Author: editor.udayarashmi@gmail.com

ವಿಜಯಪುರ: ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗವನ್ನು ಜಾರಿ ಮಾಡದೇ ರಾಜ್ಯ ಸರ್ಕಾರ ವಿಳಂಬ‌ ಮಾಡುತ್ತಿದೆ. ವೇತನ ಆಯೋಗ ಜಾರಿಗೆ ತರದಿದ್ದರೆ ರಾಜ್ಯಾಧ್ಯಂತ ಶಾಲಾ ಕಾಲೇಜು ಸರ್ಕಾರಿ ಕಛೇರಿಗಳನ್ನು ಬಂದ್ ಮಾಡಿ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಹೇಳಿದರು.ನಗರದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಶುಕ್ರವಾರ ಸಂಜೆ ಏಳನೇ ವೇತನ ಜಾರಿ ಸೇರಿದಂತೆ ಎನ್ಪಿಎಸ್ ರದ್ದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಕುರಿತು ಮನವಿ ಸಲ್ಲಿಸಿ ಮಾತನಾಡಿದರು.ಏಳನೇ ವೇತನ ಕೊಡುವಲ್ಲಿ ರಾಜ್ಯ ಸರ್ಕಾರ ಎರಡು ವರ್ಷದಿಂದ ಮೀನಾಮೇಷ ಮಾಡುತ್ತಿದೆ. ನಾಲ್ಕು ರಾಜ್ಯಗಳಲ್ಲಿ ಎನ್ಪಿಎಸ್ (ನೂತನ ಪಿಂಚಣಿ ಯೋಜನೆ) ರದ್ದು ಮಾಡಿ ಓಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿ ಮಾಡಿದ್ದಾರೆ. ನಮ್ಮ‌ ರಾಜ್ಯದಲ್ಲೂ ಆಗಬೇಕು. ನೌಕರರು ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಿದ್ದು, ಪ್ರತಿ ಕಾಯಿಲೆ ಚಿಕಿತ್ಸೆಗೆ ಒಳಪಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಬೇಕು. ಬರುವ ಅಧಿವೇಶನದಲ್ಲಿ ನಮ್ಮ…

Read More

ಇಂಡಿ: ಬ್ಯಾಂಕಿನ ಸಾಲ ಪ್ರಕರಣಗಳು ಸೇರಿದಂತೆ ಒಟ್ಟು ಒಂದು ಕೋಟಿ ರೂ ವಸೂಲಾತಿಯಾಗಿದೆ. ಮತ್ತು ೨೧೨೨ ಪ್ರಕರಣಗಳು ಇತ್ಯರ್ಥ ವಾಗಿವೆ ಎಂದು ದಿವಾನಿ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ತಾಲೂಕು ಕಾನೂನು ಸೇವಾ ಸಮಿತಿ ಈಶ್ವರ ಎಸ್.ಎಂ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ಕಾರ್ಯಕ್ರಮದ ನಂತರ ಮಾತನಾಡಿದ ಅವರುಲೋಕ ಅದಾಲತ್‌ನಲ್ಲಿ ೨೧೨೨ ಪ್ರಕರಣಗಳು ಇತ್ಯರ್ಥ ಗೊಂಡಿವೆ. ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ ೨೪೮೬ ಪ್ರಕರಣಗಳು ಇತ್ಯರ್ಥ ಗೊಂಡಿದ್ದವು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸಿದೆ ಎಂದು ಈಶ್ವರ ಎಸ್.ಎಂ ತಿಳಿಸಿದರು.ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಶಾಂತತೆ ಭಂಗ ಉಂಟು ಮಾಡಿದ್ದು, ಅಪಘಾತ ಪ್ರಕರಣ, ಸಿವಿಲ್ ಪಾಲು, ವಾಟ್ನಿ ದಾವೆ, ನಿರ್ಭಂದಕಾಜ್ಞೆ ದಾವೆ, ವಾಹನ ಅಪಘಾತ ಪರಿಹಾರ ದಂತಹ ಪ್ರಕರಣ ಇತ್ಯರ್ಥ ಪಡಿಸಿದೆ…

Read More

ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.ಸದರಿ ಲೋಕ ಅದಾಲತ್ ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೬೩೮೦ ಬಾಕಿ ಇರುವ ಪ್ರಕರಣಗಳಲ್ಲಿ ೨೩೮೮ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಒಟ್ಟು ೧೫೪೪ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲುವಾಟ್ನಿ ದಾವೆಗಳು, ಎಲ್‌ಎಸಿ ಇಪಿ ಪ್ರಕರಣಗಳು, ಎಮ್‌ವಿಸಿ ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಮತ್ತು ಪೂರ್ವದಾವೆ (ಪಿಎಲ್‌ಸಿ) ಪ್ರಕರಣಗಳಲ್ಲಿ ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಅಬಕಾರಿ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು ಸೇರಿ ಒಟ್ಟು ೧೯೪೨ ಪ್ರಕರಣಗಳಲ್ಲಿ ೭೪೯ ಪ್ರಕರಣಗಳು ರಾಜಿ ಸಂಧಾನದ ಮೂಲಕ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಮತ್ತು ಸಮಿತಿಯ…

Read More

ದೇವರಹಿಪ್ಪರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆಯ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಅಧ್ಯಕ್ಷತೆಯಲ್ಲಿ ಜರುಗಿದ ಡಾ.ಡಿ.ಜೆ.ಸಾಗರ ಬಣದ ಸರ್ವಸದಸ್ಯರ ಸಭೆಯಲ್ಲಿ ಡಿಎಸ್‌ಎಫ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಜಿಲ್ಲಾ ಸಂ. ಸಂಚಾಲಕ ರಮೇಶ ಧರಣಾಕರ, ಇಂಡಿ ತಾಲ್ಲೂಕು ಸಂಚಾಲಕ ರಮೇಶ ನಿಂಬಾಳಕರ, ಸಿಂದಗಿ ತಾಲ್ಲೂಕು ಸಂಚಾಲಕ ಶರಣು ಚಲವಾದಿ, ವಿಜಯಪುರ ತಾಲ್ಲೂಕು ಸಂಚಾಲಕ ವಿಜಯ ಕಾಂಬಳೆ, ಎಸ್.ಎಮ್.ಬಸವಪಟ್ಟಣ, ಪ್ರಕಾಶ ಮಲ್ಲಾರಿ, ಸುನೀಲ ಸುಂಗಠಾಣ ಜೈಭೀಮ ತಳಕೇರಿ ಪಾಲ್ಗೊಂಡು ನೂತನ ಪದಾಧಿಕಾರಿಗಳನ್ನು ನೇಮಿಸಿದರು.ತಾಲ್ಲೂಕು ಶಾಖೆಯ ನೂತನ ಪದಾಧಿಕಾರಿಗಳು: ಜಾನು ಗುಡಿಮನಿ( ತಾಲ್ಲೂಕು ಸಂಚಾಲಕ), ಮಾಂತೇಶ ಕೂಟನೂರ, ದೇವೇಂದ್ರ ಬನಸೋಡೆ, ಕಾಶೀನಾಥ ದೊಡ್ಡಮನಿ( ಸಂಘಟನಾ ಸಂಚಾಲಕರು), ವಿಲಾಸ ಕೊಟಗಿ (ಖಜಾಂಚಿ). ಸುಭಾಷ್ ನಾಟೀಕಾರ( ಡಿಎಸ್‌ಎಫ್ ತಾಲ್ಲೂಕು ಸಂಚಾಲಕರು) ಸಂಪತ್ ದೊಡಮನಿ( ನಗರ ಪದಾಧಿಕಾರಿ). ಜಬ್ಬರ್ ಚೌಧರಿ( ಸಂಚಾಲಕರು, ತಾಲ್ಲೂಕು ಅಲ್ಪಸಂಖ್ಯಾತರ ಘಟಕ), ಕಮಸಾಬ್ ಕಾಟಮನಳ್ಳಿ(ಸಂಚಾಲಕರು, ನಗರ ಅಲ್ಪ…

Read More

ದೇವರಹಿಪ್ಪರಗಿ: ಪಟ್ಟಣದ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿದ್ದು, ಪ್ರತಿಯೊಂದು ವಾರ್ಡಗಳಲ್ಲಿ ಸಿಬ್ಬಂದಿ ನಿತ್ಯ ಸ್ವಚ್ಛತೆ ಕೈಕೊಂಡು ರೋಗಗಳು ಹರಡದಂತೆ ಕ್ರಮ ವಹಿಸಬೇಕೆಂದು ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ಬಸ್ ನಿಲ್ದಾಣ ಹತ್ತಿರದಲ್ಲಿ ಶನಿವಾರ ಅತೀಕ್ರಮಣಗೊಂಡ ಗೂಡಂಗಡಿ, ಬೀದಿಬದಿಯ ವ್ಯಾಪಾರಿ ಗಾಡಿಗಳನ್ನು ತೆರವುಗೊಳಿಸಿ ನಂತರ ವಿವಿಧ ವಾರ್ಡಗಳಲ್ಲಿ ಸ್ವಚ್ಛತೆ ಕ್ರಮ ಪರಿಶೀಲಿಸಿ ಮಾತನಾಡಿದರು, ಈಗ ಮಳೆಗಾಲ ಇರುವುದರಿಂದ ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಎಲ್ಲೆಡೆ ಸಾಂಕ್ರಾಮಿಕ ರೋಗಗಳ ಭೀತಿ ಕಂಡು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಡೆ ವಿಶೇಷವಾಗಿ ಜನಸಂದಣಿ ಹೆಚ್ಚಿರುವ ಕಡೆ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು. ದಿನನಿತ್ಯ ನೂರಾರು ಜನ ಗ್ರಾಮಗಳಿಂದ ಆಗಮಿಸುತ್ತಾರೆ. ಪಟ್ಟಣದ ಬಸ್ ನಿಲ್ದಾಣ, ಮೊಹರೆ ಹಣಮಂತ್ರಾಯ ವೃತ್ತ, ಡಾ.ಅಂಬೇಡ್ಕರ್ ವೃತ್ತ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸ್ವಚ್ಛತೆಗೆ ನಿಗಾವಹಿಸಬೇಕೆಂದು ತಿಳಿಸಿದರು.ಮುಖ್ಯಾಧಿಕಾರಿ ಶಬ್ಬಿರ ರೇವೂರಕರ ಮಾತನಾಡಿ, ಪಟ್ಟಣದ ೧೭ ವಾರ್ಡಗಳಲ್ಲಿ ನಿತ್ಯ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ನಮ್ಮ ಪೌರಕಾರ್ಮಿಕರು ಬೆಳಗಿನ ಜಾವ ವಹಿಸಿಕೊಟ್ಟ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಮಾಹಿತಿ ನೀಡುತ್ತಾರೆ.…

Read More

ಬಸವನಬಾಗೇವಾಡಿ: ಬಹುತೇಕ ಗ್ರಾಮೀಣ ಭಾಗದಿಂದ ಬಂದವರೇ ಬದುಕಿನಲ್ಲಿ ಸಾಧನೆ ಮಾಡಿರುವದನ್ನು ಕಾಣುತ್ತೇವೆ. ಬದುಕಿನಲ್ಲಿ ಸಾಧಿಸುವ ಛಲ ಒಂದಿದ್ದರೆ ಖಂಡಿತ ಬದುಕಿನಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಎದುರಿಸಿ ಒಂದಿಲ್ಲೊಂದು ಸಾಧನೆ ಮಾಡಲು ಸಾಧ್ಯ ಎಂದು ವಿಜಯಪುರ ಸೈನಿಕ ಶಾಲೆಯ ನಿವೃತ್ತ ಶಿಕ್ಷಕ ಡಾ.ಎಸ್.ಆರ್.ಹಿರೇಮಠ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೊದಲು ತನ್ನನ್ನು ತಾನು ಪ್ರೀತಿಸಬೇಕು. ಆತ್ಮವಿಶ್ವಾಸದ ಬದುಕು ನಮ್ಮದಾಗಿದ್ದರೆ ಖಂಡಿತ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರು.ಬಹುಭಾಷೆಯ ಜ್ಞಾನದೊಂದಿಗೆ ಏಕಾಗ್ರತೆ, ನಯ-ವಿನಯ, ಶ್ರದ್ಧೆ, ಗುರಿ ಇಟ್ಟುಕೊಂಡು ಗುರುವಿನ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿ ಜೀವನ ಮುನ್ನಡೆದರೆ ನೀವು ಮತ್ತು ನಿಮ್ಮ ಪಾಲಕರು ಕಂಡ ಕನಸು ನನಸಾಗುವಲ್ಲಿ ಯಾವ ಸಂದೇಹವಿಲ್ಲ. ಅದ್ಭುತ ಪ್ರತಿಭೆಗಳಾದ ವಿದ್ಯಾರ್ಥಿಗಳು ಭಾರತದ ಭವಿಷ್ಯತ್ತಿನ ಆಸ್ತಿಯಾಗಿದ್ದಾರೆ. ಬಂಥನಾಳದ ಸಂಗನಬಸವ ಸ್ವಾಮೀಜಿ, ಡಾ.ಫ.ಗು.ಹಳಕಟ್ಟಿ, ದಿ. ಬಿ.ಎಂ.ಪಾಟೀಲ ಅವರ ಅವಿರತ ಪರಿಶ್ರಮದಿಂದ ಬಿಎಲ್ಡಿಇ ಸಂಸ್ಥೆಯ ಹೆಮ್ಮರವಾಗಿ ಬೆಳೆದಿದೆ. ಇಂತಹ ಸಂಸ್ಥೆಯಲ್ಲಿ…

Read More

ಸಿಂದಗಿ: ಪಂಚಮಸಾಲಿ ಸಮಾಜದ ಮಕ್ಕಳಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ೨ಎ ಮೀಸಲಾತಿ ಹಕ್ಕನ್ನು ಬರುವ ಮುಂಗಾರು ಅದಿವೇಶನದಲ್ಲಿ ಪ್ರತಿಪಾದಿಸುವಂತೆ ಹಕ್ಕೊತ್ತಾಯಿಸಿ ಶಾಸಕರುಗಳ ಮನೆಗೆ ತೆರಳಿ ಆಗ್ರಹ ಪತ್ರ ಚಳುವಳಿಯನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು, ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಇದರ ಭಾಗವಾಗಿ ಈಗಾಗಲೇ ಸಮಾಜದ ಶಾಸಕರುಗಳಿಗೆ ಆಗ್ರಹ ಪತ್ರವನ್ನು ಸಲ್ಲಿಸಲಾಗಿದೆ.ಸಮಾಜದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ರಾಜುಗೌಡ ಪಾಟೀಲ್, ಕುದರಸಾಲವಾಡಗಿ, ಸಿ.ಸಿ.ಪಾಟೀಲ್, ರಾಜು ಕಾಗೆ ಇವರುಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅದರಂತೆ ಸಿಂದಗಿಯ ಶಾಸಕ ಅಶೋಕ ಮನಗೂಳಿ ಅವರಿಗೂ ಸಹ ಮನವಿ ಸಲ್ಲಿಸಲು ಪೂಜ್ಯರು ಜು.೧೫ರಂದು ಬೆಳಿಗ್ಗೆ ೧೦ಗಂಟೆಗೆ ಅವರ ಮನೆಗೆ ಆಗಮಿಸಲಿದ್ದಾರೆ. ಕಾರಣ ಸಮಾಜದ ಮಕ್ಕಳಿಗೆ ೨ಎ ಮೀಸಲಾತಿಯನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಗಲಿರುಳು ಶ್ರಮಿಸುತ್ತಿರುವ ಪೂಜ್ಯರಿಗೆ ಬಲ ತುಂಬಿ ಕೊಡುವ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಪಂಚಮಸಾಲಿ ಸಮಾಜ ಬಾಂಧವರು ಉಪಸ್ಥಿತರಿದ್ದು, ಶ್ರೀಗಳ ಹೋರಾಟಕ್ಕೆ ಬೆಂಬಲಿಸಬೇಕೆಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ…

Read More

ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ವಿಜಯಪುರ ವತಿಯಿಂದ ೨೦೨೪-೨೫ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ (ಸೂಕ್ಷ್ಮ ನೀರಾವರಿ) ಕೇಂದ್ರ ಪುರಸ್ಕೃತ ಯೋಜನೆಯಡಿ ವಿವಿಧ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಉಪಯೋಗಗಳು, ಅಳವಡಿಕೆ ಮತ್ತು ನಿರ್ವಹಣೆ ಕುರಿತು ಇತ್ತೀಚೆಗೆ ಪ್ರಗತಿ ಪರ ರೈ ಜ್ಯೋತಿಬಾ ದಂದರಗಿ ಇವರ ಕ್ಷೇತ್ರದಲ್ಲಿ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಉಪ ಕೃಷಿ ನಿರ್ದೇಶಕ ಡಾ.ಬಾಲರಾಜ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ವಿಜಯಲಕ್ಷ್ಮೀ ಚವ್ಹಾಣ, ಪ್ರಗತಿಪರ ರೈತರಾದ ಗುರುಪಾದ ದಾಸ್ಯಾಳ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ವಿಜ್ಞಾನಿಗಳಾದ ಡಾ.ಎಸ್.ಎಂ.ವಸ್ತ್ರದ, ಎಂ.ಕೆ.ಬಿರಾದಾರ ಅವರು ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿದರು.ಕೃಷಿ ಅಧಿಕಾರಿ ಶ್ರೀಮತಿ ಫಾತಿಮಾಬಾನು ಸುತಾರ ನಿರೂಪಿಸಿದರು.ಬರಟಗಿ ಗ್ರಾಮದ ಸುಭಾಷಚಂದ್ರ ರಜಪೂತ, ದೊಂಡಿಸಿಂಗ್ ಪತ್ತಾರ, ದತ್ತ ಕಾಟಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More

ವಿಜಯಪುರ: ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಮದ ಎಂ.ಟಿ.ಎಸ್. ಮತ್ತು ಹವಾಲ್ದಾರ ಪರೀಕ್ಷೆ ೨೦೨೪ರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದ್ದು, ಹುದ್ದೆಗಳ ನೇಮಕಾತಿಗೆ ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ದೇಶದಾದ್ಯಂತ ನಡೆಸಲಾಗುತ್ತಿದೆ.ಆಸಕ್ತ ಜಿಲ್ಲೆಯ ವಿದ್ಯಾವಂತ ೧೦ನೇ ಅಥವಾ ತತ್ಸಮಾನ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು ಮತ್ತು ಮಾಜಿ ಸೈನಿಕರಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ : ೩೧-೭-೨೦೨೪ ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗ (SSC) website: www.ssc.kkr.nic.in & https:ssc.gov.in ನ್ನು ಅಥವಾ ದೂ: ೦೮೦-೨೫೫೦೨೫೨೦ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೊಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ವಿಶ್ವವಿಖ್ಯಾತ ಗೋಲಗುಂಬಜ್‌ಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ಭೇಟಿ ನೀಡಿ ಗೋಲಗುಂಬಜ್‌ನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳು ಹಾಗೂ ಗೋಲಗುಂಬಜ್‌ಕ್ಕೆ ದೀಪಾಲಂಕಾರ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.ಗೋಲಗುಂಬಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿಶ್ವವಿಖ್ಯಾತ ಐತಿಹಾಸಿಕ ಗೋಲಗುಂಬಜ್ ವೀಕ್ಷಣೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸಲಿದ್ದು, ನೋಡುಗರಿಗೆ ಆಕರ್ಷಕಗೊಳಿಸಲು ಗೋಲಗುಂಬಜ್ ನಾಲ್ಕು ದಿಕ್ಕಿನಲ್ಲಿ ದೀಪಾಲಂಕಾರ ಕೈಗೊಳ್ಳಬೇಕು. ರಿನಿವ್ ಎನರ್ಜಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಸಿಎಸ್‌ಆರ್ ಅನುದಾನದಡಿ ಸೌರಶಕ್ತಿ ಅಳವಡಿಸಲಾಗುತ್ತಿದ್ದು, ಈ ಸೌರಶಕ್ತಿ ಖಾಸಗಿ ಕಂಪನಿಯವರು ಅಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ದೀಪಾಲಂಕಾರ, ವಸ್ತು ಸಂಗ್ರಹಾಲಯ, ಅಲ್ಲಿರುವ ಕಚೇರಿಗೆ ಬಳಸಿಕೊಳ್ಳುವುದು, ಉಳಿದ ವಿದ್ಯುತ್ ಹೆಸ್ಕಾಂಗೆ ಪಾವತಿಯಾಧಾರದ ಮೇಲೆ ವಿತರಣೆಗೆ ಕ್ರಮ ವಹಿಸಲು ತ್ವರಿತ ಕ್ರಿಯಾಯೋಜನೆ ಸಿದ್ಧಪಡಿಸಿ ಆಗಸ್ಟ್ ಮಧ್ಯಾವಧಿಯವರೆಗೆ ದೀಪಾಲಂಕಾರಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ವಿಶ್ವವಿಖ್ಯಾತ ಗೋಲಗುಂಬಜ್‌ನ ಹಿಂದೆ ಖಾಲಿ ಇರುವ ೧೦ ಎಕರೆ ಜಾಗೆಯಲ್ಲಿ ಗಿಡಗಳನ್ನು ನೆಟ್ಟು ಹಸರಿಕರಣ ಮಾಡಬೇಕು. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಗೋಲಗುಂಬಜ್‌ನಲ್ಲಿ ಸೂಕ್ತ ಕುಡಿಯುವ ನೀರಿನ…

Read More