೆಯೊಂದಿಗೆ ಪರಿಸರದ ಸ್ವಚ್ಚತೆಗೂ ಆದ್ಯತೆ ನೀಡಿ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರು ಪಣ ತೋಡಬೇಕು ಎಂದು ಕರೆ ನೀಡಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಯಾದ ಡಾ. ಜೈಬುನ್ನಿಸಾಬೇಗಂ ಬೀಳಗಿ ಮಾತನಾಡಿ, ಡೆಂಗ್ಯು ರೋಗವು ಈಡಿಸ್ ಈಜಿಪ್ತ ಹೆಣ್ಣು ಸೊಳ್ಳೆಯಿಂದ ಹರಡುತ್ತಿದ್ದು, ನಿಂತ ನೀರಿನಲ್ಲಿ ಈ ಸೊಳ್ಳೆಗಳು ಉತ್ಪತ್ತಿಯಾಘುತ್ತವೆ ಹಾಗಾಗಿ ಮನೆಯ ಸುತ್ತಮುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಜಾಥಾ ಕಾರ್ಯಕ್ರಮವು ನಗರದ ಸ್ಯಾಟಲೈಟ್ ಬಸ್‌ನಿಲ್ದಾಣ…
ವಿಜಯಪುರ: ೨೦೨೪-೨೫ನೇ ಸಾಲಿಗೆ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದ ಕರ್ನಾಟಕ ಸರ್ಕಾರದದಿಂದ ಅನುದಾನ ಪಡೆದ ಹಾಗೂ ಎಬಿಸಿಟಿಯ ಮಾನ್ಯತೆ ಪಡೆದ ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಡಿಪ್ಲೋಮಾ ಕೋರ್ಸ್ ಗೆ ವಿಶೇಷಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅನುದಾನಿತ ಕೋರ್ಸ್ ಗಳಾದ ಆರ್ಕಿಟೆಕ್ಟರ್ ಅಸಿಸ್ಟೆಂಟ್‌ಷಿಪ್, ಕಮರ್ಶಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿಯರಿಂಗ, ಹಾಗೂ ಅನುದಾನ ರಹಿತ ಕೋರ್ಸ್ಗಳಾದ ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್(ಫಾರ್ ವಿಜ್ಯುವಲಿ ಇಂಪರ‍್ಡ್)ಮ ಅಪಾರೇಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ ಕೋರ್ಸ್ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಎಸ್‌ಎಸ್‌ಎಲ್‌ಸಿಯಲ್ಲಿ ಕನಿಷ್ಠ ಶೇ.೩೫ ಅಂಕಗಳನ್ನು ಪಡೆದಿರಬೇಕು. ವಿಶೇಷಚೇತನ ಪ್ರಮಾಣಪತ್ರವನ್ನು ಒಳಗೊಂಡಿರಬೇಕು. ಪ್ರವೇಶಕ್ಕೆ ಅರ್ಜಿಗಳನ್ನು ನಗದು ಅಥವಾ ಡಿಡಿಯ ಮೂಲಕ ಶುಲ್ಕ ಪಾವತಿಸಿ(ಸಾಮನ್ಯ ವರ್ಗದ ಅಭ್ಯರ್ಥಿಗಳಿಗೆ ೧೦೦ರೂ. ಎಸ್ಸಿ,ಎಸ್ಟಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ೫೦ರೂಪಾಯಿ) ಜೆಎಸ್‌ಎಸ್ ವಿಶೇಷಚೇತನರ ಕಾಲೇಜುನಿಂದ ಪಡೆದುಕೊಳ್ಳಬಹುದು. ಅಥವಾ ಸಂಸ್ಥೆಯ ವೆಬ್‌ಸೈಟ್ www.jsspda.org ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್ ಅಥವಾ ೯೮೪೪೬೪೪೯೩೭…
ವಿಜಯಪುರ: ಅಲ್ಪ ಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌಧ್ಧ, ಪಾರ್ಸಿ ಮತ್ತು ಸಿಖ್) ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ/ಕಾಲೇಜು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜು, ಸರ್ಕಾರಿ ಮುಸ್ಲಿಂ ವಸತಿ ಶಾಲೆ/ಕಾಲೇಜು, ಮತ್ತು ಇಂಟಿಗ್ರೇಟೆಡ್ ಶಾಲೆಗಳಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿನಪ್ರಥಮ ಪಿಯುಸಿ (ವಿಜ್ಞಾನ ಹಾಗೂ ವಾಣಿಜ್ಯ) ತರಗತಿ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಕೆಗೆ ಮೇ.೨೭ ಕೊನೆಯ ದಿನವಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.೭೫ರಷ್ಟು ಪ್ರವೇಶ ಮೀಸಲಿರಿಸಿದೆ. ವೀಕಲಚೇತನರಿಗೆ ಶೇ.೩ರಷ್ಟು, ಪ.ಜಾತಿ, ಪ.ಪಂಗಡ ಹಾಗೂ ಹಿಂದೂಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.೨೫ರಸ್ಟು ಪ್ರವೇಶಾತಿ ಮೀಸಲಿರಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ನೋಟ್‌ಬುಕ್, ಲೇಖನಿ ಸಾಮಗ್ರಿಗಳು, ಸ್ಕೂಲ್ ಬ್ಯಾಗ್ ಹಾಗೂ ಊಟ ವಸತಿ…
