ಸಿಂದಗಿ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಕೊಲೆಯನ್ನು ಖಂಡಿಸಿ ಸಿಂದಗಿ ತಹಶಿಲ್ದಾರ ಕಚೇರಿಯ ಮುಂದೆ ವಿಜಯಪುರ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹೋರಾಟಗಾರ ಶಿವಾಜಿ ಮೆಟಗಾರ, ಅಂಜಲಿ ಅಂಬಿಗೇರ ಹತ್ಯೆ ಮಾಡಿದ ದುಷ್ಕರ್ಮಿಗೆ ಉಗ್ರವಾದ ಶಿಕ್ಷೆಯನ್ನು ವಿಧಿಸಿ ಇಂತಹ ಘಟನೆಗಳು ರಾಜ್ಯದಲ್ಲಿ ಮತ್ತೆ ಮರುಕಳಿಸುವಂತಾಗಬಾರದು ಎಂದು ಎಚ್ಚರಿಸಿದರು.
ತಳವಾರ ಸಮಾಜದ ಮುಖಂಡ ಮಡಿವಾಳ ನಾಯ್ಕೋಡಿ ಮಾತನಾಡಿ, ಅಂಜಲಿ ಅಂಬಿಗೇರ ಕುಟುಂಬಕ್ಕೆ ಅವಳೇ ಆಸರೆಯಾಗಿದ್ದು, ತಂದೆ-ತಾಯಿ ಇಲ್ಲದೆ ಅಜ್ಜಿ ಮತ್ತು ಸಹೋದರಿಯೊಂದಿಗೆ ಜೀವನ ಸಾಗಿಸುತ್ತಿದ್ದಳು. ಮೃತ ಅಂಜಲಿಯ ಕುಟುಂಬಕ್ಕೆ ಸರ್ಕಾರವು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಂದಗಿ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಣಮಂತ ಸುಣಗಾರ, ಪುರಸಭೆಯ ಸದಸ್ಯರಾದ ಬಸವರಾಜ ಯರನಾಳ, ಗೋಲ್ಲಾಳ ಬಂಕಲಗಿ, ಅನೀಲ ಕಡಕೋಳ, ಸಂತೋಷ ಹರನಾಳ, ಮಲ್ಲು ಕುರಿ, ನಾಗು ತಳವಾರ, ಪರಶುರಾಮ ಕೋಟಾರಗಸ್ತಿ, ವಿಜಯಕುಮಾರ ಯಾಳವಾರ, ಈರಣ್ಣ ಕುರಿ, ರಾಜಕುಮಾರ ನಾಯ್ಕೋಡಿ, ಹಣಮಂತ ಹಿಪ್ಪರಗಿ, ಮಲ್ಲು ನಾಯ್ಕೋಡಿ, ಕುಮಾರ ನಾಯ್ಕೋಡಿ, ಕಂಟೆಪ್ಪ ಚೋರಗಸ್ತಿ, ಅಮೋಗಿ ಜೈನಾಪುರ, ಭೂತಾಳಿ ನಾಯ್ಕೋಡಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಅಂಜಲಿ ಹತ್ಯೆ ಖಂಡಿಸಿ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ಪ್ರತಿಭಟನೆ
Related Posts
Add A Comment

