ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ೪ನೇ ವಾರ್ಡಿನ ಸಾರ್ವಜನಿಕರ ಬೇಡಿಕೆಯಂತೆ ಬೋರ್‌ವೆಲ್ ಕೊರೆಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ ಹೇಳಿದರು.
ಪಟ್ಟಣದ ೪ನೇ ವಾರ್ಡಿನಲ್ಲಿ ಗುರುವಾರ ಸಾಯಂಕಾಲ ಬೋರ್‌ವೆಲ್ ಕೊರೆಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಬೋರ್‌ವೆಲ್ ಮೂಲಕ ೩ ಗುಮ್ಮಿಗಳನ್ನು ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು ಎಂದರು.
ವಾರ್ಡಿನ ಬಿಜೆಪಿ ಧುರೀಣ ಸೋಮು ದೇವೂರ ಮಾತನಾಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ತಮ್ಮ ತಾಯಿ ರತ್ನವ್ವ ದೇವೂರರ ಅನುದಾನ ಬಳಕೆ ಮಾಡಿಕೊಂಡು ಈ ಭಾಗದ ಜನರ ನೀರಿನ ಅವಶ್ಯಕತೆಗೆ ಅಗತ್ಯ ಕ್ರಮವಹಿಸಲಾಗಿದೆ. ಇದರಿಂದ ಕನಿಷ್ಠ ೩ ವಾರ್ಡುಗಳಿಗೆ ಅನುಕೂಲವಾಗಲಿದೆ ಎಂದರು.
ಮೂರು ದಿನಗಳಲ್ಲಿ ಬೋರ್‌ವೆಲ್ ಕೊರೆಸಿ ನೀರನ್ನು ಶಾಶ್ವತವಾಗಿ ಪೂರೈಸಲಾಗುವುದು ಎಂದು ಹೇಳಿದಂತೆ ನಡೆದ ಮುಖ್ಯಾಧಿಕಾರಿ ಹಾಗೂ ವಾರ್ಡಿನ ಸದಸ್ಯರ ನಡೆಯನ್ನು ವಾರ್ಡಿನ ಗುರುಬಾಯಿ ಬಿರಾದಾರ(ಜಿರ್ಲಿ), ರಜಿನಾಬಾಯಿ ಜಿರ್ಲಿ, ರೂಪಾ ಅಗಸರ, ಶಾರದಾ ಸೌದಿ ಸಹಿತ ಮಹಿಳೆಯರು ಶ್ಲಾಘಿಸಿದ್ದಾರೆ.
ಮಡುಗೌಡ ಬಿರಾದಾರ, ಸುರೇಶ ಬಿರಾದಾರ, ರಾವುತ ಅಗಸರ, ಕುಮಾರ ಸೌದಿ, ರಮೇಶ ದೇವೂರ ಸಿಬ್ಬಂದಿ ಸೋಮು ಭೋವಿ ಇದ್ದರು.

