ದೇವರಹಿಪ್ಪರಗಿ: ಪಟ್ಟಣದ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿದ್ದು, ಪ್ರತಿಯೊಂದು ವಾರ್ಡಗಳಲ್ಲಿ ಸಿಬ್ಬಂದಿ ನಿತ್ಯ ಸ್ವಚ್ಛತೆ ಕೈಕೊಂಡು ರೋಗಗಳು ಹರಡದಂತೆ ಕ್ರಮ ವಹಿಸಬೇಕೆಂದು ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಹತ್ತಿರದಲ್ಲಿ ಶನಿವಾರ ಅತೀಕ್ರಮಣಗೊಂಡ ಗೂಡಂಗಡಿ, ಬೀದಿಬದಿಯ ವ್ಯಾಪಾರಿ ಗಾಡಿಗಳನ್ನು ತೆರವುಗೊಳಿಸಿ ನಂತರ ವಿವಿಧ ವಾರ್ಡಗಳಲ್ಲಿ ಸ್ವಚ್ಛತೆ ಕ್ರಮ ಪರಿಶೀಲಿಸಿ ಮಾತನಾಡಿದರು, ಈಗ ಮಳೆಗಾಲ ಇರುವುದರಿಂದ ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಎಲ್ಲೆಡೆ ಸಾಂಕ್ರಾಮಿಕ ರೋಗಗಳ ಭೀತಿ ಕಂಡು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಡೆ ವಿಶೇಷವಾಗಿ ಜನಸಂದಣಿ ಹೆಚ್ಚಿರುವ ಕಡೆ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು. ದಿನನಿತ್ಯ ನೂರಾರು ಜನ ಗ್ರಾಮಗಳಿಂದ ಆಗಮಿಸುತ್ತಾರೆ. ಪಟ್ಟಣದ ಬಸ್ ನಿಲ್ದಾಣ, ಮೊಹರೆ ಹಣಮಂತ್ರಾಯ ವೃತ್ತ, ಡಾ.ಅಂಬೇಡ್ಕರ್ ವೃತ್ತ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸ್ವಚ್ಛತೆಗೆ ನಿಗಾವಹಿಸಬೇಕೆಂದು ತಿಳಿಸಿದರು.
ಮುಖ್ಯಾಧಿಕಾರಿ ಶಬ್ಬಿರ ರೇವೂರಕರ ಮಾತನಾಡಿ, ಪಟ್ಟಣದ ೧೭ ವಾರ್ಡಗಳಲ್ಲಿ ನಿತ್ಯ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ನಮ್ಮ ಪೌರಕಾರ್ಮಿಕರು ಬೆಳಗಿನ ಜಾವ ವಹಿಸಿಕೊಟ್ಟ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಮಾಹಿತಿ ನೀಡುತ್ತಾರೆ. ಸ್ವಚ್ಛತೆ ಕುರಿತು ನಮ್ಮ ಪಟ್ಟಣದಲ್ಲಿ ವಿಶೇಷ ಕಾರ್ಯಪಡೆ ಸಿದ್ಧವಿದ್ದು, ಸಿಬ್ಬಂದಿ ಕೆಲಸದ ಮೇಲೆ ಸದಾ ನಿಗಾ ಇರುತ್ತದೆ. ಪಟ್ಟಣದಲ್ಲಿ ದೂರು ಬಂದ ತಕ್ಷಣವೇ ಸ್ಪಂದಿಸಿ ಪರಿಹರಿಸಲಾಗುತ್ತಿದೆ. ಪ್ರತಿಯೊಬ್ಬ ಸಿಬ್ಬಂದಿ ತಮಗೆ ವಹಿಸಿಕೊಟ್ಟ ಕಾರ್ಯ ಚಾಚು ತಪ್ಪದೆ ನಿರ್ವಹಿಸುತ್ತಿದ್ದಾರೆ ಎಂದರು.
ಸ್ವಚ್ಛತಾ ಕಾರ್ಯದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ ಮುಲ್ಲಾ, ಮುತ್ತುರಾಜ್ ಹಿರೇಮಠ, ಸೇರಿದಂತೆ ಪೌರಕಾರ್ಮಿಕರು, ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

