Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ಹಿರಿಯ ಜೀವ ಮಲ್ಲಯ್ಯ ಸಾಲಿಮಠ ಅಖಿಲ ಭಾರತ ವೀರಶೈವ ಮಹಾಸಭಾ ನಿಡಗುಂದಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಪಟ್ಟಣದ ಶ್ರೀ ರುದ್ರೇಶ್ವರ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ (ರಿ) ಬೆಂಗಳೂರು ಹಾಗೂ ಜಿಲ್ಲಾ ಘಟಕ ವಿಜಯಪುರ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಿಡಗುಂದಿ ತಾಲೂಕು ಘಟಕದ ಚುನಾವಣಾ ದೃಢೀಕರಣ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಯ್ಯ ಸಾಲಿಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ನಿಡಗುಂದಿ ತಾಲೂಕು ಘಟಕದ ಚುನಾವಣಾ ದೃಢೀಕರಣ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಪಟ್ಟಣದ ಹಿರಿಯನೇಕರು ಪಾಲ್ಗೊಂಡಿದ್ದರು.ಜಿಲ್ಲಾ ಘಟಕದ ಅಧ್ಯಕ್ಷರಾದ ವಿ.ಸಿ.ನಾಗಠಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ಈಶ್ವರಗೊಂಡ, ಕಾರ್ಯಕಾರಿಣಿ ಸದಸ್ಯ ವಿಜಯ ಹುಂಡೇಕಾರ, ಸಂಘಟನಾ ಕಾರ್ಯದರ್ಶಿ ಬಸವರಾಜಕುಮಾರ್ ಕುಮಸಗಿ, ಸಿ.ಎಸ್.ಕನಕಾಲ್ಮಠ, ರಾಮನಗೌಡ ಹೆಬ್ಬಾಳ, ಮಾಜಿ ಜಿಪಂ ಸದಸ್ಯ ಶಿವಾನಂದ ಅವಟಿ ಇವರ ಸಮ್ಮುಖದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನಿಡಗುಂದಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಡಪ್ರಭು ಕೆಂಪೇಗೌಡರು ಕೇವಲ ಒಬ್ಬ ಆಡಳಿತಗಾರರಲ್ಲ, ದೂರದೃಷ್ಟಿಯ ಚಿಂತಕರು, ಜನಪರ ನಾಯಕರು ಹಾಗೂ ಸುಸಂಘಟಿತ ಬೆಂಗಳೂರು ಮಹಾನಗರ ನಿರ್ಮಾಣದ ಹರಿಕಾರರು ಎಂದು ವಿಜಯಪುರ ತಹಶೀಲ್ದಾರರಾದ ಪ್ರಶಾಂತ ಚನ್ನಗೊಂಡ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಅವರ ಆಡಳಿತದಲ್ಲಿ ಜನಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಬೆಂಗಳೂರು ನಗರ ನಿರ್ಮಾಣ ಮತ್ತು ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಆಡಳಿತ ತತ್ವಗಳು ಹಾಗೂ ಅಭಿವೃದ್ಧಿ ದೃಷ್ಟಿಕೋನ ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.ಕೆಂಪೇಗೌಡರು ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಮೂಲಕ ಉತ್ತಮ ಆಡಳಿತ ನಡೆಸಿದ್ದರು. ಅವರ ಆದರ್ಶಗಳು, ಮೌಲ್ಯಗಳು ಮತ್ತು ಸೇವಾ ಮನೋಭಾವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ವಿಶೇಷವಾಗಿ ಯುವಜನತೆ ಅವರ ವ್ಯಕ್ತಿತ್ವ, ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದ ಚಿಂತನೆಗಳಿಂದ ಸ್ಫೂರ್ತಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಮಹಾಲಕ್ಷ್ಮಿಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಅಭಿಯಂತರರ ವಿಶೇಷ ಸಭೆ ನಡೆಸಲಾಯಿತು. ಕಟ್ಟಡ ನಿರ್ಮಾಣ ಸೇರಿದಂತೆ ಬ್ಯಾಂಕಿನ ವತಿಯಿಂದ ಕಲ್ಪಿಸಲಾಗುವ ವಿವಿಧ ಆರ್ಥಿಕ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು.ಸಹಕಾರದಿಂದ ಸಮರ್ಥನ ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿದ್ದ ಈ ವಿಶೇಷ ಸಮಾಲೋಚನಾ ಸಭೆಯಲ್ಲಿ ಬ್ಯಾಂಕಿನ ವಿವಿಧ ಸೌಕರ್ಯ ಹಾಗೂ ಸೌಲಭ್ಯಗಳ ಬಗ್ಗೆ ಸಭೆಯಲ್ಲಿ ವಿಸ್ತಾರವಾಗಿ ತಿಳಿಸಲಾಯಿತು.ಈ ವೇಳೆ ಬ್ಯಾಂಕಿನ ಅಧ್ಯಕ್ಷ ಮುಕುಂದ ಕುಲಕರ್ಣಿ ಮಾತನಾಡಿ, ಸಹಕಾರ ಬ್ಯಾಂಕುಗಳು ಜನರ ಆರ್ಥಿಕ ಸಬಲೀಕರಣಲ್ಲಿ ಅನುಪಮ ಪಾತ್ರ ವಹಿಸುತ್ತಿವೆ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಉದ್ದೇಶಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೂ ಕೊಡಗೆ ನೀಡಿದೆ, ಸಮಾಜದಲ್ಲಿ ಅಭಿಯಂತರರ ಪಾತ್ರ ಪ್ರಮುಖವಾಗಿದೆ, ಎಲ್ಲ ಕಟ್ಟಡಗಳ ಹಿಂದೆ ಅಭಿಯಂತರರ ಶ್ರಮ ಅಡಗಿದೆ ಎಂದರು.ಅಭಿಯಂತರರ ಸಂಘದ ಅಧ್ಯಕ್ಷ ಅರುಣ ಮಠ ಮಾತನಾಡಿ, ಸಹಕಾರ ಬ್ಯಾಂಕುಗಳು ಆರ್ಥಿಕ ಪ್ರಗತಿಗೆ ನೀಡುತ್ತಿರುವ ಕೊಡುಗೆ ಅನನ್ಯ, ಸಹಕಾರ ಚಳವಳಿ ಒಂದು ಬಹುಮುಖ್ಯ ಅಂಗ, ಉತ್ತಮ ಮನೆ ನಿರ್ಮಾಣ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಈ ವಿಶ್ವವಿದ್ಯಾಲಯ, ಪುಣೆಯ ಭಾರತಿ ವಿದ್ಯಾಪೀಠ ವಿಶ್ವವಿದ್ಯಾಲಯದ ಪೂನಾ ಫಾರ್ಮಸಿ ಕಾಲೇಜು ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಫಾರ್ಮಸಿ ಕಾಲೇಜಿನ ಸಂಶೋಧಕ ಡಾ. ರವೀಂದ್ರ ಜಿ. ಕುಲಕರ್ಣಿ, ಡಾ. ರಾಘವೇಂದ್ರ ವಿ. ಕುಲಕರ್ಣಿ, ಡಾ. ಆತ್ಮಾರಾಮ ಪವಾರ ಹಾಗೂ ಡಾ. ಅರವಿಂದಗೌಡ ಪಾಟೀಲ ಅವರ ತಂಡ ನಡೆಸಿದ “ಸಿಂಥೆಸಿಸ್ ಅಂಡ್ ಸೈಟೋಟಾಕ್ಸಿಕ್ ಆಕ್ಟಿವಿಟಿ ಆಪ್ ಇಂಡೋಲ್ ಡೇರಿವೆಟಿವ್ಸ್ ಬಿಯರಿಂಗ್ ಟ್ರಯಾಜೋಲ್ ಸ್ಕ್ಯಾಪೋಲ್ಡ್” ಎಂಬ ಸಂಶೋಧನೆಗೆ ಕೇಂದ್ರ ಸರಕಾರದ ಪೇಟೆಂಟ್ ದೊರೆತಿದೆ.ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಔಷಧವನ್ನು(Drug Molecule) ಕಂಡುಹಿಡಿಯುವ ಉದ್ದೇಶದಿಂದ ಕೈಗೊಳ್ಳಲಾದ ಜಂಟಿ ಸಂಶೋಧನೆಗೆ ಈ ಪೇಟೆಂಟ್ ಲಭಿಸಿದೆ.ಈ ಸಂಶೋಧನೆಯು ಔಷಧೀಯ ಕ್ಷೇತ್ರದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಚಿಕಿತ್ಸೆ ವಿಧಾನಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನವಾಗಿದ್ದು, ಆರೋಗ್ಯ ಕ್ಷೇತ್ರದ ಪ್ರಮುಖ ಸವಾಲುಗಳನ್ನು ಎದುರಿಸಲು ಎರಡೂ ವಿಶ್ವವಿದ್ಯಾಲಯಗಳು ಹೊಸ ಔಷಧಗಳ ಅನ್ವೇಷಣೆಗೆ ಮಹತ್ವದ ಕೊಡುಗೆ ನೀಡಲಿವೆ.ವಿಜ್ಞಾನಿಗಳ ಈ ಸಂಶೋಧನೆ ಪೇಟೆಂಟ್ ಲಭಿಸಿರುವುದಕ್ಕೆ ಬಿ.ಎಲ್.ಡಿ.ಈ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ ಹಾಗೂ ಮೂಲಸೌಲಭ್ಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ಮೊಹರಂ ಐದು ದಿನಗಳಿಂದ ಊರಲ್ಲಿ ಸಂಭ್ರಮದ ವಾತಾವರಣ ಮತ್ತು ಶಾಂತಿಯುತವಾಗಿ ಮೊಹರಂ ಆಚರಿಸಲಾಯಿತು.ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಬಹುತ್ವ ಪ್ರಜ್ಞೆ ಈ ಪ್ರಜ್ಞೆಯು ಪುರಾಣ ಮತ್ತು ಇತಿಹಾಸವನ್ನ ಬೆರೆಸುತ್ತದಬೇರೆ ಬೇರೆ ಮತ ಧರ್ಮದ ಕಥೆನಗಳಲ್ಲಿರುವ ಸಮಾನ ಅಂಶಗಳನ್ನು ಒಂದೆಡೆ ಜೋಡಿಸುತ್ತದೆ ಇದು ಭಾರತದ ಸಾಂಸ್ಕೃತಿಕ ಪ್ರತಿಭೆ ಧರ್ಮ ಜಾತಿಗಳನ್ನ ಮೀರಿ ಸೃಷ್ಟಿಸಿಕೊಂಡಿರುವ ಅಸ್ಮಿತೆಯಾಗಿ ಮೊಹರಂ ರೊಪುಗೊಂಡಿದೆ. ಧರ್ಮ ಧರ್ಮಗಳ ಸಂಘರ್ಷದ ಮಧ್ಯೆ ಪರಸ್ಪರ ಸಂವಾದ ಮಾಡುವ, ಬಾಗಿಲು, ಕಿಟಕಿಗಳನ್ನುಮುಚ್ಚಿಕೊಳ್ಳುತ್ತಿವೆಇಂತಹ ಸನ್ನಿವೇಶದಲ್ಲಿ ಧರ್ಮಗಳ ನಡುವೆ ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಿದೆ ಎಂದು ಮೊಹರಂ ತೋರಿಸಿಕೊಡುತ್ತದೆ.ಕತಲ್ ರಾತ್ರಿ ಎಂದು ಅಗ್ಗಿ ಅತ್ಯಂತ ವಿಶೇಷವಾಗಿ ನೋಡುಗರ ಕಣ್ಮನ ಸೆಳೆಯಿತು.ಈ ಭಾವೈಕ್ಯೆತೆ ಹಾಗೂ ಧರ್ಮ ಧರ್ಮಗಳ ಸಂವಾದಕ್ಕೆ ತಮದಡ್ಡಿ ಮೂಹರಂ ಸಹ ಒಂದು ನಿದರ್ಶನ ಎಂದು ಹೇಳಬಹುದು.
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಪ್ರೀತಿಯ ದೀಪ್ತಿವಿವಾಹ ಮಹೋತ್ಸವದ ಭರ್ಜರಿ ಔತಣಕೂಟದಲ್ಲಿ ವೈಭವೀಕರಣ ಎಲ್ಲೆಡೆ ತುಂಬಿ ತುಳುಕುತ್ತಿತ್ತು. ಕಣಕಣದಲ್ಲೂ ನಳನಳಿಸುವ ಬೆಳದಿಂಗಳು ಕಿರಣಗಳಂತಿದ್ದ ನಿನ್ನ ಅಲ್ಲಿ ಕಂಡು ಅರೆಕ್ಷಣ ಪುಳಕಗೊಂಡೆ. ಪಾರ್ಟಿಯ ದೀಪಗಳ ಬೆಳಕಿನಲ್ಲಿ ನೀನುಟ್ಟ ಗಿಳಿ ಹಸಿರಿನ ಒಡಲಿನ ರೇಷ್ಮೆ ಸೀರೆ ಮಿಂಚುತ್ತಿತ್ತು. ನಿನ್ನ ಸುಂದರ ಮೈಕಟ್ಟಿಗೆ ಮುದ್ದಾಗಿ ಒಪ್ಪಿತ್ತು. ಅಗಲವಾದ ಬೆನ್ನನ್ನು ಅಲಂಕರಿಸಿದ ಡೋರಿ ಹಚ್ಚಿದ ರವಿಕೆ ನೀಳವಾದ ಜಡೆ ನಿನ್ನಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ಡೈಮಂಡ್ ಸರವು ನೀಳ ಕುತ್ತಿಗೆಯ ಅಂದಕ್ಕೆ ಹೊಸ ಮೆರಗನ್ನು ತಂದಿತ್ತು. ಕಿವಿಯಲ್ಲಿನ ಲೋಲಕಗಳು ನಿನ್ನ ಕೆನ್ನೆಯನ್ನು ಮುದ್ದಿಸುತ್ತ ಆಡುತ್ತಿದ್ದವು. ತಂಗಾಳಿಗೆ ಹಾರುತ್ತಿದ್ದ ಮುಂಗುರುಳು ಬಟ್ಟಲು ಕಂಗಳಿಗೆ ಹಚ್ಚಿದ ಕಾಡಿಗೆ ಕೆಂದುಟಿಗಳ ಮೇಲಿನ ಕಿರುನಗು ಕೋಟಿ ದೀಪಗಳನ್ನು ಒಮ್ಮೆಲೇ ಹಚ್ಚಿದಂತಿತ್ತು. ಪ್ರತಿ ಹೆಜ್ಜೆಯಲ್ಲಿ ಒಂದು ಗಾಂಭಿರ್ಯ ಮತ್ತು ಲಾಸ್ಯವಿತ್ತು. ಹೆಜ್ಜೆಗೆ ತಕ್ಕಂತೆ ಸಣ್ಣ ನಡುವಿನ ಬಳಕು ನೋಡುವವರ ಗಮನವನ್ನು ಸೆಳೆಯುತ್ತಿತ್ತು. ಕಣ್ಣು ಕೋರೈಸುವ ಮೈಕಟ್ಟಿಗೆ ಮೈಮರೆತು ನಿಂತಿದ್ದ ನನ್ನನ್ನು ಪ್ರೇಮಲೋಕಕ್ಕೆ…
ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಮಾರ್ಕಸ್ ಆಂಟ್ಯಾನಿಯೋಸ್ ಅವರು, “ಸಂತೋಷ ಎಂಬುದು ಎಲ್ಲೂ ಇಲ್ಲ. ಅದು ನಮ್ಮ ಒಳ್ಳೆಯ ಆಲೋಚನೆಯ ಮೇಲೆ ನಿಂತಿದೆ” ಎಂದು ಹೇಳಿದ್ದಾರೆ. ಇಂದು ಮಕ್ಕಳ ಮನಸ್ಥಿತಿಯನ್ನು ಅರಿಯುವುದು ಬಹಳ ಕಷ್ಟಕರವಾಗಿದೆ. ಪಾಲಕರು ಮತ್ತು ಪೋಷಕರು ೧೦-೧೫ ವರ್ಷದ ಮಕ್ಕಳಲ್ಲಾಗುವ ದೈಹಿಕ, ಭಾವನಾತ್ಮಕ ಬದಲಾವಣೆಯನ್ನು ತುಂಬಾನೇ ಜಾಗರೂಕತನದಿಂದ ಗಮನಿಸುತ್ತಾ, ವಯಸ್ಸಿಗೆ ಅಗತ್ಯವಿರುವ ಬುದ್ದಿಮಾತುಗಳನ್ನು ಹೇಳುತ್ತಿರಬೇಕು. ಅವರು ಶಾಲೆಯಲ್ಲಿ, ಮನೆಯಲ್ಲಿ ಮತ್ತು ಹೊರಗಡೆ ಹೇಗಿರುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಅರಿತುಕೊಳ್ಳಬೇಕು. ಶಾಲೆಯಿಂದ ಮನೆಗೆ ಬಂದ ನಂತರ ಅವರ ಇಂದಿನ ದಿನಚರಿ, ಶಾಲೆಯಲ್ಲಿನ ಪಾಠ-ಪ್ರವಚನ, ಸಂವಾದ ಮತ್ತು ಅನುಭವಿಸಿದ ಘಳಿಗೆಗಳ ಬಗ್ಗೆ ಆಲಿಸಬೇಕು. ಯಾವುದೇ ಸಮಸ್ಯೆ-ತೊಂದರೆ ಇದ್ದರೆ ಅದರ ಬಗ್ಗೆ ತಿಳಿದುಕೊಳ್ಳಬೇಕು. ಎಂತಹ ಪರಿಸ್ಥಿತಿ ಎದುರಾದರೂ ನಿಮ್ಮ ಜೊತೆ ನಾವಿದ್ದೇವೆ ಎಂಬ ಆತ್ಮವಿಶ್ವಾಸವನ್ನು ಮೂಡಿಸಬೇಕು. ಪ್ರತಿಯೊಂದು ಸಮಸ್ಯೆಗೆ ಸೂಕ್ತ ಪರಿಹಾರ ಇದ್ದೇ ಇರುತ್ತದೆ ಎಂಬುದನ್ನು ತಮ್ಮ ಜೀವನದ ಎದುರಾದ ಸಮಸ್ಯೆಗಳ ಬಗ್ಗೆ ನಿದರ್ಶನ ನೀಡುತ್ತಾ, ಸದಾ ಅವರೊಂದಿಗೆ ನಿಲ್ಲುತ್ತೇವೆಂಬ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್,ಮುಂಡರಗಿ – ಗದಗ ಉದಯರಶ್ಮಿ ದಿನಪತ್ರಿಕೆ ಈ ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಅಜ್ಜ ಅಜ್ಜಿ ನಾಲ್ಕಾರು ಮಕ್ಕಳು ಅವರ ಪತ್ನಿಯರು ಮಕ್ಕಳು ಹೀಗೆ ಕೂಡು ಕುಟುಂಬವಿದ್ದು, ಹೆಣ್ಣು ಮಕ್ಕಳು ಮದುವೆಯಾಗಿ ಪರ ಊರಿನಲ್ಲಿ ಇದ್ದು, ಆಗಾಗ ಬೀಗರು ನೆಂಟರು ಹಬ್ಬ ಹುಣ್ಣಿಮೆ ಜಾತ್ರೆ ಮುಂತಾದ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಿದ್ದರು. ಮನೆಯ ತುಂಬಾ ಹತ್ತಾರು ಮಕ್ಕಳಿದ್ದು ಕೆಲವೊಮ್ಮೆ ಯಾರು ಯಾರ ಮಕ್ಕಳು, ಯಾವ ತರಗತಿಯಲ್ಲಿ ಓದುತ್ತಾರೆ ಎಂಬುದೇ ಗೊತ್ತಾಗದಷ್ಟು ಸಂಖ್ಯೆಯಲ್ಲಿ ಮೊಮ್ಮಕ್ಕಳು ಇರುತ್ತಿದ್ದರು.ನಂತರದ ದಿನಮಾನಗಳಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳು ಒಂದು ಕುಟುಂಬ ಎಂದು ಕರೆಸಿಕೊಂಡರು.ಮತ್ತೆ ಮುಂದೆ ಗಂಡ ಹೆಂಡತಿ ಕೇವಲ ಒಂದು ಮಗು ಮತ್ತು ಒಂದು ಸಾಕು ಪ್ರಾಣಿ ಒಂದು ಕುಟುಂಬ ಎನಿಸಿಕೊಂಡರೆ ಇದೀಗ ಕೇವಲ ಗಂಡ ಹೆಂಡತಿ ಮಾತ್ರ ಇರುವ ನೋ ಕಿಡ್ಸ್ ನೋ ಕಿಚನ್ ಎಂಬ ಟುಕೆ ಸಂಸಾರ ಚಾಲ್ತಿಯಲ್ಲಿದೆ. ಮಕ್ಕಳು ಮತ್ತು ಅಡುಗೆ ಮಾಡುವುದು ಜವಾಬ್ದಾರಿಯ ಕೆಲಸ.. ಹಾಗಾಗಿ ಇಂದಿನ ದಂಪತಿಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿನ ಬೀಜ ಮಾರಾಟ ಮಳಿಗೆಗಳು, ಕೃಷಿ ಸೇವಾ ಕೇಂದ್ರಗಳು ಹಾಗೂ ಕೃಷಿ ಸಂಬಂಧಿತ ವಹಿವಾಟು ನಡೆಸುತ್ತಿರುವ ಅರ್ಹ ವ್ಯಾಪಾರಿಗಳು ಬಿತ್ತನೆ ಬೀಜ ಮಾರಾಟಕ್ಕೆ ಅಗತ್ಯವಾದ ಬೀಜ ಮಾರಾಟ ಪರವಾನಗಿ (ಸೀಡ್ ಲೈಸೆನ್ಸ್) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಬೀಜ ಕಾಯ್ದೆ-೧೯೬೬ ಹಾಗೂ ಬೀಜ ನಿಯಮ-೧೯೬೮ರ ಅನ್ವಯ ರೈತರಿಗೆ ಗುಣಮಟ್ಟದ ಮತ್ತು ಪ್ರಮಾಣಿತ ಬೀಜಗಳನ್ನು ಮಾತ್ರ ಮಾರಾಟ ಮಾಡಬೇಕು. ಅದರಂತೆ ತರಕಾರಿ ಮತ್ತು ಹೂವಿನ ಬೀಜಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಬೀಜಗಳ ನಿಯಂತ್ರಣ ಆದೇಶ-೧೯೮೩ರ ಪ್ರಕಾರ ತೋಟಗಾರಿಕೆ ಇಲಾಖೆಯಿಂದ ಬೀಜ ಮಾರಾಟ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.ಆದ್ದರಿಂದ ಜಿಲ್ಲೆಯಲ್ಲಿನ ಎಲ್ಲಾ ಬೀಜ ಮಾರಾಟ ವ್ಯಾಪಾರಿಗಳು ಜುಲೈ ೧೫ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಬೀಜ ಮಾರಾಟ ಪರವಾನಗಿ ಪತ್ರವನ್ನು ಪಡೆಯಬೇಕು.ಪರವಾನಗಿ ಪಡೆಯದೇ ಬೀಜ ಮಾರಾಟ ನಡೆಸುತ್ತಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.ಪರವಾನಗಿ ಪಡೆಯಲು ಅರ್ಜಿ ನಮೂನೆ ಜೊತೆಗೆ ಆಧಾರ್ ಕಾರ್ಡ್,…
