ದೇವರಹಿಪ್ಪರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆಯ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಅಧ್ಯಕ್ಷತೆಯಲ್ಲಿ ಜರುಗಿದ ಡಾ.ಡಿ.ಜೆ.ಸಾಗರ ಬಣದ ಸರ್ವಸದಸ್ಯರ ಸಭೆಯಲ್ಲಿ ಡಿಎಸ್‌ಎಫ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಜಿಲ್ಲಾ ಸಂ. ಸಂಚಾಲಕ ರಮೇಶ ಧರಣಾಕರ, ಇಂಡಿ ತಾಲ್ಲೂಕು ಸಂಚಾಲಕ ರಮೇಶ ನಿಂಬಾಳಕರ, ಸಿಂದಗಿ ತಾಲ್ಲೂಕು ಸಂಚಾಲಕ ಶರಣು ಚಲವಾದಿ, ವಿಜಯಪುರ ತಾಲ್ಲೂಕು ಸಂಚಾಲಕ ವಿಜಯ ಕಾಂಬಳೆ, ಎಸ್.ಎಮ್.ಬಸವಪಟ್ಟಣ, ಪ್ರಕಾಶ ಮಲ್ಲಾರಿ, ಸುನೀಲ ಸುಂಗಠಾಣ ಜೈಭೀಮ ತಳಕೇರಿ ಪಾಲ್ಗೊಂಡು ನೂತನ ಪದಾಧಿಕಾರಿಗಳನ್ನು ನೇಮಿಸಿದರು.
ತಾಲ್ಲೂಕು ಶಾಖೆಯ ನೂತನ ಪದಾಧಿಕಾರಿಗಳು: ಜಾನು ಗುಡಿಮನಿ( ತಾಲ್ಲೂಕು ಸಂಚಾಲಕ), ಮಾಂತೇಶ ಕೂಟನೂರ, ದೇವೇಂದ್ರ ಬನಸೋಡೆ, ಕಾಶೀನಾಥ ದೊಡ್ಡಮನಿ( ಸಂಘಟನಾ ಸಂಚಾಲಕರು), ವಿಲಾಸ ಕೊಟಗಿ (ಖಜಾಂಚಿ). ಸುಭಾಷ್ ನಾಟೀಕಾರ( ಡಿಎಸ್‌ಎಫ್ ತಾಲ್ಲೂಕು ಸಂಚಾಲಕರು) ಸಂಪತ್ ದೊಡಮನಿ( ನಗರ ಪದಾಧಿಕಾರಿ). ಜಬ್ಬರ್ ಚೌಧರಿ( ಸಂಚಾಲಕರು, ತಾಲ್ಲೂಕು ಅಲ್ಪಸಂಖ್ಯಾತರ ಘಟಕ), ಕಮಸಾಬ್ ಕಾಟಮನಳ್ಳಿ(ಸಂಚಾಲಕರು, ನಗರ ಅಲ್ಪ ಸಂಖ್ಯಾತರ ಘಟಕ).
Subscribe to Updates
Get the latest creative news from FooBar about art, design and business.
Related Posts
Add A Comment

