Author: editor.udayarashmi@gmail.com

ದೇವರಹಿಪ್ಪರಗಿ: ಹಿಂದೂ ಸಂಸ್ಕೃತಿಯ ಉಚ್ಛ ಮಾನವ ಮೌಲ್ಯಗಳ ಅನುಷ್ಠಾನಕ್ಕಾಗಿ ಪ್ರಶಿಕ್ಷಣ ವರ್ಗಗಳ ಅಗತ್ಯತೆಯಿದೆ ಎಂದು ಜಿಲ್ಲಾ ವಿಎಚ್‌ಪಿ ಅಧ್ಯಕ್ಷ ಮಲ್ಲಿಕಾರ್ಜುನ ರೂಢಗಿ ಹೇಳಿದರು.ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಭಾನುವಾರ ಜರುಗಿದ ವಿಶ್ವ ಹಿಂದೂ ಪರಿಷದ್‌ನ ಜಿಲ್ಲಾ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ವದೇಶ, ಸ್ವಭಾಷೆ, ಸ್ವಭೂಷಣದ ಬಗ್ಗೆ ಸ್ವಾಭಿಮಾನ ಮತ್ತು ಸ್ವದೇಶಿ ವಸ್ತುಗಳ ಬಗ್ಗೆ ಅಭಿಮಾನ ಮೂಡಿಸುವುದರಲ್ಲಿ ಪ್ರಶಿಕ್ಷಣ ವರ್ಗಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.ಕ್ಷೇತ್ರಿಯ ಧರ್ಮಪ್ರಸಾರದ ಮುಖ್ಯವಕ್ತಾರ ಬಸವರಾಜಜೀ ಮಾತನಾಡಿ, ಸಮುದಾಯ ಹಾಗೂ ದೇಶದ ಒಳಿತಿಗಾಗಿ ಹೊಣೆಗಾರಿಕೆಯಿಂದ ಕಾರ್ಯ ಮಾಡುವುದನ್ನೇ ಜವಾಬ್ದಾರಿ ಎನ್ನುತ್ತೇವೆ. ಸಂಘಟನೆ ಮತ್ತು ಸಂಘಟಕನ ಮುಖ್ಯ ಕಾರ್ಯ ಒಳ್ಳೆಯದು ಹಾಗೂ ಉತ್ತಮವಾದದನ್ನು ಪ್ರೋತ್ಸಾಹಿಸುವುದು ಎಂದು ಪರಿಷದ್‌ನ ಧ್ಯೇಯ, ಗುರಿ, ತತ್ವಗಳ ಕುರಿತು ಮಾಹಿತಿ ನೀಡಿದರು.ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ವಿವೇಕಾನಂದ ಪಾಟೀಲ, ಪ್ರಾಂತಪ್ರಸಾರ, ಪ್ರಚಾರ ಪ್ರಮುಖ ಸುನೀಲ ಭೈರವಾಡಗಿ ಹಾಗೂ ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಸಿದ್ದು ಹೂಗಾರ ಮಾತನಾಡಿದರು,ಪ್ರಖಂಡ ಅಧ್ಯಕ್ಷ ಶ್ರೀಧರ ನಾಡಗೌಡ, ಸಹಸಂಪರ್ಕ ಪ್ರಮುಖ…

Read More

ದೇವರಹಿಪ್ಪರಗಿ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಿ ಜ್ಞಾನ ಕೇಂದ್ರಗಳಾಗಿ ರೂಪಿಸುವುದರ ಮೂಲಕ ಶೈಕ್ಷಣಿಕ ಬಲವರ್ಧನೆ ಮಾಡಬೇಕಾಗಿದೆ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಹೇಳಿದರು.ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಪ್ರೌಡಶಾಲೆ ಸಭಾಂಗಣದಲ್ಲಿ ಶನಿವಾರ ಜರುಗಿದ ದೇವರಹಿಪ್ಪರಗಿ ಹಾಗೂ ಕಲಕೇರಿ ವಲಯಗಳ ಮುಖ್ಯಗುರುಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಬೇಕು. ದಾಖಲಾದ ಮಕ್ಕಳೆಲ್ಲರೂ ಶಾಲೆಗೆ ತಪ್ಪದೇ ಹಾಜರಿರುವಂತೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಪಡೆದಿರುವ ಮಗು ಯಾವುದೇ ಕಾರಣಕ್ಕೂ ಖಾಸಗಿ ಶಾಲೆಗಳಲ್ಲಿ ಇರಕೂಡದು. ಇಲ್ಲವಾದಲ್ಲಿ ಆಯಾ ಶಾಲೆಯ ಮುಖ್ಯಗುರುಗಳನ್ನೇ ಹೊಣೆಗಾರರನ್ನಾಗಿ ಮಾಡಿ, ನೋಟೀಸ್ ನೀಡಿ, ನಂತರ ಅವರ ಮೇಲೆ ಕಟ್ಟುನಿಟ್ಟಾದ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ಪಾಠವನ್ನು ಮಾಡುವ ಸಂದರ್ಭದಲ್ಲಿ ಅಗತ್ಯ ಪೂರ್ವಸಿದ್ದತೆ ಮಾಡಿಕೊಂಡು ಪಾಠೋಪಕರಣಗಳನ್ನು ಬಳಸಿ ಪರಿಣಾಮಕಾರಿಯಾಗಿ ಬೋಧಿಸಬೇಕು.ಮುಖ್ಯಗುರುಗಳು ಶಾಲೆಯ ಎಸ್‌ಡಿಎಮ್‌ಸಿಯವರೊಂದಿಗೆ ಸಮಾಲೋಚಿಸಿ ನಿಯಮಾನುಸಾರವಾಗಿ ಗುಣಮಟ್ಟದ ಶೂ ಹಾಗೂ ಸಾಕ್ಸ್ ಗಳನ್ನು ಖರೀದಿಸಬೇಕು. ಮಕ್ಕಳಿಗೆ ಗುಣಮಟ್ಟದ ತರಕಾರಿಗಳನ್ನು ಬಳಸಿ ಗುಣಮಟ್ಟದ ಬಿಸಿ ಊಟ ಒದಗಿಸಬೇಕು ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಮಾತನಾಡಿ,…

Read More

ಎಂಎಲ್ಸಿ ಸುನೀಲಗೌಡ ಪಾಟೀಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ಮಳೆಗಾಲದಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳನ್ನು ತಪ್ಪಿಸಲು ಡಂಗುರ ಸಾರುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಸೋಮವಾರ ತಿಕೋಟಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ರೂ. 1.50 ಕೋ. ವೆಚ್ಚದ ತಿಕೋಟಾ ತಾಜಪೂರ.ಎಚ್, ರೂ. 1.20 ಕೋ. ವೆಚ್ಚದ ತಿಕೋಟಾ- ಐ.ಟಿ.ಐ ಕಾಲೇಜು ವರೆಗಿನ ರಸ್ತೆ, ರೂ. 1.20 ಕೋ. ವೆಚ್ಚದ ತಿಕೋಟಾ ನಂದಿಕೋಲ ವರಗಿನ ರಸ್ತೆ ಸುಧಾರಣೆ ಭೂಮಿ ಪೂಜೆ ನೆರೆವೇರಿಸಿದರು. ಅಲ್ಲದೇ, ರೂ. 25 ಲಕ್ಷ ವೆಚ್ಚದ ತಿಕೋಟಾ ರೈತ ಸಂಪರ್ಕ ಕೇಂದ್ರ ಗೋಡಾವನ್ ಕಟ್ಟಡ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಮಳೆಗಾಲದಲ್ಲಿ ಜಿಲ್ಲೆಯ ನಾನಾ ಕಡೆಗಳಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳಲ್ಲಿ ಈಗಾಗಲೇ ಮಕ್ಕಳು ಸೇರಿದಂತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಮುಂಗಾರು ಆರಂಭವಾದ ನಂತರ ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಮಳೆ-ಗಾಳಿಗೆ ತುಂಡಾಗಿ ಬಿದ್ದಿರುತ್ತವೆ. ಅಲ್ಲದೇ,…

Read More

ಕೆಂಭಾವಿ: ಅಪರಾಧಿಕ ಪ್ರಕರಣಗಳನ್ನು ಭೇದಿಸಲು, ಅನುಭವ ಮತ್ತು ಮಾರ್ಗದರ್ಶನ ಮುಖ್ಯ ಅಂತಹ “ಅನುಭವದ ಅಮೃತ” ಎಂದು ಪಿಎಸ್ಐ ರಾಜಶೇಖರ ರಾಠೋಡ್ ಹೇಳಿದರು.ಪಟ್ಟಣದ ಪೋಲೀಸ್ ಠಾಣೆಯಲ್ಲಿ ರವಿವಾರ ಸಂಜೆ ಹಮ್ಮಿಕೊಂಡಿದ್ದ, ಅಪರಾಧ ವಿಭಾಗದ ಪಿಎಸ್ಐ ವೆಂಕಣ್ಣ ಶಹಾಪುರಕರ್ ವಯೋನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು ನಾನು ಮೊದಲ ಬಾರಿ ಠಾಣೆಗೆ ಬಂದು ಕರ್ತವ್ಯಕ್ಕೆ ಹಾಜರಾದಾಗ ನನಗೆ ಅನೇಕ ಸಲಹೆ ಸೂಚನೆ ನೀಡಿ ಮುನ್ನಡೆಸಿದ ಮೇಸ್ಟ್ರು ಎಂದವರು. ಒಬ್ಬ ಹಿರಿಯ ಅಣ್ಣನಾಗಿದ್ದ ವೆಂಕಣ್ಣ ಸಾಹೇಬ್ರು, ಕರ್ತವ್ಯ ಪ್ರಜ್ಞೆ ನಮಗೆಲ್ಲ ಮಾದರಿ ಸರ್ ನಿವೃತ್ತಿ ಬದುಕು ಸುಖಕರವಾಗಿರಲಿ ಎಂದು ಶುಭ ಹಾರೈಸಿ ಅಭಿನಂದಿಸಿದರು.ಸಿಪಿಐ ಸಚಿನ್ ಚಲವಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಸುರಪುರ, ಶಹಾಪುರ, ಗೋಗಿ ಹುಣಸಗಿ, ಠಾಣೆಯ ಪಿಎಸ್ಐ ಮತ್ತು ಎಎಸ್ಐ, ಸೇರಿದಂತೆ ಸಿಬ್ಬಂದಿ ವರ್ಗ, ಕುಟುಂಬಸ್ಥರು, ಆಪ್ತರು, ಅಭಿಮಾನಿಗಳು, ಮಾಧ್ಯಮದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸನ್ಮಾನಿಸಿ, ಗೌರವಿಸಿ, ಅಭಿನಂದಿಸಿ, ಶುಭಹಾರೈಸಿದರು.

Read More

ಬೆಂಗಳೂರು ಬೆಳಂದೂರು ಪೊಲೀಸ್ ಠಾಣೆ ಸಿಪಿಐ ರಮೇಶ ರೊಟ್ಟಿ ಮನದ ಮಾತು ಆಲಮಟ್ಟಿ: ಪ್ರೌಢಶಾಲೆ, ಕಾಲೇಜ್ ಕಲಿಯುವಾಗ ಶಾಲೆಯ ನಂತರ ಇದೇ ಆಲಮಟ್ಟಿಯ ಗಿರಣಿಯಲ್ಲಿ ಜೋಳ ಬೀಸತಿದ್ದೆ, ಬೇಸಿಗೆ ರಜೆಯಲ್ಲಿ ಎರಡೂ ತಿಂಗಳು ಇಲ್ಲಿದ್ದ ಗೇಟ್ ಕಂಪನಿಯಲ್ಲಿ ಕಬ್ಬಿಣದ ಕಾರ್ಯನಿರ್ವಹಿಸಿ ಹಣ ಸಂಪಾದಿಸುತ್ತಿದ್ದೆ, ಆದರೆ ಓದುವ ತುಡಿತ ಮಾತ್ರ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ ಎಂದು ಬೆಂಗಳೂರು ಬೆಳಂದೂರು ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಮೇಶ ರೊಟ್ಟಿ ಅಭಿಪ್ರಾಯಪಟ್ಟರು.ಆಲಮಟ್ಟಿಯ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಮಂಜಪ್ಪ ಹರ್ಡೇಕರ ಪ್ರೇರಿತ ಎಂಪಿಎಸ್ ಮತ್ತು ಎಂಎಚ್ಎಂ ಶಾಲೆಗಳ ಹಳೆ ವಿಧ್ಯಾರ್ಥಿಗಳ ಬಳಗ ಏರ್ಪಡಿಸಿದ್ದ ಹಳೆ ಸಾಧಕ ವಿದ್ಯಾರ್ಥಿಗಳೊಂದಿಗೆ ಇವತ್ತಿನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.ಎಷ್ಟೇ ಕಷ್ಟ ಬಂದರೂ ಓದುವ ಪ್ರವೃತ್ತಿ ಮಾತ್ರ ಎಂದಿಗೂ ಕಡಿಮೆಯಾಗಲಿಲ್ಲ, ಆಲಮಟ್ಟಿಯ ಗ್ರಂಥಾಲಯ ಹಾಗೂ ಸುತ್ತಮುತ್ತಲಿನ ಅನಾಥ ಕೋಣೆಗಳೇ ನಮ್ಮ ಅಧ್ಯಯನದ ತಾಣಗಳಾಗಿದ್ದವು ಎಂದರು.ಈಗಿನ ಶೈಕ್ಷಣಿಕ ವ್ಯವಸ್ಥೆ, ಜಗತ್ತು ಸಾಕಷ್ಟು ಮುಂದಿದೆ, ಇಲ್ಲಿಯ ವಿದ್ಯಾರ್ಥಿಗಳು ಆ ಮಟ್ಟಕ್ಕೆ ಬೆಳೆಯಬೇಕಿದೆ, ಹೀಗಾಗಿ ಇಲ್ಲಿಯ…

Read More

ವಿಜಯಪುರ: ಶಿಕ್ಷಕರ ಅರ್ಹತಾ ಪರೀಕ್ಷೆಗಳು ನಡೆಯುತ್ತಿರುವ ವಿಜಯಪುರ ನಗರದ ಪಿಡಿಜೆ ಪ್ರೌಢಶಾಲೆ ಹಾಗೂ ವ್ಹಿ.ಬಿ.ದರಬಾರ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ರವಿವಾರ ಬೆಳಗಿನ ಅವಧಿಯ ಹಾಗೂ ಅಪರಾಹ್ನ ಅವಧಿಯ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಪರೀಕ್ಷೆಗಳು ಸುಗಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯುತ್ತಿರುವ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.ಸದರಿ ಪಿ.ಡಿ.ಜೆ. (ಬಿ) ಪ್ರೌಢ ಶಾಲೆ ಪರೀಕ್ಷಾ ಕೇಂದ್ರದಲ್ಲಿ ೧೬ ಕೊಠಡಿಗಳಿದ್ದು, ೧೬ ಕೊಠಡಿ ಮೇಲ್ವಿಚಾರಕರು, ೦೨ ರೀಲಿವರ, ೦೧ ಮೊಬೈಲ ಸ್ವಾಧೀನಾಧಿಕಾರಿ, ಪೊಲೀಸ್ ಸಿಬ್ಬಂದಿಗಳು ಮತ್ತು ಕಚೇರಿ ಸಹಾಯಕರು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ನೊಂದಣಿಯಾದ ೨೯೩ ಪರೀಕ್ಷಾರ್ಥಿಗಳಲ್ಲಿ ೨೭೧ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೨೨ ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು. ವ್ಹಿ.ಬಿ. ದರಬಾರ ಹೈಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನೊಂದಣಿಯಾದ ೨೩೫ ಪರೀಕ್ಷಾರ್ಥಿಗಳಲ್ಲಿ ೨೦೫ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೩೦ ಪರೀಕ್ಷಾರ್ಥಿಗಳು ಗೈರು…

Read More

ವಿಜಯಪುರ: ನಗರದ ಬಬಲೇಶ್ವರ ನಾಕಾ ಬಳಿ ನಿರ್ಮಿಸಲಾದ ಸರ್ದಾರ ವಲ್ಲಭಬಾಯಿ ಪಟೇಲ್ ವಾಣಿಜ್ಯ ಮಳಿಗೆಗಳನ್ನು ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಸಮುದಾಯವರಿಗೆ ಮಾತ್ರ ಹಂಚಿಕೆ ಮಾಡಬೇಕೆಂದು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಮಳಿಗೆಗಳನ್ನು ಲೋಕೋಪಯೋಗಿ ಇಲಾಖೆಯ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯ ರೂ.೩.೫೬ ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿದೆ. ಇಲಾಖಾ ಸರ್ಕಾರದ ಮಾರ್ಗಸೂಚಿಯಲ್ಲಿಯೂ ಸದರಿ ಮಳಿಗೆಗಳನ್ನು ಕೇವಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನರಿಗೆ ಮಾತ್ರ ಹಂಚಿಕೆ ಮಾಡಬೇಕೆಂಬ ಷರತ್ತಿದೆ. ಹೀಗಾಗಿ ಬೇರೆಯವರಿಗೆ ಹಂಚಿಕೆ ಮಾಡಲು ಬರುವುದಿಲ್ಲ. ಹೀಗಾಗಿ ಈ ಎಲ್ಲಾ ಮಳಿಗೆಗಳ ಮೇಲಿನ ಸಂಪೂರ್ಣ ಹಕ್ಕನ್ನು ಎಸ್.ಸಿ, ಎಸ್.ಟಿ ಸಮುದಾಯದವರೇ ಹೊಂದಿದ್ದಾರೆ.ಆದರೆ, ಮಹಾನಗರ ಪಾಲಿಕೆ ಮೇಯರ್ ಅವರು, ಎಸ್.ಸಿ, ಎಸ್.ಟಿ ಜೊತೆಗೆ ಇತರರಿಗೂ ಹಂಚಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗೆ ಮಾಡಿದರೆ, ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಅನ್ಯಾಯವ್ಯಸಗಿದಂತಾಗುತ್ತದೆ. ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರಿಗೆ ಅನ್ಯಾಯವಾಗಲು…

Read More

ಕಂದಾಯ ದಿನಾಚರಣೆ ಪ್ರಯುಕ್ತ ಶ್ರಮದಾನ ಕಾರ್ಯಕ್ರಮದಲ್ಲಿ ಡಿಸಿ ಟಿ.ಭೂಲನ್ ಅಭಿಮತ ವಿಜಯಪುರ: ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖಾ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕಂದಾಯ ದಿನ ಆಚರಣೆಯ ಅಂಗವಾಗಿ ಶ್ರಮದಾನ ಸ್ವಚ್ಚತಾ ಹಾಗೂ ಸಸಿ ನೆಡುವ ಕಾರ್ಯಕ್ರಮ ಸೋಮವಾರ ನಡೆಯಿತು.ಕಂದಾಯ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಧಿಕಾರಿ,ಸಿಬ್ಬಂದಿ ಜೊತೆಗೂಡಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ವಚ್ಚತಾ ಶ್ರಮದಾನ ಕೈಗೊಂಡು, ನಂತರ ಜಿಲ್ಲಾ ಪಂಚಾಯತಿಯ ರಸ್ತೆಯಲ್ಲಿರುವ ಚುನಾವಣಾ ವ್ಹೇರ್ ಹೌಸ್ ಆವರಣದಲ್ಲಿ ಗಿಡ ನೆಟ್ಟು ಸಸಿಗೆ ನೀರೆರೆದು ಮಾತನಾಡಿದ ಅವರು, ಸ್ವಚ್ಚತಾ ಕಾರ್ಯಕ್ರಮವು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಕಚೇರಿಯ ಆವರಣವೂ ಸೇರಿದಂತೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದರು.ವಿವಿಧ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಮನ್ವಯ ಸಾಧಿಸಿ ಚುನಾವಣಾ ವ್ಹೇರ್ ಹೌಸ್‌ನ ಖಾಲಿ ಇರುವ ಆವರಣದಲ್ಲಿ ಐದು ನೂರು ಸಸಿಗಳನ್ನು ನೆಡುವುದರ ಮೂಲಕ ಅರಣ್ಯೀಕರಣಗೊಳಿಸಿ ಪರಿಸರ ಪ್ರೀತಿ ಮೆರೆದು, ಈ ಸ್ಥಳವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ…

Read More

ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಜರುಗಿದ ವೈದ್ಯರ ದಿನಾಚರಣೆಯಲ್ಲಿ ಡಾ.ಶರಣ ಮಳಖೇಡ್ಕರ ಅಭಿಮತ ವಿಜಯಪುರ: “ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದೊಳು ತಾನಿಲ್ಲದಂತಿರಬೇಕು” ಎನ್ನುವ ಶರಣರ ವಾಣಿಯಂತೆ ಮಾಡಿದ ಸೇವೆಯ ಕುರಿತು ಆಡಿ ತೋರಿಸುತ್ತ ಸಾಗದೆ ತಮ್ಮ ಕಾರ್ಯವನ್ನು ಸಂತೃಪ್ತಿಯಿಂದ ಮಾಡುತ್ತಿರುವ ನಮ್ಮ ಆಸ್ಪತ್ರೆಯ ವೈದ್ಯರು ಅತೀ ಕಡಿಮೆ ಸಮಯದಲ್ಲಿಯೇ ಜೆಎಸ್‌ಎಸ್ ಎನ್ನುವ ಹೆಸರು ಕರುನಾಡಿಗೆ ಚಿರ ಪರಿಚಿತವಾಗುವಂತೆ ಮಾಡಿದ್ದಾರೆ. ಅವರ ಸಮರ್ಪಣಾ ಭಾವದ ಸೇವೆಗೆ ನಾವು ಏನು ನೀಡಿದರೂ ಕಡಿಮೆಯಾಗುತ್ತದೆ. ಅವರ ಋಣಭಾರವನ್ನು ಹೊತ್ತು ಅವರಿಗೆ ಶುಭ ಹಾರೈಸದ ಹೊರತು ನಮ್ಮ ಬಳಿ ಬೇರೆನು ಇಲ್ಲ ಎಂದು ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ ತಿಳಿಸಿದರು.ಸೋಮವಾರ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಎಲ್ಲ ವೃತ್ತಿಗಳಿಗಿಂತ ವೈದ್ಯ ವೃತ್ತಿಯು ಅತ್ಯಂತ ಶ್ರೇಷ್ಠವಾಗಿದೆ. ಸಾವಿನ ಮನೆ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ ಹೆಣ್ಣು ಮಕ್ಕಳೇ.. ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ ಅಯ್ಯೋ! ಮಕ್ಕಳಿನ್ನು ಚಿಕ್ಕವರು, ಮನೆ ಮತ್ತು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನದೆ.. ಹಾಗಾಗಿ ಯಾವುದೇ ರೀತಿ ಎಕ್ಸರ್ಸೈಜ್, ವಾಕಿಂಗ್, ಯೋಗ ಮಾಡೋಕಾಗಲ್ಲ.. ಏನ್ ಮಾಡ್ಲಿ ಫ್ಯಾಮಿಲಿ ಕಮಿಟ್ಮೆಂಟ್ಸ್ ಇದು ಒಬ್ಬಾಕೆಯ ಮಾತಾದರೆ ನನಗೆ ನಿಜ್ವಾಗ್ಲೂ ದಿನಕ್ಕೆ ಒಂದಿಪ್ಪತ್ತು ನಿಮಿಷ ಆದ್ರೂ ಯೋಗ ವಾಕಿಂಗ್ ಏನಾದರೂ ಮಾಡೋಕೆ ಆಸೆ ಇದೆ ಆದರೆ ನನ್ನ ಕೆಲಸ ನನ್ನ ಜವಾಬ್ದಾರಿಗಳು ನನಗೆ ಅಡ್ಡಗಾಲಾಗಿವೆ., ಐ ಯಾಮ್ ಹೆಲ್ಪ್ ಲೆಸ್… ಇದು ಮತ್ತೊಬ್ಬಾಕೆಯ ಉವಾಚ. ನನಗೂ ಏನು ಮಾಡೋಕ್ ಆಗ್ತಾ ಇಲ್ಲ ಮಕ್ಕಳಿಗೆ ರಜೆ ಬಿಟ್ಟಿದೆ ಅಲ್ಲಿ ಇಲ್ಲಿ ಅಂತ ಪ್ರವಾಸ, ಮದುವೆ ಮುಂಜಿ ಅಂತ ಓಡಾಡ್ತಾ ಇದ್ವಿ… ಇದೀಗ ನನ್ನ ಸಂಪೂರ್ಣ ದೇಹ ನನಗೆ ಸಹಕರಿಸ್ತಾ ಇಲ್ಲ ಅಂತ ಅನ್ನಿಸ್ತಾ ಇದೆ. ಚಿಕ್ಕಂದಿನಲ್ಲಿ ನನಗೆ ಹಾಡೋಕೆ, ಡಾನ್ಸ್ ಮಾಡೋಕೆ ತುಂಬಾ ಇಷ್ಟ ಇತ್ತು, ಸಾಕಷ್ಟು ಪ್ರಶಸ್ತಿಗಳನ್ನು…

Read More