ದೇವರಹಿಪ್ಪರಗಿ: ಹಿಂದೂ ಸಂಸ್ಕೃತಿಯ ಉಚ್ಛ ಮಾನವ ಮೌಲ್ಯಗಳ ಅನುಷ್ಠಾನಕ್ಕಾಗಿ ಪ್ರಶಿಕ್ಷಣ ವರ್ಗಗಳ ಅಗತ್ಯತೆಯಿದೆ ಎಂದು ಜಿಲ್ಲಾ ವಿಎಚ್‌ಪಿ ಅಧ್ಯಕ್ಷ ಮಲ್ಲಿಕಾರ್ಜುನ ರೂಢಗಿ ಹೇಳಿದರು.
ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಭಾನುವಾರ ಜರುಗಿದ ವಿಶ್ವ ಹಿಂದೂ ಪರಿಷದ್‌ನ ಜಿಲ್ಲಾ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವದೇಶ, ಸ್ವಭಾಷೆ, ಸ್ವಭೂಷಣದ ಬಗ್ಗೆ ಸ್ವಾಭಿಮಾನ ಮತ್ತು ಸ್ವದೇಶಿ ವಸ್ತುಗಳ ಬಗ್ಗೆ ಅಭಿಮಾನ ಮೂಡಿಸುವುದರಲ್ಲಿ ಪ್ರಶಿಕ್ಷಣ ವರ್ಗಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕ್ಷೇತ್ರಿಯ ಧರ್ಮಪ್ರಸಾರದ ಮುಖ್ಯವಕ್ತಾರ ಬಸವರಾಜಜೀ ಮಾತನಾಡಿ, ಸಮುದಾಯ ಹಾಗೂ ದೇಶದ ಒಳಿತಿಗಾಗಿ ಹೊಣೆಗಾರಿಕೆಯಿಂದ ಕಾರ್ಯ ಮಾಡುವುದನ್ನೇ ಜವಾಬ್ದಾರಿ ಎನ್ನುತ್ತೇವೆ. ಸಂಘಟನೆ ಮತ್ತು ಸಂಘಟಕನ ಮುಖ್ಯ ಕಾರ್ಯ ಒಳ್ಳೆಯದು ಹಾಗೂ ಉತ್ತಮವಾದದನ್ನು ಪ್ರೋತ್ಸಾಹಿಸುವುದು ಎಂದು ಪರಿಷದ್‌ನ ಧ್ಯೇಯ, ಗುರಿ, ತತ್ವಗಳ ಕುರಿತು ಮಾಹಿತಿ ನೀಡಿದರು.
ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ವಿವೇಕಾನಂದ ಪಾಟೀಲ, ಪ್ರಾಂತಪ್ರಸಾರ, ಪ್ರಚಾರ ಪ್ರಮುಖ ಸುನೀಲ ಭೈರವಾಡಗಿ ಹಾಗೂ ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಸಿದ್ದು ಹೂಗಾರ ಮಾತನಾಡಿದರು,
ಪ್ರಖಂಡ ಅಧ್ಯಕ್ಷ ಶ್ರೀಧರ ನಾಡಗೌಡ, ಸಹಸಂಪರ್ಕ ಪ್ರಮುಖ ಶೇಖರಗೌಡ ಹರನಾಳ, ಶ್ರೀಶೈಲ ಯಂಭತ್ನಾಳ, ಕಲ್ಮೇಶ ಬುದ್ನಿ, ಚಿದಾನಂದ ಕುಂಬಾರ, ಮಹಾಂತೇಶ ಬಿರಾದಾರ, ಪುನೀತ ಹಿಪ್ಪರಗಿ, ಮಲ್ಕು ಬಾಗೇವಾಡಿ, ಭೀಮನಗೌಡ ಲಚ್ಯಾಣ, ಉಮೇಶ ಗುಳಬಾಳ, ಮಾದೇವಿ ಹರನಾಳ, ಗೌರಮ್ಮ ಕರ್ಪೂರಮಠ, ಸರೋಜಿನಿ ಬಿರಾದಾರ, ಸೌಮ್ಯ ಹಿರೇಮಠ, ಪಾರ್ವತಿ ಪೂಜಾರಿ, ಬಸವರಾಜ ನಾಯ್ಕೋಡಿ, ಶ್ರೀಶೈಲ ಹಿರೇಮಠ, ದುಸ್ಸಂಗರಾಯ ಹಿಪ್ಪರಗಿ ಸೇರಿದಂತೆ ಸಿಂದಗಿ, ನಿಡಗುಂದಿ, ತಾಳಿಕೋಟ, ಇಂಡಿ, ಸಿಂದಗಿ ಪ್ರಖಂಡಗಳ ಪ್ರಮುಖರು ಇದ್ದರು.
Subscribe to Updates
Get the latest creative news from FooBar about art, design and business.
ಹಿಂದೂ ಸಂಸ್ಕೃತಿ ಮೌಲ್ಯಗಳ ಅನುಷ್ಠಾನಕ್ಕೆ ಪ್ರಶಿಕ್ಷಣ ವರ್ಗಗಳ ಅಗತ್ಯವಿದೆ
Related Posts
Add A Comment

