Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಾದಾಮಿಯಲ್ಲಿ ನಡೆದ ಶಿಕ್ಷಕ ಕೃಷ್ಣಪ್ಪ ಪೂಜಾರಿ ಅವರ ಸೇವಾ ನಿವೃತ್ತಿ ಪ್ರಯುಕ್ತ ನಡೆದ ಅಭಿನಂದನಾ ಸಮಾರಂಭ ಉದಯರಶ್ಮಿ ದಿನಪತ್ರಿಕೆ ಬದಾಮಿ: ಜೀವಪರ ನಿಲುವಿನ ಸಹೃದಯಿ ಶಿಕ್ಷಕ ಕೃಷ್ಣಾ ಪೂಜಾರ ಅವರದು ಬಹುಮುಖ ವ್ಯಕ್ತಿತ್ವ. ತಮ್ಮ ಅನೇಕ ಶಿಷ್ಯರ ಪ್ರತಿಭೆಯನ್ನು ಗುರುತಿಸಿ ಅವರ ಭವಿಷ್ಯ ರೂಪಿಸಲು ಸರ್ವ ಪ್ರಯತ್ನಗಳನ್ನು ಮಾಡಿದ್ದಾರೆ. ಸರ್ವರನ್ನು “ಇವನಾರವ ಎನ್ನದೆ, ಇವ ನಮ್ಮವ” ಎಂಬ ಬಸವಾದಿ ಶರಣರ ನಡೆ ಅವರದಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ’ಉದಯರಶ್ಮಿ’ ದಿನಪತ್ರಿಕೆಯ ಸಂಪಾದಕ ಇಂದುಶೇಖರ ಮಣೂರ ಹೇಳಿದರು.ಪಟ್ಟಣದ ಗಣೇಶ ದೇವಸ್ಥಾನದ ಸಭಾಭವನದಲ್ಲಿ ಶಿಕ್ಷಕ ಕೃಷ್ಣಪ್ಪ ಪೂಜಾರಿ ಅವರ ಸೇವಾ ನಿವೃತ್ತಿ ಪ್ರಯುಕ್ತ ನಿಮಿತ್ತ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳು ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ತಾಲೂಕಿನ ನೀರಲಕೇರಿ ಜಿಎಂಪಿಎಸ್ ಮುಖ್ಯ ಶಿಕ್ಷಕ ಎನ್.ಕೆ.ಚವ್ಹಾಣ, ಶಿಕ್ಷಕ ಬಿ.ಎಚ್.ನದಾಫ ಮಾತನಾಡಿ, ಶಿಕ್ಷಕ ಕೃಷ್ಣಪ್ಪ ಅವರು ಶಾಲೆಯಲ್ಲಿ ನಮ್ಮನ್ನೆಲ್ಲ ವೃತ್ತಿ ಬಾಂಧವರಂತೆ ಕಾಣದೆ ಮನೆ ಮಕ್ಕಳಂತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೂನ್ 21 ರಂದು ಜಗತ್ತಿನಾದ್ಯಂತ ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ, ನಗರದ ಪ್ರಸಿದ್ಧ ಫಿಟ್‌ನೆಸ್ ಸಂಸ್ಥೆಯಾದ ‘ಅಲೆಕ್ಸ್ ಫಿಟ್‌ನೆಸ್’ (Alex Fitness) ವತಿಯಿಂದ ವಿಶೇಷ ಯೋಗ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಅಲೆಕ್ಸ್ ಫಿಟ್‌ನೆಸ್‌ನ ಯೋಗ ತರಬೇತುದಾರ ಮಾಸ್ಟರ್ ಸಂಪತ್‌ಸಿಂಗ್ ರಜಪೂತ್ ಅವರು ನೆರೆದಿದ್ದ ಸಾರ್ವಜನಿಕರಿಗೆ ಮತ್ತು ಫಿಟ್‌ನೆಸ್ ಪ್ರೇಮಿಗಳಿಗೆ ವಿವಿಧ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನದ ಪ್ರಾಮುಖ್ಯತೆಯನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಮಾಸ್ಟರ್ ಸಂಪತ್‌ಸಿಂಗ್ ರಜಪೂತ್ ಅವರು, “ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಡುವ ಒಂದು ಜೀವನ ಪದ್ಧತಿ. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯ ಹಾಗೂ ಮಾನಸಿಕ ಶಾಂತಿ ಪಡೆಯಬಹುದು,” ಎಂದು ಕರೆ ನೀಡಿದರು.ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನೂರಾರು ಯೋಗಾಸಕ್ತರು ಪಾಲ್ಗೊಂಡು ಉತ್ಸಾಹದಿಂದ ಯೋಗಾಸನಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ APMC ಯೋಗಾ ಗ್ರೂಪ್ ನವರಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆರೋಜಿಸಲಾಗಿತ್ತು.ಈ ವೇಳೆ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾತನಾಡಿ, ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅವಿರತ ಶ್ರಮದಿಂದಾಗಿ ಇಂದು ಭಾರತದ ಈ ಪ್ರಾಚೀನ ಕಲೆ ಜಗತ್ತಿನಾದ್ಯಂತ ಪಸರಿಸಿದೆ. ಇಂದು ಇಡೀ ವಿಶ್ವವೇ ಭಾರತದ ಕಡೆ ಮುಖ ಮಾಡಿ ಯೋಗವನ್ನು ಅಪ್ಪಿಕೊಳ್ಳುತ್ತಿದೆ ಎಂದರೆ ಅದಕ್ಕೆ ನಮ್ಮ ಸಂಸ್ಕೃತಿಯಲ್ಲಿರುವ ಶಕ್ತಿಯೇ ಕಾರಣ. ನಮ್ಮ ಯುವ ಪೀಳಿಗೆ ಮೊಬೈಲ್ ಮತ್ತು ಕೆಟ್ಟ ಹವ್ಯಾಸಗಳಿಗೆ ಬಲಿಯಾಗದೆ, ಯೋಗ ಮತ್ತು ಸದೃಢ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಸಿಂದಗಿ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲೂ ಇಂತಹ ಯೋಗ ಶಿಬಿರಗಳು ನಡೆಯಬೇಕು ಎನ್ನುವುದು ನನ್ನ ಆಸೆ ಎಂದರು.ರುದ್ರಯ್ಯಸ್ವಾಮಿ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಕಕ್ಕಸಗೇರಿ ವಂದಿಸಿದರು.ಗಣ್ಯರಾದ ಅಶೋಕ ವಾರದ, ಡಾ.ಗಿರೀಶ ಕುಲಕರ್ಣಿ, ಡಾ.ರವಿ ಗೋಲಾ, ಡಾ.ಚಿದಾನಂಜ ಅಳಗುಂಡಗಿ, ಶರಣಯ್ಯ ಹಿರೇಮಠ, ಮಹಾಂತೇಶ ಪಟ್ಟಣಶೆಟ್ಟಿ, ಬೋಜಪ್ಪ ಸಂಗಮ, ಸಿದ್ಧರಾಮ ಪಾಟೀಲ ಸೇರಿದಂತೆ ಅನೇಕರಿದ್ದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಷ್ಟ್ರೀಯ ಹೆದ್ದಾರಿ 52ರ ಗಾಣದೇವಿ ಸರ್ಕಲ್‌ನಲ್ಲಿ ಪಿಎಸ್‌ಐ ಅಶೋಕ ನಾಯಕ ವಾಹನ ತಪಾಸಣೆ ವೇಳೆ ಅಪ್ರಾಪ್ತ ಬಾಲಕನೊಬ್ಬ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದು ಪತ್ತೆಯಾಯಿತು. ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ನಿವಾಸಿ ಬಾಲಕನ ತಂದೆ ಅಲ್ಲಾಭಕ್ಷ ಗುಡುಸಾಬ್ ಮುಳವಾಡ ವಿರುದ್ಧ ಮೋಟಾರು ವಾಹನ ಕಾಯ್ದೆ ಕಲಂ 199(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಸವನ ಬಾಗೇವಾಡಿ ನ್ಯಾಯಾಲಯವು ₹25,000 ದಂಡ ವಿಧಿಸಿ, ವಾಹನದ ನೋಂದಣಿಯನ್ನು 6 ತಿಂಗಳು ಅಮಾನತು ಮಾಡಲು ಆದೇಶಿಸಿದೆ.ಈ ಕುರಿತು ಮಾತನಾಡಿದ ಕೊಲ್ಹಾರ ಪೊಲೀಸ್ ಠಾಣೆಯ ಪಿಎಸ್‌ಐ ಅಶೋಕ ನಾಯಕ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವುದು ಕಾನೂನು ಬಾಹಿರವಾಗಿದ್ದು, ಪೋಷಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವುದರಿಂದ ಅಪಘಾತಗಳ ಸಂಭವ ಹೆಚ್ಚಾಗುತ್ತಿದ್ದು, ಅವರ ಜೀವಕ್ಕೆ ಹಾಗೂ ಇತರರ ಸುರಕ್ಷತೆಗೆ ಅಪಾಯ ಉಂಟಾಗುತ್ತದೆ ಎಂದು ಹೇಳಿದರು.ನಿಯಮ ಉಲ್ಲಂಘನೆ ಮಾಡಿದ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಇಲ್ಲಿನ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಹಾಗೂ ಪತ್ರಕರ್ತ ಮಲ್ಲಿಕಾರ್ಜುನ ಕುಬಕಡ್ಡಿ ಅವರು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ, ಅಂತರರಾಷ್ಟ್ರೀಯ ಹಿಂದೂ ಮಹಾಸಭಾ ಕರ್ನಾಟಕ ವತಿಯಿಂದ ನೀಡಲಾಗುವ 2026ನೇ ಸಾಲಿನ ‘ಭಾರತ ಭೂಷಣ’ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಸಾಗರ ಕಲಾದಗಿ ತಿಳಿಸಿದ್ದಾರೆ.ಜೂನ್ 24ರಂದು ಬಾಗಲಕೋಟೆಯ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಹಿಂದೂ ಮಹಾಸಭಾ ಕರ್ನಾಟಕ ಹಾಗೂ ವಿಜಯಪುರ ಜಿಲ್ಲಾ ವಿದ್ಯಾರ್ಥಿ ಪರಿಷತ್ ಸಂಯುಕ್ತವಾಗಿ ಆಯೋಜಿಸಿರುವ ‘ಸಂಸ್ಕೃತ ಸಿರಿ ಉತ್ಸವ’ ಮತ್ತು ರಾಷ್ಟ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ.
ವಿಜಯಪುರದಲ್ಲಿ ಬಂಜಾರ ಯುವಕ ಯುವತಿಯರಿಗೆ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಆದರ್ಶ ನಗರದ ಶ್ರೀ ಸಂತ ಸೇವಾಲಾಲ ದೇವಸ್ಥಾನ, ರಾಮರಾಮ ಮಹಾರಾಜರ ಭವನದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು ವತಿಯಿಂದ ಜೂ.18 ರಿಂದ 20 ವರೆಗೆ ಬಂಜಾರ ಯುವಕ ಯುವತಿಯರಿಗೆ ಹವೇಲಿ, ವಳಂಗ, ವಿತಿ, ಕಡಿ ಕಸಳಾತ, ಸಿಕವಾಡಿ”ಗಳ ಕುರಿತು ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.ಸಮಾರಂಭದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ನಾರಾಯಣ ಬಿ ಪವಾರ ಇವರು ಸಮಾರೋಪ ನುಡಿಗಳನ್ನಾಡುತ್ತಾ, ಬಂಜಾರ ಭಾಷೆಯನ್ನು ಮಾತನಾಡುವುದರ ಜೊತೆಗೆ ವ್ಯವಹಾರಿಕ ಭಾಷೆಯಾಗಿ ಕನ್ನಡ, ಇಂಗ್ಲಿಷ್ ಅವಶ್ಯಕವಾಗಿ ಬೇಕಾಗುತ್ತದೆ. ಬಂಜಾರರು ಇಡೀ ವಿಶ್ವದಲ್ಲಿ ಹರಡಿಕೊಂಡಿದ್ದಾರೆ. ಬಂಜಾರರು ಬಳಸುವ ಭಾಷೆಯಲ್ಲಿ ಅನೇಕ ಪದಗಳು ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತದಿಂದ ಕೂಡಿವೆ. ಬಂಜಾರಾ ಮಹಿಳೆಯರು ತಮ್ಮ ಭಾವನೆಗಳನ್ನು ಢಾವಲೋ (ಕೊಳರಗೆ ಅಪ್ಪಿಕೊಂಡು ಅಳುವುದು) ಮೂಲಕ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.ಸುವರ್ಣ ಕರ್ನಾಟಕ ಪ್ರಶಸ್ತಿಯನ್ನು…
ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಗೋಲಗುಂಬಜ್ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಮೈಸೂರು- ಫಂಡರಾಪುರ ನಡುವೆ ಸಂಚರಿಸುವ ಗೋಲಗುಂಬಜ್ ಎಕ್ಸಪ್ರೆಸ್ ರೈಲನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಗಳ ಮೂಲಕ ಓಡಿಸಲು ರೈಲ್ವೆ ಮಂಡಳಿ ಶುಕ್ರವಾರ ಒಪ್ಪಿಗೆ ನೀಡಿದ್ದು, ಇದರಿಂದ ವಿಜಯಪುರ, ಬಾಗಲಕೋಟೆ ಭಾಗದ ಜನರ ಬಹು ದಿನಗಳ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.ವಿಜಯಪುರ ಕಡೆಗೆ ಚಲಿಸುವ ರೈಲುಗಳನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕವೇ ಓಡಿಸಬೇಕೆಂದು ಹಲವು ಬಾರಿ ಪತ್ರ ಬರೆದು ಕೋರಿಕೆ ಸಲ್ಲಿಸಲಾಗಿತ್ತು. ಅದಕ್ಕೆ ರೈಲ್ವೆ ಮಂಡಳಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದು ಹೆಚ್ವಿನ ಅನುಕೂಲ ಆಗಲಿದೆ. ಇದಕ್ಕಾಗಿ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ವಿ.ಸೋಮಣ್ಣ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇದರಿಂದ ಎರಡೂ ನಗರಗಳ ನಡುವಿನ ಪ್ರಯಾಣ ಅವಧಿ ಸುಮಾರು 55 ನಿಮಿಷ ಕಡಿಮೆ ಆಗಲಿದೆ ಎಂದು…
ವಿಜಯಪುರದಲ್ಲಿ ನೈಡೆಕ್ ಕಂಪನಿ ಕ್ಯಾಂಪಸ್ ಸಂದರ್ಶನ | ಸಚಿವ ಎಂ ಬಿ ಪಾಟೀಲ ಸಂತಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಬ್ಬಳ್ಳಿಯಲ್ಲಿ ನೆಲೆಯೂರಿರುವ ಜಪಾನ್ ಮೂಲದ ಪ್ರತಿಷ್ಠಿತ ನೈಡೆಕ್ ಕಂಪನಿಯು ನಡೆಸಿದ ಎರಡು ದಿನಗಳ ಕ್ಯಾಂಪಸ್ ಸಂದರ್ಶನದಲ್ಲಿ ತಮ್ಮ ನೇತೃತ್ವದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನ ಒಟ್ಟು 94 ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕೈಗಾರಿಕಾ ಬೆಳವಣಿಗೆಯ ಮೂಲಕ ಉತ್ತರ ಕರ್ನಾಟಕದ ಪ್ರಗತಿಗೆ ಶ್ರಮಿಸಲಾಗುತ್ತಿದೆ. ಇದರ ಲಾಭವು ವಿಜಯಪುರ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಕಲಬುರಗಿ ಹೀಗೆ ಈ ಭಾಗದ ಹಲವು ಜಿಲ್ಲೆಗಳ ಯುವಜನರಿಗೆ ಸಿಕ್ಕುತ್ತಿದೆ. ನೈಡೆಕ್ ಕಂಪನಿ ನಡೆಸಿರುವ ಕ್ಯಾಂಪಸ್ ಸಂದರ್ಶನ ಇದಕ್ಕೊಂದು ನಿದರ್ಶನವಾಗಿದೆ ಎಂದಿದ್ದಾರೆ.ತಾವು ಕೈಗಾರಿಕಾ ಸಚಿವರಾದ ಬಳಿಕ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಇಲಾಖೆಯ ಮೂಲಕವೂ ಹಲವು ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೂನ್ ೨೧ರಂದು ನೀಟ್ ಪರೀಕ್ಷೆಯು ವಿಜಯಪುರ ನಗರದ ಒಟ್ಟು ೧೯ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀ.ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ಕೇಂದ್ರಗಳ ೨೦೦ ಮೀ ವ್ಯಾಪ್ತಿಯಯಲ್ಲಿನ ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್ ಗಳು, ಇಂಟರನೆಟ್, ಸೈಬರ್ ಕೆಫೆಗಳು ಮತ್ತು ಕೋಚಿಂಗ್ ಕೇಂದ್ರಗಳು ಬೆಳಿಗ್ಗೆ ೯:೩೦ ಗಂಟೆಯಿಂದ ಪರೀಕ್ಷೆ ಮುಕ್ತಾಯವಾಗುವವರೆಗೆ ತೆರೆಯದಂತೆ ಆದೇಶಿಸಲಾಗಿದೆ.ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರರು ಮೊಬೈಲ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
