ವಿಜಯಪುರ: ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗವನ್ನು ಜಾರಿ ಮಾಡದೇ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ವೇತನ ಆಯೋಗ ಜಾರಿಗೆ ತರದಿದ್ದರೆ ರಾಜ್ಯಾಧ್ಯಂತ ಶಾಲಾ ಕಾಲೇಜು ಸರ್ಕಾರಿ ಕಛೇರಿಗಳನ್ನು ಬಂದ್ ಮಾಡಿ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಹೇಳಿದರು.
ನಗರದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಶುಕ್ರವಾರ ಸಂಜೆ ಏಳನೇ ವೇತನ ಜಾರಿ ಸೇರಿದಂತೆ ಎನ್ಪಿಎಸ್ ರದ್ದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಕುರಿತು ಮನವಿ ಸಲ್ಲಿಸಿ ಮಾತನಾಡಿದರು.
ಏಳನೇ ವೇತನ ಕೊಡುವಲ್ಲಿ ರಾಜ್ಯ ಸರ್ಕಾರ ಎರಡು ವರ್ಷದಿಂದ ಮೀನಾಮೇಷ ಮಾಡುತ್ತಿದೆ. ನಾಲ್ಕು ರಾಜ್ಯಗಳಲ್ಲಿ ಎನ್ಪಿಎಸ್ (ನೂತನ ಪಿಂಚಣಿ ಯೋಜನೆ) ರದ್ದು ಮಾಡಿ ಓಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಆಗಬೇಕು. ನೌಕರರು ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಿದ್ದು, ಪ್ರತಿ ಕಾಯಿಲೆ ಚಿಕಿತ್ಸೆಗೆ ಒಳಪಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಬೇಕು. ಬರುವ ಅಧಿವೇಶನದಲ್ಲಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ನಮ್ಮ ನ್ಯಾಯಯುತ ಬೇಡಿಕೆ ಈಡೇರದಿದ್ದರೆ ಜುಲೈ 29 ರಿಂದ ರಾಜ್ಯಾಧ್ಯಂತ ಶಾಲಾ ಕಾಲೇಜು ಹಾಗೂ ಕಛೇರಿಗಳಲ್ಲಿ ಗೈರು ಹಾಜರಾಗುವ ಮೂಲಕ ಮುಷ್ಕರ ಕೈಗೊಳ್ಳುವ ಕುರಿತು ಕೇಂದ್ರ ಸಂಘ ನಿರ್ಧರಿಸಿದಂತೆ ಹೋರಾಟ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ, ಖಜಾಂಚಿ ಜುಬೇರ ಕೆರೂರ, ಗಂಗಾಧರ ಜೇವೂರ, ವಿಜಯಕುಮಾರ ಹತ್ತಿ, ವಿಶ್ವನಾಥ ಬೆಳೆನ್ನವರ, ನೀಜು ಮೇಲಿನಕೇರಿ, ಜಗದೀಶ ಬೋಳಸೂರ, ಬಸೀರ್ ನದಾಪ್, ಚನ್ನಯ್ಯ ಮಠಪತಿ, ರವೀಂದ್ರ ಉಗಾರ, ಮುತ್ತಪ್ಪ ಪೂಜಾರಿ, ಉದಯ ಕೊಟ್ಯಾಳ, ರಾಮಣ್ಣಾ ಬೋಳೆಗಾರ, ಅಜೀಜ್ ಅರಳಿಮಟ್ಟಿ, ಬಸವರಾಜ ಗಿರಿನಿವಾಸ, ಎಂ.ಎಚ್.ಚಿತ್ತರಗಿ, ಪಯಾಜ್ ತಮದಡ್ಡಿ, ಎಸ್.ಎಚ್.ಪಿಂಜಾರ್, ಎಸ್.ಎಸ್.ತೆರದಾಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

