ವಿಜಯಪುರ: ಶಿಕ್ಷಕರ ಅರ್ಹತಾ ಪರೀಕ್ಷೆಗಳು ನಡೆಯುತ್ತಿರುವ ವಿಜಯಪುರ ನಗರದ ಪಿಡಿಜೆ ಪ್ರೌಢಶಾಲೆ ಹಾಗೂ ವ್ಹಿ.ಬಿ.ದರಬಾರ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರವಿವಾರ ಬೆಳಗಿನ ಅವಧಿಯ ಹಾಗೂ ಅಪರಾಹ್ನ ಅವಧಿಯ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಪರೀಕ್ಷೆಗಳು ಸುಗಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯುತ್ತಿರುವ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಸದರಿ ಪಿ.ಡಿ.ಜೆ. (ಬಿ) ಪ್ರೌಢ ಶಾಲೆ ಪರೀಕ್ಷಾ ಕೇಂದ್ರದಲ್ಲಿ ೧೬ ಕೊಠಡಿಗಳಿದ್ದು, ೧೬ ಕೊಠಡಿ ಮೇಲ್ವಿಚಾರಕರು, ೦೨ ರೀಲಿವರ, ೦೧ ಮೊಬೈಲ ಸ್ವಾಧೀನಾಧಿಕಾರಿ, ಪೊಲೀಸ್ ಸಿಬ್ಬಂದಿಗಳು ಮತ್ತು ಕಚೇರಿ ಸಹಾಯಕರು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ನೊಂದಣಿಯಾದ ೨೯೩ ಪರೀಕ್ಷಾರ್ಥಿಗಳಲ್ಲಿ ೨೭೧ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೨೨ ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು. ವ್ಹಿ.ಬಿ. ದರಬಾರ ಹೈಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನೊಂದಣಿಯಾದ ೨೩೫ ಪರೀಕ್ಷಾರ್ಥಿಗಳಲ್ಲಿ ೨೦೫ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೩೦ ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಎ. ಪಿ. ಚೌಹಾಣ, ಪರೀಕ್ಷೆ ಕೇಂದ್ರದ ಮುಖ್ಯ ಅಧೀಕ್ಷಕರುಎ. ಡಿ. ಅವಟಿ ಹಾಗೂ ಇತರರು ಉಪಸ್ಥಿತರಿದ್ದರು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಶ್ರೀಮತಿ ಉಮಾದೇವಿ ಹಾಗೂ ಸ್ಥಾನಿಕ ಜಾಗೃತ ಧಳದ ಅಧಿಕಾರಿ ಶಿವಾನಂದ ಧನ್ಯಾಳ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

