Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಒಳಪಡುವ ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕ ಹಾಗೂ ಅರೆಕಾಲಿಕ ಉಪನ್ಯಾಸಕರ ಹುದ್ದೆಗಳನ್ನು ೧೭೯ ದಿನಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಸೂಕ್ತ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.ಕೃಷಿ ಮೈಕ್ರೋಬಯಾಲಜಿ (ಅಸಿಸ್ಟಂಟ್ ಪ್ರೊ. ಅಗ್ರಿಲ್ ಮೈಕ್ರೋಬಯಾಲಾಜಿ) ೦೧ ಹುದ್ದೆ (ಎಸ್ ಸಿ-೧), ಕೃಷಿ ಅರ್ಥಶಾಸ್ತ್ರ (ಅಸಿಸ್ಟಂಟ್ ಪ್ರೊ. ಅಗ್ರಿಲ್ ಎಕಾನಾಮಿಕ್ಸ್) ೦೧ ಹುದ್ದೆ (ಎಸ್ ಟಿ-೧) ಹಾಗೂ ತೋಟಗಾರಿಕೆ (ಅಸಿಸ್ಟಂಟ್ ಪ್ರೊ. ಹಾರ್ಟಿಕಲ್ಚರ್) ೦೧ ಹುದ್ದೆ (ಎಸ್ ಟಿ-೧) ಈ ಮೂರು ಹುದ್ದೆಗೆ ನೇರ ಸಂದರ್ಶನ ಸೆ.೧೧ರಂದು ಕ್ರಮವಾಗಿ ಬೆಳಿಗ್ಗೆ ೧೦, ಗಂಟೆ ಹಾಗೂ ಮಧ್ಯಾಹ್ನ ೨ ಗಂಟೆಗೆ. ನಡೆಯಲಿದೆ.ಕೃಷಿ ವಿಸ್ತರಣೆ (ಅಸಿಸ್ಟಂಟ್ ಪ್ರೊ. ಅಗ್ರಿಲ್ ಎಕ್ಸಟೆನ್ಸನ್ : ೦೧ ಹುದ್ದೆ (ಎಸ್ ಟಿ-೧) ಸಂದರ್ಶನ ಸೆ. ೧೨ ರಂದು ಬೆಳಿಗ್ಗೆ ೧೦ ಗಂಟೆಗೆ, ಕನ್ನಡ…

Read More

ಕ್ಲಿಷ್ಟಕರ ಮೆದುಳಿನ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಮರುಜೀವ ನೀಡುವಲ್ಲಿ ಯಶಸ್ವಿಯಾದ ವೈದ್ಯರು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ವೈದ್ಯರ ತಂಡ ಬಡ ಮಹಿಳೆಯ ಕ್ಲಿಷ್ಟಕರ ಮೆದುಳಿನ ಶಸ್ತ್ರಚಿಕಿತ್ಸೆಯ ಮೂಲಕ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ರೇಣವ್ವ ನಾಲತವಾಡ(47 ವರ್ಷ) ತೀವ್ರ ಪ್ರಮಾಣದ ಗ್ರೇಡ್–4 ಸಬ್ ಅರಾಕ್‌ನಾಯ್ಡ್ ಹೆಮರೇಜ್ (SAH) ಹಾಗೂ ಬಲಭಾಗದ ಮಿಡಲ್ ಸೆರೆಬ್ರಲ್ ಆರ್ಟರಿ (MCA) ಬೈಫರ್ಕೇಶನ್ ಅನ್ಯುರಿಸಮ್ನಿಂದ ಬಳಲುತ್ತಿದ್ದರು. ಅನ್ಯುರಿಸಮ್ ಛಿದ್ರಗೊಂಡ ಪರಿಣಾಮ ಮೆದುಳಿನ ಸುತ್ತಲೂ ತೀವ್ರ ರಕ್ತಸ್ರಾವವಾಗಿದ್ದು, ಅವರ ಆರೋಗ್ಯ ಗಂಭೀರವಾಗಿತ್ತು. CT, ಆಂಜಿಯೋಗ್ರಫಿ ಪರೀಕ್ಷೆಯಲ್ಲಿ ಬಲ MCA ಬೈಫರ್ಕೇಶನ್ ಭಾಗದಲ್ಲಿ ದ್ವಿಪ್ರಭೇದದ (Bilobed) ಅನ್ಯುರಿಸಮ್ ಪತ್ತೆಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ವೈದ್ಯರು ರೋಗಿಯನ್ನು ತುರ್ತಾಗಿ ಮೈಕ್ರೋಸರ್ಜಿಕಲ್ ಚಿಕಿತ್ಸೆಗೆ ಒಳಪಡಿಸಿದರು.ಅಲ್ಲದೇ, ವೈದ್ಯರು ಶಸ್ತ್ರಚಿಕಿತ್ಸೆಯ ವೇಳೆ ಅನ್ಯುರಿಸಮ್ನ ಕುತ್ತಿಗೆಯನ್ನು ಯಶಸ್ವಿಯಾಗಿ ಕ್ಲಿಪ್ ಮಾಡುವುದರ ಜೊತೆಗೆ, ಮೆದುಳಿಗೆ ರಕ್ತ ಪೂರೈಸುವ ಪ್ರಮುಖ MCA ಶಾಖೆಗಳು ಹಾಗೂ…

Read More

ಇಂಡಿಯಲ್ಲಿ ವಿವಿಧ ಸಂಘಟನೆಗಳ ಒಕ್ಕೂಟಗಳ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಉದಯರಶ್ಮಿ ದಿನಪತ್ರಿಕೆ ಇಂಡಿ: ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ನುಗ್ಗಿ ದುಷ್ಕರ್ಮಿಗಳು ಕುಂಟುಂಬಸ್ಥರಿಗೆ ಧಮ್ಕಿ ಹಾಕಿದ ಪ್ರಕರಣವನ್ನು ಖಂಡಿಸಿ, ವಿವಿಧ ಸಂಘಟನೆಗಳ ಒಕ್ಕೂಟಗಳ ನೇತೃತ್ವದಲ್ಲಿ ಶನಿವಾರ ಕಂದಾಯ ಉಪ ವಿಭಾಗಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಬಾಳು ಮುಳಜಿ, ಜೆಡಿಎಸ್ ಮುಖಂಡ ಡಾ.ರಮೇಶ್ ರಾಠೋಡ, ಬಿಜೆಪಿ ಮುಖಂಡ ಅದೃಶ್ಯಪ್ಪ ವಾಲಿ, ರೈತ ಸಂಘದ ಜಿಲ್ಲಾಧ್ಯಕ್ಷ ಎಸ್. ಬಿ. ಕೆಂಬೋಗಿ, ಪತ್ರಕರ್ತ ಶರಣು ಕಾಂಬಳೆ ಮಾತನಾಡಿ, ಸತ್ಯವನ್ನು ಸಮಾಜಕ್ಕೆ ತಿಳಿಸುವ ಪತ್ರಕರ್ತರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಅನ್ನ ಭಾಗ್ಯ ಅಕ್ಕಿ ಕಳ್ಳಸಾಗಣೆ ದಂಧೆಯ ಹಿಂದೆ ದೊಡ್ಡ ಜಾಲವೇ ಇರುವ ಶಂಕೆಯಿದೆ. ಈ ಪ್ರಕರಣದ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಮುಕ್ತ ಮತ್ತು ನಿರ್ಭೀತ ಪತ್ರಿಕೋದ್ಯಮಕ್ಕೆ ಧಕ್ಕೆ ತರುವ ಶಕ್ತಿಗಳನ್ನು ಒಟ್ಟಾಗಿ…

Read More

ಶಿರಶ್ಯಾಡ ಶಾಖಾ ಮಠದಲ್ಲಿ ಆಯೋಜಿಸಿದ್ದ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮದಲ್ಲಿ ಅಭಿನವ ಮುರುಘೇಂದ್ರ ಶ್ರೀ ಕಳವಳ ಉದಯರಶ್ಮಿ ದಿನಪತ್ರಿಕೆ ಇಂಡಿ: ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವದು ಆತಂಕಕಾರಿ ವಿಷಯ ಎಂದು ಅರಿತು ಅವುಗಳನ್ನು ಕಿಂಚಿತ್ತಾದರೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಮ್ಮ ಮಠದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯ ದಿನದಂದು ೬೦ ವರ್ಷಗಳ ಕಾಲ ಮಾದರಿಯಾಗಿ ಕುಟುಂಬದ ಹೊಣೆ ಹೊತ್ತು ಸಾಗಿರುವ ವೃದ್ಧ ದಂಪತಿಗಳನ್ನು ಆಯ್ಕೆ ಮಾಡಿ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದು ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.ಅವರು ಶುಕ್ರವಾರ ಸಾಯಂಕಾಲ ಇಂಡಿ ನಗರದ ಶಿರಶ್ಯಾಡ ಶಾಖಾ ಮಠದಲ್ಲಿ ಆಯೋಜಿಸಿದ್ದ ೫ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮದ ಸಾನಿಧ್ಯತೆ ವಹಿಸಿ ಆಶಿರ್ವಚನ ನೀಡಿದರು.ವೃದ್ಧರನ್ನು ಗೌರವಿಸುವದು, ಅವರ ಅನುಭವಗಳನ್ನು ಹಂಚಿಕೊಳ್ಳುವದರಿಂದ ಇಂದಿನ ಯುವಕರಲ್ಲಿ ತಮ್ಮ ಹಿರಿಯರ ಬಗ್ಗೆ ಗೌರವ ಮೂಡಲಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬುದು ನಮ್ಮ ಪ್ರಯತ್ನ ಎಂದರು.ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದು, ಅದನ್ನು ವಿದೇಶಿಯರು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮ್ಮವರೇ ಅದನ್ನು ಮರೆಯುತ್ತಿದ್ದಾರೆ. ಕಾರಣ ನಮ್ಮ ಸಂಸ್ಕೃತಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಸಾಮಾಜಿಕ ಅರಣ್ಯ ವಿಭಾಗ,ವಿಜಯಪುರ ಹಾಗೂ ಸಾಮಾಜಿಕ ಅರಣ್ಯ ವಲಯ, ಇಂಡಿ ಇವರ ಸಹಯೋಗದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೆಶ್ವರ ಸ್ವಾಮೀಜಿ ವೃಕ್ಷೋದ್ಯಾನದ ಲೋಕಾರ್ಪಣೆ ಸಮಾರಂಭ ಆ.೩೦ರಂದು ಭಾನುವಾರ ಬೆಳಗ್ಗೆ ೧೦ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಅವರು ಉದ್ಘಾಟಿಸುವರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ.ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕರು, ಸಂಸದರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಗಣೇಶ ಹಬ್ಬ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ವಿಸರ್ಜನೆಯನ್ನು ಸರ್ಕಾರದ ಆದೇಶದ ಮೇರೆಗೆ ನಿಷೇಧಿಸಲಾಗಿದ್ದು, ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ನಿಗಾವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಶನಿವಾರ ನಡೆದ ಗಣೇಶ ಹಬ್ಬ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದರು.ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಅನುಮತಿಸಿ, ಎಲ್ಲಾ ಸ್ಥಳೀಯ ಸಂಸ್ಥೆಗಳು ಮೂರ್ತಿ ತಯಾರಕರು ಹಾಗೂ ಗಣೇಶ ಮಹಾ ಮಂಡಳಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಕಟ್ಟುನಿಟ್ಟಿನ ಮಾಹಿತಿ ನೀಡಬೇಕು. ಸಾರ್ವಜನಿಕರಲ್ಲಿ ಪರಿಸರ ಸ್ನೇಹಿ ಹಬ್ಬದ ಆಚರಣೆ ಕುರಿತು ಅರಿವು ಮೂಡಿಸಿ ಎಂದರು.ಕೃತಕ ಹೊಂಡಗಳಲ್ಲಿ ವಿಸರ್ಜನೆ: ನೈಸರ್ಗಿಕ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಕಸಿತ ಭಾರತ್ ಯುವ ಸಂಪರ್ಕ ಹಾಗೂ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಖೇಲೋ ಇಂಡಿಯಾ ಸಂವಾದ – ಖೇಲ್ ಕಿ ಬಾತ್ ಪಿಎಂ ಮೋದಿ ಕೆ ಸಾಥ್ ಸಂವಾದ ಕಾರ್ಯಕ್ರಮದಲ್ಲಿ ವಿಜಯಪುರದ ಮೂಲದಶಿಫಾ ಜಮಾದಾರ ಅನೇಕ ಮಹತ್ವದ ವಿಚಾರಗಳನ್ನು ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಹಂಚಿಕೊಂಡಿದ್ದಾರೆ.ಭುವನೇಶ್ವರದ ಐಐಟಿಯಲ್ಲಿ ನಡೆದ ಸಂವಾದ ಬಿತ್ತರ ಕಾರ್ಯಕ್ರಮದಲ್ಲಿ ಸಂವಾದಕ್ಕೆ ಆಯ್ಕೆಯಾಗಿ ತಮ್ಮ ವಿಷಯವನ್ನು ಮಂಡಿಸಿದರು.ಗ್ರಾಮೀಣ ಭಾಗ ಕ್ರೀಡಾ ಪ್ರತಿಭೆಗಳ ಆಗರವಾಗಿದೆ, ಹೀಗಾಗಿ ಬಾಲ್ಯದಲ್ಲಿಯೇ ಈ ಗ್ರಾಮೀಣ ಪ್ರತಿಭೆಗಳಿಗೆ ಪೂರಕವಾದ ಪ್ರೋತ್ಸಾಹ, ಅವಕಾಶ, ತರಬೇತಿ ನೀಡಿದರೆ ಈ ಪ್ರತಿಭೆಗಳು ಕ್ರೀಡೆಯಲ್ಲಿ ಬೆಳಗಲು ಸಾಧ್ಯ, ಆ ಮೂಲಕ ೨೦೩೦ ರಲ್ಲಿ ನಮ್ಮ ಹೆಮ್ಮೆಯ ಭಾರತ ವಿಕಸಿತ ಕ್ರೀಡಾ ರಾಷ್ಟ್ರವಾಗಿ ಮಿಂಚಲಿದೆ ಎಂದು ಹೇಳಿದರು.ಶಾಲಾ‌ ಮಟ್ಟದಲ್ಲಿಯೇ ಹೆಚ್ಚಿನ ಕ್ರೀಡಾಕೂಟ ಆಯೋಜನೆಗೆ ಒತ್ತು ನೀಡುವ ಜೊತೆಗೆ ಅನುದಾನದ ಬಲ ಸಹ ನೀಡಬೇಕು ಎಂಬ ಅನೇಕ ವಿಷಯಗಳನ್ನು ಹಂಚಿಕೊಂಡರು.ಈ ಹಿಂದೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ವಿಶ್ವ ಶೃಂಗ…

Read More

ಜಮಖಂಡಿಯ ಬಿ.ಎಲ್.ಡಿ.ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟೀಯ ಕ್ರೀಡಾ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ: ಭಾರತದ ಹಾಕಿ ಮಾಂತ್ರಿಕ, ‘ಹಾಕಿ ದಂತಕಥೆ’ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ರಾಷ್ಟೀಯ ಕ್ರೀಡಾ ದಿನಾಚರಣೆಯನ್ನು ಬಿ.ಎಲ್.ಡಿ.ಇ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಜಮಖಂಡಿಯಲ್ಲಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಮೇಜರ್ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಪ್ರಶಿಕ್ಷಣಾರ್ಥಿಗಳಿಗಾಗಿ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಸ್. ಕಾಗವಾಡೆ, “ಕ್ರೀಡೆ ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯದ ಜೊತೆಗೆ ಶಿಸ್ತು, ಸಮಯಪಾಲನೆ, ತಂಡದ ಮನೋಭಾವ, ನಾಯಕತ್ವ ಗುಣ ಹಾಗೂ ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ. ಭವಿಷ್ಯದ ಶಿಕ್ಷಕರಾಗಲಿರುವ ಪ್ರಶಿಕ್ಷಣಾರ್ಥಿಗಳು ಕ್ರೀಡೆಯ ಮಹತ್ವವನ್ನು ಅರಿತು, ತಮ್ಮ ವಿದ್ಯಾರ್ಥಿಗಳಲ್ಲಿಯೂ ಕ್ರೀಡಾಸಕ್ತಿಯನ್ನು ಬೆಳೆಸಬೇಕು” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ. ಕೆ.ಜೆ. ಜೀರಗಾಳಿ, ಪ್ರೊ. ಎಲ್.ಎಂ. ಮಾರ್ಕಪನಳ್ಳಿ, ಪ್ರೊ. ಅಶ್ವಿನಿ ಅನಂತಪೂರ, ಪ್ರೊ. ಪ್ರೇಮಾನಂದ ಹಿರೇಮಠ, ದೈಹಿಕ…

Read More

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,‌ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅಸಮಾಧಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇವಲ ಫೋಟೋ ಶೂಟ್ ಸೀಮಿತವಾದಂತೆ ಜಿಲ್ಲಾ ಉಸ್ತುವಾರಿ ಸಚಿವರು ಬರ ವೀಕ್ಷಣೆ ಮಾಡಿದ್ದಾರೆ, ಸಭೆಗಳನ್ನು ಸಹ ಪರಿಣಾಮಕಾರಿಯಾಗಿ ನಡೆಸಿಲ್ಲ, ಒಂದರ್ಥದಲ್ಲಿ ಸರ್ಕಾರ ಬರಗಾಲ ಪರಿಸ್ಥಿತಿಯನ್ನು ಬೇಕಾಬಿಟ್ಟಿಯಾಗಿ ನಿಭಾಯಿಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,‌ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿಅಸಮಾಧಾನ ಹೊರಹಾಕಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಂದು ರಾಜ್ಯ ಸರ್ಕಾರ ಬೇಜವಾಬ್ದಾರಿ ಹಾಗೂ ನಿಷ್ಕಾಳಜಿತನದಿಂದ ಸರಿಯಾದ ಮಾಹಿತಿ ಸಂಗ್ರಹಿಸದೇ ಬೇಕಾಬಿಟ್ಟಿಯಾಗಿಹಾಗೂ ಬರಗಾಲದ ಮಾನದಂಡಗಳನ್ನು ಸಹ ಸರಿಯಾಗಿ ಪರಿಗಣಿಸದೇ ಇಂದು ಕೇವಲ ೧೦೧ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ ಎಂದರು.೧೯೦ ತಾಲೂಕುಗಳಲ್ಲಿ ಮಳೆ ಕೊರತೆಯಾಗಿರುವುದನ್ನು ಸ್ವತಃ ಕಂದಾಯ ಸಚಿವರೇ ಒಪ್ಪಿದ್ದಾರೆ, ಆದರೆ ಬರಗಾಲ ಘೋಷಣೆ ಮಾತ್ರ ೧೦೧ ತಾಲೂಕುಗಳಿಗೆ ಮಾಡಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.ಉತ್ತರ ಕರ್ನಾಟಕ ಭಾಗದಲ್ಲಿ ೯೧ ತಾಲೂಕುಗಳು ಭೀಕರ ಪರಿಸ್ಥಿತಿ ಎದುರಿಸಿದರೂ ಕೇವಲ ೨೭ ತಾಲೂಕುಗಳನ್ನು ಮಾತ್ರ…

Read More