ಬಸವನಬಾಗೇವಾಡಿ: ಪ್ರಜ್ವಲ್ ಅವರನ್ನು ಬಂಧಿಸಬೇಕೆಂದು ನೈತಿಕತೆ ಇಲ್ಲದ ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಜೀವನದಲ್ಲಿ ಆದರ್ಶವಿಲ್ಲದ ಎಡಚರ ಸಾಹಿತಿಗಳು ಈ ವಿಷಯದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಿಜವಾಗಲೂ ಈ ಬುದ್ದಿ ಜೀವಿ ಸಾಹಿತಿಗಳಿಗೆ ಸಮಾಜದ ಬಗ್ಗೆ ಕಳಕಳಿ ಇದ್ದರೆ ನೇಹಾ ಅವರ ಹತ್ಯೆಯನ್ನು ಖಂಡಿಸಬೇಕಾಗಿತ್ತು. ತಮಗೆ ಬೇಕಾದ ಹಾಗೆ ವರ್ತಿಸುತ್ತಿರುವ ಸಾಹಿತಿಗಳ ವರ್ತನೆ ಖಂಡನೀಯವಾಗಿದೆ. ಪ್ರಶಸ್ತಿ ಆಸೆಗಾಗಿ ಸರಕಾರದ ಪರವಾಗಿ ಸದಾ ಕೆಲಸ ಮಾಡುತ್ತಿರುವ ಈ ಬುದ್ಧಿಜೀವಿಗಳ ಬಗ್ಗೆ ಸಮಾಜದಲ್ಲಿ ಗೌರವವಿಲ್ಲ.. ಅಪರಾಧ ಮಾಡಿದವರ ಕುರಿತು ಕಾನೂನು ಕ್ರಮ ಸರ್ಕಾರ ಕೈಗೊಳ್ಳುತ್ತದೆ ಎನ್ನುವ ಸಾಮಾನ್ಯ ಜ್ಞಾನ ಇವರಿಗೆ ಇದ್ದಂತೆ ಇಲ್ಲ. ಸರಕಾರದ ಮೇಲೆ ಇವರಿಗೆ ವಿಶ್ವಾಸವಿಲ್ಲ ಎಂದು ತೋರುತ್ತದೆ. ಇಂತಹ ಸಾಹಿತಿಗಳಿಂದ ನಾವು ಏನನ್ನು ನಿರೀಕ್ಷಿಸುವುದಿಲ್ಲ. ಈಗಾಗಲೇ ಮೂಲೆಗುಂಪಾಗಿದ್ದಾರೆ. ತಮ್ಮ ಇರುವಿಕೆಯನ್ನು ವ್ಯಕ್ತಪಡಿಸುವ ಕಾರಣಕ್ಕಾಗಿ ಬಹುಶಃ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರಬಹುದು ಎಂದು ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಸಿಎಂಗೆ ನೈತಿಕವಿಲ್ಲದ ಸಾಹಿತಿಗಳ ಪತ್ರ ನಾಚಿಗೇಡು :ಕಲ್ಯಾಣಶೆಟ್ಟಿ
Related Posts
Add A Comment

