ಬಸವನಬಾಗೇವಾಡಿ: ಪಟ್ಟಣದ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ಮುಖಂಡ ದಯಾನಂದ ಜಾಲಗೇರಿ ಅವರ ಮಗ ಶಿವಶಂಕರ್ ಜಾಲಗೇರಿ ಅವರು 10ನೇ ತರಗತಿಯ ಐಸಿಎಸ್ಇ ಸಿಲಬಸ್ ನಲ್ಲಿ ಶೇ.92 ರಷ್ಟು ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯಿಂದ ಶಂಕರಗೌಡ ಬಿರಾದಾರ ಸನ್ಮಾನಿಸಿದರು.
ಶಿವಶಂಕರ ಜಾಲಗೇರಿ ಅವರು 10ನೇ ತರಗತಿಯ ಐಸಿಎಸ್ಇ ಸಿಲಬಸ್ ನಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯಿಂದ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸನ್ಮಾನಿಸಿದರು.
ಶಂಕರಗೌಡ ಬಿರಾದಾರ ಮಾತನಾಡಿ, 10ನೇ ತರಗತಿಯ ಐಸಿಎಸ್ಇ ಸಿಲಬಸ್ ಪರೀಕ್ಷೆಯಲ್ಲಿ 600ಕ್ಕೆ 549 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದು ಶೇ. 92 ಉತ್ತೀರ್ಣನಾಗಿರುವುದು ಬಸವನಾಡಿಗೆ ಹೆಮ್ಮೆಯ ಸಂಗತಿಯಾಗಿದೆ. ಈತನು ಸಂಡೂರ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಮುಂಬರುವ ದಿನಗಳಲ್ಲಿ ಶಿವಶಂಕರನು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಸಾಗಿ ಬಸವ ನಾಡಿಗೆ ಒಳ್ಳೆಯ ಹೆಸರನ್ನು ತರುವ ಕೆಲಸವನ್ನು ಮಾಡಬೇಕೆಂದರು.
ಈ ಸಂದರ್ಭದಲ್ಲಿ ಪಿಕೆಪಿಎಸ್ ನಿರ್ದೇಶಕ ನಿಂಗಪ್ಪ ಅವಟಿ, ಮಹೇಶ ಮುಳವಾಡ, ರಾಮನಗೌಡ ಚಿಕ್ಕೊಂಡ, ಮಲ್ಲು ಬನಾಸಿ ,ಮಹಾಂತೇಶ ಹೆಬ್ಬಾಳ, ವೆಂಕಟೇಶ ಕರಾಡೆ, ದಯಾನಂದ ಜಾಲಗೇರಿ, ಸದಾನಂದ ಸುಲಾಖೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

