Author: editor.udayarashmi@gmail.com

ವಿಜಯಪುರ: ವಿಜಯಪುರದ ಸಿದ್ಧನಗೌಡ ಚಂದ್ರಶೇಖರ ಹೊಸಮನಿ ಅವರು ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ `ಸೈಂಟೋಮೆಟ್ರಿಕ್ ಡೈಮೆನಷನ್ಸ್ ಆಫ್ ಫಾರ್ಮಕಾಲಜಿ ಆ್ಯಂಡ್ ಫಾರ್ಮಸಿ ರಿಸರ್ಚ್ ಇನ್ ಇಂಡಿಯಾ : ಒಂದು ಅಧ್ಯಯನ ಎಂಬ ವಿಷಯಾಧಾರಿತ ಮಹಾಪ್ರಬಂಧವನ್ನು ಮನ್ನಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಘೋಷಿಸಿದೆ.

Read More

ವಿಜಯಪುರ: ಜಿಲ್ಲೆಯಲ್ಲಿ ಸೊಳ್ಳೆಗಳ ಅಬ್ಬರದಿಂದ ಡೆಂಗ್ಯೂ ನಿಯಂತ್ರಣ ಹಾಗೂ ಶುದ್ಧ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಕೆ.ಆರ್.ಎಸ್. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ಸೊಳ್ಳೆಗಳ ಅಬ್ಬರ ಹೆಚ್ಚಾಗಿದ್ದು, ಹಾಗೂ ಮಳೆಗಾಲದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದ್ದು, ರಾಸಾಯನಿಕ ಗೊಬ್ಬರಗಳಿಂದ ದೋಷಿತ ನೀರು ಸರಬರಾಜು ಆಗಿದ್ದು, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಡೆಂಗ್ಯೂ ಹಾಗೂ ಇತರ ಹಲವಾರು ರೋಗಗಳು ಉಂಟಾಗುತ್ತಿವೆ. ಜಿಲ್ಲೆಯಲ್ಲಿ ಮತ್ತು ವಿಜಯಪುರ ನಗರದಲ್ಲಿ ಸೊಳ್ಳೆಗಳ ಮೇಲೆ ಕೀಟನಾಶಕ ಔಷಧಗಳನ್ನು ಸಿಂಪರಣೆ ಮಾಡುವಂತಾಗಬೇಕು. ಇನ್ನು ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಅಗತ್ಯವಾದ ಸೂಚನೆ ಮತ್ತು ಆರೋಗ್ಯಕ್ಕೆ ಬೇಕಾಗುವ ತುರ್ತು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ತುರ್ತು ಸಭೆ ಕರೆದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೂ ಮತ್ತು ಜಿಲ್ಲೆಯಲ್ಲಿ ಏಕಕಾಲದಲ್ಲಿ ೪೦ ಕೀಟನಾಶಕಗಳ ಕೆಟ್ಟಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು…

Read More

ಇಂಡಿ: ೧೨ ನೆಯ ಶತಮಾನದ ಶರಣರ ವಿಚಾರ ಧಾರೆಗಳನ್ನು ಅಂದಿನ ಅನುಭವ ಮಂಟಪ ಭಕ್ತ ಸಮುದಾಯಕ್ಕೆ ತಲುಪಿಸಿದಂತೆ ಅಥರ್ಗಾದ ಷಣ್ಮುಖಾರೂಢ, ಈರಯ್ಯ ಶ್ರೀಗಳು ಮತ್ತು ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಶ್ರೀಗಳ ಚಿಂತನೆಗಳನ್ನು ಇಂದಿನ ಜನ ಸಮುದಾಯಕ್ಕೆ ಮುಟ್ಟಿಸುವ ಕಾರ್ಯ ಆಗಬೇಕು, ಜನ ಸಾಮಾನ್ಯರು ಬದುಕಿನ ಸ್ವಾರ್ಥಕತೆಗೆ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಬೇಕೆಂದು ಕಾಗವಾಡದ ಯತಿಶ್ವರಾನಂದ ಶ್ರೀಗಳು ಹೇಳಿದರು.ಅವರು ತಾಲೂಕಿನ ಅಥರ್ಗಾ ಗ್ರಾಮದ ಶ್ರೀ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದಲ್ಲಿ ನಡೆದ ಗುರು ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಗುರುದೇವಾಶ್ರಮದ ಈಶ ಪ್ರಸಾದ ಶ್ರೀಗಳು ಮಾತನಾಡಿ, ೧೨ ನೆಯ ಶತಮಾನದಲ್ಲಿ ಶರಣಾಂದೋಲನ ಆದ್ಯ ಉದ್ದೇಶವೇ ವ್ಯಕ್ತಿಗತ ಪರಿವರ್ತನೆ, ವ್ಯಕ್ತಿ ಪರಿವರ್ತನೆ ಗೊಂಡರೆ ಸಹಜವಾಗಿ ಸಮುದಾಯ ಪರಿವರ್ತನೆ ಯಾಗುತ್ತದೆ. ಅಂತಹ ವ್ಯಕ್ತಿಗತ ಪರಿವರ್ತನೆಗೆ ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ಒಂದು ಉಜ್ವಲ ನಿದರ್ಶನ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತ ಸಮುದಾಯವೆಲ್ಲ ಸ್ವಾಭಾವಿಕವಾಗಿಯೇ ಸಿದ್ದೇಶ್ವರ ಶ್ರೀಗಳ ಪ್ರವಚನ ಅನುಸರಿಸಿದರು ಎಂದರು.ತಿಕೋಟಾದ ಚೆನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ ಸಿದ್ದೇಶ್ವರ…

Read More

ಇಂಡಿ: ಪಟ್ಟಣದ ಹೆಸ್ಕಾಂ ಇಲಾಖೆಯ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಚಿದಾನಂದ ಕಾಂಬಳೆ ಅವರು ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ.ಡಾ.ಅರವಿಂದ ಲಂಬು (ರಾಜ್ಯ ಹಿರಿಯ ಉಪಾಧ್ಯಕ್ಷ), ರವಿಕಾಂತ ಸಿ.ಎಂ(ರಾಜ್ಯ ಉಪಾಧ್ಯಕ್ಷ), ರಾಜೇಶ ಇಂಗಳಗಿ(ರಾಜ್ಯ ಪ್ರ,ಕಾರ್ಯದರ್ಶಿ), ಹಿರಗಪ್ಪ ಸಿಂಗ್ಯಾಗೋಳ(ರಾಜ್ಯ ಸಂಘಟನಾ ಕಾರ್ಯದರ್ಶಿ), ರವೀಂದ್ರ ಶಿವಯಗೊಳ, ದುರ್ಗಪ್ಪ ಛಲವಾದಿ(ಸಹ ಕಾರ್ಯದರ್ಶಿಗಳು), ಮೋಹನ ಗುನ್ನಾಪೂರ, ಡಾ.ಸುಜಾತಾ ಚಂಚಲಕರ(ರಾಜ್ಯ ಸಂಚಾಲಕರು), ಸುರೇಶ ದುಲಾರಿ( ರಾಜ್ಯ ಖಜಾಂಚಿ), ಶಿವಾನಂದ ಕಟ್ಟಿಮನಿ, ಪುನಿತಕುಮಾರ ಪಿ, ಕುಮಾರ ಬಾಗೇವಾಡಿ, ರಮೇಶ ಫಿರಗಾ, ಆಂಜನಯ್ಯಸ್ವಾಮಿ ಹೊಸಮನಿ, ಪಿ.ಎಸ್‌.ಧರಣಾಕರ, ರವೀಂದ್ರ ಇರನೂರ, ಯುವರಾಜ ನಾಟೀಕಾರ, ಚಿಕ್ಕಪ್ಪ ಕಾಂಬಳೆ ರಾಜ್ಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Read More

ಸಿಂದಗಿ ಜೆ.ಹೆಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಸಿಂದಗಿ: ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ನಿರಂತರವಾಗಿ ನೀಡುವುದು ಇಲಾಖೆಯ ಆದ್ಯ ಕರ್ತವ್ಯ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.ಪಟ್ಟಣದ ಜೆ.ಹೆಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿಂದಗಿ ತಾಲೂಕ ಆರೋಗ್ಯ ಇಲಾಖೆ ಹಾಗೂ ಜೆ.ಹೆಚ್.ಪಟೇಲ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡ ವಿಶ್ವ ಜನಸಂಖ್ಯೆ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಯೋಜನೆಯಲ್ಲಿ ತಾತ್ಕಾಲಿಕ ವಿಧಾನಗಳಾದ ಗರ್ಭ ನಿರೋಧಕ ಮಾತ್ರೆಗಳ ಸೇವನೆ, ವಂಕಿಧಾರಣೆ, ನಿರೋಧ ಬಳಕೆಯಿಂದ ಬೇಗನೆ ಗರ್ಭಧರಿಸುವದನ್ನು ತಡೆಯಬಹುದು. ಒಂದು ಮತ್ತು ಎರಡನೇಯ ಮಗುವಿನ ಅಂತರ ಕಾಪಾಡಬಹುದು. ಶಾಶ್ವತ ವಿಧಾನಗಳಾದ ಉದರ ದರ್ಶಕ ಹಾಗೂ ಉದರ ಛೇದಕ ಶಸ್ತ್ರಚಿಕಿತ್ಸೆ, ಮತ್ತು ಪುರುಷರಿಗಾಗಿ ನೋಸ್ಕಾಲ್‌ಪೆಲ್ ವ್ಯಾಸಕ್ಟಮಿ ಶಸ್ತ್ರ ಚಿಕಿತ್ಸೆಯಿಂದ ಸಂತಾನ ನಿಯಂತ್ರಿಸಬಹುದು ಎಂದರು.ಈ ವೇಳೆ ಪ್ರಾಚಾರ್ಯ ಡಾ.ಬಿ.ಎಮ್.ಹುರಕಡ್ಲಿ ಮಾತನಾಡಿ, ಆರೋಗ್ಯ ಇಲಾಖೆ ಕುಟುಂಬ…

Read More

ಸಿಂದಗಿ: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ ನಡೆಸಿಕೊಡುವ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಿಂದಗಿಯ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ನಿಂಗನಗೌಡ ಕರ್ನಾಳ ಹಾಗೂ ಮಾರ್ಗದರ್ಶಕರಾದ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಅವರಿಗೆ ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.ವಿದ್ಯಾರ್ಥಿಯ ಈ ಸಾಧನೆಗೆ ಮತ್ತು ಮಾರ್ಗದರ್ಶನ ನೀಡಿದ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಅವರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಅಶೋಕ ಮನಗೂಳಿ, ಸಂಸ್ಥೆಯ ನಿರ್ದೇಶಕ ಮಂಡಳಿ, ಮಹಾವಿದ್ಯಾಲಯ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.ಈ ವೇಳೆ ಉಪನ್ಯಾಸಕರಾದ ಸಿದ್ದಲಿಂಗ ಕಿಣಗಿ, ಸತೀಶ ಬಸರಕೋಡ, ಎಫ್.ಎ.ಹಾಲಪ್ಪನವರ, ಡಾ.ಶಾಂತುಲಾಲ ಚವ್ಹಾಣ, ಆರ್.ವಾಯ್.ಪರೀಟ, ಬಿ.ಎಸ್.ಬಿರಾದಾರ, ಆರ್.ಬಿ.ಹೊಸಮನಿ, ಎಸ್.ಪಿ.ಬಿರಾದಾರ, ಎಮ್.ಎನ್.ಅಜ್ಜಪ್ಪ ಸೇರಿದಂತೆ ಅನೇಕರು ಇದ್ದರು.

Read More

ದುರ್ವಾಸನೆಯುಕ್ತ ಶಾಲಾ ಪರಿಸರ | ಡೆಂಗ್ಯೂ-ಮಲೇರಿಯಾ ಭೀತಿ | ಮೂಲಸೌಕರ್ಯಗಳ ಕೊರತೆ | ಸ್ಪಂದಿಸದ ಅಧಿಕಾರಿಗಳು – ಇಂದುಶೇಖರ ಮಣೂರವಿಜಯಪುರ: ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಸೌಲಭ್ಯ ಉಂಟು, ಆದರೆ ಕುಡಿಯಲು – ತೊಳೆಯಲು ನೀರಿಲ್ಲ. ವಿಶಾಲ ಮೈದಾನವುಂಟು, ತಡೆಗೋಡೆ (ಕಂಪೌಂಡ್) ಇಲ್ಲ. ಶೌಚಾಲಯ ಉಂಟು, ಬಳಕೆಯಲ್ಲಿಲ್ಲ. ಇನ್ನು ಶಾಲಾ ಆವರಣದ ಪರಿಸರದಲ್ಲಿ ಸ್ವಚ್ಛತೆಯಂತೂ ಇಲ್ಲ.. ಇಲ್ಲ.. ಇಲ್ಲ. ಹೀಗೆ ’ಇಲ್ಲ’ಗಳ ಸಾಮ್ರಾಜ್ಯದಲ್ಲಿ ನರಳುತ್ತಿರುವ ಶಾಲೆಯೊಂದು ಜಿಲ್ಲೆಯ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದಲ್ಲಿರುವುದು ಮಾತ್ರ ’ಹೌದು’.ಓತಿಹಾಳ ಗ್ರಾಮದ ಸರಕಾರಿ ಪ್ರೌಡಶಾಲೆ ಸುಮಾರು ೮ ಎಕರೆ ಪ್ರದೇಶವನ್ನು ಹೊಂದಿದೆ. ಬಹುಶಃ ಜಿಲ್ಲೆಯಲ್ಲಿ ಇಷ್ಟೊಂದು ವಿಶಾಲವಾದ ವಿಸ್ತೀರ್ಣ ಹೊಂದಿದ ಶಾಲೆ ಬೇರೊಂದು ಇರಲಿಕ್ಕಿಲ್ಲ. ಇದೊಂದೇ ಈ ಶಾಲೆಗಿರುವ ಹೆಗ್ಗಳಿಕೆ. ಉಳಿದಂತೆ ಈ ಶಾಲಾ ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳೂ ಸಹ ವಿಶಾಲವಾಗಿವೆ.ಓತಿಹಾಳ ಗ್ರಾಮದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ೮, ೯ ಮತ್ತು ೧೦ ನೇ ತರಗತಿಗಳ ಕಲಿಕೆಗೆ ಅವಕಾಶವಿದೆ.…

Read More

-ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಪ್ರತಿಷ್ಠಿತ ಬಗಾನ್ ಫುಟ್‌ಬಾಲ್ ತಂಡದಲ್ಲಿ ಹೃದಯ್ ಎನ್ನುವ ಯುವಕನೊಬ್ಬ ಹೆಚ್ಚುವರಿ ಆಟಗಾರನಾಗಿ ಇದ್ದ. ಹೃದಯ್‌ನನ್ನು ತಂಡದ ಆಡಳಿತ ಮಂಡಳಿಯು ಅಭ್ಯಾಸ ಪಂದ್ಯಗಳಲ್ಲಿ ಆಡಿಸುತ್ತಿತ್ತೇ ವಿನಃ ಎಂದಿಗೂ ಪ್ರಮುಖ ಪಂದ್ಯಗಳ ಹನ್ನೊಂದು ಮಂದಿಯ ತಂಡದಲ್ಲಿ ಆಟವಾಡಿಸುತ್ತಾ ಇರಲಿಲ್ಲ, ಹೃದಯ್ ಎಂದಿಗೂ ತಾನು ಕೇವಲ ಮೀಸಲು ಆಟಗಾರ ಮತ್ತು ಅಭ್ಯಾಸ ಪಂದ್ಯಗಳ ಆಟಗಾರ ಎನ್ನುವ ಬೇಸರವಿಲ್ಲದೆ ಪ್ರತಿನಿತ್ಯವೂ ತಪ್ಪಿಸದೇ ಅಭ್ಯಾಸಕ್ಕೆ ಆಗಮಿಸುತ್ತಿದ್ದ. ಹೃದಯ್‌ನ ಆಟವನ್ನು ಅಭ್ಯಾಸದ ಸಂದರ್ಭದಲ್ಲಿ ಆತನ ತಂದೆಯು ಮೈದಾನದ ಮೂಲೆಯಲ್ಲಿ ಕುಳಿತು ವೀಕ್ಷಿಸುತ್ತಾ ಇದ್ದರು. ಅದೊಂದು ದಿನ ಪ್ರಮುಖ ಪಂದ್ಯಾವಳಿ ಪ್ರಾರಂಭವಾಗಿ ಬಗಾನ್ ತಂಡವು ಎಲ್ಲಾ ಹಂತಗಳನ್ನೂ ದಾಟಿ ಉಪಾಂತ್ಯವನ್ನು ತಲುಪಿದಾಗಲೂ ಹೃದಯ್ ಆಡುವ ಬಳಗದಲ್ಲಿ ಎಲ್ಲೂ ಕಾಣಲೇ ಇಲ್ಲ. ಆದರೆ ತಂಡವು ಫೈನಲ್ ತಲುಪಿ ಪಂದ್ಯ ಇನ್ನೇನು ಪ್ರಾರಂಭ ಆಗಬೇಕು ಎನ್ನುವಾಗ ಹೃದಯ್ ಹಠಾತ್ತನೆ ತಂಡದ ತರಬೇತುದಾರನ ಬಳಿ ತೆರಳಿ, ಇದುವರೆಗೂ ‘ನೀವು…

Read More

ದೇವರಹಿಪ್ಪರಗಿ: ಇದೇ ದಿ:೧೩ ರಂದು ಶನಿವಾರ ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಸ್ಮರಣಾರ್ಥ ಬೆಂಗಳೂರಿನಲ್ಲಿ ಭವನ ಮತ್ತು ಸಂಶೋಧನೆ, ತರಬೇತಿ ಕೇಂದ್ರ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ ಬಿಸನಾಳ ತಿಳಿಸಿದ್ದಾರೆ.ಪಟ್ಟಣದಲ್ಲಿ ಗುರುವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ಶೋಷಿತರ ಬಾಳಿನಲ್ಲಿ ಬೆಳಕು ಹರಿಸಿದ ಮುತ್ಸದ್ದಿ ಬಾಬು ಜಗಜೀವನರಾಮ್ ಸ್ಮರಣಾರ್ಥ ನಿರ್ಮಿಸಲಾಗಿರುವ ಭವನದ ಉದ್ಘಾಟನೆ ಬೆಂಗಳೂರಿನ ಮಾಗಡಿ ರಸ್ತೆಯ ಸುಮನಹಳ್ಳಿ ಸರ್ಕಲ್‌ನಲ್ಲಿಯ ನಿರಾಶ್ರೀತರ ಪರಿಹಾರ ಕೇಂದ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ಮಧ್ಯಾನ್ಹ ೩ ಗಂಟೆಗೆ ನೆರವೇರಲಿದೆ. ಈ ಸಂದರ್ಭದಲ್ಲಿ ಲೋಕಸಭೆಯ ಮಾಜಿ ಸ್ಪೀಕರ್ ಮೀರಾಕುಮಾರ, ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಭಾಗವಹಿಸಲು ಅನುಕೂಲವಾಗುವಂತೆ ಸಮಾಜಕಲ್ಯಾಣ ಇಲಾಖೆಯಿಂದ ೨ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ೧೦ ಜನರಿಗೆ ಭಾಗವಹಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಕಾಂಗ್ರೆಸ್ ಮುಖಂಡ ಸುಭಾಸ್ ಯಡಹಳ್ಳಿ, ರಮೇಶ ಗುಬ್ಬೇವಾಡ, ಸಂಜು ಕಲ್ಯಾಣಿ, ಸದಾಶಿವ ಪೂಜಾರಿ,…

Read More

ದೇವರಹಿಪ್ಪರಗಿ: ಮಣ್ಣೂರ ಗ್ರಾಮದ ತಾಂಡಾದ ಎಲ್.ಟಿ ೧ರಲ್ಲಿನ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯ ಜಾಗದ ಅಳತೆಯನ್ನು ಹದ್ದುಬಸ್ತು ಮಾಡಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಪ್ರವಾಸಿಮಂದಿರಕ್ಕೆ ಗುರುವಾರ ಆಗಮಿಸಿದ ಮಣೂರ ತಾಂಡಾದ ಸಾರ್ವಜನಿಕರು ತಹಶೀಲ್ದಾರರನ್ನು ಕಂಡು ಮಾತನಾಡಿ, ಶಾಲೆಗೆ ಕಂಪೌಂಡ್ ನಿರ್ಮಿಸಲು ಗ್ರಾಮ ಪಂಚಾಯಿತಿಯಿಂದ ಎನ್.ಆರ್.ಇ.ಜಿಯಡಿ ಸುಮಾರು ೬ ಲಕ್ಷ.ರೂಗಳ ಕ್ರೀಯಾಯೋಜನೆ ಸಿದ್ಧಪಡಿಸಲಗಿದೆ. ಶಾಲೆಯ ಜಾಗೆಯ ಆಸ್ತಿ ನಂ ೯೭೪ ಇದ್ದು, ಚಕಬಂದಿ ಪ್ರಕಾರ ೧೨೫ ಅಡಿ ಉದ್ದ, ೧೨೫ ಅಡಿ ಅಗಲ ಅಳತೆ ಹೊಂದಿದೆ. ಈಗ ಇದನ್ನು ಸಾರ್ವಜನಿಕರು ಅತೀಕ್ರಮಣ ಮಾಡದಂತೆ ತಡೆಯಲು ಸುತ್ತಲೂ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆದರೆ ಈಗಾಗಲೇ ಸುತ್ತಮುತ್ತಲಿನವರು ತಮ್ಮ ಮನೆಗಳ ಜೊತೆಗೆ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಈಗ ಕಂಪೌಂಡ್ ನಿರ್ಮಿಸಲು ಅಡಚಣೆ ಉಂಟು ಮಾಡುತ್ತಿದ್ದಾರೆ.ಅಡಚಣೆ ಕುರಿತು ಗ್ರಾಮ ಪಂಚಾಯಿತಿ ಹಾಗೂ ಎಸ್‌ಡಿಎಮ್‌ಸಿ ಅಧ್ಯಕ್ಷರು, ಶಾಲೆಯ ಮುಖ್ಯಶಿಕ್ಷಕರು ಈಗಾಗಲೇ ಸಾಕಷ್ಟು ತಿಳಿಹೇಳಿದ್ದರು ಅನಗತ್ಯ ತಕರಾರು ಮಾಡುತ್ತಿದ್ದಾರೆ. ಶಾಲೆಯ…

Read More