Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲ್ಲೂಕಿನಾದ್ಯಂತ ಜೂನ್ ೨೮ರಿಂದ ಜುಲೈ ೧ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗು ಪೋಲಿಯೊ ಲಸಿಕೆಯಿಂದ ವಂಚಿತವಾಗದಂತೆ ಪೋಷಕರು ಕಡ್ಡಾಯವಾಗಿ ಎರಡು ಹನಿ ಲಸಿಕೆ ಹಾಕಿಸಬೇಕು ಎಂದು ತಹಶೀಲ್ದಾರ್ ಕೀರ್ತಿ ಚಾಲಕ ಮನವಿ ಮಾಡಿದರು.ಸೋಮವಾರ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪಲ್ಸ್ ಪೋಲಿಯೊ ಲಸಿಕಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್ ೨೮ರಂದು ಪ್ರತೀ ಬೂತ್‌ಗಳಲ್ಲಿ ಲಸಿಕೆ ನೀಡಲಾಗುವುದು. ನಂತರ ಮೂರು ದಿನಗಳ ಕಾಲ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಮಕ್ಕಳಿಗೆ ಪೋಲಿಯೊ ಹನಿ ಹಾಕಲಿದ್ದಾರೆ. ಪೋಲಿಯೊ ಮಾರಕ ಕಾಯಿಲೆಯಾಗಿದ್ದು, ಕೇವಲ ಎರಡು ಹನಿ ಲಸಿಕೆಯಿಂದ ಮಕ್ಕಳನ್ನು ಜೀವಮಾನದ ಅಂಗವೈಕಲ್ಯದಿಂದ ರಕ್ಷಿಸಬಹುದು. ಹೀಗಾಗಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.ಲಸಿಕಾ ಅಭಿಯಾನಕ್ಕೆ ಮುನ್ನ ಎಲ್ಲ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಮಾಡಬಾಳ ಗ್ರಾಮದ ಯುವಕ ಮಹೇಶ ಸಿದ್ದನಗೌಡ ಕೋಟಿಖಾನಿ ಹಾಗೂ ಅಜಯ ಜಟ್ಟೇಪ್ಪ ಹುಂಡೆಕಾರ ಇವರು ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಪ್ರಯಕ್ತ ಗ್ರಾಮಸ್ಥರು ಶಾಲಾ ಆವರಣದಲ್ಲಿರುವ ಹುತಾತ್ಮ ವೀರಯೋಧ ಸೋಮರಾಯ ಬಗಲಿಯವರ ಪುತ್ಥಳಿಯ ಮುಂದೆ ಸನ್ಮಾನಿಸಿ ಗೌರವಿಸಿ ಬಿಳ್ಕೋಡಲಾಯಿತು.ಈ ಸಂದರ್ಭದಲ್ಲಿ ಮಾಜಿ ಸೈನಿಕ ಶಬ್ಬೀರಪಟೇಲ ಬಿರಾದಾರ ಮಾತನಾಡಿ, ಗಡಿಯಲ್ಲಿ ನಮ್ಮ ಯೋಧರು ಹಗಲು ರಾತ್ರಿಯನ್ನದೇ ರಕ್ಷಣೆ ಮಾಡುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ. ದೇಶ ಸೇವೆ ಮಾಡೋದು ಎಂದರೆ ಅದೊಂದು ಪವಿತ್ರವಾದ ಕಾರ್ಯ ಕಾರಣ ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೇ ಸದೃಡ ಶರೀರದೋಂದಿಗೆ ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.ಈ ವೇಳೆ ಮಾಜಿ ಸೈನಿಕ ಮಾಬುಪಟೇಲ ಬಿರಾದಾರ, ಶಿಕ್ಷಕ ಸಂತೋಷ ನಂದರಗಿ ಮಾತನಾಡಿ, ದೇಶ ಸೇವೆಗೆ ಗಂಡು ಹೆಣ್ಣು ಬೇದವಿಲ್ಲ ವಿದ್ಯಾರ್ಥಿದೆಸೆಯಿಂದಲೇ ದೇಶ ಸೇವೆ ಮಾಡುವ ಗುರಿ ಇಟ್ಟುಕೊಂಡು ಪ್ರಯತ್ನಿಸಿಬೇಕು. ಒಬ್ಬ ರೈತ ಹಾಗೂ ಒಬ್ಬ ಸೈನಿಕ ಈ ದೇಶಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆಲಮೇಲದಲ್ಲಿ ಜೂ.೨೫ರಂದು ಸಾಯಂಕಾಲ ೪ಗಂಟೆಗೆ ನಡೆಯುವ ಆಲಮೇಲ ತಾಲೂಕಿನ ೬ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಚಿವ ಎಂ.ಬಿ.ಪಾಟೀಲ ಹಾಗೂ ಮಾಜಿ ಸಚಿವ, ಹಾಲಿ ಶಾಸಕ ಶಿವಾನಂದ ಪಾಟೀಲ ಅವರು ರೂ.೨೧೭ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆಗಮಿಸಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಶಾಸಕರ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಲಮೇಲ ತಾಲೂಕಿಗೆ ೧೪೫ಕೋಟಿ ೭೩ಲಕ್ಷ ರೂ. ವೆಚ್ಚದ ತೋಟಗಾರಿಕೆ ಕಾಲೇಜು ಮಂಜೂರಾಗಿದ್ದು, ಅದರ ಮೊದಲ ಹಂತವಾಗಿ ರೂ.೩೯ಕೋಟಿ ೯೦ಲಕ್ಷ, ಕಡಣಿ ಸೇತುವೆ ನಿರ್ಮಾಣಕ್ಕೆ ರೂ.೪೪ಕೋಟಿ ೫೦ಲಕ್ಷ, ಆಲಮೇಲ ಪಟ್ಟಣದಲ್ಲಿ ರೂ.೨೦ಕೋಟಿ ವೆಚ್ಚದ ೧.೮ಕಿಮೀ ರಸ್ತೆ ಕಾಮಗಾರಿ ಪೂರ್ಣಗೊಂಡ ರಸ್ತೆಯ ಲೋಕಾರ್ಪಣೆ, ಆಲಮೇಲ ಪಟ್ಟಣದ ಬಜಾರ್ ರಸ್ತೆಯ ಅಭಿವೃದ್ಧಿಗೆ ರೂ.೧ಕೋಟಿ ೫೩ಲಕ್ಷ, ಕಡಣಿ ಕ್ರಾಸ್‌ನಿಂದ ವಿರಕ್ತಮಠದವರೆಗಿನ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ರೂ.೧ಕೋಟಿ ೮೬ಲಕ್ಷ ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಯೋಗವು ವ್ಯಕ್ತಿಯ ದೇಹ ಮತ್ತು ಮನಸ್ಸಿನ ಶುದ್ಧೀಕರಣದ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗಿದೆ. ಹಾಗಾಗಿ ಯುವಜನತೆ ಸೇರಿದಂತೆ ಪ್ರತಿಯೊಬ್ಬರೂ ಯೋಗವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ, ಸದೃಢ ಹಾಗೂ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಹಾಗೂ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಕರೆ ನೀಡಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಜೀವನ ಪದ್ಧತಿಯಾಗಿದೆ. ಪ್ರತಿನಿತ್ಯ ಕೆಲವೇ ನಿಮಿಷಗಳ ಯೋಗಾಭ್ಯಾಸವು ಒತ್ತಡವನ್ನು ಕಡಿಮೆ ಮಾಡಿ, ಉತ್ತಮ ಚಿಂತನೆಗಳನ್ನು ಬೆಳೆಸುತ್ತದೆ. ಯೋಗದಿಂದ ವ್ಯಕ್ತಿಯಲ್ಲಿ ಸಹನೆ, ಸಂಯಮ, ಶಿಸ್ತು ಹಾಗೂ ಸಮಾಜದ ಬಗ್ಗೆ ಕಾಳಜಿ ಮೂಡುತ್ತದೆ. ಇದೇ ಗುಣಗಳು…

Read More

ವಿಜಯಪುರದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಸಾರ್ವಜನಿಕರಿಗೆ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಹಿನ್ನೆಲ್ಲೆಯಲ್ಲಿ ಜಿಲ್ಲೆಯಾದ್ಯಂತ ಒಂದು ವಾರಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಜಾಥಾ, ವಿಚಾರ ಸಂಕಿರಣ ಹಾಗೂ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ್ ಕೆ ಹೇಳಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಮಾದಕ ದ್ರವ್ಯಗಳ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರುದ್ದ ಅಂತರರಾಷ್ಟ್ರೀಯ ದಿನ ಆಚರಣೆಯ ದಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಮಾದಕ ದ್ರವ್ಯಗಳ ವ್ಯಸನವು ಇಂದು ಸಮಾಜ ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿದ್ದು, ಯುವಜನತೆ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವಂತಹ ದುಷ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು. ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಇದರಿಂದ ಪ್ರತಿಕೂಲ ಪರಿಣಾಮ…

Read More

ಸಾವಿಲ್ಲದ ಶರಣರು ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಕರ್ನಾಟಕದ ಶರಣ ಪರಂಪರೆಯ ಅತ್ಯಂತ ಶ್ರೇಷ್ಠ ಹಾಗೂ ಅವಿಸ್ಮರಣೀಯ ಮೌನಯೋಗಿಗಳಾಗಿದ್ದಾರೆ.ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಬಳಗಾನೂರು ಗ್ರಾಮದ ಚಿಕ್ಕೇನಕೊಪ್ಪ ಮಠದಲ್ಲಿ ನೆಲೆಸಿ, ತಮ್ಮ ತಪಃಶಕ್ತಿಯಿಂದ ಜನಸಾಮಾನ್ಯರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾಪುರುಷರಾಗಿದ್ದಾರೆ.ವ್ಯಕ್ತಿತ್ವ ಮತ್ತು ಜೀವನಶೈಲಿಅವಧೂತ ಜೀವನ: ಚನ್ನವೀರ ಶರಣರು ತನುವಿನಲ್ಲಿ ನಿರ್ಮೋಹತ್ವ, ಮನದಲ್ಲಿ ನಿರಹಂಕಾರ ಮತ್ತು ಜ್ಞಾನದಲ್ಲಿ ಪರಮಾನಂದವನ್ನು ರೂಢಿಸಿಕೊಂಡು ಸರಳವಾಗಿ ಬದುಕಿದವರು.ಮೌನಯೋಗಿಅವರು ಒಬ್ಬ ಅವಧೂತ ಫಕೀರನಂತೆ ಜೀವಿಸುತ್ತಾ, ಸಮಾಜಕ್ಕೆ ಶಾಂತಿ ಮತ್ತು ಸೌಹಾರ್ದತೆಯ ದಾರಿಯನ್ನು ತೋರಿಸಿದ ಮಹಾನ್ ತಪಸ್ವಿ.ಸಾಹಿತ್ಯ ಮತ್ತು ಇತಿಹಾಸಶರಣರ ಪುರಾಣಗದಗದ ವೀರೇಶ್ವರ ಪುಣ್ಯಾಶ್ರಮದ ಖ್ಯಾತ ಸಂಗೀತಜ್ಞರಾದ ಪಂ. ಪುಟ್ಟರಾಜ ಗವಾಯಿಗಳು ಇವರ ಜೀವನ ಚರಿತ್ರೆಯನ್ನು ಆಧರಿಸಿ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಎಂಬ ಕೃತಿಯನ್ನು ರಚಿಸಿದ್ದಾರೆ.ಜಾತ್ರೆ ಮತ್ತು ಪುಣ್ಯಸ್ಮರಣೋತ್ಸವ ವಾರ್ಷಿಕ ಉತ್ಸವಪ್ರತಿವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಇವರ ಪುಣ್ಯಸ್ಮರಣೋತ್ಸವ ಮತ್ತು ಮಹಾ ರಥೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತದೆ.ಶರಣರ ಬುತ್ತಿಈ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಶಿಖರಪುರ ಪಟ್ಟಣದಲ್ಲಿ ಜೋನಾರ್ಸ್ ಎಂಬ ಹೆಸರಿನ ಹೆಸರಾಂತ ಪಾದರಕ್ಷೆ ತಯಾರಿಸುವ ಕಂಪನಿಯು ಬಹಳ ವರ್ಷಗಳ ಕಾಲದಿಂದ ಮಹಿಳೆಯರು ಪುರುಷರು ಮತ್ತು ಮಕ್ಕಳ ಪಾದರಕ್ಷೆಗಳನ್ನು ತಯಾರಿಸುತ್ತಿತ್ತು. ತನ್ನ ಅತ್ಯಾಕರ್ಷಕ ವಿನ್ಯಾಸದ ಪಾದರಕ್ಷೆಗಳು ಮತ್ತು ಶೂಗಳ ಕಾರಣದಿಂದಾಗಿ ಅದು ಪ್ರಪಂಚದಾದ್ಯಂತ ತನ್ನದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿತ್ತು. ಹಾಗಾಗಿ ಜೋನಾರ್ಸ್ ಸಂಸ್ಥೆಯ ಮಾಲೀಕನಾದ ದೇವೇಂದ್ರನಿಗೆ ತನ್ನ ಕಂಪನಿಯು ತಯಾರಿಸಿದ ಪಾದರಕ್ಷೆಗಳನ್ನು ಮಾರಾಟ ಮಾಡಲು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ತನ್ನ ಕಂಪನಿಯು ವಾರ್ಷಿಕವಾಗಿ ತಯಾರಿಸುವ ಒಟ್ಟು ಪಾದರಕ್ಷೆಗಳ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಪಾದರಕ್ಷೆಗಳ ಬೇಡಿಕೆಯು ಜಾಗತಿಕ ಮಾರುಕಟ್ಟೆಯಿಂದ ನಿರಂತರವಾಗಿ ಬರುತ್ತಾ ಇದ್ದುದರಿಂದ ವ್ಯವಹಾರವು ಅತ್ಯುನ್ನತವಾಗಿ ನಡೆಯುತ್ತಿತ್ತು.ವರ್ಷಗಳು ಉರುಳಿದಂತೆ ಜೋನಾರ್ಸ್ ಕಂಪನಿಯ ಪಾದರಕ್ಷೆಗಳ ಗುಣಮಟ್ಟಕ್ಕಿಂತ ಉನ್ನತ ದರ್ಜೆಯ ಹಾಗೂ ಕಡಿಮೆ ದರದ ಪಾದರಕ್ಷೆಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭಿಸುತ್ತಿದ್ದುದರಿಂದ ಜೋನಾರ್ಸ್ ಸಂಸ್ಥೆಯ ಪಾದರಕ್ಷೆಗಳಿಗೆ ಬೇಡಿಕೆಯು ಗಣನೀಯವಾಗಿ ಕುಸಿದು ವ್ಯವಹಾರವು ನಷ್ಟದ ಸ್ಥಿತಿಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಗರದ ಭಗೀರಥ ಡೆವಲಪರ್‌ಗಳ ಮಾಲೀಕ ಅನೀಲ ಡಿ. ಅವಳೆ ಅವರ ಆಶ್ರಯದಲ್ಲಿ ಯೋಗ ತರಬೇತಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ವೇಳೆ ಆಚಾರ್ಯ ರಾಮಕೃಷ್ಣ ಗುರೂಜಿ ಅವರು ಮಾತನಾಡಿ, ದೈನಂದಿನ ಯೋಗಾಭ್ಯಾಸವು ವ್ಯಕ್ತಿತ್ವ ವಿಕಾಸಕ್ಕೆ ಅತ್ಯಂತ ಸಹಕಾರಿಯಾಗಿದ್ದು, ಒತ್ತಡ ನಿವಾರಣೆ, ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ನೇರವಾಗಿ ನೆರವಾಗುತ್ತದೆ ಎಂದು ಹೇಳಿದರು.ನಿವೃತ್ತ ಇಂಜಿನಿಯರ್ ಆರ್.ಎಲ್. ಹಳ್ಳೂರ ಅವರು ಅತಿಥಿಯಾಗಿ ಭಾಗವಹಿಸಿದ್ದರು.ಆರ್.ಕೆ. ಮೋಕಾಶಿ ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ಬಿ.ಎಸ್. ಸಜ್ಜನ ಚಿಗರಿ, ವಕೀಲ ಜಿ.ಬಿ. ಕೋಳೂರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Read More

ಭೀಮಾತೀರದಲ್ಲಿ 6 ಜನರ ಹತ್ಯೆ ಪ್ರಕರಣ | ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು | ಚಡಚಣ ಸಿಪಿಐ ಪರಶುರಾಮ ಮನಗೂಳಿ &ಸಿಬ್ಬಂದಿ ಸಾಹಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭೀಮಾತೀರದಲ್ಲಿ ನಡೆದ ಆರು ಜನರ ಸಾಮೂಹಿಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹೇಶ್ ತಳವಾರನನ್ನು ಬಂಧಿಸುವ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಹೊರವಲಯದಲ್ಲಿ ಆರೋಪಿ ಮಹೇಶ್ ತಳವಾರನನ್ನು ಬಂಧಿಸಲು ಚಡಚಣ ಪೊಲೀಸರು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆ ಕಲ್ಲು ತೂರಿ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆ ಹಾಗೂ ಬಂಧನದ ಉದ್ದೇಶದಿಂದ ಚಡಚಣ ಸಿಪಿಐ ಪರಶುರಾಮ ಮನಗೂಳಿ ಅವರು ಮಹೇಶ್‌ನ ಬಲಗಾಲಿಗೆ ಗುಂಡು ಹಾರಿಸಿದ್ದು, ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶೇಖರ್ ಪವಾರ್ ಹಾಗೂ ವಿಜಯಕುಮಾರ್ ಬನಸೋಡೆ ಗಾಯಗೊಂಡಿದ್ದು, ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ಆರೋಪಿ ಮಹೇಶ್ ತಳವಾರನಿಗೂ ಜಿಲ್ಲಾ…

Read More