Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಹಾತ್ಮರು ಮುತ್ತು ಇದ್ದಂತೆ ಸದಾ ಅಮರ :ಗುರುಸಂಗನಬಸವ ಶ್ರೀ

ಉ.ಕ ಸಂಸ್ಕ್ರತಿ ಬಿಂಬಿಸುವ ವಿಶೇಷ ಸದ್ಭಾವನ ಬುತ್ತಿ ಊಟ

ಸಂಭ್ರಮದ ರಮಜಾನ್ ಈದ್ ಆಚರಣೆ :ರೋಜಾ ಉಪವಾಸಕ್ಕೆ ತೆರೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೋರೆಹಲ್ಲು ಮೂಡುವಾಗ ಮಣ್ಣಿರುವುದಿಲ್ಲ, ಮಣ್ಣಿರುವಾಗ ಕೋರೆಹಲ್ಲು ಮೂಡುವುದಿಲ್ಲ
(ರಾಜ್ಯ ) ಜಿಲ್ಲೆ

ಕೋರೆಹಲ್ಲು ಮೂಡುವಾಗ ಮಣ್ಣಿರುವುದಿಲ್ಲ, ಮಣ್ಣಿರುವಾಗ ಕೋರೆಹಲ್ಲು ಮೂಡುವುದಿಲ್ಲ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಎಲ್ಲಾ ವ್ಯವಸ್ಥೆಗಳು ಮತ್ತು ತಯಾರಿಗಳು ಅತ್ಯಂತ ಅಚ್ಚುಕಟ್ಟಾಗಿ ಇರುವಾಗ ಸಾಧನೆಯನ್ನು ಮಾಡಲು ಅವಕಶವೇ ಸಿಗುವುದಿಲ್ಲ, ಅವಕಾಶಗಳು ವಿಫುಲವಾಗಿ ದೊರೆತಾಗ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಅಥವಾ ಯಾವುದೇ ರೀತಿಯ ಪೂರ್ವ ತಯಾರಿಯಿಲ್ಲದೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದಕ್ಕೆ ಹಳ್ಳಿಯಲ್ಲಿ ಚಂದದ ಗಾದೆಯೊಂದು ಹೆಚ್ಚು ಪ್ರಚಲಿತದಲ್ಲಿದೆ. ಅದು ಈ ರೀತಿಯಿದೆ, ‘ಕೋರೆಹಲ್ಲು ಮೂಡುವಾಗ ಮಣ್ಣಿರುವುದಿಲ್ಲ, ಮಣ್ಣಿರುವಾಗ ಕೋರೆಹಲ್ಲು ಮೂಡುವುದಿಲ್ಲ’ ಎಂದು.


ಈ ಗಾದೆಯು ಕಾಡುಹಂದಿಯು ತನ್ನ ದುರಾದೃಷ್ಟವನ್ನು ಶಪಿಸುವ ರೀತಿಯನ್ನು ಉಲ್ಲೇಖಿಸುತ್ತದೆ. ಕಾಡು ಹಂದಿಗಳಿಗೆ ಬಿರು ಬೇಸಗೆಯ ಸಮಯದಲ್ಲಿ ಹಾಗೂ ಭೂಮಿಯು ಒಣಗಿ ಭಣಗುಡುತ್ತಿರುವ ಸಂದರ್ಭದಲ್ಲಿ ಗಟ್ಟಿಯಾದ ಕೋರೆಹಲ್ಲು ಮೂಡುತ್ತದೆ. ಈ ಅವಧಿಯಲ್ಲಿ ಅವುಗಳಿಗೆ ಕೋರೆಹಲ್ಲಿದ್ದರೂ ಗಟ್ಟಿಯಾಗಿರುವ ಹಾಗೂ ಒಣಗಿದ ಮಣ್ಣನ್ನು ಅಗೆಯಲು ಸಾಧ್ಯವಾಗುವುದಿಲ್ಲ. ಆದರೆ ಮಳೆಗಾಲದಲ್ಲಿ ಮಳೆ ಬಿದ್ದು ಮಣ್ಣು ಹದವಾಗಿರುವಾಗ ಅದೇ ಕಾಡು ಹಂದಿಗಳ ಕೋರೆಹಲ್ಲುಗಳು ಉದುರಿ ಬೀಳುವುದರಿಂದ (ಕಾಡು ಹಂದಿಗಳಿಗೆ ಸಾಮಾನ್ಯವಾಗಿ ಬೇಸಗೆಯ ವೇಳೆಗೆ ಕೋರೆಹಲ್ಲು ಮೂಡಿದರೆ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಅವುಗಳು ಉದುರಿ ಬೀಳುತ್ತದೆ) ಅವುಗಳಿಗೆ ಮಣ್ಣು ಹದವಾಗಿ ಇದ್ದರೂ, ಅಗೆಯುವುದಕ್ಕೆ ಅಗತ್ಯವಾಗಿ ಬೇಕಿರುವ ಕೋರೆಹಲ್ಲುಗಳೇ ಇರುವುದಿಲ್ಲ.
ಈ ಗಾದೆಯ ಮಾತು ಅವಕಾಶಗಳು ಮತ್ತು ಅದಕ್ಕೆ ಅಗತ್ಯವಾಗಿ ಬೇಕಾಗಿರುವ ಪೂರ್ವ ತಯಾರಿಗಳ ವ್ಯತ್ಯಾಸಗಳನ್ನು ವಿಸ್ತೃತವಾಗಿ ತಿಳಿಸುತ್ತದೆ.
ಈ ಗಾದೆ ಮನುಷ್ಯನಿಗೆ ಸ್ಪಷ್ಟವಾಗಿ ಅನ್ವಯ ಆಗುತ್ತದೆ. ವ್ಯಕ್ತಿಯು ಸಾಧನೆಗೆ ಅಗತ್ಯವಿರುವ ಸೂಕ್ತವಾದ ಪೂರ್ವ ತಯಾರಿಗಳನ್ನು ಮಾಡಿಕೊಂಡು ಸಿದ್ಧನಾಗಿರುವಗ ಆತನಿಗೆ ಸಾಧಿಸುವ ಅವಕಾಶಗಳು ಸಿಗುವುದಿಲ್ಲ. ಅದೇ ಉಜ್ವಲವಾದ ಅವಕಾಶಗಳು ತನ್ನ ಮುಂದಿರುವಾಗ ಸಾಧನೆಯನ್ನು ಮಾಡಲು ಅಗತ್ಯವಿರುವ ಮೂಲ ತಯಾರಿಗಳನ್ನೇ ಮಾಡಿಕೊಂಡಿರುವುದಿಲ್ಲ. ಈ ಎರಡೂ ಸಂದರ್ಭಗಳಲೂ ಸಾಧನೆಯು ಮರೀಚಿಕೆಯೇ ಆದರೆ ಅದಕ್ಕೆ ಕಾರಣಗಳು ಬೇರೆ ಬೇರೆ ಅಷ್ಟೇ. ಮೊದಲನೆಯ ಸನ್ನಿವೇಶಕ್ಕೆ ತನ್ನ ಅದೃಷ್ಟ ಕಾರಣವಾದರೆ, ಎರಡನೆಯದಕ್ಕೆ ತಾವುಗಳೇ ಸ್ವತಃ ಕಾರಣರಾಗಿರುತ್ತೇವೆ. ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಲ್ಲಾ ಪೂರ್ವ ತಯಾರಿಗಳನ್ನು ಸಮರ್ಪಕವಾಗಿ ಮಾಡಿಕೊಂಡಿದ್ದಾಗ ಅವಕಾಶ ಲಭಿಸದಿದ್ದರೆ ಪರವಾಗಿಲ್ಲ, ಅವಕಾಶಕ್ಕಾಗಿ ಕಾಯೋಣ. ಆದರೆ ಸೂಕ್ತ ಅವಕಾಶಗಳು ಕಣ್ಮುಂದೆಯೇ ಇರುವಾಗ ಅವುಗಳನ್ನು ಬಳಸಿಕೊಳ್ಳಲು ಅಗತ್ಯವಿರುವ ತಯಾರಿಯನ್ನು ಮಾಡಿಕೊಳ್ಳುವಲ್ಲಿಯೇ ವಿಫಲರಾದೆವೆಂದರೆ ಅದು ನಮ್ಮ ವೈಫಲ್ಯವಲ್ಲದೆ ಮತ್ತೇನೂ ಅಲ್ಲ. ಏನಿದೆ ಏನಿಲ್ಲ ಎನ್ನುವುದು ಮುಖ್ಯವಲ್ಲ, ಎಲ್ಲಾ ಸಂದರ್ಭಗಳಲ್ಲೂ ಸೂಕ್ತ ತಯಾರಿಗಳೊಂದಿಗೆ ಅವಕಾಶಗಳ ಬಳಕೆಗೆ ಸಿದ್ಧರಿರುವುದು ಅಥವಾ ಲಭ್ಯವಿರುವ ಸೀಮಿತ ಸಂಪನ್ಮೂಲಗಳೊಂದಿಗೆ ಸತತವಾಗಿ ಪ್ರಯತ್ನಿಸುವ ಮನಃಸ್ಥಿತಿ ಇರಬೇಕಾಗಿರುವುದು ಬಹಳ ಮುಖ್ಯವಾಗುತ್ತದೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಹಾತ್ಮರು ಮುತ್ತು ಇದ್ದಂತೆ ಸದಾ ಅಮರ :ಗುರುಸಂಗನಬಸವ ಶ್ರೀ

ಉ.ಕ ಸಂಸ್ಕ್ರತಿ ಬಿಂಬಿಸುವ ವಿಶೇಷ ಸದ್ಭಾವನ ಬುತ್ತಿ ಊಟ

ಸಂಭ್ರಮದ ರಮಜಾನ್ ಈದ್ ಆಚರಣೆ :ರೋಜಾ ಉಪವಾಸಕ್ಕೆ ತೆರೆ

ತೇಜಸ್ವಿನಿ ಅನಂತಕುಮಾರ ಗೆ ಅಕ್ಕ ಪ್ರಶಸ್ತಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಹಾತ್ಮರು ಮುತ್ತು ಇದ್ದಂತೆ ಸದಾ ಅಮರ :ಗುರುಸಂಗನಬಸವ ಶ್ರೀ
    In (ರಾಜ್ಯ ) ಜಿಲ್ಲೆ
  • ಉ.ಕ ಸಂಸ್ಕ್ರತಿ ಬಿಂಬಿಸುವ ವಿಶೇಷ ಸದ್ಭಾವನ ಬುತ್ತಿ ಊಟ
    In (ರಾಜ್ಯ ) ಜಿಲ್ಲೆ
  • ಸಂಭ್ರಮದ ರಮಜಾನ್ ಈದ್ ಆಚರಣೆ :ರೋಜಾ ಉಪವಾಸಕ್ಕೆ ತೆರೆ
    In (ರಾಜ್ಯ ) ಜಿಲ್ಲೆ
  • ತೇಜಸ್ವಿನಿ ಅನಂತಕುಮಾರ ಗೆ ಅಕ್ಕ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಅಮೇರಿಕದ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಡಾ.ಇನಾಮದಾರ
    In (ರಾಜ್ಯ ) ಜಿಲ್ಲೆ
  • ನಾಯಿ ಹಳ್ಳದ ಬ್ರಿಜ್/ ಬಾಂದಾರ ಸ್ಥಳಾಂತರಕ್ಕೆ ಭೀಮರಾಜ ಸೇನೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಎನ್ ಎಸ್ ಎಸ್ ನೈತಿಕತೆ ಬೆಳೆಸುತ್ತದೆ :ನಿತ್ಯಾನಂದ ಶ್ರೀ
    In (ರಾಜ್ಯ ) ಜಿಲ್ಲೆ
  • ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಗಣಿ ಗೊಬ್ಬರ ಬಳಕೆಗೆ ಮುಂದಾದ ರೈತರು
    In (ರಾಜ್ಯ ) ಜಿಲ್ಲೆ
  • ದೇವಣಗಾಂವ ಸೇತುವೆ ದುರಸ್ತಿಗೆ ಚಾಲನೆ :ಸಂಚಾರ ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಪ್ರಜಾಪ್ರಭುತ್ವ ಯಶಸ್ವಿಗೆ ಸಂವಿಧಾನ ಕಾರಣ :ಶಾಸಕ ಯಶವಂತರಾಯಗೌಡ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.