Author: editor.udayarashmi@gmail.com

ಢವಳಗಿ: ಸಮೀಪದ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಸಹಕಾರಿ ಸಂಘದ ಎರಡನೇ ಅವಧಿಯ ಚುನಾವಣೆಯು ಇದೇ ಜುಲೈ 15 ಸೋಮವಾರದಂದು ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ಅಧಿಕಾರಿಗಳಾದ ವಿಜಯಕುಮಾರ ಉತ್ನಾಳ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಮುದ್ದೇಬಿಹಾಳ ಅವರ ಸಮ್ಮುಖದಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಯಿತು.ಅಧ್ಯಕ್ಷರಾಗಿ ಶ್ರೀಶೈಲ ಬ ಮೇಟಿ, ಹಾಗೂ ಉಪಾಧ್ಯಕ್ಷರಾಗಿ ಡಿ ಬಿ ಬೇಲಾಳ ಅವರು ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ ತಿಳಿಸಿದರು.

Read More

ವಿಜಯಪುರದ ಖ್ಯಾತ ಶಸ್ತ್ರಚಿಕಿತ್ಸಕ ಡಾ.ರವಿಕುಮಾರ ಚೌಧರಿ ಅವರಿಗೆ ಸನ್ಮಾನ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆ ವಿಭಾಗ ಮತ್ತು ಭಾರತೀಯ ಶಸ್ತ ಚಿಕಿತ್ಸಕರ ಸಂಘದ ವಿಜಯಪುರ ಜಿಲ್ಲಾ ಶಾಖೆಯ ಸಹಯೋಗದಲ್ಲಿ ನಗರದಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆಯ ಕಾರ್ಯಕ್ರಮ ನಡೆಯಿತು.ಸೋಮವಾರ ಈ ಕಾರ್ಯಕ್ರಮದ ಅಂಗವಾಗಿ ನಡೆದ ಮುಂದುವರೆದ ವೈದ್ಯಕೀಯ ಶಿಕ್ಷಣ ಸಮ್ಮೇಳನವನ್ನು ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಉದ್ಘಾಟಿಸಿದರು.ಈ ಸಮಾರಂಭದಲ್ಲಿ ಖ್ಯಾತ ಪ್ಲಾಸ್ಟಿಕ್ ಸರ್ಜನ್ ಡಾ.ಪ್ರದೀಪ ಜೈನ್ ಗಾಯ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.ಡಾ.ವಿಜಯಕುಮಾರ ಹುಡೇದ ಪ್ಲಾಸ್ಟಿಕ್ ಸರ್ಜರಿಯ ಸತ್ಯ ಮತ್ತು ಮಿತ್ಯಗಳ ಕುರಿತು ಮಾತನಾಡಿದರು. ಪ್ಲಾಸ್ಟಿಕ್ ಸರ್ಜರಿಯು ತುಂಬಾ ವಿಶಾಲವಾದುದು ಮತ್ತು ಇದರ ಉಪಯೋಗ ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.ನರಶಸ್ತ್ರಚಿಕಿತ್ಸಕ ಡಾ.ಬಸವರಾಜ ಬಡದಾಳ ಅವರು ಪ್ಲಾಸ್ಟಿಕ್ ಸರ್ಜರಿ ಮತ್ತು ನ್ಯೂರೋ ಸರ್ಜರಿಯ ಕುರಿತು ಉಪನ್ಯಾಸ ನೀಡಿದರು. ಡಾ.ಅನಿಕೇತನ್ ಅವರು ಪ್ಲಾಸ್ಟಿಕ್ ಸರ್ಜರಿ ಮತ್ತು ಮುಖದ ಪ್ಲಾಪ…

Read More

ಡಾ ಯಂಕನಗೌಡ ಪಾಟೀಲ, ಮಾಲಹಳ್ಳಿಕೆಂಭಾವಿ: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಾನ್ಸೂನ್ ಮಾರುತಗಳು ಹೆಚ್ಚು, ಕಡಿಮೆಯಾಗುತ್ತಿದ್ದು. ಸುರಪುರ ತಾಲೂಕಿನ ಕೆಂಭಾವಿ ವಲಯದ ಬಹುತೇಕ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಮಳೆಗಳು ಚೆನ್ನಾಗಿ ಬಂದ ಪ್ರಯುಕ್ತ ತೊಗರಿ, ಹತ್ತಿ, ಬೆಳೆಗಳ ಬಿತ್ತನೆ ಕಾರ್ಯ ಮಾಡಿದ ಮಳೆಯಾಶ್ರಿತ ಪ್ರದೇಶದ ರೈತರುಇದೀಗ ವರುಣನ ಕೃಪೆಗಾಗಿ ಮುಗಿಲು ಕಡೆ ಮುಖ ಮಾಡುವಂತಾಗಿದೆ.ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪೂರ್ಣಗೊಂಡ ಒಂದೆರಡು ವಾರಗಳು ಕಳೆದಿವೆಯಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬರುತ್ತಿಲ್ಲ, ಮಳೆ ಬಾರದಿದ್ದರೆ ಬೆಳೆಗಳು ಸಂಪೂರ್ಣ ಒಣಗಿ ಹೋಗುವ ಭೀತಿ ಇದೀಗ ಎದುರಾಗಿದೆ. ವಲಯಾದ್ಯಂತ ಬರಿ ಮೋಡ ಮುಸುಕಿದ ವಾತಾವರಣ, ಮಳೆಯ ಹನಿಗಳು ಧರೆಗೆ ಇಳಿಯುತ್ತಿಲ್ಲ, ಧರೆಯು ತಣ್ಗಾಗುತ್ತಿಲ್ಲ, ತೇವಾಂಶ ಸಾಕಾಗಿದೆ ಬೆಳೆಗಳು ಒಣಗುತ್ತಿವೆ, ” ಹೊಲಕ್ಹೋದರೆ ಹೊಲದಾಗ ಕಾಲು ನಿಲ್ಲುತ್ತಿಲ್ಲ. ಎಡೆ ಹೊಡೆದು, ಕಳೆ ತಗೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೈಯಲ್ಲಿದ್ದ ಸಾವಿರಾರು ರೂಪಾಯಿ ಸಾಲದೆ, ಸಾಲ-ಸೋಲ ಮಾಡಿ ಬೀಜ, ರಸಗೊಬ್ಬರ, ಗಳೆದ ಬಾಡಿಗೆ ಕೊಟ್ಟು ಕೈ ಸುಟ್ಟುಕೊಂಡಿವಿ” ಅಂತಾರೆ ಅನ್ನದಾತರು.ಸದ್ಯದ…

Read More

ಕೆಂಭಾವಿ: ಮೊಹರಂ ಹಬ್ಬದ ಕೊನೆಯ ದಿನವಾದ ಬುಧವಾರ ಅಲಾಯಿ ದೇವರನ್ನು ಪಟ್ಟಣದಲ್ಲಿ ವಿಜಂಭಣೆಯಿಂದ ಬೀಳ್ಕೊಡಲಾಯಿತು.ಹಿಂದೂ- ಮುಸ್ಲಿಂ ಸಮುದಾಯದವರು, ಅಲಾಯಿ ದೇವರಿಗೆ ನೈವೇದ್ಯ ಸಲ್ಲಿಸಿ, ಭಕ್ತಿ ಭಾವ ಮೆರೆದರು.ಪಟ್ಟಣದ ಜಂಡಾ ಕಟ್ಟಾ ಓಣಿ, ನಾಡಗೌಡ ಓಣಿ, ಖಾಜಿರ ಓಣಿ, ಲಾಲಾಬಂದಿ ಓಣಿ, ಹುಳಬುತ್ತಿ ಓಣಿಗಳ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರು ಹೊರಬರುತ್ತಿದ್ದಂತೆ ಸಾರ್ವಜನಿಕರು ಮಸೀದಿಯ ಮುಂದೆ ತೋಡಿದ್ದ ಅಲಾಯಿ ಕುಣಿಯನ್ನು ಮುಚ್ಚಿದರು. ಮುಚ್ಚಿದ ಅಲಾಯಿ ಕುಣಿಯ ಸುತ್ತ ಯುವಕರು, ಹಿರಿಯರು, ಮಕ್ಕಳು, ಹೆಜ್ಜೆ ಹಾಕಿದರು. ಅಲಾಯಿ ಕುಣಿಗೆ ಸಾರ್ವಜನಿಕರು ತಮ್ಮ ಕೈಯಿಂದ ಐದು ಬಾರಿ ಹಿಡಿ ಮಣ್ಣು ಹಾಕಿದರು. ಕೆಲವರು ತಮ್ಮ ಕೊರಳಲ್ಲಿ, ಕೈಯಲ್ಲಿ ಕಟ್ಟಿದ್ದ ಲಾಡಿಯನ್ನು ಮರಕ್ಕೆ ಹಾಕಿ, ನಮಸ್ಕರಿಸಿದರು. ದೇವರಿಗೆ ಮಂಡಾಳು ಎಸೆದು ಭಕ್ತಿ ಮೆರೆದರು. ಭಕ್ತರು ತುಂಬಿದ ಬಿಂದಿಗೆ ನೀರನ್ನು ಪೀರಲ ದೇವರು ಹೊತ್ತವರ ಪಾದಕ್ಕೆ ಸುರಿದು, ನಮಸ್ಕರಿಸಿದರು. ಪುರುಷರು, ಮಹಿಳೆಯರ ವೇಷ ಧರಿಸಿ ಗಮನ ಸೆಳೆದರು.ಪಟ್ಟಣದ ಅಗಸಿ ಯಿಂದ ಆಂಜನೇಯ ದೇವಸ್ಥಾನದ ಮೂಲಕ, ಬಸವೇಶ್ವರ ವೃತ್ತದ ಮೂಲಕ…

Read More

ಅಭಿನಂದನೆ ಕೋರಲು ಬಂದ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಮಾಹಿತಿ | ಸರ್ಕಾರಕ್ಕೆ ರೂ.20 ಸಾವಿರ ಕೋಟಿ ಹೊರೆ ಬೆಂಗಳೂರು: ಆ.1ರಿಂದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದಾಗಿ ನಿರ್ಧರಿಸಲಾಗಿದೆ.ಕರ್ನಾಟಕ ಸರ್ಕಾರಿ ನೌಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟ ಸಂತೋಷದಲ್ಲಿ ಅಭಿನಂದನೆ ಕೋರಲು ಬಂದ ನೌಕರರಿಗೆ ಸಿಎಂ ಸಿದ್ದರಾಮಯ್ಯ ಈ ಮಾತು ಹೇಳಿದ್ದಾರೆ.ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ನೌಕರರ ನಿಯೋಗದಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಗಿದೆ. ಈ ವೇಳೆ ಸರ್ಕಾರದ ಕಾರ್ಯಕ್ರಮ ಜನರಿಗೆ ತಲುಪಿಸಿ. ಸರ್ಕಾರದ ನಿಲುವುಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸಿ ಎಂದು ನೌಕರರಿಗೆ ಸಿಎಂ ಕಿವಿಮಾತು ಹೇಳಿದ್ದಾರೆ.ಇದರಿಂದ ಸರ್ಕಾರಕ್ಕೆ 20 ಸಾವಿರ ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದರು.ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆ ಜಾರಿ ತರುವ ಬಗ್ಗೆ ಹೇಳಿದ್ದಾರೆ. ಇದರಿಂದ 25 ಲಕ್ಷ ನೌಕರರ ಕುಟುಂಬಗಳಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಆಗಸ್ಟ್ ತಿಂಗಳಲ್ಲಿ ಜಾರಿ…

Read More

ಬಸವನಬಾಗೇವಾಡಿ: ತಾಲೂಕಿನ ನಾಗವಾಡ ಗ್ರಾಮದಲ್ಲಿ ಸ್ನೇಹ ಮತ್ತು ಬಾತೃತ್ವದ ಸಂಕೇತವಾದ ಮೊಹರಂ ಆಚರಣೆಯ ಅಂಗವಾಗಿ ಮಂಗಳವಾರ ಖತಾಲ್ ರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ಹಿಂದುಗಳು ಅಲಾಯಿ ದೇವರಿಗೆ ಮಾದಲಿ ಹಾಗೂ ಅಗ್ಗಿಗೆ ಕಟ್ಟಿಗೆ ಅರ್ಪಿಸಿ ಭಕ್ತಿ ಮೆರೆದರು. ಹಿಂದುಗಳ ಮನೆಯಲ್ಲಿ ಐದು ಜನ ಫಕೀರಗಳಿಗೆ ಅನಾದಿಕಾಲದ ಪರಂಪರೆಯಂತೆ ಖಿಚಡಿ ಉಣಿಸಿದರು. ರಾತ್ರಿ ವಿವಿಧ ವಾದ್ಯಗಳೊಂದಿಗೆ ಯುವಕರು, ಹಿರಿಯರು ಹೆಜ್ಜೆ ಆಡಿ ಸಂಭ್ರಮಿಸಿದರು.ಗ್ರಾಮದ ಮೂಲ ದರ್ಗಾದಲ್ಲಿರುವ ಹನುಮಜಂಗ, ಬಿಬಿ ಫಾತಿಮಾ, ಮೌಲಾಲಿ, ಬಿಬಿ ಹನಿಪ್, ಕಾಶಿಮ್ ದುಲ್, ಅಲ್ಲರ್ ಮಮ್ಮದ್, ಭಾರಿ ಇಮಾಮ್, ಇಮಾಮ್ ಕಾಸಿಂ ದೇವರುಗಳಿಗೆ ಅಲ್ಲದೇ ಮಡ್ಡಿ ದರ್ಗಾಕ್ಕೆ ಗ್ರಾಮಸ್ಥರು ತೆರಳಿ ಮಾದಲಿ ಅರ್ಪಿಸಿ ನಮಸ್ಕರಿಸಿದರು.ವಿವಿಧ ಊರುಗಳಲ್ಲಿ ನೆಲೆಸಿರುವ ಗ್ರಾಮಸ್ಥರು ಮೊಹರಂ ಹಬ್ಬ ಆಚರಣೆಗೆ ತಮ್ಮೂರಿಗೆ ಬರುವುದು ಈ ಗ್ರಾಮದ ವಿಶೇಷ. ಬುಧವಾರ ಸಂಜೆ ಮೆರವಣಿಗೆ ಮೂಲಕ ದೇವರುಗಳನ್ನು ಹೊಳೆಗೆ ಕಳುಹಿಸುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.ಹೆಜ್ಜೆ ಆಟದಲ್ಲಿ ಯಮನಪ್ಪಗೌಡ ಹಂಗರಗಿ, ಎಸ್.ವೈ.ಕೋಳೂರು, ರಾಮಚಂದ್ರ ಖೇಡದ, ಭೋಜು ಪವಾರ, ಸಿದ್ದನಗೌಡ ಬಿರಾದಾರ, ರಾಮನಗೌಡ ಬ…

Read More

.ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬದ ಕೊನೆಯ ದಿನವಾದ ಬುಧವಾರ ಸಂಜೆ ಅಲಾಯಿ ದೇವರುಗಳ ಹಾಗೂ ಡೋಲಿಗಳ ವಿಸರ್ಜನೆ ಅಂಗವಾಗಿ ಜರುಗಿದ ಮೆರವಣಿಗೆಯಲ್ಲಿ ಜನರು ಶ್ರದ್ಧಾ, ಭಕ್ತಿಯಿಂದ ಭಾಗವಹಿಸಿದರು.ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರಿಗೆ ಮಂಗಳವಾರ ಸಂಜೆ ಜನರು ಸಕ್ಕರಿ, ಮಾದಲಿ ಅರ್ಪಿಸಿದರು.ಬುಧವಾರ ಸಂಜೆ ಜರುಗಿದ ಅಲಾಯಿ ದೇವರುಗಳ ವಿಸರ್ಜನಾ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಕುಣಿಯುವ ಮೂಲಕ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದರು.ಡೋಲಿ, ಅಲಾಯಿ ದೇವರು ಸಾಗುವ ರಸ್ತೆ ಬದಿಯಲ್ಲಿ ಜಮಾಯಿಸಿದ್ದ ಜನರು ಉತ್ತತ್ತಿ, ಶೇಂಗಾ, ಚುನಮರಿ ತೂರಿ ಅಲಾಯಿ ದೇವರುಗಳಿಗೆ ನಮಸ್ಕರಿಸಿದರು.ಇಂಗಳೇಶ್ವರ ರಸ್ತೆ, ಅಗಸಿ ಒಳಗಡೆ, ಮಹಾರಾಜರ ಮಠದ ಹತ್ತಿರ, ನಾಗೂರ ರಸ್ತೆಯಲ್ಲಿ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಡೋಲಿ ಹಾಗೂ ಅಲಾಯಿ ದೇವರಗಳು ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾಗಮಗೊಂಡವು. ನಂತರ ಬಸವತೀರ್ಥ ಬಾವಿಯಲ್ಲಿ ವಿಸರ್ಜನಾ ಕಾರ್ಯ ನಡೆಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಹಿಂದು-ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಮುಂಜಾಗ್ರತಾ ಕ್ರಮವಾಗಿ…

Read More

ಬಸವನಬಾಗೇವಾಡಿ: ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯಲ್ಲಿ ಮಂಗಳವಾರ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನೆ ಹಾಗೂ ಪದಗ್ರಹಣ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕಿ, ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ ಮಾತನಾಡಿ, ಶಾಲಾ ಹಂತದಲ್ಲಿ ಪ್ರಜಾಪ್ರಭುತ್ವದಲ್ಲಿ ನಡೆಯುವ ಚುನಾವಣೆಯ ಮಾದರಿಯಂತೆ ಚುನಾವಣೆಯ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಯಾವ ರೀತಿ ಆಯ್ಕೆಯಾಗುತ್ತಾರೆ. ಆಯ್ಕೆಯಾದ ಜನಪ್ರತಿನಿಧಿಗಳು ಯಾವ ರೀತಿಯಾಗಿ ತಮ್ಮ ಕಾರ್ಯ ಮಾಡುತ್ತಾರೆ ಎಂಬ ಕಲ್ಪನೆ ಬರುವಂತೆ ಮಾಡುವುದು ತುಂಬಾ ಮುಖ್ಯವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವಿಶೇಷತೆ ಗೊತ್ತಾಗುತ್ತದೆ. ವಿದ್ಯಾರ್ಥಿಗಳಿಗೆ ನಾಯಕರಾಗುವ ಗುಣವನ್ನು ಮೈಗೂಡಿಸಿಕೊಳ್ಳಲು ಇದು ಪೂರಕವಾಗುತ್ತದೆ ಎಂದ ಅವರು ವಿದ್ಯಾರ್ಥಿಗಳು ತಮ್ಮ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ವ್ಯಕ್ತಿತ್ವ ತಮ್ಮದಾಗಿಸಿಕೊಳ್ಳಬೇಕೆಂದರು.ಅಧ್ಯಕ್ಷತೆಯನ್ನು ಶಾಲಾ ಸಲಹಾ ಸಮಿತಿಯ ಅಧ್ಯಕ್ಷ ಅನಿಲ ಅಗರವಾಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಸಲಹಾ ಸಮಿತಿಯ ಉಪಾಧ್ಯಕ್ಷ…

Read More

– ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ:೯೪೪೯೨೩೪೧೪೨ ಜಗತ್ತಿನ ಪ್ರಸಿದ್ಧ ಸಂಗೀತಗಾರ ಬಿಥೋವನ್‌ನ ಮಧುರ ಸಂಗೀತದ ಅಲೆಗಳನ್ನು ಕೇಳುತ್ತಿದ್ದರೆ ಆತನ ಕಿವುಡತನ ನೆನಪಾಗುವುದಿಲ್ಲ. ಪ್ರಕೃತಿ ಕವಿ ಎಂದೇ ಹೆಸರಾದ ಜಾನ್ ಮಿಲ್ಟನ್‌ನ ಸುಂದರ ಕವನಗಳನ್ನು ಓದುವಾಗ ಆತನ ಕುರುಡುತನ ನೆನಪಾಗುವುದಿಲ್ಲ. ಜಗತ್ತಿನ ಮಿಂಚಿನ ಓಟಗಾರ್ತಿ ಎಂಬ ಅಭಿಮಾನಕ್ಕೆ ಪಾತ್ರಳಾದ ವಿಲ್ಮಾ ರುಡಾಲ್ಫಳ ಸಾಹಸ ಕಥೆ ಕೇಳುವಾಗ ಅವಳೊಬ್ಬ ಪೋಲಿಯೋ ಪೀಡಿತಳು ಎನ್ನುವುದು ಅಚ್ಚರಿಯನ್ನು ಮೂಡಿಸುತ್ತದೆ. ಅವಮಾನವನ್ನು ಸನ್ಮಾನವನ್ನಾಗಿಸುವುದು ಇಂಥವರಿಂದ ಕಲಿಯಬೇಕು. ಅವಮಾನಿತನಾದ ಚಾಣಕ್ಯನು ಹೊಸದೊಂದು ಸಾಮ್ರಾಜ್ಯ ಸ್ಥಾಪನೆಗೆ ಕಾರಣನಾದನು. ಅವಮಾನವು ತಮ್ಮನ್ನು ದೃತಿಗೆಡಿಸಲು ಇವರು ಬಿಡಲಿಲ್ಲ. ಎಷ್ಟು ದೊಡ್ಡ ಸಾಧಕರೇ ಆಗಿರಲಿ ಯಾವುದೇ ಒಂದು ಹಂತದಲ್ಲಿ ಹಲವು ತರದ ಟೀಕೆಗಳಿಂದ ಅವಮಾನ ಅನುಭವಿಸಿಯೇ ಇರುತ್ತಾರೆ.ಅವಮಾನವೆಂದರೆ..,?ಅವಮಾನವು ಅಸಮರ್ಥ ಭಾವನೆ. ಇದೊಂದು ಶಕ್ತಿಯುತ,ಸಂಕೀರ್ಣ ಮತ್ತು ಸ್ವಯಂ ಪ್ರಜ್ಞೆಯ ಭಾವನೆಯಾಗಿದೆ. ವ್ಯಕ್ತಿ ತಮ್ಮ ಸ್ವಂತ ಮಾನದಂಡ ಅಥವಾ ಸಾಮಾಜಿಕ ಮಾನದಂಡಗಳಿಂದ ತಮ್ಮನ್ನು ತಾವು ಕಡಿಮೆ ಮಾಡಿಕೊಳ್ಳುವುದು. ಈ ಭಾವನೆಯು ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯದ…

Read More

ವಿಜಯಪುರ: ವಿವೇಕಾನಂದರ ಶೈಕ್ಷಣಿಕ ತತ್ವವು ಸಾಮಾನ್ಯ ಜೀವನ ತತ್ವವನ್ನು ಆಧರಿಸಿದ್ದು, ಅದು ಜೀವನ ಕಟ್ಟುವ ವಿಚಾರಗಳ ಸಮೀಕರಣವಾಗಿದೆ. ಪ್ರತಿಯೊಬ್ಬರೂ ಪರಿಪೂರ್ಣತೆಯ ಶಿಕ್ಷಣ ಪಡೆದು ಮಾನವೀಯತೆಯ ವಿಕಾಸ ಹೊಂದಬೇಕು ಎಂದು ಸಾಹಿತಿ ಸಂತೋಷ ಬಂಡೆ ಹೇಳಿದರು.ಅವರು ನಗರದ ಎಸ್ ಎಸ್ ಪ್ರೌಢ ಶಾಲೆಯಲ್ಲಿ ಮಂಗಳವಾರದಂದು ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ‘ಪ್ರಸ್ತುತ ಶಿಕ್ಷಣದಲ್ಲಿ ವಿವೇಕಾನಂದರ ವಿಚಾರಗಳು’-ಚಿಂತನಗೋಷ್ಠಿ ಹಾಗೂ ‘ಮನ-ಮನಕ್ಕೂ ವಿವೇಕ ಅಭಿಯಾನ’ ಮತ್ತು ‘ರಾಷ್ಟ್ರ ಜಾಗೃತಿ ಪುಸ್ತಕ ವಿತರಣಾ ಸಮಾರಂಭ’ದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.ಶಿಕ್ಷಣವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಬಲವಾದ ಭಾವನೆಯನ್ನು ಬೆಳೆಸಬೇಕು. ಶಿಕ್ಷಣವು ಸೃಜನಶೀಲತೆ, ಸ್ವಂತಿಕೆ, ಶ್ರೇಷ್ಠತೆಗೆ ಒತ್ತು ನೀಡಿ, ಆತ್ಮವಿಶ್ವಾಸ ಬೆಳೆಸುವಂತಾಗಬೇಕು ಎಂಬ ವಿವೇಕಾನಂದರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಡಳಿತಾಧಿಕಾರಿ ಪ್ರೊ.ಆಯ್ ಎಸ್ ಕಾಳಪ್ಪನವರ, ಶಿಕ್ಷಣವು ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಅದು ಎಲ್ಲರಲ್ಲಿ ಧೈರ್ಯ ತುಂಬಿ, ಜೀವನದ ಗಹನ ಸವಾಲುಗಳನ್ನು ಎದುರಿಸಬಲ್ಲ ಶಕ್ತಿಯಾಗಬೇಕು ಎಂಬ ವಿವೇಕಾನಂದರ ಕನಸನ್ನು ನನಸು ಮಾಡುವತ್ತ…

Read More