ವಿಜಯಪುರ ಜಿಲ್ಲಾ ಕೃಷಿಕ ಸಮಾಜದ ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲು ಆಗ್ರಹಿಸಿ ವಿಜಯಪುರ ಜಿಲ್ಲಾ ಕೃಷಿಕ ಸಮಾಜದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲಿಸಲಾಯಿತು.
ಇವತ್ತಿನ ಜಿಲ್ಲಾ ಸಭೆಯಲ್ಲಿ ಚರ್ಚಿಸುತ್ತಾ ಜಿಲ್ಲೆಯ ರೈತರು ತೊಗರಿ, ಗೊಂಜಾಳ ಹಾಗೂ ಇತರೆ ಮುಂಗಾರಿನ ಬೆಳೆಗಳು ಮಳೆಯ ಕೊರತೆಯಿಂದ ಸಂಪೂರ್ಣ ಹಾಳಾಗಿದ್ದು ಅಧಿಕಾರಿಗಳು ಎಲ್ಲ ತಾಲೂಕಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲಿಸಬೇಕು ಹಾಗೂ ಬರ ಪೀಡಿತ ತಾಲೂಕುಗಳು ಎಂದು ಗೋಷಣೆಮಾಡಿ ಶೀಘ್ರ ಬರ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ವಿನಂತಿಪೂರ್ವಕವಾಗಿ ಆಗ್ರಹಿಸಲಾಯಿತು .
ಭೀಮಾ ನದಿ ತೀರದಲ್ಲಿ ನೀರಿನ ಸಮಸ್ಯೆ ಆಗಿದ್ದು ಕೂಡಲೇ ಜನ ಹಾಗೂ ಜಾನವಾರಗಳಿಗೆ ಕುಡಿಯುವ ನೀರಿನ ಕೊರತೆ ನೀಗಿಸಲು ಮಹಾರಾಷ್ಟ್ರ ಸರ್ಕಾರದ ಜೊತೆ ಚರ್ಚಿಸಿ ನದಿಗೆ ನೀರು ಹರಿಸಬೇಕೆಂದು ಆಗ್ರಹಿಸಲಾಯಿತು .
ಸಭೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ ಸೋಮನಾಳ, ಸಂಜಯ ಪಾಟೀಲ ಕನಮಡಿ , ಶಿವಪ್ಪಗೌಡ ಬಿರಾದಾರ , ದಾನಮ್ಮಗೌಡ್ತಿ ಪಾಟೀಲ , ಪೀರಗೊಂಡ ಗಧ್ಯಾಳ , ಮಹಾವೀರ ಕುಸನಾಳ , ರಾಮನಗೌಡ ಪಾಟೀಲ , S ಒ ಆನಂದಿ , ಶಂಕರಗೌಡ ಪಾಟೀಲ , ಃ S ಮಾಡಗಿ , ಶ್ರೀಶೈಲಗೌಡ ಪಾಟೀಲ , ಸಂಗನಗೌಡ ಪಾಟೀಲ ಮುಳವಾಡ , ಒ S ಕಾಶಿನಕುಂಟೆ , ನಿಂಗನಗೌಡ ಪಾಟೀಲ , ಶಂಕರ ರೇವಡಿ , ಅಯನಗೌಡ ಪಾಟೀಲ , ಒ ಔ ಹಿರೇಕುರಬರ , ಒ S ಕೊಕರೆ , ಉ ಏ ನೆಲ್ಲಗಿ , ವೆಂಕನಗೌಡ ಪಾಟೀಲ , ರಮೇಶ ಪೂಜಾರಿ, ಎ ಏ ಪಾಲ್ಕೆ , ಸಂಗಮೇಶ ಅಂಗಡಿ ಹಾಗೂ ಜಿಲ್ಲೆಯ ಪ್ರಗತಿಪರ ರೈತರು ಉಪಸ್ಥಿತರಿದ್ದರು.

