ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂಡಿ ೨೨೦/೧೧೦/೧೧ ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಂಡಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ೧೧೦ ಕೆ.ವ್ಹಿ ಝಳಕಿ, ೧೧೦ ಕೆ.ವ್ಹಿ ಚಡಚಣ, ೧೧೦ ಕೆ.ವ್ಹಿ ಇಂಚಗೇರಿ, ೧೧೦ ಕೆ.ವ್ಹಿ ಜಿಗಜೇವಣಗಿ, ೧೧೦ ಕೆ.ವ್ಹಿ ಕೆರೂರ, ೧೧೦ ಕೆ.ವ್ಹಿ ಉಮರಾಜ, ೧೧೦ ಕೆ.ವ್ಹಿ ಭೈರುಣಗಿ, ೧೧೦ ಕೆ.ವ್ಹಿ ಹಿರೇಬೆವನೂರ, ೧೧೦ ಕೆ.ವ್ಹಿ ರೋಡಗಿ, ೧೧೦ ಕೆ.ವ್ಹಿ ಇಂಡಿ, ೧೧೦ ಕೆ.ವ್ಹಿ ಲಚ್ಯಾಣ, ೧೧೦ ಕೆ.ವ್ಹಿ ಧೂಳಖೇಡ, ೧೧೦ ಕೆ.ವ್ಹಿ ಹಿರೇಮಸಳಿ ಹಾಗೂ ನಾದ ೧೧೦ ಕೆ.ವಿ ಉಪ ಕೇಂದ್ರಗಳ ಮೇಲೆ ಬರುವ ಎಲ್ಲಾ ೧೧ ಕೆ.ವಿ ಮಾರ್ಗಗಳಿಗೆ ಜೂನ್ ೨೨ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆ ತಿಳಿಸಿದೆ.

