ಸಿಂದಗಿ: ಪಂಚಮಸಾಲಿ ಸಮಾಜದ ಮಕ್ಕಳಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ೨ಎ ಮೀಸಲಾತಿ ಹಕ್ಕನ್ನು ಬರುವ ಮುಂಗಾರು ಅದಿವೇಶನದಲ್ಲಿ ಪ್ರತಿಪಾದಿಸುವಂತೆ ಹಕ್ಕೊತ್ತಾಯಿಸಿ ಶಾಸಕರುಗಳ ಮನೆಗೆ ತೆರಳಿ ಆಗ್ರಹ ಪತ್ರ ಚಳುವಳಿಯನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು, ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಇದರ ಭಾಗವಾಗಿ ಈಗಾಗಲೇ ಸಮಾಜದ ಶಾಸಕರುಗಳಿಗೆ ಆಗ್ರಹ ಪತ್ರವನ್ನು ಸಲ್ಲಿಸಲಾಗಿದೆ.
ಸಮಾಜದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ರಾಜುಗೌಡ ಪಾಟೀಲ್, ಕುದರಸಾಲವಾಡಗಿ, ಸಿ.ಸಿ.ಪಾಟೀಲ್, ರಾಜು ಕಾಗೆ ಇವರುಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅದರಂತೆ ಸಿಂದಗಿಯ ಶಾಸಕ ಅಶೋಕ ಮನಗೂಳಿ ಅವರಿಗೂ ಸಹ ಮನವಿ ಸಲ್ಲಿಸಲು ಪೂಜ್ಯರು ಜು.೧೫ರಂದು ಬೆಳಿಗ್ಗೆ ೧೦ಗಂಟೆಗೆ ಅವರ ಮನೆಗೆ ಆಗಮಿಸಲಿದ್ದಾರೆ. ಕಾರಣ ಸಮಾಜದ ಮಕ್ಕಳಿಗೆ ೨ಎ ಮೀಸಲಾತಿಯನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಗಲಿರುಳು ಶ್ರಮಿಸುತ್ತಿರುವ ಪೂಜ್ಯರಿಗೆ ಬಲ ತುಂಬಿ ಕೊಡುವ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಪಂಚಮಸಾಲಿ ಸಮಾಜ ಬಾಂಧವರು ಉಪಸ್ಥಿತರಿದ್ದು, ಶ್ರೀಗಳ ಹೋರಾಟಕ್ಕೆ ಬೆಂಬಲಿಸಬೇಕೆಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಹಂಗರಗಿ ಹಾಗೂ ಕಾರ್ಯದರ್ಶಿ ಆನಂದ ಶಾಬಾದಿ, ಹೋರಾಟ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Subscribe to Updates
Get the latest creative news from FooBar about art, design and business.
೨ಎ ಮೀಸಲಾತಿಗೆ ಒತ್ತಾಯಿಸಿ ಶಾಸಕರ ಮನೆಗೆ ತೆರಳಿ ಆಗ್ರಹ ಪತ್ರ ಚಳವಳಿ
Related Posts
Add A Comment

