ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮಕ್ಕೆ ಉರ್ದು ಪದವಿ ಪೂರ್ವ ಕಾಲೇಜು ಮಂಜೂರ ಮಾಡುವ ಮೂಲಕ ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದಾರೆ.
ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸರಕಾರಿ ಉರ್ದು ಪದವಿ ಪೂರ್ವ ಕಾಲೇಜು ಬಹುದಿನಗಳ ಬೇಡಿಕೆಯಾದ್ದು, ಈಗಾಗಲೇ ಗ್ರಾಮದಲ್ಲಿ ಸರಕಾರಿ ಉರ್ದು ಪ್ರೌಢಶಾಲೆಯಿದೆ. ಪ್ರೌಢಶಾಲೆಯ ವ್ಯಾಸಂಗದ ನಂತರ ಕಾಲೇಜು ಅಧ್ಯಯನ ಅಗತ್ಯವಾಗಿದೆ. ಹುಣಶ್ಯಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಹಳಷ್ಟು ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗಾಗಿ ಪದವಿಪೂರ್ವ ಕಾಲೇಜು ಅಗತ್ಯವಾಗಿದೆ.
ಗ್ರಾಮದಲ್ಲಿ ಈಗ ಇರುವ ಪ್ರೌಡಶಾಲೆಯ ನಂತರ ಬಹಳಷ್ಟು ವಿದ್ಯಾರ್ಥಿಗಳು ಶಾಲೆ ಬಿಡುವಂತಾಗಿದ್ದು, ಅದರಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳು ಬಹುತೇಕ ಶಾಲೆ ತೊರೆಯುತ್ತಿದ್ದಾರೆ. ಈಗ ಕಾಲೇಜು ಶಿಕ್ಷಣ ಪಡೆಯಲು ಸಿಂದಗಿ, ವಿಜಯಪುರಕ್ಕೆ ತೆರಳುವ ಅನಿವಾರ್ಯತೆಯಿದೆ. ಈಗ ಹುಣಶ್ಯಾಳ ಗ್ರಾಮದಲ್ಲಿ ಕಾಲೇಜು ಆರಂಭಗೊಂಡಿದ್ದೇಯಾದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಯಲಗೋಡ, ಆಲಗೂರ, ಕೆರುಟಗಿ, ತುರಕನಗೇರಿ, ರಾಂಪೂರ, ಅಸಂತಾಪೂರ ಹೀಗೆ ಹಲವು ಗ್ರಾಮಗಳ ವಿದ್ಯಾರ್ಥಿನೀಯರಿಗೆ ಅನುಕೂಲವಾಲಿದೆ.
ಹುಣಶ್ಯಾಳ ಗ್ರಾಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜನ್ನು ಇದೇ ಶೈಕ್ಷಣಿಕ ವರ್ಷದಲ್ಲಿ ಮಂಜೂರು ಮಾಡುವುದರ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸುವ ಭರವಸೆಯಿದೆ ಎಂದು ಗ್ರಾಮದ ಮೈನುದ್ದೀನ ಬಾಗವಾನ, ಶಫಿಕ ಸಿಪಾಯಿ. ಅನ್ವರ ಸಿಪಾಯಿ, ಅಸ್ಪಾಕ ತಾಳಿಕೋಟಿ, ಮಹಮ್ಮದ್ ಬಾಗವಾನ, ಶಕೀಲ ಪೋಲಾಸಿ, ಅಬ್ದುಲ್‌ಗನಿ ತಿಂಥಣಿ, ಮೊಹಸೀನ ಸಾಲೊಡಗಿ, ಹಾಶೀಂ ಸಿಪಾಯಿ, ಸದ್ದಾಂ ಬಿಂಜಲಭಾವಿ, ರಫಿಕ ನೀರಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಪಾಲಕರು, ವಿದ್ಯಾರ್ಥಿಗಳು, ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

