ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ವಿಜಯಪುರ ವತಿಯಿಂದ ೨೦೨೪-೨೫ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ (ಸೂಕ್ಷ್ಮ ನೀರಾವರಿ) ಕೇಂದ್ರ ಪುರಸ್ಕೃತ ಯೋಜನೆಯಡಿ ವಿವಿಧ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಉಪಯೋಗಗಳು, ಅಳವಡಿಕೆ ಮತ್ತು ನಿರ್ವಹಣೆ ಕುರಿತು ಇತ್ತೀಚೆಗೆ ಪ್ರಗತಿ ಪರ ರೈ ಜ್ಯೋತಿಬಾ ದಂದರಗಿ ಇವರ ಕ್ಷೇತ್ರದಲ್ಲಿ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉಪ ಕೃಷಿ ನಿರ್ದೇಶಕ ಡಾ.ಬಾಲರಾಜ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ವಿಜಯಲಕ್ಷ್ಮೀ ಚವ್ಹಾಣ, ಪ್ರಗತಿಪರ ರೈತರಾದ ಗುರುಪಾದ ದಾಸ್ಯಾಳ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ವಿಜ್ಞಾನಿಗಳಾದ ಡಾ.ಎಸ್.ಎಂ.ವಸ್ತ್ರದ, ಎಂ.ಕೆ.ಬಿರಾದಾರ ಅವರು ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿದರು.
ಕೃಷಿ ಅಧಿಕಾರಿ ಶ್ರೀಮತಿ ಫಾತಿಮಾಬಾನು ಸುತಾರ ನಿರೂಪಿಸಿದರು.
ಬರಟಗಿ ಗ್ರಾಮದ ಸುಭಾಷಚಂದ್ರ ರಜಪೂತ, ದೊಂಡಿಸಿಂಗ್ ಪತ್ತಾರ, ದತ್ತ ಕಾಟಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಪಿಎಂ ಕೃಷಿ ಸಿಂಚಾಯಿ-ಕೇಂದ್ರ ಪುರಸ್ಕೃತ ಯೋಜನೆಯಡಿ ತರಬೇತಿ ಕಾರ್ಯಕ್ರಮ
Related Posts
Add A Comment
