ಚುರುಕಾದ ಮತದಾರರ ಪಟ್ಟಿಯ ಮನೆ ಮನೆ ಗಣತಿ ಕಾರ್ಯ | ಜಿಲ್ಲಾಧಿಕಾರಿ ಡಾ. ಆನಂದ ಕೆ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಗಣತಿ ಕಾರ್ಯ ಭರದಿಂದ ನಡೆದಿದ್ದು, ೧೪.೮೩ ಲಕ್ಷ ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.
ಜೂನ್ ೧೬, ೨೦೨೬ರಲ್ಲಿದ್ದಂತೆ ಒಟ್ಟು ೧೯,೮೨,೧೧೪ ಮತದಾರರಿದ್ದು, ಇವರಿಗೆ ಸಂಬಂಧಿಸಿದ ಗಣತಿ ನಮೂನೆಗಳನ್ನು ಮುದ್ರಿಸಿ ಬಿ.ಎಲ್.ಒ ಗಳಿಗೆ ವಿತರಿಸಲಾಗಿದೆ. ಮನೆ ಮನೆ ಗಣತಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಜೂನ್ ೩೦, ೨೦೨೬ ರಿಂದ ಆಗಸ್ಟ್ ೦೮, ೨೦೨೬ ರವರೆಗೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಪ್ರಸ್ತುತ ಗಣತೀಕರಣದ ಸ್ಥಿತಿ (ಜುಲೈ ೨೪, ೨೦೨೬ರ ಸಂಜೆ ೬:೦೦ ಗಂಟೆಯ ವೇಳೆಗೆ): ಒಟ್ಟು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ೧೪,೮೩,೫೦೨ ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದವರು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಸಾರ್ವಜನಿಕರು ಸಲ್ಲಿಸಿದ ನಮೂನೆಗಳು: ೩,೮೬೭, ಸಂಗ್ರಹಿಸಲಾಗದ/ಗೈರುಹಾಜರಾದ ಮತದಾರರು: ೧೯,೯೮೭, ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು: ೬೧,೨೪೭, ಮರಣ ಹೊಂದಿರುವ ಮತದಾರರು: ೩೫,೭೦೫, ಈಗಾಗಲೇ ನೋಂದಾಯಿಸಿಕೊಂಡ ಮತದಾರರು: ೧೪,೭೨೯ ಹಾಗೂ ಇತರೆ: ೪೨೨
ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರಗಳಾದ ಮುದ್ದೇಬಿಹಾಳ, ದೇವರಹಿಪ್ಪರಗಿ, ಬಸವನ ಬಾಗೇವಾಡಿ, ಬಬಲೇಶ್ವರ, ವಿಜಯಪುರ ನಗರ, ನಾಗಠಾಣ, ಇಂಡಿ ಹಾಗೂ ಸಿಂದಗಿ ಕ್ಷೇತ್ರಗಳಲ್ಲಿ ಒಟ್ಟು ೨,೦೯೨ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಸಾರ್ವಜನಿಕರು ಹಾಗೂ ಮತದಾರರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕೃತ ವೆಬ್‌ಸೈಟ್ viರಿಚಿಥಿಚಿಠಿuಡಿಚಿ.ಟಿiಛಿ.iಟಿ ಗೆ ಭೇಟಿ ನೀಡಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

